ಆತ್ಮೀಯ ಓದುಗರೇ ಇತ್ತೀಚಿನ ದಿನಗಳಲ್ಲಿ ರಾಗಿ ಸೇವನೆ ಮಾಡುವವರ ಸಂಖ್ಯೆ ಕಡಿಮೆಯಾಗಿದೆ ಅಲ್ಲದೆ ಸಕ್ಕರೆ ಕಾಯಿಲೆ ಇರುವವರ ಸಂಖ್ಯೆ ಹೆಚ್ಚಾಗಿದೆ. ನಾವುಗಳು ಸೇವನೆ ಅಂಡುವಂತ ಆಹಾರ ನಮ್ಮ ಆರೋಗ್ಯವನ್ನು ಕಾಪಾಡುತ್ತೆ. ಆಹಾರದಲ್ಲಿ ರಾಗಿ ಸೇವಿಸುವುದರಿಂದ ಮಧುಮೇಹವನ್ನು ಸುಲಭವಾಗಿ ನಿಯಂತ್ರಿಸಬಹುದು ಎಂದು ICRISAT (International Crops Research Institute for the Semi-Arid Tropics) ನಡೆಸಿದ ಇತ್ತೀಚಿನ ಅಧ್ಯಯನವು ಕಂಡುಹಿಡಿದಿದೆ. 11 ದೇಶಗಳಲ್ಲಿ ನಡೆಸಿದ ಈ ಅಧ್ಯಯನದಲ್ಲಿ, ರಾಗಿ ಆಧಾರಿತ ಆಹಾರ ಸೇವಿಸುವ ಜನರು ಟೈಪ್ 2 ಮಧುಮೇಹದ ಅಪಾಯವನ್ನು ಹೆಚ್ಚಿನ ಪ್ರಮಾಣದಲ್ಲಿ ಕಡಿಮೆ ಮಾಡಬಹುದು ಎಂದು ವಿಜ್ಞಾನಿಗಳು ಕಂಡುಕೊಂಡಿದ್ದಾರೆ. ಈ ಅಧ್ಯಯನದ ಬಗ್ಗೆ ವಿವರವಾಗಿ ತಿಳಿಯೋಣ.
ಫ್ರಂಟಿಯರ್ಸ್ ಆಫ್ ನ್ಯೂಟ್ರಿಷನ್ ಜರ್ನಲ್ ನಲ್ಲಿ ಇತ್ತೀಚೆಗೆ ಪ್ರಕಟವಾದ ಅಧ್ಯಯನದ ಪ್ರಕಾರ, ರಾಗಿ ಸೇವಿಸುವುದರಿಂದ ಮಧುಮೇಹ ಮತ್ತು ರೋಗ ಬರುವ ಅಪಾಯವನ್ನು ಕಡಿಮೆ ಮಾಡಬಹುದು. ಅಧ್ಯಯನದ ಸಮಯದಲ್ಲಿ ವಿಜ್ಞಾನಿಗಳು, ಈ ರೀತಿಯ ಆಹಾರ ಕಡಿಮೆ ಗ್ಲೈಸೆಮಿಕ್ ಇಂಡೆಕ್ಸ್ ಹೊಂದಿರುತ್ತದೆ. ಆದ್ದರಿಂದ, ಮಧುಮೇಹ ನಿಯಂತ್ರಣಕ್ಕೆ ರಾಗಿ ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸಬಹುದು ಎಂದು ತಿಳಿಸಿದ್ದಾರೆ. ವಿಜ್ಞಾನಿಗಳು ಹೇಳುವಂತೆ, ಅನುವಂಶಿಕವಾಗಿ ಮಧುಮೇಹಕ್ಕೆ ಒಳಗಾಗುವ ಜನರು ಇಂತಹ ಆಹಾರವನ್ನು ಸೇವಿಸುವುದರಿಂದ ಅಪಾಯವನ್ನು ಕಡಿಮೆ ಮಾಡಬಹುದು.
“ಇಂಡಿಯನ್ ನ್ಯಾಷನಲ್ ಟೆಕ್ನಿಕಲ್ ಬೋರ್ಡ್ ಆಫ್ ನ್ಯೂಟ್ರಿಷಿಯನ್” ನ ಪ್ರತಿನಿಧಿ ಮತ್ತು ಅಧ್ಯಯನದ ಲೇಖಕರಲ್ಲಿ ಒಬ್ಬರಾದ ಡಾ. ರಾಜ್ ಭಂಡಾರಿ ಅವರು, “ಅಕ್ಕಿ, ಗೋಧಿ ಮತ್ತು ಮೆಕ್ಕೆ ಜೋಳಕ್ಕೆ ಹೋಲಿಸಿದರೆ ರಾಗಿ ಗ್ಲೈಸೆಮಿಕ್ ಇಂಡೆಕ್ಸ್ ಕಡಿಮೆ ಕಂಡುಬಂದಿದೆ” ಎಂದು ಹೇಳಿದ್ದಾರೆ. ಮಧುಮೇಹ ನಿಯಂತ್ರಣಕ್ಕೆ ರಾಗಿ ಸೇವನೆಯು ತುಂಬಾ ಪ್ರಯೋಜನಕಾರಿಯಾಗಲು ಇದು ಕಾರಣವಾಗಿದೆ.
ಮತ್ತೊಂದೆಡೆ, ICRISAT ನ ಹಿರಿಯ ನ್ಯೂಟ್ರಿಷಿಯನ್ ತಜ್ಞೆ ಮತ್ತು ಅಧ್ಯಯನ ಲೇಖಕಿ ಡಾ.ಎಸ್. ಅನಿತಾ ಅವರು, “ಹಲವಾರು ಪತ್ರಿಕೆಗಳಲ್ಲಿ ಪ್ರಕಟವಾದ ಅಧ್ಯಯನಗಳೊಂದಿಗೆ ಈ ಅಧ್ಯಯನವನ್ನು ಪರಿಶೀಲಿಸಿದಾಗ, ರಾಗಿ ಸೇವನೆಯು ಮಧುಮೇಹ ನಿಯಂತ್ರಣಕ್ಕೆ ಸಹಾಯ ಮಾಡುತ್ತದೆ ಎಂದು ನಾವು ಕಂಡುಕೊಂಡಿದ್ದೇವೆ ಎಂದು ಹೇಳಿದ್ದಾರೆ. ಈ ರೀತಿಯ ಸಮಸ್ಯೆ ಇರುವ ಜನರು ತಮ್ಮ ಆಹಾರದಲ್ಲಿ ಇಂತಹ ಆಹಾರಗಳನ್ನು ಸೇರಿಸಿಕೊಳ್ಳಬೇಕು.
ಅದೇನೇ ಇರಲಿ ರಾಗಿ ಸೇವನೆ ಇತರ ರೋಗಗಳಿಗೂ ಪ್ರಯೋಜನಕಾರಿ: ಅಧ್ಯಯನದಲ್ಲಿ, ವಿಜ್ಞಾನಿಗಳು ರಾಗಿ ಆಧಾರಿತ ಆಹಾರಗಳು ಮಧುಮೇಹ ನಿಯಂತ್ರಣಕ್ಕೆ ಹಾಗೂ ಇತರ ಹಲವು ರೀತಿಯಲ್ಲಿ ಆರೋಗ್ಯಕ್ಕೆ ಪ್ರಯೋಜನಕಾರಿ ಎಂದು ಕಂಡುಕೊಂಡಿದ್ದಾರೆ. ಗ್ಲುಟನ್ ಅಲರ್ಜಿ ಇರುವ ಜನರು ಈ ಆಹಾರಗಳನ್ನು ಸೇವಿಸಬಹುದು ಎಂದು ವಿಜ್ಞಾನಿಗಳು ತಿಳಿಸಿದ್ದಾರೆ, ಏಕೆಂದರೆ ಅವುಗಳು ಅಂಟು ರಹಿತವಾಗಿ ಕಂಡುಬಂದಿವೆ. ಇದಲ್ಲದೆ, ಇದು ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುವ ಗುಣಗಳನ್ನು ಹೊಂದಿದೆ, ಇದು ಹೃದಯದ ಆರೋಗ್ಯವನ್ನು ಸುಧಾರಿಸುತ್ತದೆ (Ragi Benefits in Kannada). ರಾಗಿ ಆಧಾರಿತ ಆಹಾರ, ಆಂಟಿ-ಆಕ್ಸಿಡೆಂಟ್, ಪ್ರೋಟೀನ್ ಮತ್ತು ಆಹಾರದ ನಾರಿನ (ಫೈಬರ್) ಸಮೃದ್ಧ ಮೂಲವೆಂದು ತಿಳಿದುಬಂದಿದೆ. ಒಟ್ಟಿನಲ್ಲಿ, ಮಧುಮೇಹ ನಿಯಂತ್ರಣಕ್ಕೆ ರಾಗಿ ಉಪಯೋಗ ತುಂಬಾ ಪ್ರಯೋಜನಕಾರಿ ಎಂದರೆ ತಪ್ಪಾಗಲಾರದು.