ನಮ್ಮಲ್ಲಿ ಎಲ್ಲರಿಗೂ ಕೂಡ ಒಂದು ಸಕ್ಸೆಸ್ಫುಲ್ ಬಿಸಿನೆಸ್ ಶುರುಮಾಡಿ ಅದನ್ನು ಚೆನ್ನಾಗಿ ಬೇಳಸಬೇಕು ಅದರಿಂದದುಡ್ಡು ಮತ್ತು ಪ್ರತಿಷ್ಠೆಯನ್ನು ಗಳಿಸಬೇಕು ಎಂದು ಎಲ್ಲರಿಗೂ ಆಸೆ ಇರುತ್ತದೆ. ಆದರೆ ನಮಗೆ ಸರಿಯಾದ ಮಾಹಿತಿ ಮತ್ತು ಹಣಕಾಸಿನ ಸೌಲಭ್ಯ ಇಲ್ಲದ ಕಾರಣ ಅದನ್ನು ಮಾಡುವುದಕ್ಕೆ ಆಗುವುದಿಲ್ಲ. ನಾವಿಂದು ನಿಮಗೆ ಒಂದು ಒಳ್ಳೆಯ ಉದ್ಯಮವನ್ನು ಮಾಡುವುದರ ಬಗ್ಗೆ ತಿಳಿಸಿಕೊಡುತ್ತೇವೆ ನಾವಿಂದು ನಿಮಗೆ ತಿಳಿಸುವ ಉದ್ಯೋಗ ವಾಟರ್ ಬೋಟೆಲ್ ಉದ್ಯೋಗ. ಈ ಉದ್ಯೋಗವನ್ನು ಆರಂಭಿಸುವುದಕ್ಕೆ ರಿಜಿಸ್ಟ್ರೇಷನ್ ಯಾವ ರೀತಿ ಮಾಡಿಕೊಳ್ಳಬೇಕು ಇದಕ್ಕೆ ಕಚ್ಚಾವಸ್ತು ಎಲ್ಲಿ ಸಿಗುತ್ತದೆ ಇದನ್ನು ಪ್ರಾರಂಭಿಸುವುದಕ್ಕೆ ಯಾವ ಮಶೀನುಗಳು ಬೇಕಾಗುತ್ತವೆ ಇದರ ಮಾರ್ಕೆಟಿಂಗ್ ಹೇಗೆ ಮಾಡಬೇಕು ಉದ್ಯೋಗವನ್ನು ಮಾಡುವುದಕ್ಕೆ ಎಷ್ಟು ಬಂಡವಾಳ ಬೇಕಾಗುತ್ತದೆ ಇದರಿಂದ ಎಸ್ಟು ಆದಾಯ ಬರುತ್ತದೆ ಎಂಬುದನ್ನು ನಾವಿಂದು ನಿಮಗೆ ತಿಳಿಸಿಕೊಡುತ್ತೇವೆ.
ನಾವು ಎಲ್ಲಿಗಾದರೂ ಹೊರಗಡೆ ಹೋಗುತ್ತಿದ್ದೇವೆ ಎಂದರೆ ಮರೆಯದೆ ನೀರಿನ ಬಾಟಲ್ ತೆಗೆದುಕೊಂಡು ಹೋಗುತ್ತೇವೆ ಅಥವಾ ಹೊರಗಡೆ ಆದರೂ ಒಂದು ನೀರಿನ ಬಾಟಲ್ ಅನ್ನು ಖರಿಧಿ ಮಾಡುತ್ತೇವೆ ಸಾಮಾನ್ಯವಾಗಿ ಬಿಸ್ಲೇರಿ ಕಿಂಡ್ಲಿ ಅಕ್ವಾ ಈ ರೀತಿಯಾಗಿ ಮಾರುಕಟ್ಟೆಯಲ್ಲಿ ತುಂಬಾ ವಿಧವಾದ ನೀರಿನ ಬಾಟಲಿಗಲು ಸಿಗುತ್ತವೆ ಅವುಗಳನ್ನು ನಾವು ಕೊಂಡುಕೊಳ್ಳುತ್ತೇವೆ. ಒಂದು ಲೀಟರ್ ಎರಡು ಲೀಟರ್ ಐದು ಲಿಟರ್ ಹೀಗೆ ನಾವು ಕೊಂಡುಕೊಳ್ಳುತ್ತೇವೆ. ಇವು ತುಂಬಾ ಪ್ಯೂರಿಫೈಡ್ ಮಾಡಿದಂತವುಗಳು ಇವುಗಳನ್ನು ಮನೆಯಲ್ಲಿ ಕುಳಿತು ಮಾರಾಟ ಮಾಡಬಹುದು ಇದನ್ನು ಮಾಡುವುದಕ್ಕೆ ಬೇಕಾದಂತಹ ಪರ್ಮಿಷನ್ ಗಳು ತುಂಬಾ ಇರುತ್ತವೆ ಇದನ್ನು ಕಡಿಮೆ ಬಂಡವಾಳದಲ್ಲಿ ಮಾಡಬಹುದು ಹಾಗೆಯೇ ದೊಡ್ಡ ಬಂಡವಾಳದಲ್ಲಿ ಮಾಡಬಹುದು ಎರಡು ರೀತಿಯಲ್ಲಿ ಹೇಗೆ ಉದ್ಯಮವನ್ನು ಮಾಡಬೇಕು ಎಂಬುದನ್ನು ನಿಮಗೆ ತಿಳಿಸಿಕೊಡುತ್ತೇವೆ.
ಮೊದಲಿಗೆ ನೋವು ರಿಜಿಸ್ಟ್ರೇಷನ್ ಪ್ರೋಸೆಸ್ ಬಗ್ಗೆ ತಿಳಿದುಕೊಳ್ಳೋಣ ನಮಗೆ ಸ್ಟಾಕನ್ನು ಇಟ್ಟುಕೊಳ್ಳುವುದಕ್ಕೆ ಐದುನೂರು ಅಡಿ ಜಾಗ ಬೇಕಾಗುತ್ತದೆ ಇದು ಕಡಿಮೆ ಬಜೆಟ್ ಇರುವವರಿಗೆ ನೀವು ದೊಡ್ಡ ಪ್ರಮಾಣದಲ್ಲಿ ಮಾಡುತ್ತಿದ್ದೀರಿ ಎಂದರೆ ಇದಕ್ಕೆ ಎರಡುಸಾವಿರ ಸ್ಕ್ವೇರ್ ಫೀಟ್ ಜಾಗ ಬೇಕಾಗುತ್ತದೆ. ನಾವು ಈ ಬಾಟಲ್ ಉದ್ಯಮ ಪ್ರಾರಂಭಿಸುವುದಕ್ಕೆ ಪರಿಸರ ಶಾಖೆ ಅವರಿಂದ ಅನುಮತಿಯನ್ನು ಪಡೆದುಕೊಳ್ಳಬೇಕಾಗುತ್ತದೆ. ನೀವು ಎಲ್ಲಿ ಉದ್ಯಮವನ್ನು ಆರಂಭಿಸಬೇಕು ಎಂದುಕೊಳ್ಳುತ್ತೀರಿ ಆ ಜಿಲ್ಲೆಯ ಪರಿಸರ ಶಾಖೆಯ ಅನುಮತಿಯನ್ನು ಪಡೆದುಕೊಳ್ಳಬೇಕು ಅನುಮತಿ ನಿಮಗೆ ಹದಿನೈದರಿಂದ ಇಪ್ಪತ್ತು ದಿನಗಳಲ್ಲಿ ಸಿಗುತ್ತದೆ ಹಾಗೆ ನೀವು ಲೇಬರ್ ಲೈಸೆನ್ಸನ್ನು ತೆಗೆದುಕೊಳ್ಳಬೇಕಾಗುತ್ತದೆ ಅದು ನಿಮಗೆ ಲೋಕಲ್ ಆಗಿ ಸಿಗುತ್ತದೆ
ಇದು ವಾಟರ್ ಬಾಟಲ್ ಬಿಸಿನೆಸ್ ಆಗಿರುವುದರಿಂದ ನೀವು ಮುನ್ಸಿಪಾಲಿಟಿ ಅವರಿಗೆ ಹೊಸ ಪೈಪ್ ಹಾಕುವುದಕ್ಕೆ ಅರ್ಜಿಯನ್ನು ಹಾಕಬೇಕಾಗುತ್ತದೆ. ಆಗ ನಿಮಗೆ ವಾಟರ್ ಸಪ್ಲೈ ಕಡೆಯವರಿಂದ ಹೊಸ ಪೈಪ್ ಲೈನ್ ಸಿಗುತ್ತದೆ. ಈ ಉದ್ಯಮ ಮಷೀನ್ ಮೇಲೆ ರನ್ ಆಗುವುದರಿಂದ ನೀವು ಕಮರ್ಷಿಯಲ್ ಜೋನ್ ನಲ್ಲಿ ಪವರ್ ಕನೆಕ್ಷನ್ ತೆಗೆದುಕೊಳ್ಳಬೇಕಾಗುತ್ತದೆ. ಮತ್ತು ನಾವು ಈ ತರಹದ ಯಾವುದೇ ಉದ್ಯಮವನ್ನು ಪ್ರಾರಂಭಿಸಿದರು ಅದರ ಮೇಲೆ ಐ ಎಸ್ ಐ ಗುರುತು ಇರಲೇಬೇಕು. ಇದರ ಜೊತೆಗೆ ಎಫ್ ಎಸ್ ಎಸ್ ಎ ಐ ಅತೋರಿಟಿ ಅವರಿಂದಲೂ ಕೂಡಾ ಲೈಸೆನ್ಸ್ ಬೇಕಾಗುತ್ತದೆ ಅದನ್ನು ಆನ್ಲೈನಲ್ಲಿ ಅಪ್ಲೈ ಮಾಡಿಕೊಳ್ಳಬಹುದು.
ಇನ್ನು ಈ ಉದ್ಯಮಕ್ಕೆ ಬೇಕಾಗುವ ರಾ ಮಟೀರಿಯಲ್ ಬಗ್ಗೆ ತಿಳಿದುಕೊಳ್ಳೋಣ ನೀವು ಚಿಕ್ಕದಾಗಿ ಮೂರರಿಂದ ಐದು ಲಕ್ಷದ ವರೆಗೆ ಉದ್ಯಮವನ್ನು ಪ್ರಾರಂಭಿಸುತ್ತಿದ್ದರೆ ಮೊದಲು ನೀವು ಲಿಕ್ವಿಡ್ ಫಿಲ್ಲಿಂಗ್ ಮಷೀನ್ ಅನ್ನು ತೆಗೆದುಕೊಳ್ಳಬೇಕಾಗುತ್ತದೆ ಇದು ನಿಮಗೆ ಮಾರ್ಕೆಟ್ನಲ್ಲಿ ಇಪ್ಪತ್ತೈದು ಸಾವಿರದಿಂದ ಸಿಗುತ್ತದೆ ಇದು ಸ್ವಲ್ಪ ಸ್ಲೋ ಪ್ರೋಸೆಸ್ ಇರುವುದರಿಂದ ನೀವು ಎಂಬತ್ತು ಸಾವಿರ ರೂಪಾಯಿಯ ಮಷೀನ್ ತೆಗೆದುಕೊಳ್ಳಬೇಕಾಗುತ್ತದೆ ಇದನ್ನು ಹೆಚ್ಚಾಗಿ ಹೈದರಾಬಾದ್ ವೆಸ್ಟ್ ಬೆಂಗಾಲ್ ಬಿಹಾರ್ ಪ್ರಾಂತ್ಯಗಳಲ್ಲಿ ಹೆಚ್ಚಾಗಿ ತಯಾರು ಮಾಡುತ್ತಾರೆ ನೀವು ಆನ್ಲೈನ್ನಲ್ಲಿ ತರಿಸುವುದಕ್ಕಿಂತ ನೇರವಾಗಿ ಅಲ್ಲಿಗೆ ಹೋಗಿ ಮಷೀನ್ ಗಳನ್ನು ತೆಗೆದುಕೊಳ್ಳುವುದು ಉತ್ತಮ ಇದರ ಜೊತೆಗೆ ನೀವು ಕ್ಯಾಪ್ ಸಿಲ್ಲಿಂಗ್ ಮಷಿನನ್ನು ಕೂಡ ತೆಗೆದುಕೊಳ್ಳಬೇಕಾಗುತ್ತದೆ ಇದು ನಿಮಗೆ ಇಪ್ಪತ್ತೈದು ಸಾವಿರದಿಂದ ಇಪ್ಪತ್ತೈದು ಸಾವಿರದವರೆಗೆ ಸಿಗುತ್ತದೆ ನೀವು ಚಿಕ್ಕದಾಗಿ ಉದ್ಯಮವನ್ನು ಪ್ರಾರಂಭಿಸುವುದಿದ್ದರೆ ಲಿಕ್ವಿಡ್ ಫಿಲ್ಲಿಂಗ್ ಮತ್ತುಕ್ಯಾಪ್ ಸಿಲ್ಲಿಂಗ್ ಮೆಷಿನನ್ನು ತೆಗೆದುಕೊಳ್ಳಬೇಕಾಗುತ್ತದೆ.
ನೀವು ಫಿಲ್ಟರ್ ಆಗಿರುವಂತಹ ನೀರನ್ನು ಬಮ್ ಟ್ಯಾಂಕರ್ ನಲ್ಲಿ ಹಾಕಿ ಅಲ್ಲಿಂದ ನೀರನ್ನು ಬಾಟಲಿಗಳಿಗೆ ತುಂಬಿಸಬೇಕಾಗಿತ್ತದೆ. ಒಂದು ಲೀಟರ್ ಅರ್ಧ ಲೀಟರ್ ಹೀಗೆ ಬಾಟಲಿಗಳನ್ನು ತುಂಬಬೇಕಾಗುತ್ತದೆ ಈ ರೀತಿಯಾಗಿ ನೀವು ಕಡಿಮೆ ಬಂಡವಾಳದಲ್ಲಿ ಈ ಒಂದು ಉದ್ಯಮವನ್ನು ಪ್ರಾರಂಭಿಸಿದರೆ ಇದನ್ನ ಲೋಕಲ್ ನಲ್ಲಿ ಮಾತ್ರ ಮಾರಾಟ ಮಾಡಬೇಕಾಗುತ್ತದೆ. ಒಂದು ವೇಳೆ ನೀವು ಇದನ್ನು ಇಂಡಸ್ಟ್ರಿ ಆಗಿ ಮಾಡಬೇಕು ಅಂತಿದ್ದರೆ ಸುಮಾರು ಎರಡೂವರೆ ಲಕ್ಷದಿಂದ ಸಿಗುವಂತಹ ಆಟೋಮೆಟಿಕ್ ಸ್ಟೀನ್ ಲೆಸ್ ಸ್ಟೀಲ್ ಮಿನರಲ್ ವಾಟರ್ ಪ್ಲಾಂಟ್ ತೆಗೆದುಕೊಳ್ಳಬೇಕಾಗುತ್ತದೆ. ಹಾಗೆ ಬಾಟಲಿಂಗ್ ಮಷೀನ್ ಮತ್ತು ಜಾರ್ ಪಿಲ್ಲಿಂಗ್ ಮಷೀನ್ ಅನ್ನು ತೆಗೆದುಕೊಳ್ಳಬೇಕಾಗುತ್ತದೆ.
ಈ ಒಂದು ಉದ್ಯಮವನ್ನು ನೀವು ಬ್ರಾಂಡಿಂಗ್ ಮೂಲಕ ನಡೆಸಬೇಕು ಎಂತಿದ್ದರೆ ಬ್ರಾಂಡ್ ಅನ್ನು ಸೆಲೆಕ್ಟ್ ಮಾಡಬೇಕಾಗುತ್ತದೆ ಅಂದರೆ ಒಂದು ಹೆಸರನ್ನು ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ ಅದಕ್ಕೆ ಸಂಬಂಧಿಸಿದ ಲೇಬಲ್ಗಳನ್ನು ಡಿಸೈನ್ ಮಾಡಿಕೊಳ್ಳಬೇಕಾಗುತ್ತದೆ. ನೀವು ಖಾಲಿ ಬಾಟಲಿಗಳನ್ನು ಪ್ಲಾಸ್ಟಿಕ್ ಇಂಡಸ್ಟ್ರಿಯಿಂದ ಖರೀದಿಸಬೇಕು ಈ ಕಾಲಿ ಬಾಟಲ್ ಗಳು ನಿಮಗೆ ಮಾರುಕಟ್ಟೆಯಲ್ಲಿ ಒಂದುವರೆ ರೂಪಾಯಿಂದ ಮೂರು ರೂಪಾಯಿ ನಾಲ್ಕು ರೂಪಾಯಿವರೆಗೂ ಸಿಗುತ್ತವೆ ಆದರೆ ಇದರ ಬೆಲೆ ನಿರ್ಧಾರವಾಗುವುದು ಅದರ ಕ್ವಾಲಿಟಿ ಮೇಲೆ ನೀವು ಪ್ಲಾಸ್ಟಿಕ್ ಇಂಡಸ್ಟ್ರಿ ಅವರ ಹತ್ತಿರ ಮಾತನಾಡಿ ಒಳ್ಳೆ ಕ್ವಾಲಿಟಿಗೆ ಒಳ್ಳೆಯ ಬೆಲೆಗೆ ಬಾಟಲಿಗಳನ್ನು ಖರೀದಿ ಮಾಡಬಹುದು.
ನೀವು ವಾಟರ್ ಬಾಟಲ್ ಉದ್ಯಮವನ್ನು ಮಾಡುವುದಿದ್ದರೆ ಲ್ಯಾಬ್ ಟೆಕ್ನಿಷಿಯನ್ ಇರಬೇಕು ಹಾಗೆ ಒಬ್ಬ ಎಕ್ಸ್ಪರ್ಟ್ ಇರಬೇಕಾಗುತ್ತದೆ ಸ್ವಲ್ಪ ದಿನಗಳ ಟ್ರೈನಿಂಗ್ ತೆಗೆದುಕೊಂಡ ನಂತರ ನಿವು ವಾಟರ್ ಬಾಟಲ್ ಬಿಜಿನೆಸ್ ಅನ್ನು ಉತ್ತಮವಾಗಿ ನಡೆಸಬಹುದು. ಪ್ರಾರಂಭದಲ್ಲಿ ಇದಕ್ಕೆ ಸ್ವಲ್ಪ ಖರ್ಚಾದರೂ ಎರಡು ಮೂರು ತಿಂಗಳಲ್ಲಿ ನಾವು ಇದರ ಬಗ್ಗೆ ಸರಿಯಾಗಿ ತಿಳಿದುಕೊಳ್ಳಬಹುದು. ನೀವು ಕಡಿಮೆ ಬಂಡವಾಳದಲ್ಲಿ ಉದ್ಯಮವನ್ನು ಪ್ರಾರಂಭಿಸುವುದಿದ್ದರೆ ಎರಡು ಲಕ್ಷದಿಂದ ಮೂರು ಲಕ್ಷ ರೂಪಾಯಿ ಖರ್ಚು ಬರುತ್ತದೆ ಅದೇ ನೀವು ದೊಡ್ಡಮಟ್ಟದಲ್ಲಿ ರಾಜ್ಯಮಟ್ಟದಲ್ಲಿ ಉದ್ಯಮವನ್ನು ಪ್ರಾರಂಭಿಸುವುದಿದ್ದರೆ ಮೂವತ್ತರಿಂದ ಮೂವತ್ತೈದು ಲಕ್ಷ ರೂಪಾಯಿ ಬೇಕಾಗುತ್ತದೆ.
ಈ ಉದ್ಯಮದಿಂದ ಯಾವ ರೀತಿಯಾಗಿ ಲಾಭವಾಗುತ್ತದೆ ಎಂಬುದನ್ನು ನೋಡುವುದಾದರೆ ಒಂದು ಲೀಟರ್ ಬಾಟಲ್ ಅನ್ನು ಇಪ್ಪತ್ತು ರೂಪಾಯಿಗೆ ಮಾರುತ್ತಾರೆ ಆದರೆ ಒಂದು ಲೀಟರ್ ವಾಟರ್ ಬಾಟಲ್ ಅನ್ನು ತಯಾರು ಮಾಡಲು ನಿಮಗೆ ರಾ ಮಟಿರಿಯಲ್ ಮಾರ್ಕೆಟಿಂಗ್ ಟ್ರಾನ್ಸ್ಪೋರ್ಟೇಷನ್ ಎಲ್ಲಾ ಸೇರಿ ತಗುಲುವ ವೆಚ್ಚ ಆರು ರೂಪಾಯಿಂದ ಏಳು ರೂಪಾಯಿ ಒಳಗೆ ಖರ್ಚು ಬರುತ್ತದೆ ಇದನ್ನು ಹೊಲ್ ಸೆಲ್ ಮಾರುವುದಾದರೆ ಹತ್ತು ರೂಪಾಯಿಂದ ಹನ್ನೆರಡು ರೂಪಾಯಿಗಳ ತನಕ ಮಾರಬಹುದು ಇದನ್ನ ಅವರು ರಿಟೇಲ್ ಶಾಪ್ ಗಳಿಗೆ ಹದಿನೈದು ರೂಪಾಯಿಗೆ ಮಾರಾಟ ಮಾಡುತ್ತಾರೆ
ಅಂಗಡಿಯವರು ಕಸ್ಟಮರ್ ಗಳಿಗೆ ಇಪ್ಪತ್ತು ರೂಪಾಯಿಗೆ ಮಾರಾಟ ಮಾರುತ್ತಾರೆ. ಇಲ್ಲಿ ನಿಮಗೆ ಉಳಿಯುವಂತಹ ಲಾಭ ಮಿನಿಮಮ್ ಆಗಿ ನಿಮಗೆ ಒಂದು ಬಾಟಲಿ ಮೇಲೆ ನಾಲ್ಕರಿಂದ ಐದು ರೂಪಾಯಿ ಲಾಭ ಸಿಗುತ್ತದೆ. ನೀವು ಎಷ್ಟು ಬಾಟಲ್ ಮಾರುತ್ತೀರಿ ಎಂಬುದರ ಮೇಲೆ ಲಾಭ ನಿರ್ಧಾರವಾಗುತ್ತದೆ ಹಾಗಾಗಿ ತಿಂಗಳಿಗೆ ಇದರಿಂದ ಎಷ್ಟು ಲಾಭ ಬರುತ್ತದೆ ಎಂದು ಖಚಿತವಾಗಿ ಹೇಳುವುದಕ್ಕೆ ಆಗುವುದಿಲ್ಲ ನೀವು ಎಷ್ಟು ಮಾರ್ಕೆಟಿಂಗ್ ಮಾಡುತ್ತೀರಿ ಮಾರುತ್ತೀರಿ ಎಂಬುದರ ಮೇಲೆ ಲಾಭ ನಿರ್ಧರಿತವಾಗಿರುತ್ತದೆ. ಪ್ರತಿ ಬಾಟಲ್ ಗೆ ಆರು ರೂಪಾಯಿ ಖರ್ಚಾದರೆ ನಾಲ್ಕರಿಂದ ಐದು ರೂಪಾಯಿ ಲಾಭ ನಿಮಗೆ ಸಿಗುತ್ತದೆ.
ಇನ್ನು ಇದರ ಮಾರ್ಕೆಟಿಂಗ್ ಬಗ್ಗೆ ನೋಡುವುದಾದರೆ ಕೂಲ್ ಡ್ರಿಂಕ್ಸ್ ಅಂಗಡಿ ಕಿರಾಣಿ ಅಂಗಡಿ ಬಸ್ಟ್ಯಾಂಡ್ ಗಳ ಬಳಿ ಇರುವ ಅಂಗಡಿ ರೈಲ್ವೆ ಸ್ಟೇಷನ್ ಗಳ ಬಳಿ ಇರುವ ಅಂಗಡಿ ಇವರುಗಳಿಗೆ ನೀವು ಮಾರಾಟ ಮಾಡಬಹುದು. ಹಾಗೆ ನಿಮ್ಮ ಉದ್ಯಮದ ಬಗ್ಗೆ ಬ್ಯಾನರ್ ಗಳನ್ನು ಕಟ್ಟಬೇಕು ಜಾಹೀರಾತುಗಳನ್ನು ಹಾಕಬೇಕು. ಡಿಜಿಟಲ್ ಮಾರ್ಕೆಟಿಂಗ್ ಮಾಡಬೇಕಾಗುತ್ತದೆ ಲೋಕಲ್ ಕೇಬಲ್ ಗಳಿಗೆ ನೀವು ಜಾಹೀರಾತನ್ನು ಕೊಡಬಹುದು ಈ ರೀತಿಯಾಗಿ ನೀವು ಮಾರ್ಕೆಟಿಂಗ್ ಗಳನ್ನು ಮಾಡಿಕೊಳ್ಳಬಹುದಾಗಿದೆ. ನೀವು ಒಂದು ಬಾಟಲ್ ಮಾರಿದರೆ ಮಿನಿಮಮ್ ಆಗಿ ನಾಲ್ಕು ರೂಪಾಯಿ ಲಾಭ ಸಿಗುತ್ತದೆ ಅದೇ ನೀವು ನೂರು ಬಾಟಲಿಗಳನ್ನು ಮಾರಿದರೆ ನಾಲ್ಕುನೂರು ರೂಪಾಯಿ ಲಾಭಗಳಿಸಬಹುದು. ನಿಮ್ಮ ಉದ್ಯಮ ದೊಡ್ಡ ಮಟ್ಟದಲ್ಲಿತ್ತು ಎಂದರೆ ನೀವು ಡೀಲರ್ಶಿಪ್ ಗಳನ್ನು ಕೊಡಬಹುದು ಅದರಲ್ಲೂ ಕೂಡ ಲಾಭವನ್ನು ಗಳಿಸಬಹುದು.
ಈಗ ನಾವು ಐ ಎಸ್ ಐ ಸರ್ಟಿಫಿಕೇಟ್ ಬಗ್ಗೆ ತಿಳಿದುಕೊಳ್ಳೋಣ ಐ ಎಸ್ ಐ ಸರ್ಟಿಫಿಕೇಟ್ ಸುಮ್ಮನೆ ಸಿಗುವುದಿಲ್ಲ ಇದಕ್ಕೆ ಒಂದಿಷ್ಟು ಸ್ಟ್ಯಾಂಡರ್ಡ್ ಗಳನ್ನ ಮೆಂಟೇನ್ ಮಾಡಬೇಕಾಗುತ್ತದೆ. ಈ ಐ ಎಸ್ ಐ ಸರ್ಟಿಫಿಕೇಟನ್ನು ಪಡೆಯಲು ಹೇಗೆ ಅಪ್ಲೈ ಮಾಡಬೇಕು ಎಂಬುದನ್ನು ತಿಳಿದುಕೊಳ್ಳೋಣ. ಇದಕ್ಕೆ ನೀವು ಆನ್ಲೈನಲ್ಲಿ ಅಪ್ಲೈ ಮಾಡಬೇಕಾಗುತ್ತದೆ. ಬ್ಯೂರೋ ಆಫ್ ಇಂಡಿಯಾ ಸ್ಟ್ಯಾಂಡರ್ಡ್ ಒಂದಿಷ್ಟು ನಾಮ್ಸ್ ಗಳನ್ನು ಮಾಡಿರುತ್ತದೆ ಅದನ್ನು ನಾವು ಫಾಲೋ ಮಾಡಬೇಕಾಗುತ್ತದೆ.
ನಾನು ಈ ನಾಮ್ಸ್ ಗಳನ್ನು ಫಾಲೋ ಮಾಡುತ್ತೇನೆ ಎಂದು ಹೇಳಿ ಸರ್ಟಿಫಿಕೇಟ್ ಗಳನ್ನು ಪಡೆದುಕೊಳ್ಳಬೇಕಾಗುತ್ತದೆ. ನೀವು ಐ ಎಸ್ ಐ ಸರ್ಟಿಫಿಕೇಟ್ ಗೆ ಅಪ್ಲೈ ಮಾಡುವಾಗ ಯಾವ ರಾಜ್ಯದಿಂದ ಅಪ್ಲೈ ಮಾಡುತ್ತಿದ್ದೀರಿ ನಿಮ್ಮ ಜಿಲ್ಲೆ ತಾಲೂಕು ಗ್ರಾಮವನ್ನು ಮೆನ್ಷನ್ ಮಾಡಬೇಕಾಗುತ್ತದೆ. ಇದಾದ ಒಂದು ತಿಂಗಳಿನ ನಂತರ ಪ್ರೊಜೆಕ್ಟ್ ಶುರುವಾಗುತ್ತದೆ ಅಧಿಕಾರಿಗಳು ನೇರವಾಗಿ ನಿಮ್ಮ ಉದ್ಯಮ ಮಾಡುವ ಸ್ಥಳಕ್ಕೆ ಭೇಟಿ ನೀಡುತ್ತಾರೆ ಅವರು ಬಂದು ಟೆಸ್ಟ್ ಮಾಡುತ್ತಾರೆ ಇದಾದ ಒಂದೂವರೆ ಎರಡು ತಿಂಗಳಿಗೆ ಸರ್ಟಿಫಿಕೇಟ್ ಸಿಗುತ್ತದೆ ಈ ಸರ್ಟಿಫಿಕೇಟ್ ಗೆ ಒಂದು ವರ್ಷದ ವ್ಯಾಲಿಡಿಟಿ ಇರುತ್ತದೆ ಆ ಒಂದು ವರ್ಷದಲ್ಲಿ ಅಧಿಕಾರಿಗಳು ಹಲವು ಸಾರಿ ಬಂದು ಟೆಸ್ಟ್ ಮಾಡಿಕೊಂಡು ಹೋಗುತ್ತಾರೆ. ಪ್ರತಿವರ್ಷ ನೀವು ಈ ಸರ್ಟಿಫಿಕೇಟನ್ನು ರಿನಿವಲ್ ಮಾಡಿಸಬೇಕಾಗುತ್ತದೆ.
ನೀವು ಈ ಉದ್ಯಮವನ್ನು ಕಡಿಮೆ ಬಂಡವಾಳದಲ್ಲಿ ಪ್ರಾರಂಭಿಸಿ ಮಾರಾಟ ಹೆಚ್ಚಾಗುತ್ತಾ ಆಗುತ್ತಾ ಅದನ್ನೇ ದೊಡ್ಡ ಮಟ್ಟದಲ್ಲಿ ಕೂಡ ಮಾಡಬಹುದು. ಈ ಉದ್ಯಮವನ್ನು ಪ್ರಾರಂಭಿಸುವುದಕ್ಕೆ ಬಂಡವಾಳ ತುಂಬಾ ಹೆಚ್ಚಿರುವುದರಿಂದ ಈ ಉದ್ಯಮವನ್ನು ತುಂಬಾ ಕಡಿಮೆ ಜನರು ಮಾಡುತ್ತಾರೆ ನೀವು ಈ ಉದ್ಯಮವನ್ನು ಪ್ರಾರಂಭಿಸಬೇಕು ಎಂದುಕೊಂಡಿದ್ದರೆ ಖಂಡಿತವಾಗಿ ಮಾಡಿ ಯಾಕೆಂದರೆ ಇದರಿಂದ ಒಳ್ಳೆಯ ಲಾಭ ಇದೆ. ಸಾಯಿಬಾಬಾ ಜ್ಯೋತಿಷ್ಯ ಶಾಸ್ತ್ರಂ ನಂಬಿ ಕರೆ ಮಾಡಿದವರಿಗೆ ವಿಶೇಷ ಸಾಂತ್ವಾನ, ಸಮಸ್ಯೆ ಸಮಸ್ಯೆ ಸಮಸ್ಯೆ ಚಿಂತಿಸಬೇಡಿ, ಅಸಾಧ್ಯವಾದದ್ದು ಇಲ್ಲಿ ಸಾಧ್ಯ ಸಮಸ್ಯೆಗಳಾದ ವಿದ್ಯೆ ಉದ್ಯೋಗ ವ್ಯಾಪಾರ ಆರೋಗ್ಯ ದಾಂಪತ್ಯ ಗಂಡ-ಹೆಂಡತಿಯರ ಕಲಹ ಪ್ರೀತಿಯಲ್ಲಿ ನಂಬಿ ಮೋಸ ಇಷ್ಟಪಟ್ಟವರು ನಿಮ್ಮಂತೆ ಆಗಲು ಕೋರ್ಟ್ ಕೇಸ್ ಜಮೀನು ಸ್ತ್ರೀ ಮತ್ತು ಪುರುಷ ವಶೀಕರಣ ಶತ್ರು ಕಾಟ ಮಾಟ-ಮಂತ್ರ ಇನ್ನು ಮುಂತಾದ ಸಮಸ್ಯೆಗಳಿಗೆ ಅತಿ ಶೀಘ್ರದಲ್ಲಿ ಪರಿಹಾರಅಸಾಧ್ಯ ಆಗುವ ಸಮಸ್ಯೆಗಳಿಗೆ ಸಾಧ್ಯವಾಗಿ ತೋರಿಸುವುದು ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯಶಾಸ್ತ್ರನಿಮ್ಮ ನಂಬಿಕೆಗೆ ಇಲ್ಲಿ ಮೋಸವಿಲ್ಲ 9611844430