ರಾಜಕುಮಾರ್ ಅವರಿಗೆ ದೇವರ ಮೇಲೆ ಅಪಾರ ಭಕ್ತಿ ಇದ್ದು ಅನೇಕ ಸಿನಿಮಾಗಳಲ್ಲಿ ಅವರ ದೈವ ಭಕ್ತಿಯನ್ನು ನೋಡುತ್ತೇವೆ. ಅವರಂತೆ ಅವರ ಮಕ್ಕಳು ದೈವ ಭಕ್ತಿಯನ್ನು ಹೊಂದಿದ್ದಾರೆ. ರಾಜಕುಮಾರ್ ಕುಟುಂಬದವರ ದೈವ ಭಕ್ತಿಯ ಬಗ್ಗೆ ಈ ಲೇಖನದ ಮೂಲಕ ತಿಳಿಯೋಣ.

ಡಾಕ್ಟರ್ ರಾಜಕುಮಾರ್ ಅಪಾರವಾದ ದೈವ ಭಕ್ತಿಯನ್ನು ಹೊಂದಿದ್ದರು ಅಲ್ಲದೆ ಅವರು ಶ್ರೀ ಗುರು ರಾಘವೇಂದ್ರ, ಶ್ರೀ ಕೃಷ್ಣ, ವೆಂಕಟೇಶ್ವರ, ಅಯ್ಯಪ್ಪ ಹಾಗೂ ಇನ್ನಿತರ ದೇವರ ಪರಿಚಯವನ್ನು ತಮ್ಮ ಚಿತ್ರದ ಮೂಲಕ ಅಭಿಮಾನಿಗಳಿಗೆ ಮಾಡಿಸಿದ್ದಾರೆ. ಅವರ ಮಕ್ಕಳಿಗೂ ದೈವ ಭಕ್ತಿ ರಕ್ತದಲ್ಲಿ ಹರಿದು ಬಂದಿದೆ. ಶಿವಣ್ಣ, ರಾಘವೇಂದ್ರ ರಾಜಕುಮಾರ್ ಹಾಗೂ ಪುನೀತ್ ಅವರು ಸಹ ಹೆಚ್ಚಾಗಿ ದೇವರ ದರ್ಶನ ಮಾಡುತ್ತಿದ್ದರು. ಪುನೀತ್ ರಾಜಕುಮಾರ್ ದೇವರಲ್ಲಿ ಅಪಾರ ನಂಬಿಕೆ ಹೊಂದಿದ್ದರು.

ಡಾಕ್ಟರ್ ರಾಜಕುಮಾರ್ ಅವರ ಕುಟುಂಬ ಕರುನಾಡು ಮೆಚ್ಚಿದ ಸಂಸಾರ. ಪುನೀತ್ ಅವರಿಗೆ ರಾಯರೆಂದರೆ ಬಹಳ ಪ್ರೀತಿ, ಮಂತ್ರಾಲಯದ ಗುರು ರಾಘವೇಂದ್ರ ರಾಯರ ಬಗ್ಗೆ ಅಪ್ಪು ತಂದೆಯಂತೆಯೆ ವಿಶೇಷ ಭಕ್ತಿ ಹೊಂದಿದ್ದರು. ವರ್ಷಕ್ಕೆ ಒಂದು ಬಾರಿ ಕುಟುಂಬದವರ ಜೊತೆ ಅಪ್ಪು ಮಂತ್ರಾಲಯಕ್ಕೆ ಭೇಟಿ ಕೊಡುತ್ತಿದ್ದರು. ಇತ್ತೀಚೆಗೆ ಅಪ್ಪು ಜಗ್ಗೇಶ್ ಜೊತೆ ಮಂತ್ರಾಲಯಕ್ಕೆ ಭೇಟಿ ಕೊಟ್ಟಿದ್ದರು. ಅಯ್ಯಪ್ಪ ಸ್ವಾಮಿಯ ಭಕ್ತರಾಗಿದ್ದ ಪುನೀತ್ ಬಹುತೇಕ ವರ್ಷಗಳಲ್ಲಿ ಸೋದರರ ಜೊತೆ ಮಾಲೆಯನ್ನು ಧರಿಸಿ ಶಬರಿಮಲೆ ಯಾತ್ರೆ ನಡೆಸುತ್ತಿದ್ದರು. ಅಪ್ಪು ದೇವರ ಮೇಲೆ ನಂಬಿಕೆ, ಕಿರಿಯರ ಮೇಲೆ ಪ್ರೀತಿ, ಹಿರಿಯರ ಮೇಲೆ ಗೌರವ ಹೊಂದಿದ್ದರು ಹೀಗಾಗಿ ಅವರ ಅಗಲಿಕೆಗೆ ಈಗಲೂ ಕರ್ನಾಟಕ ಕಣ್ಣೀರು ಹಾಕುತ್ತದೆ. ರಾಜಕುಮಾರ್ ಅವರು ಅಯ್ಯಪ್ಪ ಮಾಲೆ ಹಾಕಿಸಿ ಇರುಮುಡಿ ಇಟ್ಟುಕೊಂಡು ಶಬರಿ ಮಲೆಗೆ ಭೇಟಿ ನೀಡುವ ವಿಷಯ ಎಲ್ಲರಿಗೂ ಗೊತ್ತಿದೆ.

ಕೆಲವು ದಶಕಗಳ ಹಿಂದೆ ಶಬರಿಮಲೆ ಬಗ್ಗೆ ಹೆಚ್ಚು ಜನರಿಗೆ ತಿಳಿದಿರಲಿಲ್ಲ. ದಟ್ಟ ಕಾಡಿನಲ್ಲಿ ಬರಿಗಾಲಲ್ಲಿ ರಾಜಕುಮಾರ್ ಹಾಗೂ ಇನ್ನಿತರರು ಶಬರಿಮಲೆಗೆ ಹೋಗುತ್ತಿದ್ದರು. ಅಯ್ಯಪ್ಪನನ್ನು ಭಕ್ತಿ ಭಾವದಿಂದ ಬೇಡಿಕೊಳ್ಳುತ್ತಿದ್ದರು. ರಾಜಕುಮಾರ್ ಅವರು ಹೋಗುವಾಗ ತಮ್ಮೊಂದಿಗೆ ಪುನೀತ್ ಅವರನ್ನು ಕರೆದುಕೊಂಡು ಹೋಗುತ್ತಿದ್ದರು. ಚಿಕ್ಕ ವಯಸ್ಸಿನಿಂದಲೆ ಪುನೀತ್ ಅವರಿಗೆ ಅಯ್ಯಪ್ಪನ ಮೇಲೆ ಅಪಾರ ಭಕ್ತಿ, ಪ್ರತಿವರ್ಷ ಮಾಲೆ ಹಾಕಿಕೊಂಡು ಶಬರಿಮಲೆಗೆ ಹೋಗಿ ಅಯ್ಯಪ್ಪನ ದರ್ಶನ ಮಾಡುತ್ತಾರೆ.

ರಾಜಕುಮಾರ್ ಅವರ ಜೊತೆಗೆ ಹಿರಿಯ ನಟ ಶಿವರಾಮ ಅವರು ಶಬರಿಮಲೆಗೆ ಹೋಗುತ್ತಿದ್ದರು. ರಾಜಕುಮಾರ್ ಅವರು ಮರಣ ಹೊಂದಿದ ನಂತರ ಶಿವರಾಮ ಅವರ ಮಾರ್ಗದರ್ಶನದಲ್ಲಿ ರಾಜಕುಮಾರ್ ಅವರ ಕುಟುಂಬ ಶಬರಿಮಲೆಗೆ ಹೋಗಿ ಅಯ್ಯಪ್ಪನ ದರ್ಶನ ಪಡೆಯುತ್ತಿದ್ದರು. ಹಿರಿಯ ನಟ ಶಿವರಾಮ ಅವರೊಂದಿಗೆ ಶಿವಣ್ಣ, ಅಪ್ಪು, ರಾಘಣ್ಣ ಅವರು 20 ವರ್ಷಗಳಿಂದ ಶಬರಿಮಲೆ ಯಾತ್ರೆಗೆ ಹೋಗುತ್ತಿದ್ದರು. ಒಂದೆ ವರ್ಷ ಶಿವರಾಮ ಹಾಗೂ ಅಪ್ಪು ನಮ್ಮನ್ನು ಬಿಟ್ಟು ಇಹಲೋಕ ತ್ಯೆಜಿಸಿರುವುದು ವಿಪರ್ಯಾಸವಾಗಿದೆ.

