ವಾಜಪೇಯಿ ವಸತಿ ಯೋಜನೆಯಡಿ ಮನೆಕಟ್ಟಿಸಿಕೊಳ್ಳೋರಿಗೆ ಉಚಿತ ಮನೆ

0

ನಾವಿಂದು ನಿಮಗೆ ವಾಜಪೇಯಿ ನಗರ ವಸತಿ ಯೋಜನೆಯ ಬಗ್ಗೆ ತಿಳಿಸಿಕೊಡುತ್ತೆವೆ. ವಾಜಪೇಯಿ ನಗರ ವಸತಿ ಯೋಜನೆಗೆ ಯಾರೆಲ್ಲ ಅರ್ಜಿಯನ್ನು ಸಲ್ಲಿಸುತ್ತಾರೋ ಅವರಿಗೆ ಒಳ್ಳೆಯ ಮನೆಯನ್ನು ಕಟ್ಟಿಕೊಳ್ಳಲು ಎರಡು ಲಕ್ಷದ ಎಪ್ಪತ್ತು ಸಾವಿರ ರೂಪಾಯಿ ಹಣವನ್ನು ಸಬ್ಸಿಡಿ ರೂಪದಲ್ಲಿ ಅಥವಾ ಸಹಾಯಧನ ರೂಪದಲ್ಲಿ ಉಚಿತವಾಗಿ ಸರ್ಕಾರವು ನೀಡುತ್ತದೆ. ನಿಮ್ಮ ಬಳಿ ಖಾಲಿ ಜಾಗ ಇದ್ದರೆ ಒಳ್ಳೆಯ ಮನೆ ಕಟ್ಟಿಸಿಕೊಳ್ಳಲು ಈ ಒಂದು ಯೋಜನೆ ಅಡಿಯಲ್ಲಿ ಎರಡು ಲಕ್ಷದ ಎಪ್ಪತ್ತು ಸಾವಿರ ರೂಪಾಯಿ ಹಣ ಈ ಯೋಜನೆಯ ಮುಖಾಂತರ ಉಚಿತವಾಗಿ ಸಿಗುತ್ತದೆ. ಹಾಗಾದರೆ ವಾಜಪೇಯಿ ನಗರ ವಸತಿ ಯೋಜನೆಗೆ ಯಾವ ರೀತಿ ಅರ್ಜಿಯನ್ನು ಸಲ್ಲಿಸಬಹುದು ಅರ್ಜಿ ಸಲ್ಲಿಸಲು ಯಾವೆಲ್ಲಾ ಅರ್ಹತೆಗಳಿರಬೇಕು ಮತ್ತು ಈ ಯೋಜನೆಯ ಷರತ್ತುಗಳ ಬಗ್ಗೆ ಹಾಗೂ ಅರ್ಜಿ ಸಲ್ಲಿಸುವುದಕ್ಕೆ ಯಾವೆಲ್ಲ ದಾಖಲೆಗಳು ಬೇಕಾಗುತ್ತವೆ ಮತ್ತು ಈ ಯೋಜನೆಯಡಿ ಯಾರಿಗೆ ಎಷ್ಟೆಷ್ಟು ಮೀಸಲಾತಿಯನ್ನು ಕೊಡಲಾಗಿದೆ ಎಂಬುದರ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ.

ವಾಜಪೇಯಿ ನಗರ ವಸತಿ ಯೋಜನೆಯು ರಾಜೀವ್ ಗಾಂಧಿ ವಸತಿ ನಿಗಮದ ಯೋಜನೆಗಳಲ್ಲಿ ಬರುವ ಒಂದು ಯೋಜನೆಯಾಗಿದೆ. ಈ ವಾಜಪೇಯಿ ನಗರ ವಸತಿ ಯೋಜನೆಯಡಿಯಲ್ಲಿ ಸಬ್ಸಿಡಿ ಹಣ ಅಂದರೆ ಎರಡು ಲಕ್ಷದ ಎಪ್ಪತ್ತು ಸಾವಿರ ರೂಪಾಯಿ ಹಣವನ್ನು ಯಾವ ರೀತಿ ಕೊಡಲಾಗುವುದು ಎಂಬುದನ್ನು ತಿಳಿದುಕೊಳ್ಳೋಣ. ಮೊದಲಿಗೆ ವಾಜಪೇಯಿ ನಗರ ವಸತಿ ಯೋಜನೆಯಿಂದ ಒಂದು ಲಕ್ಷದ ಇಪ್ಪತ್ತು ಸಾವಿರ ರೂಪಾಯಿ ಹಣ ಉಚಿತವಾಗಿ ಸಿಗುತ್ತದೆ. ಇನ್ನು ಪ್ರಧಾನಮಂತ್ರಿ ಅವಾಸ್ ಯೋಜನೆಯಡಿಯಲ್ಲಿ ನಗರಪ್ರದೇಶದಲ್ಲಿ ಒಂದು ಲಕ್ಷದ ಐವತ್ತು ಸಾವಿರ ರೂಪಾಯಿ ಹಣ ಸಬ್ಸಿಡಿ ರೂಪದಲ್ಲಿ ಉಚಿತವಾಗಿ ಸಿಗುತ್ತದೆ. ಅಂದರೆ ಒಟ್ಟು ಎರಡು ಲಕ್ಷದ ಎಪ್ಪತ್ತು ಸಾವಿರ ರೂಪಾಯಿ ಹಣ ಸಬ್ಸಿಡಿ ರೂಪದಲ್ಲಿ ಈ ಯೋಜನೆಯ ಮುಖಾಂತರ ಪಡೆಯಬಹುದು. ಈ ಎರಡು ಲಕ್ಷದ ಎಪ್ಪತ್ತು ಸಾವಿರ ರೂಪಾಯಿಯ ಜೊತೆಯಲ್ಲಿ ನೀವು ನಿಮ್ಮ ಸ್ವಲ್ಪ ಹಣವನ್ನು ವೆಚ್ಚ ಮಾಡಿ ಇನ್ನೂ ಉತ್ತಮವಾದ ಮನೆಯನ್ನು ನೀವು ಕಟ್ಟಿಸಿಕೊಳ್ಳಬಹುದು.

ಹಾಗಾದರೆ ಈ ಒಂದು ವಾಜಪೇಯಿ ನಗರ ವಸತಿ ಯೋಜನೆಗೆ ಅರ್ಜಿ ಸಲ್ಲಿಸುವುದಕ್ಕೆ ಯಾವೆಲ್ಲ ಅರ್ಹತೆಗಳಿರಬೇಕು ಮತ್ತು ಯೋಜನೆಯಲ್ಲಿರುವ ಶರತ್ತುಗಳು ಯಾವುದು ಎಂಬುದನ್ನು ನಾವು ನಿಮಗೆ ತಿಳಿಸಿಕೊಡುತ್ತೇವೆ. ಮೊದಲನೆಯದಾಗಿ ನೀವು ಈ ಯೋಜನೆಯ ಲಾಭವನ್ನು ಪಡೆಯಲು ನೀವು ನಗರ ಪ್ರದೇಶದಲ್ಲಿ ವಾಸವಾಗಿರಬೇಕು. ಎರಡನೇಯ ಷರತ್ತಿನ ಪ್ರಕಾರ ಎರಡು ಸಾವಿರದ ಮೂರರಲ್ಲಿ ತಯಾರಿಸಲಾದ ವಸತಿರಹಿತ ಪಟ್ಟಿಯಲ್ಲಿ ನಮ್ಮ ಹೆಸರು ಇರಬೇಕಾಗುತ್ತದೆ. ಮೂರನೆಯದಾಗಿ ನಿಮ್ಮ ಮಾಸಿಕ ಅಂದರೆ ತಿಂಗಳ ಆದಾಯ ಏಳೂ ಸಾವಿರದ ಮುನ್ನೂರು ರೂಪಾಯಿ ಒಳಗಡೆ ಇರಬೇಕಾಗುತ್ತದೆ ವಾರ್ಷಿಕ ವರಮಾನ ಎಂಬತ್ತೇಳು ಸಾವಿರದ ಆರು ನೂರು ರೂಪಾಯಿ ಒಳಗೆ ಇರಬೇಕಾಗುತ್ತದೆ.

ನೀವು ಈ ಯೋಜನೆಯ ಲಾಭವನ್ನು ಪಡೆಯಲು ನಿಮ್ಮದೇ ಆದ ಸ್ವಂತ ಖಾಲಿ ಜಾಗ ಹೊಂದಿರಬೇಕಾಗುತ್ತದೆ ಆ ಕಾಲಿ ಜಾಗಕ್ಕೆ ಸಂಬಂಧಿಸಿದ ಹಕ್ಕುಪತ್ರ ಅಥವಾ ಕ್ರಯಪತ್ರ ಅಥವಾ ದಾನ ಪತ್ರವನ್ನು ಅಥವಾ ಉಡುಗೊರೆ ಪತ್ರವನ್ನು ನೀವು ಹೊಂದಿರಬೇಕಾಗುತ್ತದೆ. ಇನ್ನು ಈ ಯೋಜನೆಯಡಿಯಲ್ಲಿ ಯಾರ್ಯಾರಿಗೆ ಎಷ್ಟು ಮೀಸಲಾತಿಯನ್ನು ಕೊಡಲಾಗುತ್ತದೆ ಎನ್ನುವುದನ್ನು ತಿಳಿದುಕೊಳ್ಳೋಣ. ಅಲ್ಪಸಂಖ್ಯಾತರಿಗೆ ಶೇಕಡ ಹತ್ತರಷ್ಟು ಮೀಸಲಾತಿ ಮತ್ತು ಸಾಮಾನ್ಯ ವರ್ಗದವರಿಗೆ ಶೇಕಡಾ ತೊಂಬತ್ತರಷ್ಟು ಮೀಸಲಾತಿಯನ್ನು ಕಲ್ಪಿಸಲಾಗಿದೆ. ಈ ಎಲ್ಲಾ ಅರ್ಹತೆಯನ್ನು ಹೊಂದಿದ್ದರೆ ನೀವು ವಾಜಪೇಯಿ ನಗರ ವಸತಿ ಯೋಜನೆಗೆ ಅರ್ಜಿಯನ್ನು ಸಲ್ಲಿಸಬಹುದು.

ಹಾಗಾದರೆ ಈ ಯೋಜನೆಗೆ ಅರ್ಜಿಯನ್ನು ಸಲ್ಲಿಸಲು ಯಾವೆಲ್ಲ ದಾಖಲೆಗಳು ಬೇಕು ಎಂಬುದರ ಬಗ್ಗೆ ತಿಳಿದುಕೊಳ್ಳೋಣ. ಮೊದಲನೆಯದಾಗಿ ಈ ಒಂದು ಯೋಜನೆಗೆ ನಿಗದಿ ಮಾಡಿದ ಅರ್ಜಿಯನ್ನು ನೀವು ತುಂಬಬೇಕು. ಎರಡನೆಯದಾಗಿ ಆದಾಯ ಪ್ರಮಾಣ ಪತ್ರ ಇರಬೇಕು. ಮೂರನೆಯದಾಗಿ ಮತದಾರರ ಗುರುತಿನ ಚೀಟಿ ಅಥವಾ ರೇಷನ್ ಕಾರ್ಡ್ ಪ್ರತಿ ಹೊಂದಿರಬೇಕು. ನಾಲ್ಕನೆಯದಾಗಿ ಖಾಲಿ ಜಾಗಕ್ಕೆ ಸಂಬಂಧಿಸಿದ ಫಾರಂ ನಂಬರ್ ಮೂರನ್ನು ಹೊಂದಿರಬೇಕು.

ಐದನೆಯದಾಗಿ ಮನೆ ನಿರ್ಮಾಣದ ಅಂದಾಜು ಪಟ್ಟಿ ನಕಲು ಪ್ರತಿ ಇರಬೇಕು. ಆರನೆಯದಾಗಿ ಅನುಮೋದಿತ ನಕ್ಷೆ ನಕಲು ಪ್ರತಿ ಇರಬೇಕು. ಏಳನೆಯದಾಗಿ ನಿಗಮದೊಂದಿಗೆ ಸಹಾಯಧನ ಪಡೆಯಲು ಕರಾರುಪತ್ರ ನಮೂನೆ-2 ಇರಬೇಕು. ಎಂಟನೆಯದಾಗಿ ನಿವೇಶನ ಅಥವಾ ಮನೆಯನ್ನು 15 ವರ್ಷದವರೆಗೆ ನಿಗಮದ ಪರವಾಗಿ ಅಡಮಾನ ಪತ್ರವನ್ನು ಬರೆದು ಕೊಡಬೇಕು ಇದಿಷ್ಟು ದಾಖಲೆಗಳು ನಿಮ್ಮ ಬಳಿ ಇದ್ದರೆ ಈ ಒಂದು ವಾಜಪೇಯಿ ನಗರ ವಸತಿ ಯೋಜನೆಗೆ ಅರ್ಜಿಯನ್ನು ಸಲ್ಲಿಸಬಹುದು. ವಾಜಪೇಯಿ ನಗರ ವಸತಿ ಯೋಜನೆಗೆ ನೀವು ಅರ್ಜಿಯನ್ನು ಸಲ್ಲಿಸಿದ ಮೇಲೆ ಫಲಾನುಭವಿಗಳ ಆಯ್ಕೆಮಾಡುವ ಕ್ರಿಯೆಯ ಬಗ್ಗೆ ತಿಳಿದುಕೊಳ್ಳೋಣ.

ಎರಡು ಸಾವಿರದ ಮೂರರಲ್ಲಿ ತಯಾರಿಸಿದ ವಸತಿ ರಹಿತ ಪಟ್ಟಿಯಲ್ಲಿ ನಮ್ಮ ಹೆಸರು ಇರಬೇಕು ನೀವು ಅರ್ಹತೆಯನ್ನು ಹೊಂದಿದ್ದು ಪಟ್ಟಿಯಲ್ಲಿ ನಿಮ್ಮ ಹೆಸರು ಇಲ್ಲದಿದ್ದರೆ ಈ ಪಟ್ಟಿಯಲ್ಲಿ ಹೆಸರು ಸೇರ್ಪಡೆ ಮಾಡಲಾಗುತ್ತದೆ ನಂತರ ಆ ಪಟ್ಟಿಯನ್ನು ಆಶ್ರಯ ಸಮಿತಿಗೆ ವಹಿಸಲಾಗುತ್ತದೆ ತದನಂತರ ಈ ಪಟ್ಟಿಯ ಮೂಲಕ ಆಯ್ಕೆ ಮಾಡಲಾಗುತ್ತದೆ. ನಂತರ ನೀವು ಈ ಯೋಜನೆಯ ಮೂಲಕ ಎರಡು ಲಕ್ಷದ ಎಪ್ಪತ್ತು ಸಾವಿರ ರೂಪಾಯಿ ಸಬ್ಸಿಡಿ ಹಣವನ್ನು ಉಚಿತವಾಗಿ ಪಡೆಯಬಹುದಾಗಿದೆ. ಕೊನೆಯದಾಗಿ ಈ ಒಂದು ಯೋಜನೆಗೆ ಅರ್ಜಿಯನ್ನು ಸಲ್ಲಿಸುವುದಕ್ಕೆ ನಿಮ್ಮ ತಾಲೂಕು ಹಾಗೂ ಜಿಲ್ಲಾ ಮಟ್ಟದಲ್ಲಿ ಇರುವಂತಹ ರಾಜೀವ್ ಗಾಂಧಿ ಗ್ರಾಮೀಣ ವಸತಿ ನಿಗಮಕ್ಕೆ ಭೇಟಿ ನೀಡಿ ಅಲ್ಲಿ ವಾಜಪೇಯಿ ನಗರ ವಸತಿ ಯೋಜನೆಯ ಅರ್ಜಿ ಫಾರಂ ತೆಗೆದುಕೊಂಡು ಅದನ್ನು ತುಂಬಿ ಮೇಲೆ ತಿಳಿಸಿರುವ ದಾಖಲಾತಿಗಳನ್ನು ಅದಕ್ಕೆ ಅಟ್ಯಾಚ್ ಮಾಡಿ ನೀವು ಅರ್ಜಿಯನ್ನು ಅಲ್ಲಿ ಸಲ್ಲಿಸಬೇಕು. ನೋಡಿದಿರಲ್ಲ ಸ್ನೇಹಿತರೆ ನೀವು ಕೂಡ ಈ ವಾಜಪೇಯಿ ನಗರ ವಸತಿ ಯೋಜನೆಗೆ ಅರ್ಜಿಯನ್ನು ಸಲ್ಲಿಸಿ ಇದರ ಲಾಭವನ್ನು ಪಡೆದುಕೊಳ್ಳಬಹುದು ನಿವು ಈ ಮಾಹಿತಿಯನ್ನು ತಿಳಿದುಕೊಳ್ಳುವುದರ ಜೊತೆಗೆ ನಿಮ್ಮ ಸ್ನೇಹಿತರಿಗೂ ಪರಿಚಯದವರಿಗೆ ಈ ಮಾಹಿತಿಯನ್ನು ತಿಳಿಸಿರಿ. ಸಾಯಿಬಾಬಾ ಜ್ಯೋತಿಷ್ಯ ಶಾಸ್ತ್ರಂ ನಂಬಿ ಕರೆ ಮಾಡಿದವರಿಗೆ ವಿಶೇಷ ಸಾಂತ್ವಾನ, ಸಮಸ್ಯೆ ಸಮಸ್ಯೆ ಸಮಸ್ಯೆ ಚಿಂತಿಸಬೇಡಿ, ಅಸಾಧ್ಯವಾದದ್ದು ಇಲ್ಲಿ ಸಾಧ್ಯ ಸಮಸ್ಯೆಗಳಾದ ವಿದ್ಯೆ ಉದ್ಯೋಗ ವ್ಯಾಪಾರ ಆರೋಗ್ಯ ದಾಂಪತ್ಯ ಗಂಡ-ಹೆಂಡತಿಯರ ಕಲಹ ಪ್ರೀತಿಯಲ್ಲಿ ನಂಬಿ ಮೋಸ ಇಷ್ಟಪಟ್ಟವರು ನಿಮ್ಮಂತೆ ಆಗಲು ಕೋರ್ಟ್ ಕೇಸ್ ಜಮೀನು ಸ್ತ್ರೀ ಮತ್ತು ಪುರುಷ ವಶೀಕರಣ ಶತ್ರು ಕಾಟ ಮಾಟ-ಮಂತ್ರ ಇನ್ನು ಮುಂತಾದ ಸಮಸ್ಯೆಗಳಿಗೆ ಅತಿ ಶೀಘ್ರದಲ್ಲಿ ಪರಿಹಾರಅಸಾಧ್ಯ ಆಗುವ ಸಮಸ್ಯೆಗಳಿಗೆ ಸಾಧ್ಯವಾಗಿ ತೋರಿಸುವುದು ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯಶಾಸ್ತ್ರನಿಮ್ಮ ನಂಬಿಕೆಗೆ ಇಲ್ಲಿ ಮೋಸವಿಲ್ಲ 9611844430

Leave A Reply

Your email address will not be published.

error: Content is protected !!