ರಿಸರ್ವ್ ಪೊಲೀಸ್ 2022 ಸಬ್ ಇನ್ಸ್‌ಪೆಕ್ಟರ್ ಹುದ್ದೆಯ ಕುರಿತು ಇಲ್ಲಿದೆ ಮಾಹಿತಿ

0

KSRP, SI Recruitment 2021 ಕರ್ನಾಟಕ ಪೊಲೀಸ್ ಇಲಾಖೆಯು ಇದೀಗ ವಿಶೇಷ ಮೀಸಲು ಸಬ್ ಇನ್ಸ್‌ಪೆಕ್ಟರ್(ಕೆ,ಎಸ್,ಆರ್,ಪಿ ಮತ್ತು ಐ,ಆರ್,ಬಿ) ಪುರುಷ, ಮಹಿಳಾ ಮತ್ತು ತೃತೀಯ ಲಿಂಗ ಹಾಗೂ ಸೇವಾ ನಿರತರನ್ನೊಳಗೊಂಡ, ಮಿಕ್ಕುಳಿದ ಹಾಗೂ ಕಲ್ಯಾಣ ಕರ್ನಾಟಕ ಹುದ್ದೆಗಳಿಗೆ ಅಧಿಸೂಚನೆ ಪ್ರಕಟಿಸಿದೆ.ಈ ಹುದ್ದೆಗಳಲ್ಲಿ ಆಸಕ್ತಿಯುಳ್ಳ ಅಭ್ಯರ್ಥಿಗಳು ಈ ಕೆಳಗಿನ ಮಾಹಿತಿಗಳನ್ನು ತಿಳಿದು ಅರ್ಜಿ ಸಲ್ಲಿಸಿ. ಅಧಿಸೂಚನೆ ಸಂಖ್ಯೆ :10/ ನೇಮಕಾತಿ – 2/2011-22

ಹುದ್ದೆ ಹೆಸರು : ವಿಶೇಷ ಮೀಸಲು ಸಬ್ ಇನ್ಸ್‌ಪೆಕ್ಟರ್
ಹುದ್ದೆಗಳ ಸಂಖ್ಯೆ : 70
ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ : 20/12/2021
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ :18/01/2022
ಅರ್ಜಿಶುಲ್ಕ ಪಾವತಿಸಲು ಕೊನೆ ದಿನಾಂಕ :20/01/2022.
ನೇಮಕಾತಿ ವಿಧಾನ : ಸಹಿಷ್ಣುತೆ ಪರೀಕ್ಷೆ, ದೈಹಿಕ ಸಾಮರ್ಥ್ಯ ಪರೀಕ್ಷೆ, ಲಿಖಿತ ಪರೀಕ್ಷೆ.

ಅರ್ಜಿ ಶುಲ್ಕ:ಸಾಮನ್ಯ ವರ್ಗದ ಅಭ್ಯರ್ಥಿಗಳಿಗೆ 500 ರೂ.
ಪ್ರ ವರ್ಗ 2 ಎ, 2 ಬಿ, 3 ಎ, 3 ಬಿ ಗೆ ಸೇರಿದ ಅಭ್ಯರ್ಥಿಗಳಿಗೆ 500 ರೂ.
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರ ವರ್ಗ – 1 ಕ್ಕೆ ಸೇರಿದ ಅಭ್ಯರ್ಥಿಗಳಿಗೆ 250 ರೂ.
ಆನ್ ಲೈನ್ ಅರ್ಜಿ ಸಲ್ಲಿಕೆ ನಂತರ ಜೆನೆರೆಟ್ ಆಗುವ ಅರ್ಜಿ ಶುಲ್ಕ ಚಲನ್ ನೊಂದಿಗೆ ಅಧಿಕೃತ ಬ್ಯಾಂಕ್ ಶಾಖೆಗಳ ಅಥಾವ ಅಂಚೆ ಕಚೇರಿಗಳಲ್ಲಿ ಪಾವತಿಸಬೇಕು.

ವಯೋಮಿತಿ ಅರ್ಹತೆಗಳು : ಅರ್ಜಿ ಸಲ್ಲಿಸಬಯುಸುವ ಆಸಕ್ತ ಅಭ್ಯರ್ಥಿಗಳಿಗೆ ಕನಿಷ್ಠ 21 ವಯಸ್ಸು ಆಗಿರಬೇಕು.ಸಾಮನ್ಯ ಅಭ್ಯರ್ಥಿಗಳಿಗೆ ಗರಿಷ್ಠ 26 ವರ್ಷ ವಯೋಮಿತಿ ಮೀರಿರಬಾರದು.
ಎಸ್ಸಿ ಎಸ್ಟಿ ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ ಗರಿಷ್ಠ 28 ವರ್ಷ ಗರಿಷ್ಠ ವಯೋಮಿತಿ.
ಸೇವಾನಿರತ ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ 35 ವರ್ಷ ಗರಿಷ್ಠ ವಯೋಮಿತಿ.
ಸೇವಾನಿರತ ಇತರೆ ಎಲ್ಲಾ ವರ್ಗದ ಅಭ್ಯರ್ಥಿಗಳಿಗೆ ಅರ್ಜಿ ಸಲ್ಲಿಸಲು 40 ವರ್ಷ ಗರಿಷ್ಠ ವಯೋಮಿತಿ ನಿಗದಿ ಪಡಿಸಲಾಗಿದೆ. ವಿದ್ಯಾರ್ಹತೆ :ಯುಜಿಸಿ ಇಂದ ಮಾನ್ಯತೆ ಪಡೆದ ಅಂಗೀಕೃತ ವಿಶ್ವ ವಿದ್ಯಾಲಯಗಳಲ್ಲಿ ಪದವಿ ಅಥಾವ ತತ್ಸಮಾನ ವಿದ್ಯಾರ್ಹತೆಯನ್ನು ದಿನಾಂಕ 18/01/2022 ರೊಳಗೆ ಪಾಸ್ ಮಾಡಿರಬೇಕು.

ಅರ್ಜಿ ಸಲ್ಲಿಸುವುದು ಹೇಗೆ : ಮೇಲಿನ ಅರ್ಹತೆಗಳನ್ಧು ಅಭ್ಯರ್ಥಿಗಳು ರಾಜ್ಯ ಪೊಲೀಸ್ ಇಲಾಖೆಯ KSRP PSI ನೇಮಕಾತಿಯ ಅಧಿಕೃತ ವೆಬ್ಸೈಟ್ http://siksrp21.ksponline.co.in/ ಗೆ ಭೇಟಿ ನೀಡಿ.
ಓಪನ್ ಆದ ಪೇಜ್ ನಲ್ಲಿ ‘ಮೈ ಅಪ್ಲಿಕೇಶನ್’ ಎಂಬಲ್ಲಿ ಕ್ಲಿಕ್ ಮಾಡಿ, ಅಗತ್ಯ ಮಾಹಿತಿಗಳನ್ನು ಭರ್ತಿ ಮಾಡಿ, ಅರ್ಜಿ ಶುಲ್ಕ ಪಾವತಿಗೆ ಚಲನ್ ಜೆನೆರೇಟ್ ಆಗುತ್ತದೆ, ಪ್ರಿಂಟ್ ತೆಗೆದುಕೊಳ್ಳಿ. ಮುಂದಿನ ರೆಫರೆನ್ಸುಗಾಗಿ ಆನ್‌ಲೈನ್ ಅರ್ಜಿಯನ್ನು ಡೌನ್ಲೋಡ್ ಮಾಡಿ ಇಟ್ಟುಕೊಳ್ಳಿ. ಇತರೆ ಹೆಚ್ಚಿನ ಮಾಹಿತಿಗಾಗಿ ವೆಬ್ಸೈಟ್ http://siksrp21.ksponline.co.in/ ಗೆ ಭೇಟಿ ನೀಡಿ ಅಧಿಕೃತ ಅಧಿಸೂಚನೆ ಡೌನ್ಲೋಡ್ ಮಾಡಿಕೊಂಡು ಓದಿರಿ.

Leave A Reply

Your email address will not be published.

error: Content is protected !!