ರೈತ ಸಮುದಾಯಕ್ಕೆ ರಾಜ್ಯ ಸರ್ಕಾರ ಮತ್ತೊಂದು ಸಿಹಿ ಸುದ್ದಿ ಈಗಲೇ ನೋಡಿ

0

ರೈತ ಸಮುದಾಯಕ್ಕೆ ರಾಜ್ಯ ಸರ್ಕಾರ ಮತ್ತೊಂದು ಸಿಹಿ ಸುದ್ದಿ ನೀಡಿದ್ದು ಭೂಮಿಯ ಮಾಲೀಕರು ಜಮೀನಿನ 11 ಈ ಹಿಸ್ಸಾ ನಕಾಶೆ, ತಾತ್ಕಾಲ್ ಪೋಡಿ, ಭೂ ಪರಿವರ್ತನಾ ನಕ್ಷೆ ಇತ್ಯಾದಿ ಪಡೆಯಲು ಅರ್ಜಿ ಸಲ್ಲಿಸಿದ ಏಳು ದಿನಗಳಲ್ಲಿ ದಾಖಲೆಗಳು ಕೈ ಸೇರಲಿವೆ

ಹೌದು ಭೂಮಾಪನ ಕಂದಾಯ ವ್ಯವಸ್ಥೆ ಮತ್ತು ಭೂ ದಾಖಲೆಗಳ ಇಲಾಖೆಗಳಿಂದ ಸಾರ್ವಜನಿಕರಿಗೆ ವಿಳಂಬವಿಲ್ಲದೆ ಸೇವೆಯನ್ನು ಕಲ್ಪಿಸಲು ಸ್ವಾವಲಂಬಿ ವೆಬ್ಸೈಟ್ ಜಾರಿಗೆ ತಂದಿದೆ. ಈ ಮೂಲಕ ಹಿಸ್ಸ ನಕಾಶೆ ತಾತ್ಕಾಲ್ ಪೋಡಿ ಭೂ ಪರಿವರ್ತನಾ ನಕ್ಷೆ ಅರ್ಜಿ ಸಲ್ಲಿಸಿದ ಏಳು ದಿನಗಳಲ್ಲಿ ದಾಖಲೆಗಳು ಜನರ ಕೈಗೆ ಬಂದು ಸೇರಲಿದೆ ಈ ಮೊದಲು ನಾಡಕಚೇರಿಗೆ ಹೋಗಿ ಜಮೀನಿನ ಇತ್ಯಾದಿ ಕಾರ್ಯಗಳಿಗೆ ಅರ್ಜಿ ಸಲ್ಲಿಸಬೇಕಿತ್ತು ಆ ಅರ್ಜಿಯು ನಾಡಕಚೇರಿಯಲ್ಲಿ ಪರಿಶೀಲನೆಗೆ ಒಳಪಟ್ಟು ಭೂಮಾಪಕರ ಬಳಿ ಹೋಗುತ್ತಿತ್ತು. ಭೂ ಮಾಪಕರು ಇದನ್ನು ಪರಿಶೀಲಿಸಿ ನಕ್ಷೆ ಗುರುತಿಸಿ ಅಪ್ಲೋಡ್ ಮಾಡುತ್ತಿದ್ದರು.

ಅಪ್ಲೋಡ್ ಆದ ದಾಖಲೆಯನ್ನು ತಪಾಸಕರ ಮೂಲಕ ಪರಿಶೀಲಿಸಿದ ಬಳಿಕ ಅಂತಿಮ ಅನುಮೋದನೆಗೆ ಭೂ ದಾಖಲೆಗಳ ಸಹಾಯಕ ನಿರ್ದೇಶಕರ ಕಚೇರಿಗೆ ಕಳುಹಿಸಲಾಗುತ್ತಿತ್ತು. ಈ ಎಲ್ಲಾ ಪ್ರಕ್ರಿಯೆಗೆ ಸುಮಾರು ಎರಡು ತಿಂಗಳಿನಷ್ಟು ಸಮಯ ಬೇಕಾಗಿತ್ತು. ಆದರೆ ಇದೀಗ ಭೂ ಮಾಪನ ಕಂದಾಯ ಇಲಾಖೆ ಸ್ವಾವಲಂಬಿ ವೆಬ್ಸೈಟ್ ಮೂಲಕ ಸಲ್ಲಿಕೆಯಾಗುವ ಅರ್ಜಿಗಳನ್ನು ಏಳು ದಿನಗಳಲ್ಲಿ ವಿಲೇವಾರಿ ಮಾಡಲಾಗುತ್ತಿದೆ. ಹಿಸ್ಸಾ, ನಕಾಶೆ, ಆರ್ ಟಿ ಸಿ. ಹಾಗೂ ನೋಂದಾಯಿತ ಮೊಬೈಲ್ ನಂಬರ್ ಇರುವ ಆಧಾರ ಕಾರ್ಡ್ ತಾಳೆಯದರೆ ಮಾತ್ರ ಈ ವೆಬ್ಸೈಟ್ನಲ್ಲಿ ಅರ್ಜಿಗಳು ಸ್ವೀಕೃತವಾಗುತ್ತವೆ. ಕಡ್ಡಾಯವಾಗಿ ಜಮೀನಿನ ಆರ್ಟಿಸಿ ನಂಬರ್ ಇದ್ದರೆ ಮಾತ್ರ ಅರ್ಜಿ ಮಾನ್ಯವಾಗುತ್ತದೆ.

artiservices.karnataka.gov.in ವೆಬ್ಸೈಟ್ನಲ್ಲಿ ಅರ್ಜಿ ಸಲ್ಲಿಸಿ ಸೇವೆ ಪಡೆಯಬಹುದು. ಈ ಆಪ್ ನ ಮುಖಾಂತರ ಜನರೇ ಆಧಾರ್ ನಂಬರ್ ಹಾಗೂ ಮೊಬೈಲ್ ನಂಬರ್ ಬಳಸಿ ನಿಮ್ಮ ದಾಖಲೆಗಳನ್ನು ಪಡೆಯಬಹುದು. ಸ್ವಾವಲಂಬಿ ಎಂದರೆ 11 ಈ ಸ್ಕೆಚ್ ಹಾಗೂ ಪೋಡಿ ವಿಧಾನವನ್ನು ಮಾಡುವುದು ಈ ಹಿಂದೆ ಸರ್ವೆಯರ್ ಬಂದು ಅಪ್ರುವಲ್ ಮಾಡಲು ತುಂಬಾ ತಡವಾಗುತ್ತಿತ್ತು ಆದರೆ ಈಗ ಅವರೇ ಭೂ ಪರಿವರ್ತನೆ ಮಾಡಿಕೊಳ್ಳಬಹುದು. ಸ್ವಾವಲಂಬಿ ಸರಳ ಸುರಕ್ಷಿತ ನಾಗರಿಕ ಸ್ನೇಹ ಯೋಜನೆ ಇದರಿಂದ ಮಧ್ಯವರ್ತಿಗಳ ಹಾವಳಿಗೆ ತಡೆ ಬೀಳುತ್ತದೆ.

Leave A Reply

Your email address will not be published.

error: Content is protected !!