ವಿಜಯ್ ರಾಘವೇಂದ್ರ ಅವರ ಮುದ್ದಾದ ಫ್ಯಾಮಿಲಿ

0

ವಿಜಯ್ ರಾಘವೇಂದ್ರ ಕನ್ನಡ ಚಿತ್ರರಂಗದಲ್ಲಿನ ಜನಪ್ರಿಯ ನಟರಲ್ಲಿ ಒಬ್ಬರು. ಇವರು ೧೯೯೩ ರಲ್ಲಿ ತೆರೆಕಂಡ ಚಿನ್ನಾರಿ ಮುತ್ತ ಚಿತ್ರದಲ್ಲಿ ಬಾಲನಟನಾಗಿ ನಟಿಸಿ ಪ್ರಶಸ್ತಿಯನ್ನು ಪಡೆದಿದ್ದರು. ಕನ್ನಡದ ಪ್ರಖ್ಯಾತ ನಿರ್ಮಾಪಕರಾದ ಎಸ್.ಏ.ಚಿನ್ನೇಗೌಡರವರ ಮಗ. ನಂತರ ಬಾಲ ನಟನಾಗಿ ರಾಷ್ಟ್ರ ಪ್ರಶಸ್ತಿ ಕೂಡಾ ಪಡೆದಿದ್ದಾರೆ. ವಿಜಯ ರಾಘವೇಂದ್ರ ಅವರು ಮೊದಲ ಬಾರಿಗೆ ನಟನಾಗಿ ಅಭಿನಯಿಸಿದ ಚಿತ್ರ ರಾಮೋಜಿರಾವ್ ಪ್ರೊಡಕ್ಷನ್ ಇದರ ಅಡಿಯಲ್ಲಿ ೨೦೦೨ ರಲ್ಲೀ ತೆರೆಕಂಡ ನಿನಗಾಗಿ ಚಿತ್ರದ ಮೂಲಕ ಕನ್ನಡ ಸಿನಿ ರಂಗಕ್ಕೆ ನಾಯಕ ನಟನಾಗಿ ಪಾದರ್ಪಣೆ ಮಾಡಿದರು. ವಿಜಯ್ ರಾಘವೇಂದ್ರ ಅವರಿಗೆ ಅವರ ಉತ್ತಮ ನಟನೆಗಾಗಿ ಅತ್ಯುತ್ತಮ ನಟ ಎಂದು ಕರ್ನಾಟಕ ರಾಜ್ಯ ಫಿಲಂ ಅವಾರ್ಡ್ ದೊರಕಿದೆ. 2013ರಲ್ಲಿ ಆರಂಭವಾದ ಕನ್ನಡದ ಬಿಗ್ ಬಾಸ್ ರಿಯಾಲಿಟಿ ಶೋನಲ್ಲಿ ವಿಜಯ ರಾಘವೇಂದ್ರ ಅವರು ಭಾಗವಹಿಸಿ ಅತಿ ಹೆಚ್ಚು ಜನರ ವೋಟ್ ಗಳಿಸುವುದರ ಮೂಲಕ ಬಿಗ್ ಬಾಸ್ ವಿನ್ನರ್ ಆಗಿದ್ದರು.

ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ರಿಯಾಲಿಟಿ ಶೋ ಉತ್ತಮ ಪ್ರತಿಕ್ರಿಯೆ ಪಡೆಯುತ್ತಿದೆ. ಪ್ರತಿ ವೀಕೆಂಡ್‌ನಲ್ಲೂ ವಿಭಿನ್ನ ಕಾನ್ಸೆಪ್ಟ್‌ನಿಂದ ವೀಕ್ಷಕರಿಗೆ ಮನೋರಂಜನೆ ನೀಡುತ್ತಿದ್ದಾರೆ. ಈ ಕಾರ್ಯಕ್ರಮದಲ್ಲಿ ವಿಜಯ ರಾಘವೇಂದ್ರ ಅವರು ಜಡ್ಜ್ ಆಗಿ ಕೂಡಾ ಕಾಣಿಸಿಕೊಳ್ಳುತ್ತಿದ್ದಾರೆ. ಈಗಾಗಲೇ ಎರಡು ಮೂರು ಸೀಸನ್ ಗಳಿಂದ ವಿಜಯ್ ರಾಘವೇಂದ್ರ ಅವರು ಡಿಕೆಡಿ ಕಾರ್ಯಕ್ರಮದಲ್ಲಿ ನಿರ್ಣಾಯಕರಾಗಿ ಭಾಗವಿಸುತ್ತಾ ಇದ್ದಾರೆ. ಝೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗಿದ್ದ ವೀಕೆಂಡ್ ವಿತ್ ರಮೇಶ್ ಈ ಕಾರ್ಯಕ್ರಮದಲ್ಲಿ ಕೂಡಾ ವಿಜಯ್ ರಾಘವೇಂದ್ರ ಅವರು ಭಾಗವಿಸಿ ತಮ್ಮ ಜೀವನದ ಕುರಿತು ಹಂಚಿಕೊಂಡಿದ್ದರು. ಅಷ್ಟೇ ಅಲ್ಲದೆ ವಿಜಯ್ ರಾಘವೇಂದ್ರ ಅವರು ಡ್ರಾಮಾ ಜೂನಿಯರ್ ಕಾರ್ಯಕ್ರಮದಲ್ಲಿ ಕೂಡಾ ಜಡ್ಜ್ ಆಗಿ ಭಾಗವಹಿಸಿದ್ದರು.

ಗಂಡ-ಹೆಂಡತಿ ಅಂದ್ರೆ ಹೀಗೆ ಇರಬೇಕು’ ಎಂದು ನಟ ವಿಜಯ್ ರಾಘವೇಂದ್ರ ಹಾಗೂ ಪತ್ನಿ ಸ್ಪಂದನ ರವರ ನಡುವಿನ ಅನುಬಂಧವನ್ನ ‘ಬಿಗ್ ಬಾಸ್’ ಕಾರ್ಯಕ್ರಮದಲ್ಲಿ ನೋಡಿದ್ಮೇಲೆ ಕೋಟ್ಯಾಂತರ ಕನ್ನಡಿಗರು ಮಾತನಾಡಿಕೊಂಡಿದ್ದರು. ಬಿಗ್ ಬಾಸ್ ಮನೆಯಲ್ಲಿ ಇರುವಾಗ ಪತ್ನಿ ಸ್ಪಂದನ ರವರನ್ನ ಮಿಸ್ ಮಾಡಿಕೊಂಡು ವಿಜಯ್ ರಾಘವೇಂದ್ರ ಗೊಳೋ ಎಂದು ಕಣ್ಣೀರಿಟ್ಟಿದ್ದರು. ಪತ್ನಿ ಸ್ಪಂದನ ರವರನ್ನ ವಿಜಯ್ ರಾಘವೇಂದ್ರ ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಾರೆ ಎಂಬ ಸಂಗತಿ ಎಲ್ಲರಿಗೂ ಗೊತ್ತು. ಆದರೆ ಇಬ್ಬರ ಲವ್ ಸ್ಟೋರಿ ಶುರು ಆಗಿದ್ದು ಹೇಗೆ ಎಂಬುದರ ಬಗ್ಗೆ ವಿಜಯ್ ರಾಘವೇಂದ್ರ- ಸ್ಪಂದನ ಲವ್ ಸ್ಟೋರಿ ಜೀ ಕನ್ನಡ ವಾಹಿನಿಯ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ಬಹಿರಂಗವಾಯಿತು.

ವಿಜಯ್ ರಾಘವೇಂದ್ರ ಪತ್ನಿ ಸ್ಪಂದನಾ ಪ್ರಖ್ಯಾತ ನಿಷ್ಠಾವಂತ ಅಧಿಕಾರಿ ಮಗಳು, ನಿರ್ಮಾಪಕಿ. ಮಂಗಳೂರಿನ ಹುಡುಗಿ ಮದುವೆ ಆಗ್ಬೇಕು ಎಂದುಕೊಂಡಿದ್ದ ವಿಜಯ್. 2004ರಲ್ಲಿ ಮಲ್ಲೇಶ್ವರಂ ಕಾಫಿಡೇಯಲ್ಲಿ ಸ್ಪಂದನಾ ಅವರನ್ನು ನೋಡಿದರು. ಮೊದಲ ಭೇಟಿಯಲ್ಲಿ ಸಂಗೀತದ ವಿಚಾರವಾಗಿ ಸ್ಪಂದನಾ-ವಿಜಯ್ ಮಧ್ಯೆ ಕ್ಲ್ಯಾಶ್ ನಡೆದಿತ್ತು. 2ನೇ ಬಾರಿ 2007ರಲ್ಲಿ ಶೇಷಾದ್ರಿಪುರಂ ಕಾಫಿಡೇಯಲ್ಲಿ ಇವರಿಬ್ಬರ ಭೇಟಿ ಆಗಿತ್ತು. 2ನೇ ಭೇಟಿಯಲ್ಲಿ ಸ್ಪಂದನಾ ಅವರನ್ನು ವಿಜಯ್ ಮಾತನಾಡಿಸಿದ್ದರು. ಸ್ಪಂದನಾ ಬಳಿ ವಿಜಯ್ ಮದುವೆಯಾಗ್ತೀಯಾ ಅಂತ ಅವರ ತಂದೆ ಕೇಳಿದ್ದರು. ತಂದೆಯ ಬಳಿ ಪ್ರೀತಿ ವಿಚಾರ ಹೇಳಿದ್ದ ವಿಜಯ್, ಅವರ ಕಸಿನ್, ತಂದೆ ಅವರು ಇವರಿಬ್ಬರ ಮದುವೆ ಮಾತುಕತೆ ಮಾಡಿದ್ರು. ಮನೆಯಲ್ಲಿ ಇವರಿಬ್ಬರ ವಿಚಾರ ಗೊತ್ತಾಗಿ ಒಂದೇ ತಿಂಗಳಿಗೆ ಮದುವೆ. ೨೬ ಆಗಸ್ಟ್ ೨೦೦೭ ರಲ್ಲಿ ಪೊಲೀಸ್ ಅಸಿಸ್ಟೆಂಟ್ ಕಮಿಷನರ್ ಅವರ ಮಗಳು ತಾವು ಪ್ರೀತಿಸಿದ ಹುಡುಗಿ ಸ್ಪಂದನ ಅವರ ಜೊತೆ ಸಪ್ತಪದಿ ತುಳಿದು ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಸ್ಪಂದನ ಹಾಗೂ ವಿಜಯ ರಾಘವೇಂದ್ರ ಅವರಿಗೆ ಶೌರ್ಯ ಹೆಸರಿನ ಮುದ್ದಾದಾಗ ಕೂಡಾ ಇದ್ದಾನೆ. ವಿಜಯ್ ರಾಘವೇಂದ್ರ ಅವರ ಕುಟುಂಬದ ಮುದ್ದಾದ ಫೋಟೋಗಳನ್ನು ನೋಡಬಹುದು.

Leave A Reply

Your email address will not be published.

error: Content is protected !!
Footer code: