WhatsApp Group Join Now
Telegram Group Join Now

ಪ್ರಿಯ ಓದುಗರೇ ನಾವು ನೀವುಗಳು ಇಂದು ಸೇವನೆ ಮಾಡುತ್ತಿರುವ KFC ಚಿಕನ್ ಸತತ ಸೋಲಿನಿಂದ ಕೊನೆಯ ಪ್ರಯತ್ನದಲ್ಲಿ ಯಶಸ್ಸು ಕಂಡ ರೋಚಕ ಕಥೆ ಹೊಂದಿದೆ ಹೌದು ಇಂದಿನ ದಿನಗಳಲ್ಲಿ ಆಸಾಧ್ಯ ಎನ್ನುವುದು ಈ ಜಗತ್ತಿನಲ್ಲಿ ಯಾವುದೂ ಇಲ್ಲ”. ಆದರೆ ಎಷ್ಟೋ ಜನ ತನ್ನಿಂದ ಇದು ಸಾಧ್ಯ ಇಲ್ಲ ಎಂದು ಸೋಲಿಗೆ ಶರಣಾಗುತ್ತಾರೆ. ಆದರೆ ಇಂದು ಎಲ್ಲರಿಗೂ ಸ್ಪೂರ್ತಿದಾಯಕ ಆಗಬಲ್ಲ ಒಂದು ನೈಜ ಘಟನೆಯ ಬಗ್ಗೆ ಈ ಲೇಖನದಲ್ಲಿ ತಿಳಿಸಿಕೊಡುತ್ತೇವೆ.

ಎಷ್ಟೋ ಜನ ತಾನು ನಿರುದ್ಯೋಗಿ, ತನಗೆ ವಯಸ್ಸು ಆಗ್ತಾ ಇದೆ ತನ್ನಿಂದ ಏನೂ ಸಾಧನೆ ಮಾಡಲು ಆಗ್ತಾ ಇಲ್ಲ ಅಂತ ಜೀವನದಲ್ಲಿ ಬೇಸರಗೊಂಡಿರುತ್ತಾರೆ. ಆದರೆ ಈಗ ಹೇಳಲು ಹೊರಟಿರುವ ವ್ಯಕ್ತಿ ತನ್ನ ಜೀವನದ ಉದ್ದಕ್ಕೂ ಸೋಲನ್ನೇ ಕಂಡು ತನ್ನ 62 ನೆ ವಯಸ್ಸಿನಲ್ಲಿ ಗೆಲುವು ಕಂಡ ಸಾಧಕ. ಇಂದು ನಾವು ಹೇಳಲು ಹೊರಟಿರುವುದು KFC ಅಂದರೆ, Kentucky fried chicken ಸ್ಥಾಪಕ ಹರ್ಲ್ಯಾಂಡ್ ಡೇವಿಡ್ ಸ್ಯಾಂಡರ್ಸ್ ಬಗ್ಗೆ. ಸ್ಯಾಂಡರ್ಸ್ ಹುಟ್ಟಿದ್ದು ಸೆಪ್ಟೆಂಬರ್ 8, 1890 ರಲ್ಲಿ. ಯುನೈಟೆಡ್ ಸ್ಟೇಟ್ಸ್ ನ ಇಂಡಿಯಾನದ ಹೆನ್ರಿ ವಿಲ್ಲೇ ಎಂಬ ನಗರದಲ್ಲಿ. ತಂದೆ ವಿಲ್ಬರ್ ಡೇವಿಡ್, ತಾಯಿ ಮಾರ್ಗರೇಟ್ ಆನ್, ತಮ್ಮ ಹಾಗೂ ತಂಗಿ ಕ್ಲಾರಿನ್ಸ್ ಹಾಗೂ ಕ್ಯಾತಹರಿನ್. ಸ್ಯಾಂಡರ್ಸ್ ಅವರಿಗೆ ಕೇವಲ ಐದು ವರ್ಷ ಇದ್ದಾಗ ತಂದೆ ಅಕಾಲಿಕ ಮರಣ ಹೊಂದುತ್ತಾರೆ. ಹಾಗಾಗಿ ತಾಯಿ ಜೀವನ ನಡೆಸಲು ಒಂದು ಫ್ಯಾಕ್ಟರಿಯಲ್ಲಿ ಕೆಲಸಕ್ಕೆ ಸೇರುತ್ತಾರೆ.

ಐದು ವರ್ಷದ ಹುಡುಗ ಸ್ಯಾಂಡರ್ಸ್ ಅವರಿಗೆ ತನ್ನ ತಮ್ಮ ತಂಗಿಯನ್ನು ನೋಡಿಕೊಳ್ಳುವ ಜವಾಬ್ಧಾರಿ ಬೀಳುತ್ತದೆ. ಇದರ ಜೊತೆಗೆ ತಾಯಿ ಚಿಕ್ಕ ವಯಸ್ಸಿನಲ್ಲಿಯೆ ಅಡುಗೆ ಕೆಲಸವನ್ನು ಸಹ ಕಲಿಸಿರುತ್ತಾರೆ. 7 ವರ್ಷ ಆಗುವಷ್ಟಾರಲ್ಲಿ ಹಲವು ಬಗೆಯ ಅಡುಗೆ ಮಾಡುವುದನ್ನು ಕಲಿತಿರುತ್ತಾರೆ. ಅದರಲ್ಲೂ ಚಿಕನ್ ಅಡುಗೆ ಮಾಡಲು ತುಂಬಾ ಇಷ್ಟ ಆಗಿರತ್ತೆ. ಹೀಗಿರುವಾಗ ಸ್ಯಾಂಡರ್ಸ್ ತಾಯಿ 1902 ರಲ್ಲಿ ವಿಲಿಯಂ ಬ್ರಾದರ್ಸ್ ಎಂಬವನ ಜೊತೆ ಇನ್ನೊಂದು ವಿವಾಹ ಆಗುತ್ತಾರೆ. ಆದರೆ ಸ್ಯಾಂಡರ್ಸ್ ಅವರನ್ನ ಎರಡನೇ ತಂದೆ ಸರಿಯಾಗಿ ನೋಡಿಕೊಳ್ಳುತ್ತಾ ಇರಲಿಲ್ಲ ತುಂಬಾ ದ್ವೇಷ ಮಾಡ್ತಾ ಇದ್ರು. ಇದರಿಂದ ಬೇಸರಗೊಂಡ ಸ್ಯಾಂಡರ್ಸ್ 1903 ರಲ್ಲಿ ತನ್ನ 14 ನೇ ವಯಸ್ಸಿನಲ್ಲಿ ಮನೆ ಬಿಟ್ಟು ಹೊರಗೆ ಬಂದರು. ಮನೆ ಬಿಟ್ಟು ಬಂದ ಕಾರಣ 7ನೆ ತರಗತಿಗೆ ವ್ಯಾಸಂಗ ನಿಲ್ಲಿಸಿ, ಫಾರ್ಮ್ ಹೌಸ್ ನಲ್ಲಿ ಕೆಲಸಕ್ಕೆ ಸೇರುತ್ತಾರೆ.

ನಂತರ 1906 ರಾಲ್ಲಿ ತನ್ನ 16ನೆ ವಯಸ್ಸಿನಲ್ಲಿ ಇಂಡಿಯಾನಾ ದ ಅಲ್ಬರ್ ನಗರಕ್ಕೆ ಇನ್ನೊಂದು ಕೆಲಸದ ನಿಮಿತ್ತ ಹೋಗಿ ಅಲ್ಲಿ ತನ್ನ ಸಂಬಂಧಿ ಒಬ್ಬರ ಜೊತೆ ಕೆಲಸಕ್ಕೆ ಸೇರುತ್ತಾರೆ. ಅವರು ಬಸ್ ಕಂಪನಿ ಒಂದರಲ್ಲಿ ಕೆಲಸ ಮಾಡ್ತಾ ಇದ್ರು. ಹಾಗಾಗಿ ಸ್ಯಾಂಡರ್ಸ್ ಗೆ ಒಂದು ಕಂಡಕ್ಟರ್ ಕೆಲಸವನ್ನ ಕೊಡಿಸುತ್ತಾರೆ. ನಂತರ ಅಲ್ಲಿಂದ ಇಂದು ರೈಲ್ವೇ ನಿಲ್ದಾಣದಲ್ಲಿ ಕೂಡಾ ಕೆಲಸ ನಿರ್ವಹಿಸುತ್ತಾರೆ. ಈ ಸಮಯದಲ್ಲಿ ಸ್ಯಾಂಡರ್ಸ್ ಗೆ ಜೋಸೆಫೀನ್ ಎಂಬ ಹುಡುಗಿಯ ಜೊತೆ ಸ್ನೇಹ ಹಾಗೂ ಪ್ರೇಮ ಉಂಟಾಗುತ್ತದೆ. ನಂತರ 1909 ರಲ್ಲು ಇವರ ವಿವಾಹ ಕೂಡಾ ಆಗತ್ತೆ. ಆಗ ಸ್ಯಾಂಡರ್ಸ್ ಗೆ ಕೇವಲ 19 ವರ್ಷ. ಇವರಿಬ್ಬರಿಗೂ ಒಂದು ಗಂಡು ಹಾಗೂ 2 ಹೆಣ್ಣು ಮಕ್ಕಳು ಆಗುತ್ತಾರೆ.

ಕೆಲವು ವರ್ಷಗಳ ಕಾಲ ಇವರ ಸಾಂಸಾರಿಕ ಜೀವನ ಸರಿಯಾಗಿಯೇ ಇರುತ್ತೆ ಆದರೆ ಇದ್ದಕ್ಕಿದ್ದ ಹಾಗೇ ಕ್ಷುಲ್ಲಕ ಕಾರಣಕ್ಕಾಗಿ ಸ್ಯಾಂಡರ್ಸ್ ರೈಲ್ವೇ ಅಲ್ಲಿ ತನ್ನ ಸಹೋದ್ಯೋಗಿ ಜೊತೆ ಜಗಳ ಮಾಡಿಕೊಳ್ಳುತ್ತಾರೆ. ಈ ಕಾರಣಕ್ಕೆ ಅವರು ರೈಲ್ವೇ ಅಲ್ಲಿ ಮಾಡುತ್ತಿದ್ದ ಫೇರ್ ಮ್ಯಾನ್ ಕೆಲಸವನ್ನು ಕಳೆದುಕೊಳ್ಳಬೇಕಾಯಿತು. ಇದರಿಂದ ಅವರ ಸಂಸಾರದಲ್ಲಿ ಹಲವು ಭಿನ್ನಾಭಿಪ್ರಾಯಗಳು ಉಂಟಾಗುತ್ತದೆ. ಹಾಗಾಗಿ ಹೆಂಡತಿ ಮಕ್ಕಳು ದೂರ ಆಗ್ತಾರೆ ಹಾಗೇ ಸ್ಯಾಂಡರ್ಸ್ ಅವರು ಬೇಸರಗೊಳ್ಳುತ್ತಾರೆ ಹತಾಶೆ ಆಗುತ್ತಾರೆ. ಬಹಳಷ್ಟು ದಿನ ನಿರುದ್ಯೋಗಿ ಆಗಿ ಇದ್ದು ನಂತರ ಹೊಟ್ಟೆ ಪಾಡಿಗಾಗಿ ಬೇರೊಂದು ಕೆಲಸಕ್ಕೆ ಸೇರುತ್ತಾರೆ. ಹೀಗೆ ಬದುಕುವ ಸಲುವಾಗಿ ಹಲವಾರು ಕೆಲಸಗಳನ್ನ ಮಾಡುತ್ತಾರೆ ಆದ್ರೆ ಎಲ್ಲಾ ಕೆಲಸಗಳಲ್ಲೂ ವಿಫಲರಾಗುತ್ತಾರೆ. ನಿರಾಸೆ ಆಗತ್ತೆ.

ನಂತರ ಇದ್ದಂತಹ ಸ್ವಲ್ಪ ಹಣದಲ್ಲಿ 1930 ರಲ್ಲೀ ಕೆಂಟುಕಿ ಕಾರ್ಬಿನ್ ಅನ್ನೋ ಜಾಗದಲ್ಲಿ ಅಮೆರಿಕಾದ ರೂಟ್ 25 ಅನ್ನೋ ರಸ್ತೆಯಲ್ಲಿ ಒಂದು ಗ್ಯಾಸ್ ಸ್ಟೇಶನ್ ಆರಂಭಿಸಿ ನಂತರ ಅಲ್ಲಿಯೇ ಪ್ರಯಾಣಿಕರ ಸಲಹೆಯ ಮೇರೆಗೆ ಒಂದು ರೆಸ್ಟೋರೆಂಟ್ ಆರಂಭಿಸುತ್ತಾರೆ. ಅಲ್ಲಿ ಬಹಳ ರುಚಿಯಾದ ಚಿಕನ್ ಹಾಗೂ ಉಳಿದ ಪದಾರ್ಥಗಳನ್ನು ತಯಾರು ಮಾಡುತ್ತಾರೆ. ಅಲ್ಲಿಗೆ ಬರುವ ಪ್ರಯಾಣಿಕರಿಗೆ ಅಲ್ಲಿನ ಚಿಕನ್ ಡಿಶ್ ಹಿಡಿಸತ್ತೆ ಹಾಗಾಗಿ ತಮ್ಮ ಬ್ಯುಸಿನೆಸ್ ಅಣ್ಣ ಮತ್ತಷ್ಟು ಹೆಚ್ಚು ಮಾಡುವ ಉದ್ದೇಶದಿಂದ ಕಾರ್ನೆಲ್ ಯುನಿವರ್ಸಿಟಿ ಅಲ್ಲಿ ತನ್ನ 42 ನೆ ವಯಸ್ಸಿನಲ್ಲಿ ಹೋಟೆಲ್ ಮ್ಯಾನೇಜ್ಮೆಂಟ್ ಕೋರ್ಸ್ ಮಾಡ್ತಾರೆ.

ಆಗ ಅವರ ಚಿಕನ್ ರುಚಿ ನೋಡಿದ Kentucky ಗವರ್ನರ್ ರೂಬಿ ನೆಫ್ಟುನ್ ಸ್ಯಾಂಡರ್ಸ್ ಅವರಿಗೆ Kentucky ಕರ್ನಲ್ ಬಿರುದು ನೀಡುತ್ತಾರೆ. Kentucky ಯಲ್ಲಿ ಇನ್ನೂ ಹಲವಾರು ಬ್ರಾಂಚ್ ಒಪೆನ್ ಮಾಡುವ ಆಸೆಯಾಗತ್ತೇ ಆದರೆ ಈ ಪ್ರಯತ್ನದಲ್ಲಿ ಸ್ಯಾಂಡರ್ಸ್ ಗೆ ಬಹಳಷ್ಟು ನಷ್ಟ ಆಗತ್ತೆ. ಇದಲ್ಲದೆ ಹೈವೇ ಮಾಡುವ ಸಲುವಾಗಿ ರಸ್ತೆಯ ಬದಿಯಲ್ಲಿ ಇರುವ ಇವರ ಹೋಟೆಲ್ ಅನ್ನು ಒಡೆಯಲಾಗತ್ತೆ. ನಂತರ ಅದೇ ನಿರಾಸೆ ಅದೇ ಡಿಪ್ರೆಷನ್. ಮತ್ತೆ ನಿರುದ್ಯೋಗಿ. ಅದಾಗಲೇ ಅವರಿಗೆ ವರ್ಷ 60 ಆಗುತ್ತು ಆದರೂ ದೃತಿ ಗೆಡಲಿಲ್ಲ. ಯಾಕಂದ್ರೆ ಅವರಿಗೆ ಅವರ ಚಿಕನ್ ಡಿಶಸ್ ರಿಸರ್ಚ್ ಮೇಲೆ ಬಹಳ ನಂಬಿಕೆ.

ಇದರ ನಂತರ ತಮ್ಮ ಚಿಕನ್ ಡಿಶ್ ಗಳ ಮಸಾಲೆ ಪದಾರ್ಥಗಳನ್ನ ಇಟ್ಟುಕೊಂಡು ಹಲವಾರು ಹಿತೇಲ್ ಗಳಿಗೆ ಕೆಲಸಕ್ಕಾಗಿ ಅಲೆಯುತ್ತಾರೆ. ಆದರೆ ಎಲ್ಲ ರೆಸ್ಟೋರೆಂಟ್ ಗಳು ಅವರನ್ನು ನಿರಾಕರಿಸಿ ಕೊನೆಗೆ ಹಲವು ಪ್ರಯತ್ನಗಳ ನಂತರ ಪೀಟೆ ಹರ್ಮರ್ ಎಂಬ ಒಂದು ದೊಡ್ಡ ಕಸ್ಟಮರ್ ಸಿಗ್ತಾರೆ. ಇವರು ಹಲವಾರು ರೆಸ್ಟೋರೆಂಟ್ ಗಳ ಓನರ್ ಆಗಿದ್ದು ಇವರುಗೆ ಸ್ಯಾಂಡರ್ಸ್ ಅವರು ತಮ್ಮ kentucky fried chicken (KFC) ಬಗ್ಗೆ ರೆಸಿಪಿ ಹೇಳ್ತಾರೆ.ನಂತರ ಅವರ ನಡುವೆ ಒಂಸು ಒಪ್ಪಂದ ಆಗತ್ತೆ. ಇವರ ಈ ಚಿಕನ್ ರೆಸಿಪಿ ಜನರಿಗೆ ಎಷ್ಟು ಇಷ್ಟ ಆಗತ್ತೆ ಎಂದರೆ, ಪೀಟೆ ಹರ್ಮರ್ ಅವರ ಒಟ್ಟು ಆದಾಯ 75℅ ಹೆಚ್ಚು ಆಗತ್ತೆ.

ಇದರ ನಂತರ ಹರ್ಲ್ಯಾಂಡ್ ಡೇವಿಡ್ ಸ್ಯಾಂಡರ್ಸ್ ಅವರಸ್ ತನ್ನ 62 ನೆ ವಯಸ್ಸಿನಲ್ಲಿ ಒಬ್ಬ ಸಕ್ಸಸ್ಫುಲ್ ಬ್ಯುಸಿನೆಸ್ ಮ್ಯಾನ್ ಆಗಿ ಹೊರಹೊಮ್ಮುತ್ತಾರೆ. ಹೀಗೆ 1952 ರಲ್ಲಿ (KFC ) kentucky fried chicken ಕಂಪನಿಯ ಸ್ಥಾಪಕರು ಆಗುತ್ತಾರೆ. ಹೀಗೆ ಹಲವು ವರ್ಷಗಳ ಕಾಲ ಕಂಪನಿ ನೆಡೆಸಿ ಕೊನೆಗೆ ಡಿಸೇಂಬರ್ 6, 1980 ರಲ್ಲಿ ತಮ್ಮ 90 ನೇ ವಯಸ್ಸಲ್ಲಿ ಮರಣ ಹೊಂದುತ್ತಾರೆ. ಆದರೆ ಸ್ಯಾಂಡರ್ಸ್ ಹುಟ್ಟು ಹಾಕಿದ KFC ಕಂಪನಿ ಹೆಮ್ಮರವಾಗಿ ಬೆಳೆದು ಸುಮಾರು 118ಕ್ಕೂ ದೇಶಗಳಲ್ಲಿ KFC ರೆಸ್ಟೋರೆಂಟ್ ಗಳು ಇವೆ. 18875ಕ್ಕೂ ಹೆಚ್ಚು KFC ಔಟ್ ಲೇಟ್ ಗಳೂ ಇವೆ.

ಜೀವನದ ಉದ್ದಕ್ಕೂ ಸೋಲನ್ನೇ ಕಂಡ ವ್ಯಕ್ತಿ ತನ್ನ ಸತತ ಪರಿಶ್ರಮದ ಫಲವಾಗಿ ತನ್ನ 62 ನೆ ವಯಸ್ಸಿನಲ್ಲಿ ಸಕ್ಸಸ್ ಕಾಣುತ್ತಾರೆ. ಆದರೆ ಇಂದು ಎಷ್ಟೋ ಜನ ಯುವಕರು ತಮ್ಮ 25 ನೇ ವಯಸ್ಸಿಗೆ ಜೀವನದಲ್ಲಿ ಆಸಕ್ತಿ ಕಳೆದುಕೊಳ್ಳುತ್ತಾ ಇದ್ದಾರೆ. ಸೋಲು ನಿರಾಸೆ ಎಲ್ಲರ ಜೀವನದಲ್ಲೂ ಇರೋದೇ ಹಾಗಂತ ನಾವು ನಮ್ಮ ಪ್ರಯತ್ನವನ್ನು ಕೈ ಬಿಡಬಾರದು. ಶ್ರೀ ಕೇರಳ ಭಗವತಿ ಜ್ಯೋತಿಷ್ಯ ಶಾಸ್ತ್ರ ಪ್ರಧಾನ ತಂತ್ರಿಕ್ ರಾಘವೇಂದ್ರ ಭಟ್
ನಿಮ್ಮ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಮತ್ತು ನಿಮ್ಮ ಗುಪ್ತ ಸಮಸ್ಯೆಗಳಿಗೆ ಹಾಗೂ ಮನ ಇಚ್ಛಾಕಾರ್ಯ ನೆರವೇರಿಸಲು ಮತ್ತು ಸುಲಭ ಪರಿಹಾರಕ್ಕಾಗಿ ಇಂದೆ ಕರೆ ಮಾಡಿ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ತೊಂದರೆ, ವಿವಾಹದಲ್ಲಿ ತೊಂದರೆ ಸ್ತ್ರೀ-ಪುರುಷ ಪ್ರೇಮ ವಿಚಾರ, ಇಷ್ಟಪಟ್ಟವರು ನಿಮ್ಮಂತೆ ಆಗಲು ಹಣಕಾಸಿನ ತೊಂದರೆ, ಆರೋಗ್ಯ ಸಮಸ್ಯೆ ಉದ್ಯೋಗ, ವ್ಯವಹಾರದಲ್ಲಿ ತೊಂದರೆ, ಅತ್ತೆಸೊಸೆ ತೊಂದರೆ ಡೈವರ್ಸ್ ಪ್ರಾಬ್ಲಮ್ ಮಕ್ಕಳು ನಿಮ್ಮ ಮಾತು ಕೇಳಲು ಶತ್ರು ಬಾಧೆ, ಮಾಟಮಂತ್ರ ತಡೆ ಇನ್ನು ನಿಮ್ಮ ಜೀವನದ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಪರಿಹಾರ ಶ್ರೀ ಅಂಬಾ ಭವಾನಿ ಜ್ಯೋತಿಷ್ಯಾಲಯ ಪಂಡಿತ್ ರಾಘವೇಂದ್ರ ಭಟ್ ಮೊಬೈಲ್ ನಂಬರ್ 9448001466

WhatsApp Group Join Now
Telegram Group Join Now

By

Leave a Reply

Your email address will not be published. Required fields are marked *

error: Content is protected !!
Footer code: