WhatsApp Group Join Now
Telegram Group Join Now

ತೆಂಗಿನ ಮರವನ್ನು ಕಲಿಯುಗದ ಕಲ್ಪವೃಕ್ಷ ಎಂದು ಕರೆಯಲಾಗುತ್ತದೆ. ತೆಂಗಿನ ಮರದಲ್ಲಿ ಸಿಗುವಂತಹ ಕಾಯಿಯನ್ನು ನಾವು ಹೆಚ್ಚಾಗಿ ದೇವರಪೂಜೆಗೆ ಹಾಗೂ ಅಡುಗೆಗೆ ಬಳಕೆ ಮಾಡುತ್ತೇವೆ. ಈ ಹಸಿ ಕೊಬ್ಬರಿಯನ್ನು ಬಿಸಿಲಿನಲ್ಲಿ ಚೆನ್ನಾಗಿ ಒಣಗಿಸಿದಾಗ ಸಿಗುವುದೇ ಒಣಕೊಬ್ಬರಿ. ಒಣಕೊಬ್ಬರಿ ಕೇವಲ ಅಡುಗೆ ಮತ್ತು ಪೂಜೆಗೆ ಮಾತ್ರವಲ್ಲದೆ ಮನುಷ್ಯನ ಆರೋಗ್ಯದ ವೃದ್ಧಿಗೂ ಕೂಡ ಉಪಯುಕ್ತವಾಗಿದೆ. ಮನೆಯಲ್ಲಿ ಹಿರಿಯರು ಒಣಕೊಬ್ಬರಿ ಜೊತೆಗೆ ಬೆಲ್ಲವನ್ನು ತಿನ್ನುವುದಕ್ಕೆ ಸಲಹೆಯನ್ನು ನೀಡುತ್ತಾರೆ ಏಕೆಂದರೆ ಅವರು ಒಣಕೊಬ್ಬರಿ ಯಲ್ಲಿರುವ ಉತ್ತಮ ಪೌಷ್ಟಿಕಾಂಶದ ಬಗ್ಗೆ ತಿಳಿದಿರುತ್ತಾರೆ. ನಾವಿಂದು ನಿಮಗೆ ಒಣಕೊಬ್ಬರಿ ಮತ್ತು ಬೆಲ್ಲವನ್ನು ಸೇರಿಸಿ ಸೇವನೆ ಮಾಡುವುದರಿಂದ ಯಾವ ಎಲ್ಲ ರೀತಿಯ ಔಷಧೀಯ ಗುಣಗಳನ್ನು ಪಡೆದುಕೊಳ್ಳಬಹುದು ಎಂಬುದರ ಬಗ್ಗೆ ತಿಳಿಸಿಕೊಡುತ್ತೇವೆ.

ಒಣ ಕೊಬ್ಬರಿಯಲ್ಲಿ ಉತ್ತಮವಾದ ಪ್ರೊಟೀನ್ ಇದೆ ಕಾರ್ಬೋಹೈಡ್ರೇಡ್ ಇದೆ ಫೈಬರ್ ಇದೆ ಫ್ಯಾಟ್ ಇದೆ ಮ್ಯಾಗ್ನಿಷಿಯಂ ಇದೆ ಕಾಫರ್ ಇದೆ ಹಾಗೂ ಇನ್ನೂ ಹಲವಾರು ರೀತಿಯ ಪೌಷ್ಟಿಕಾಂಶಗಳಿವೆ. ಅದೇ ರೀತಿ ಬೆಲ್ಲದಲ್ಲಿಯೂ ಕೂಡ ಉತ್ತಮವಾದ ಕ್ಯಾಲರೀಸ್ ಇದೆ ಗ್ಲೂಕೋಸ್ ಇದೆ ಪ್ರೋಟೀನ್ ಇದೆ ಕೊಬ್ಬು ಇದೆ ಕಬ್ಬಿಣಾಂಶ ಇದೆ ಮ್ಯಾಗ್ನಿಷಿಯಂ ಅಂಶವಿದೆ ಪೊಟ್ಯಾಶಿಯಂ ಇದೆ ಹಾಗೂ ವಿಟಮಿನ್ ಬಿ ಇದೆ ಹೀಗಾಗಿ ನೀವು ಒಣ ಕೊಬ್ಬರಿ ಮತ್ತು ಬೆಲ್ಲವನ್ನು ಒಟ್ಟಾಗಿ ಸೇವಿಸಿದರೆ ನಿಮ್ಮ ಆರೋಗ್ಯದಲ್ಲಿ ತುಂಬಾ ವೃದ್ಧಿಯಾಗುತ್ತದೆ.

ಅದರಲ್ಲಿಯೂ ನೀವೇನಾದರೂ ನಿಶಕ್ತಿಯಿಂದ ಬಳಲುತ್ತಿದ್ದರೆ ಒಣಕೊಬ್ಬರಿಯ ಜೊತೆಗೆ ಬೆಲ್ಲವನ್ನು ಸೇರಿಸಿ ಸೇವಿಸುತ್ತಾ ಬಂದರೆ ಕ್ರಮೇಣವಾಗಿ ನಿಶಕ್ತಿ ಕಡಿಮೆಯಾಗುತ್ತಾ ಬರುತ್ತದೆ. ನಿಮಗೇನಾದರು ರಕ್ತಹೀನತೆ ಅಥವಾ ಹಿಮೋಗ್ಲೋಬಿನ್ ಅಂಶ ಕಡಿಮೆ ಇದ್ದರೆ ಒಣಕೊಬ್ಬರಿಯೊಂದಿಗೆ ಬೆಲ್ಲವನ್ನು ನಿಯಮಿತವಾಗಿ ಸೇವನೆ ಮಾಡುತ್ತಾ ಬನ್ನಿ ಇದರಿಂದ ರಕ್ತ ಹೀನತೆ ಸಮಸ್ಯೆ ಕಡಿಮೆಯಾಗುವುದರ ಜೊತೆಗೆ ಹಿಮೋಗ್ಲೋಬಿನ್ ಅಂಶವು ಕೂಡ ವೃದ್ಧಿಯಾಗುತ್ತದೆ.

ಒಣ ಕೊಬ್ಬರಿ ಹಾಗೂ ಬೆಲ್ಲವನ್ನು ಸೇರಿಸಿ ಸೇವನೆ ಮಾಡುವುದರಿಂದ ಮೂಳೆಗಳ ಆರೋಗ್ಯವೂ ಕೂಡ ವೃದ್ಧಿಯಾಗುತ್ತದೆ. ಬೆಲ್ಲದಲ್ಲಿ ಉತ್ತಮವಾದ ಕ್ಯಾಲ್ಸಿಯಂ ಅಂಶ ಇರುತ್ತದೆ ಹಾಗೂ ಒಣಕೊಬ್ಬರಿಯಲ್ಲಿಯೂ ಉತ್ತಮವಾದ ಪೌಷ್ಟಿಕಾಂಶಗಳು ಇರುವುದರಿಂದ ಇವೆರಡನ್ನು ಸೇರಿಸಿ ಸೇವನೆ ಮಾಡುವುದರಿಂದ ನಿಮ್ಮ ಮೂಳೆಗಳ ಆರೋಗ್ಯವೂ ಉತ್ತಮವಾಗುತ್ತದೆ ಜೊತೆಗೆ ಮೂಳೆಗಳು ಬಲಶಾಲಿಯಾಗುತ್ತದೆ.

ಒಣಕೊಬ್ಬರಿಯನ್ನು ಸೇವನೆ ಮಾಡುವುದರಿಂದ ಮೆದುಳಿನ ಕಾರ್ಯಚಟುವಟಿಕೆ ಉತ್ತಮವಾಗುತ್ತದೆ ಇದರಿಂದ ಮೆದುಳು ಚುರುಕಾಗುತ್ತದೆ ಮತ್ತು ಜ್ಞಾಪಕ ಶಕ್ತಿ ಹೆಚ್ಚುತ್ತದೆ. ಇನ್ನು ಮಲಬದ್ಧತೆ ಸಮಸ್ಯೆ ಇರುವವರು ಕೂಡ ಇದನ್ನು ಸೇವನೆ ಮಾಡಬಹುದು. ಇದರಲ್ಲಿ ಇರುವಂತಹ ಉತ್ತಮವಾದ ನಾರಿನ ಅಂಶ ಮಲಬದ್ಧತೆ ಸಮಸ್ಯೆಯನ್ನು ಕಡಿಮೆ ಮಾಡುವುದಕ್ಕೆ ಸಹಾಯ ಮಾಡುತ್ತದೆ. ಒಣಕೊಬ್ಬರಿಯನ್ನು ಪುರುಷರಿಗೆ ಅತ್ಯುತ್ತಮವಾದ ಆಹಾರ ಪದಾರ್ಥ ಎಂದು ಹೇಳಬಹುದು ನಿಯಮಿತವಾಗಿ ಒಣಕೊಬ್ಬರಿಯನ್ನು ತಿನ್ನುವುದರಿಂದ ಪುರುಷರಲ್ಲಿ ಕಂಡುಬರುವ ಬಂಜೆತನ ಸಮಸ್ಯೆ ಕಡಿಮೆ ಆಗುತ್ತದೆ.

ರಕ್ತಹೀನತೆ ಸಮಸ್ಯೆಯನ್ನು ಎದುರಿಸುತ್ತಿರುವವರಿಗೂ ಕೂಡ ಇದು ಅತ್ಯುತ್ತಮವಾಗಿದೆ. ರಕ್ತ ಹೀನತೆ ಸಮಸ್ಯೆ ಕಬ್ಬಿಣಾಂಶದ ಕೊರತೆಯಿಂದ ಬರುತ್ತದೆ ಕೊಬ್ಬರಿಯನ್ನು ನೀವು ನಿಯಮಿತವಾಗಿ ಸೇವನೆ ಮಾಡುತ್ತಾ ಬಂದರೆ ರಕ್ತಹೀನತೆ ಸಮಸ್ಯೆ ಕಡಿಮೆಯಾಗುತ್ತದೆ. ಜೊತೆಗೆ ದೇಹದಲ್ಲಿ ರಕ್ತ ಉತ್ಪತ್ತಿ ಆಗುವುದಕ್ಕೆ ಸಹಾಯವಾಗುತ್ತದೆ. ಕೊಬ್ಬರಿಯಲ್ಲಿ ಅನೇಕ ಪೌಷ್ಟಿಕಾಂಶಗಳು ಮತ್ತು ಇನ್ನಿತರ ಅಂಶಗಳು ಅಡಗಿರುವುದರಿಂದ ಇವು ದೇಹದಲ್ಲಿ ಕ್ಯಾನ್ಸರ್ ಜೀವಕೋಶಗಳು ಬೆಳೆಯದಂತೆ ನೋಡಿಕೊಳ್ಳುತ್ತವೆ. ಇತ್ತೀಚಿನ ದಿನಗಳಲ್ಲಿ ಅನೇಕ ಯುವಜನರು ಯಾವುದೇ ಕೆಲಸವನ್ನು ಮಾಡುವುದಕ್ಕೆ ಆಸಕ್ತಿಯನ್ನು ತೋರಿಸುವುದಿಲ್ಲ ಮತ್ತು ನಿಶಕ್ತಿ ಇರುವವರಂತೆ ತೋರುತ್ತಾರೆ.

ಅಂತವರು ನಿಯಮಿತವಾಗಿ ಒಣಕೊಬ್ಬರಿ ಜೊತೆ ಬೆಲ್ಲವನ್ನು ಸೇವನೆ ಮಾಡುತ್ತಾ ಬಂದರೆ ನಿಶ್ಯಕ್ತಿಯ ಆಯಾಸ ಒತ್ತಡ ಕಡಿಮೆಯಾಗುತ್ತಾ ಬರುತ್ತದೆ ಜೊತೆಗೆ ನೀವು ದಿನವಿಡಿ ಚಟುವಟಿಕೆಯಿಂದ ಕೂಡಿರುವುದಕ್ಕೆ ಸಹಾಯವಾಗುತ್ತದೆ. ಈ ರೀತಿಯಾಗಿ ನಿಯಮಿತವಾಗಿ ಬೆಲ್ಲದ ಜೊತೆಗೆ ಕೊಬ್ಬರಿಯನ್ನು ಸೇರಿಸುತ್ತಾ ಬಂದರೆ ನಮ್ಮ ಆರೋಗ್ಯಕ್ಕೆ ಪ್ರಯೋಜನವಾಗುವಂತಹ ಅನೇಕ ಅಂಶಗಳು ದೊರೆಯುತ್ತವೆ. ನೀವು ಕೂಡ ಕೊಬ್ಬರಿ ಮತ್ತು ಬೆಲ್ಲವನ್ನು ಸೇರಿಸಿ ಆರೋಗ್ಯದಲ್ಲಿ ಉತ್ತಮ ಬದಲಾವಣೆಯನ್ನು ಕಂಡುಕೊಳ್ಳಬಹುದಾಗಿದೆ. ಈ ಮಾಹಿತಿಯನ್ನು ನೀವು ತೆಗೆದುಕೊಳ್ಳುವುದರ ಜೊತೆಗೆ ನಿಮ್ಮ ಪರಿಚಿತರು ಹಾಗೂ ಸ್ನೇಹಿತರಿಗೂ ತಿಳಿಸಿರಿ.

WhatsApp Group Join Now
Telegram Group Join Now

By

Leave a Reply

Your email address will not be published. Required fields are marked *

error: Content is protected !!
Footer code: