ಶಿರಡಿಯ ಸಾಯಿಬಾಬಾ ತಮ್ಮ ಅಂತ್ಯದ ವೇಳೆ ಬಳಸಿದ ಬಟ್ಟೆ

0

ಭಾರತದಲ್ಲಿ ಅತಿ ಹೆಚ್ಚು ಜನ ಪೂಜಿಸಲ್ಪಡುವ, ನಂಬುವ ಏಕೈಕ ಸಂತ ಎಂದರೆ ಶಿರಡಿ ಶ್ರೀ ಸಾಯಿಬಾಬಾ ದೇಶದ ನಾನಾ ಭಾಗದಿಂದ ಅದರಲ್ಲೂ ಗುರುವಾರದ ದಿನ ಶಿರಡಿಯಲ್ಲಿರುವ  ಈ ದೇಗುಲಕ್ಕೆ ಭಕ್ತರ ಭೇಟಿ ನೀಡುತ್ತಾರೆ, ಬಾಬಾ ಅವರು ಸಮಾಧಿಯಗುವ ಮುನ್ನ ಹೇಳಿದ ಮಾತುಗಳೇ ಇದಕ್ಕೆ ಕಾರಣವಾಗಿದೆ. ನಾನು ಸಮಾಧಿಯಾದ ನಂತರವೂ ಸಕ್ರಿಯನಾಗಿರುತ್ತೇನೆ ಎಂದು ಬಾಬಾ ಹೇ   ಳಿದ ಕಾರಣ ಅವರ ಭಕ್ತಾಧಿಗಳು ಶ್ರೇಷ್ಠ ಸಂತನ ಉಪಸ್ಥಿತಿಯನ್ನು ಇನ್ನೂ ಸಹ ನಂಬುತ್ತಾರೆ.

ಬಾಬಾ ಅವರ ಈಗಿರುವ ದೇವಸ್ಥಾನವನ್ನು ಮೊದಲು ನಿರ್ಮಿಸಲಾಗಿತ್ತು, ಇದನ್ನು ನಾಗಪುರ ಮೂಲದ ಶ್ರೀಮಂತ ವ್ಯಕ್ತಿ ಗೋಪಾಲ್ ರಾವ್ ಬೂಟಿ ಅವರು ನಿರ್ಮಿಸಿದರು. ಮೊದಲು ಇದೊಂದು ವಾಡೆ ಮತ್ತು ವಿಶ್ರಾಂತಿ ಕೊಠಡಿ ಆಗಿತ್ತು,ಕೃಷ್ಣನ ದರ್ಶನಕ್ಕೆ ಬರುವ ಭಕ್ತರು ಇಲ್ಲಿ ತಂಗುತ್ತಿದ್ದರು. ಶಮಾ ಮತ್ತು ಬೂಟಿ ಅವರು ಪ್ರತ್ಯಕ್ಷವಾಗಿ ವಾಡೆಯ ಜೊತೆ ದೇವಸ್ಥಾನವೂ ಇರಲಿ ನಾನು ಭಕ್ತರಿಗೆ ದರ್ಶನ ಕೊಡುತ್ತೇನೆ, ಅವರ ಆಸೆಗಳನ್ನಿ ಈಡೇರಿಸುತ್ತೇನೆ ಎಂದು ಹೇಳಿದರು.

ದೇವಸ್ಥಾನ ನಿರ್ಮಾಣ ಕಾಮಗಾರಿ ನೆಡೆಯುವಾಗ ಬೂಟಿ ಅವರು ಆ ಸ್ಥಳಕ್ಕೆ ಹೋದಾಗಲೆಲ್ಲ ಬಾಬಾ ಅವರು ಸಲಹೆ ನೀಡುತ್ತಿದ್ದರು.ದೇವಸ್ಥಾನ ನಿರ್ಮಾಣ ಕಾರ್ಯವು ಇನ್ನೇನು ಮುಗಿಯುವ ಹಂತಕ್ಕೆ ಬಂದಿದೆ ಎನ್ನುವಾಗ ಬಾಬಾ ಅವರ ಆರೋಗ್ಯವು ಹದಗೆಟ್ಟಿತ್ತು. ಅವರು ಇನ್ನೇನು ಕೊನೆಯುಸಿರೆಳೆಯುತ್ತಿದ್ದಾರೆ ಎನ್ನುವಾಗ ನನಗೆ ಯಾಕೋ ಹುಷಾರಿಲ್ಲ, ನನ್ನನ್ನು ದಾಗಡಿ ವಾಡೆಗೆ ಕರೆದೋಯ್ಯಿರೀ ಎಂದು ಹೇಳಿದರು 1918 ರ ಅಕ್ಟೋಬರ್ 15 ಆ ದಿನ ಗುರುವಾರವಾಗಿತ್ತು .

ಬಾಬಾ ಅವರು ಮಹಾ ಸಮಾಧಿ ಸೇರಿದ 36 ಗಂಟೆಗಳ ನಂತರ ಐಕ್ಯರಾದರು, ಬಾಬಾ ಅವರನ್ನು ಸಮಾಧಿ ಮಾಡುವಾಗ ಅವರ ಭಂಗಿ ಸೇದುವ ಕೊಳವೆ, ಪಾದುಕೆಗಳು, ಮುರಿದ ಇಟ್ಟಿಗೆ, ಸೂಜಿ, ಹತ್ತಿ , ಹರಿದ ಬಟ್ಟೆ ಬ್ಯಾಗ್ ನ ತುಂಡುಗಳು, ಅವರ ಬಗಲು ಚೀಲ, ಹಸಿರು ಬಣ್ಣದ ನಿಲುವಂಗಿಯನ್ನೂ ಕೂಡ ಅವರ ದೇಹದ ಸಮಾಧಿ ಮಾಡಲಾಯಿತು, ಬಾಬಾ ಸಮಾಧಿಯಾದ ನಂತರ ಅವರ ಫೋಟೋ ಒಂದನ್ನು ಸಮಾಧಿ ಮೇಲೆ ಇರಿಸಲಾಯಿತು,1954 ರಲ್ಲಿ ಫೋಟೋವನ್ನು ತೆಗೆದು ಬಾಬಾ ಅವರ ಪ್ರತಿಮೆ ನಿರ್ಮಾಣ ಮಾಡಲಾಯಿತು.

ಬಾಬಾ ಅವರು ಸಮಾಧಿಯಾದ 36 ವರ್ಷಗಳ ತರುವಾಯ ಪ್ರತಿಮೆ ನಿರ್ಮಾಣವಾಗಿದೆ, ಬಾಬಾ ಅವರ ಪ್ರತಿಮೆ ನಿರ್ಮಾಣವಾಗಿರುವ ದುಬಾರಿಯಾದ ಇಟಲಿಯನ್ ಅಮೃತಶಿಲೆ ಮುಂಬೈನ ಡಾಕಾಗೆ ಬಂದಿತ್ತು, ಆದ್ದರಿಂದ ಅದನ್ನು ಹರಾಜು ಮಾಡಲಾಯಿತಿ ಮತ್ತು ಖರೀದಿದಾರರು ಅದನ್ನು ಬಾಬಾ ದೇವಸ್ಥಾನಕ್ಕೆ ದಾನ ಮಾಡಿದರು.

Leave A Reply

Your email address will not be published.

error: Content is protected !!