ರೇಲ್ವೆ ಟ್ರ್ಯಾಕ್ ನಲ್ಲಿ ಯಾರಾದರೂ ಮನುಷ್ಯರು ಅಥವಾ ಪ್ರಾಣಿಗಳು ಹೋಗುತ್ತಿದ್ದರೆ ಟ್ರೇನ್ ನಿಲ್ಲದೆ ಗುದ್ದಿಕೊಂಡೆ ಹೋಗುತ್ತದೆ ಯಾಕೆ?

0

ರೇಲ್ವೆ ಟ್ರ್ಯಾಕ್ ನಲ್ಲಿ ಯಾರಾದರೂ ಮನುಷ್ಯರು ಅಥವಾ ಪ್ರಾಣಿಗಳು ಹೋಗುತ್ತಿದ್ದರೆ ಟ್ರೇನ್ ನಿಲ್ಲದೆ ಗುದ್ದಿಕೊಂಡೆ ಹೋಗುತ್ತದೆ ಇದು ಎಲ್ಲರಿಗೂ ಗೊತ್ತಿದೆ. ಟ್ರೇನ್ ಯಾಕೆ ಟ್ರ್ಯಾಕ್ ನಲ್ಲಿ ಮನುಷ್ಯರು, ಪ್ರಾಣಿಗಳು ಬಂದರೆ ನಿಲ್ಲಿಸುವುದಿಲ್ಲ ಎಂಬ ಪ್ರಶ್ನೆ ಸಾಮಾನ್ಯ. ಟ್ರೇನ್ ಯಾಕೆ ನಿಲ್ಲಿಸುವುದಿಲ್ಲ ಎಂಬ ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ.

ರೇಲ್ವೆ ಟ್ರ್ಯಾಕ್ ಹೋಗಿರುವ ಸ್ಥಳಗಳಲ್ಲಿ ಕೆಲವು ಅಡ್ಡ ರಸ್ತೆಗಳು ಹಾದು ಹೋಗುತ್ತವೆ. ಅಂತಹ ಜಾಗದಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ತೊಂದರೆಯಾಗಬಾರದೆಂದು ಟ್ರೇನ್ ಬರುವ ಮೊದಲೆ ಗೇಟ್ ಹಾಕುತ್ತಾರೆ. ಟ್ರೇನ್ ಪಾಸಾದ ನಂತರ ಗೇಟ್ ತೆರೆಯುತ್ತಾರೆ ಆದರೆ ಇಂತಹ ಜಾಗದಲ್ಲಿಯೂ ಕೆಲವರು ಸರ್ಕಸ್ ಮಾಡುತ್ತಾರೆ. ಗೇಟ್ ತೆರೆಯುವ ಮೊದಲೆ ಸೈಕಲ್ ಇನ್ನಿತರ ದ್ವಿಚಕ್ರ ವಾಹನ ಸವಾರರು ಹೋಗಲು ಅವಸರ ಮಾಡುತ್ತಾರೆ. ಹೀಗೆ ಅವಸರ ಮಾಡಿ ಭಾರತದಲ್ಲಿ ಬಹಳಷ್ಟು ಜನರು ಪ್ರಾಣ ಕಳೆದುಕೊಂಡಿದ್ದಾರೆ. ಆ ಜಾಗದಲ್ಲಿ ಯಾರಾದರೂ ಹೋಗುತ್ತಿದ್ದರೆ ಟ್ರೇನ್ ಅನ್ನು ನಿಲ್ಲಿಸುವುದಿಲ್ಲ. ಟ್ರ್ಯಾಕ್ ನಲ್ಲಿ ಪ್ರಾಣಿಗಳು ಅಥವಾ ಯಾರೆ ಹೋಗುತ್ತಿದ್ದರು ಟ್ರೇನ್ ನಡೆಸುವ ಪೈಲೆಟ್ ನೋಡಿದರೂ ಟ್ರೇನ್ ಅನ್ನು ನಿಲ್ಲಿಸುವುದಿಲ್ಲ. ಟ್ರೇನ್ ಡ್ರೈವರ್ ಎದುರುಗಡೆ ಪ್ರಾಣಿ, ಮನುಷ್ಯ ಹೋಗುತ್ತಿದ್ದರೆ ಎಮರ್ಜೆನ್ಸಿ ಬ್ರೇಕ್ ಅನ್ನು ಅಪ್ಲೈ ಮಾಡಬೇಕಾಗುತ್ತದೆ. 20 ರಿಂದ 24 ಬೋಗಿಗಳು ಇರುವ ಒಂದು ರೈಲು ಗಂಟೆಗೆ ನೂರು ಕಿಲೋಮೀಟರ್ ಸ್ಪೀಡಲ್ಲಿ ಹೋಗುತ್ತಿರುತ್ತದೆ. ಹೀಗಿರುವಾಗ ರೈಲು ಎಮರ್ಜೆನ್ಸಿ ಬ್ರೇಕ್ ಅಪ್ಲೈ ಮಾಡಲು ಮಿನಿಮಮ್ ಡಿಸ್ಟೆನ್ಸ್ ಎಂಟು ನೂರೈವತ್ತು ಮೀಟರ್ ಇರಬೇಕಾಗುತ್ತದೆ.

ಆದರೂ ಎಮರ್ಜೆನ್ಸಿ ಬ್ರೇಕ್ ಅಪ್ಲೈ ಮಾಡಿದರೆ ಅವಘಡ ಸಂಭವಿಸುವ ಸಾಧ್ಯತೆ ಇರುತ್ತದೆ. ಒಂದು ಬೋಗಿಗೆ ಇನ್ನೊಂದು ಬೋಗಿ ಡಿಕ್ಕಿ ಹೊಡೆದು ಹಳಿತಪ್ಪುವ ಚಾನ್ಸ್ ಇರುತ್ತದೆ. ಒಬ್ಬರ ಪ್ರಾಣ ಉಳಿಸಲು ಹೋಗಿ ಟ್ರೇನ್ ನಲ್ಲಿ ಇರುವ ಸಾವಿರಾರು ಜನರ ಪ್ರಾಣವನ್ನು ಬಲಿ ಕೊಡಬೇಕಾಗುತ್ತದೆ. ಲೋಡ್ ಆಗಿರುವ ಗೂಡ್ಸ್ ರೈಲು ಎಮರ್ಜೆನ್ಸಿ ಬ್ರೇಕ್ ಅಪ್ಲೈ ಮಾಡಬೇಕಾದರೆ ಒಂದು ಕಿಲೋಮೀಟರ್ ಡಿಸ್ಟೆನ್ಸ್ ಇರಬೇಕಾಗುತ್ತದೆ, ಆದರೆ ಅಷ್ಟು ದೂರದಿಂದ ಟ್ರ್ಯಾಕ್ ನಲ್ಲಿ ಹೋಗುತ್ತಿರುವ ಪ್ರಾಣಿ ಅಥವಾ ಮನುಷ್ಯರು ಕಾಣಿಸುವುದಿಲ್ಲ. ಆದ್ದರಿಂದ ಟ್ರೇನ್ ಡ್ರೈವರ್ ಮುಂದೆ ಟ್ರ್ಯಾಕ್ ನಲ್ಲಿ ಯಾವುದೆ ಜೀವಿ ಬಂದರು ನಿಲ್ಲಿಸುವುದಿಲ್ಲ. ಒಂದು ವೇಳೆ ಟ್ರೇನ್ ನಿಲ್ಲಿಸಿದರೆ ಅಪಾಯವಾಗುವ ಸಂಭವವಿರುತ್ತದೆ. ಇದೊಂದು ಇಂಟರೆಸ್ಟಿಂಗ್ ಮಾಹಿತಿ ಆಗಿರುವುದರಿಂದ ಮಕ್ಕಳಿಗೆ ವಿಶೇಷವಾಗಿ ಈ ಮಾಹಿತಿಯನ್ನು ತಿಳಿಸಿ ಅವರ ಜ್ಞಾನ ಭಂಡಾರ ಹೆಚ್ಚುತ್ತದೆ. ಇದಿಷ್ಟೆ ಅಲ್ಲದೆ ಟ್ರೇನ್ ಬಗ್ಗೆ ಇನ್ನೂ ಅನೇಕ ಇಂಟರೆಸ್ಟಿಂಗ್ ವಿಷಯಗಳಿವೆ.

Leave A Reply

Your email address will not be published.

error: Content is protected !!