ಅಪ್ಪು ಅಗಲಿಕೆಯ ನೋವನ್ನು ಅಭಿಮಾನಿಗಳಿಗೆ ಸಹಿಸಲು ಸಾಧ್ಯವಾಗುತ್ತಿಲ್ಲ. ರಾಜ್ಯದ ಮೂಲೆ ಮೂಲೆಗಳಿಂದ ಅಭಿಮಾನಿಗಳು ಒಂದಲ್ಲ ಒಂದು ರೀತಿಯಲ್ಲಿ ಶ್ರದ್ಧಾಂಜಲಿ ಸಲ್ಲಿಸುತ್ತಿದ್ದಾರೆ. ನೇತ್ರದಾನ, ರಕ್ತದಾನ ಮಾಡುವ ಮೂಲಕ ಸಮಾಜ ಮುಖಿ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ಕರ್ನಾಟಕದ ಮೂಲೆ ಮೂಲೆಯಲ್ಲಿರುವ ಹಳ್ಳಿಗಳಲ್ಲಿ ಪುನೀತ್ ಅವರ ಸ್ಮಾರಕ, ರಸ್ತೆಗಳು, ಅಪ್ಪು ಹೆಸರಿನ ಏರಿಯಾಗಳು ಕಂಡುಬರುತ್ತಿವೆ. ಪುನೀತ್ ಅವರ ಅಭಿಮಾನಿಯೊಬ್ಬ ಪುನೀತ್ ಅವರ ಫೋಟೊ ಹಿಡಿದು ಶಬರಿಮಲೆ ಯಾತ್ರೆ ಮಾಡಿ ಪುನೀತ್ ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಬೇಡಿಕೊಂಡಿದ್ದಾರೆ.

ಮೈಸೂರಿನ ಟಿ ನರಸೀಪುರ ತಾಲೂಕಿನ ಕೃಷ್ಣಾಪುರ ಗ್ರಾಮದ ಅಯ್ಯಪ್ಪ ಸ್ವಾಮಿಯ ಭಕ್ತರು ಶಬರಿಮಲೆಗೆ ಯಾತ್ರೆಗೆ ಹೋಗುವಾಗ ಇರುಮುಡಿ ಜೊತೆಗೆ ಪುನೀತ್ ಅವರ ಫೋಟೋವನ್ನು ಹೊತ್ತು ಸಾಗಿದ್ದಾರೆ. ದೇಶದ ಪ್ರಾಚೀನ ದೇವಾಲಯಗಳಲ್ಲಿ ಒಂದಾದ ಶಬರಿ ಮಲೆ ಅಯ್ಯಪ್ಪ ದೇವಾಲಯ ಪ್ರತಿವರ್ಷ ಲಕ್ಷಾಂತರ ಭಕ್ತರನ್ನು ಸೆಳೆಯುತ್ತದೆ. ಶಬರಿಮಲೆ ಯಾತ್ರೆ ನವೆಂಬರ್ ನ ಕಾರ್ತಿಕ ಮಾಸದಲ್ಲಿ ಆರಂಭವಾಗಿ ಜನವರಿ ತಿಂಗಳಿನಲ್ಲಿ ಮುಗಿಯುತ್ತದೆ. ಈ ಯಾತ್ರೆಗೆ ದೇಶ ವಿದೇಶಗಳಿಂದ ಯಾತ್ರಾರ್ಥಿಗಳು ಬಂದು ಅಯ್ಯಪ್ಪನ ದರ್ಶನ ಪಡೆದು ಧನ್ಯರಾಗುತ್ತಾರೆ.

By admin

Leave a Reply

Your email address will not be published. Required fields are marked *

error: Content is protected !!
Footer code: