WhatsApp Group Join Now
Telegram Group Join Now

ನಾವಿಂದು ನಿಮಗೆ ಆಯುರ್ವೇದದ ದೃಷ್ಟಿಕೋನದಿಂದ ಸಂಕ್ರಾಂತಿ ಹಬ್ಬ ಯಾವ ರೀತಿಯಾಗಿ ಮಹತ್ವವನ್ನು ಪಡೆದಿದೆ ಎಂಬುದರ ಬಗ್ಗೆ ತಿಳಿಸಿಕೊಡುತ್ತೇವೆ. ಸಂಕ್ರಾಂತಿ ಎನ್ನುವುದು ವೈಭವದ ಸಂಕೇತ ವಿಜ್ರಂಭಣೆಯ ಸಂಕೇತ ಸಡಗರದ ಸಂಕೇತ ಹಬ್ಬದ ವಾತಾವರಣ. ಎಲ್ಲಾ ಬೆಳೆಗಳು ಬೆಳೆದು ನಿಂತಿರುತ್ತವೆ ಭತ್ತದ ರಾಶಿ ಹಾಕಿರುತ್ತಾರೆ ಸಂಕ್ರಾಂತಿಯ ಸಮಯದಲ್ಲಿ ಧವಸ-ಧಾನ್ಯಗಳು ಹೇರಳವಾಗಿರುತ್ತದೆ. ಈ ಸಮಯದಲ್ಲಿ ಪ್ರಕೃತಿಯಲ್ಲಿ ಏನಾಗುತ್ತದೆ ಎಂದರೆ ದಕ್ಷಿಣಾಯನ ಉತ್ತರಾಯನ ಎಂದು ಸೂರ್ಯ ತನ್ನ ಪಥವನ್ನು ಬದಲಾಯಿಸುತ್ತಾನೆ. ನಮ್ಮ ಪೂರ್ವಿಕರು ಸರಿಯಾಗಿ ಕ್ಯಾಲೆಂಡರ್ ಗಳು ದಿನಾಂಕಗಳು ಗ್ರಹಗತಿಗಳ ಬಗ್ಗೆ ಗ್ರಹಗಳು ಯಾವಾಗ ಎಲ್ಲಿ ಯಾವ ಕಕ್ಷೆಯಲ್ಲಿ ಹೇಗೆ ಬದಲಾಗುತ್ತವೆ ಎಂಬುದನ್ನು ಗಣಿತವನ್ನು ಉಪಯೋಗಿಸಿ ಪಂಚಾಂಗವನ್ನು ಬರೆದಿರುತ್ತಾರೆ.

ನಾವು ಹಿಂದಿನ ಕಾಲದವರು ಮೂಢನಂಬಿಕೆಯವರು ಎಂದು ತಿಳಿದುಕೊಂಡಿರುತ್ತೇವೆ ಆದರೆ ಅವರು ಗಣಿತಾತ್ಮಕವಾಗಿ ಇಂತಹ ದಿನವೇ ಸಂಕ್ರಾಂತಿ ಇಂತಹ ದಿನವೇ ಸೂರ್ಯ ದಕ್ಷಿಣಾಯಣದಿಂದ ಉತ್ತರಾಯಣಕ್ಕೆ ತನ್ನ ಪಥವನ್ನು ಬದಲಾಯಿಸುತ್ತಾನೆ ಎಂಬುದನ್ನ ಹಿಂದೆಯೇ ಹೇಳಿದ್ದಾರೆ. ಇದೆಲ್ಲವೂ ಅವರಿಗೆ ಧ್ಯಾನದಿಂದ ಬಂದಿರುವಂತದ್ದು ಅವತ್ತಿನ ಕಾಲದಲ್ಲಿ ಅಷ್ಟೊಂದು ಜನ ವಿದ್ವಾಂಸರಿದ್ದರು ಬ್ರಹಸ್ಪತಿ ಗಳಿದ್ದರೂ ಅಷ್ಟೊಂದು ಪ್ರಕಾಂಡ ಪಾಂಡಿತ್ಯ ಅವತ್ತಿನ ಕಾಲದಲ್ಲಿ ಇತ್ತು. ಸಂಕ್ರಾಂತಿಯ ದಿನ ಎಳ್ಳು-ಬೆಲ್ಲವನ್ನು ಕೊಡುತ್ತಾರೆ ಯಾಕೆ ಎಳ್ಳು ಬೆಲ್ಲವನ್ನು ಕೊಡುವುದಕ್ಕೆ ಪ್ರಾರಂಭಿಸಿದರು ಎಂದರೆ ಈಗ ಇರುವಂತದ್ದು ಚಳಿಗಾಲದ ಮಧ್ಯ ಸ್ಥಿತಿ. ಈ ಸಮಯದಲ್ಲಿ ವಾತಾವರಣದಲ್ಲಿ ವಾತ ವೃದ್ಧಿಯಾಗುತ್ತದೆ.

ವಾತ ವೃದ್ಧಿಯಾದಾಗ ದೇಹದಲ್ಲಿ ರೂಕ್ಷತೆ ಉಂಟಾಗುತ್ತದೆ ರೂಕ್ಷತೆ ಉಂಟಾದಾಗ ತುಟಿಗಳು ಬಿರಿಯುತ್ತದೆ ಚರ್ಮ ಒಡೆಯುತ್ತದೆ ಇಂತಹ ಸಮಯದಲ್ಲಿ ಎಳ್ಳು ಅಂದರೆ ತೈಲವನ್ನು ಉತ್ಪಾದನೆ ಮಾಡುವಂತಹ ಬೀಜ ಇದನ್ನು ಬಳಸುವುದು ಉತ್ತಮ. ಇದರಲ್ಲಿ ತೈಲದ ಅಂಶ ಹೆಚ್ಚಿಗೆ ಇರುವುದರಿಂದ ಅದನ್ನು ನಾವು ಸೇವನೆ ಮಾಡಬೇಕು. ಎಣ್ಣೆಯ ಅಂಶ ದೇಹದಲ್ಲಿ ಹೋದಾಗ ವಾತ ಕಡಿಮೆಯಾಗುತ್ತ ಬರುತ್ತದೆ. ಎಳ್ಳಿನ ಜೊತೆಗೆ ಒಣಕೊಬ್ಬರಿಯನ್ನು ಕೂಡ ಕೊಡುತ್ತಾರೆ ಅದರಲ್ಲಿಯೂ ಕೂಡ ತೈಲ ಉತ್ಪಾದನೆ ಅಂಶವಿರುತ್ತದೆ. ಇವುಗಳ ಜೊತೆಜೊತೆಗೆ ಬೆಲ್ಲವನ್ನು ಕೊಡುತ್ತಾರೆ ಬೆಲ್ಲವನ್ನು ಯಾಕೆ ಕೊಡುತ್ತಾರೆ ಎಂದರೆ ಯಾವಾಗ ವಾತ ವೃದ್ಧಿಯಾಗುತ್ತದೆ ಆಗ ದೇಹದಲ್ಲಿ ಹಿಮೋಗ್ಲೋಬಿನ್ ಅಂಶ ಕೂಡ ಕಡಿಮೆಯಾಗುತ್ತಾ ಬರುತ್ತದೆ. ಆಗ ದೇಹದಲ್ಲಿ ಬಲ ಕಡಿಮೆಯಾಗುತ್ತಾ ಬರುತ್ತದೆ ಶೀತ ಹೆಚ್ಚಾದಂತೆ ಕ್ಯಾಲ್ಸಿಯಂ ಕಡಿಮೆಯಾಗುತ್ತ ಬರುತ್ತದೆ.

ಶೀತಕಾಲದಲ್ಲಿ ಸಂಧಿ ನೋವುಗಳು ಹೆಚ್ಚಾಗುವುದನ್ನು ನೀವು ಗಮನಿಸಿರಬಹುದು ಯಾಕೆಂದರೆ ದೇಹದಲ್ಲಿ ವಾತ ವೃದ್ಧಿ ಆದಾಗ ನೋವುಗಳು ಕಾಣಿಸಿಕೊಳ್ಳುತ್ತವೆ ವಾತಾವನ್ನು ಶಮನ ಮಾಡುವುದಕ್ಕೆ ಕಬ್ಬಿಣಾಂಶ ಹೆಚ್ಚಾಗಿ ಇರುವಂತಹ ಪದಾರ್ಥಗಳನ್ನು ಸೇವನೆ ಮಾಡಬೇಕು. ರಕ್ತದಲ್ಲಿ ಕಬ್ಬಿಣಾಂಶವನ್ನು ವೃದ್ಧಿ ಮಾಡುವಂತಹ ಶಕ್ತಿ ಬೆಲ್ಲಕ್ಕಿದೆ. ಆದ್ದರಿಂದ ಎಳ್ಳು ಒಣ ಕೊಬ್ಬರಿ ಬೆಲ್ಲ ಅಥವಾ ಕಬ್ಬನ್ನು ಕೊಡುತ್ತಾರೆ ಈ ಸಮಯದಲ್ಲಿಯೇ ಪ್ರಕೃತಿಯು ಕೂಡ ಕಬ್ಬು ಕಟಾವಿಗೆ ಬರುವಂತೆ ನಿರ್ಮಾಣ ಮಾಡಿರುತ್ತದೆ. ಪ್ರಕೃತಿಯು ಕೂಡ ಮನುಷ್ಯನ ಆರೋಗ್ಯಕ್ಕೆ ಪೂರಕವಾದಂತಹ ವಾತಾವರಣವನ್ನು ನಿರ್ಮಾಣ ಮಾಡಿರುತ್ತದೆ. ನಾವು ಪ್ರಕೃತಿಯ ವಿರುದ್ಧ ಹೋದಾಗ ಕಾಯಿಲೆಗಳು ಕಾಣಿಸಿಕೊಳ್ಳುತ್ತವೆ. ನಮ್ಮ ಹಿರಿಯರು ಋತುಚರ್ಯ ವನ್ನು ಬರೆದಿಟ್ಟಿದ್ದಾರೆ ಯಾವ ಯಾವ ಕಾಲದಲ್ಲಿ ಯಾವ ಯಾವ ಆಹಾರ ಪದಾರ್ಥಗಳನ್ನು ಸೇವಿಸಬೇಕು ಎಂಬುದನ್ನು ಈಗಾಗಲೇ ಅವರು ಬರೆದಿಟ್ಟಿದ್ದಾರೆ. ಈ ರೀತಿಯಾಗಿ ನೀವು ಕೂಡ ಎಳ್ಳು ಒಣಕೊಬ್ಬರಿ ಬೆಲ್ಲವನ್ನು ಸೇವಿಸಿ ಹಬ್ಬವನ್ನು ಆಚರಿಸಿ. ಈ ಹಬ್ಬ ನಿಮಗೆ ಸಡಗರ ಸಂಭ್ರಮವನ್ನು ತಂದು ಕೊಡಲಿ ಎಂದು ನಾವು ಕೇಳಿಕೊಳ್ಳುತ್ತೇವೆ.

WhatsApp Group Join Now
Telegram Group Join Now

By

Leave a Reply

Your email address will not be published. Required fields are marked *

error: Content is protected !!
Footer code: