ರಾಧಿಕಾ ಕುಮಾರಸ್ವಾಮಿ ಮಗಳು ಶಮಿಕಾ ಈಗ ಹೇಗಿದ್ದಾರೆ? ಚಿತ್ರರಂಗಕ್ಕೆ ಎಂಟ್ರಿ ಯಾವಾಗ ಗೋತ್ತಾ..

0

ಕನ್ನಡ ಚಿತ್ರರಂಗದ ಅನೇಕ ನಟಿಯರಲ್ಲಿ ರಾಧಿಕಾ ಕುಮಾರಸ್ವಾಮಿ ಪ್ರಮುಖ ಸ್ಟಾರ್ ನಟಿಯಾಗಿದ್ದಾರೆ. ಅವರಿಗೆ ಒಬ್ಬಳು ಮುದ್ದಾದ ಮಗಳಿದ್ದಾಳೆ ಅವಳು ಈಗ ಏನು ಮಾಡುತ್ತಿದ್ದಾಳೆ ಇನ್ನಿತರ ಇಂಟರೆಸ್ಟಿಂಗ್ ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ.

ಎವ್ವರ್ ಗ್ರೀನ್ ನಟಿಯರಲ್ಲಿ ರಾಧಿಕಾ ಕುಮಾರಸ್ವಾಮಿ ಅವರು ಒಬ್ಬರು. ಅವರಿಗೆ ಈಗ 35 ವರ್ಷ ವಯಸ್ಸಾಗಿದ್ದರೂ ಈಗಲೂ ಮದುವೆಯಾಗದ ಹುಡುಗಿಯಂತೆ ಕಾಣಿಸುತ್ತಾರೆ. ಇವರಿಗೆ ಶಮಿಕಾ ಎಂಬ ಮುದ್ದಾದ ಮಗಳಿದ್ದಾಳೆ ಎಂಬ ವಿಷಯ ಎಲ್ಲರಿಗೂ ಗೊತ್ತಿದೆ. ಇತ್ತೀಚೆಗೆ ರಾಧಿಕಾ ಅವರು ಶಮಿಕಾ ನನ್ನ ಪ್ರಪಂಚ ಎಂದು ಮಗಳ ಬಗ್ಗೆ ಹೇಳಿಕೊಂಡಿದ್ದರು.

ಶಮಿಕಾ ಈಗ ಹೈಸ್ಕೂಲ್ ಗೆ ಹೋಗುತ್ತಿದ್ದಾಳೆ. ಕಲಿಕೆಯಲ್ಲಿ ಮುಂದಿರುವ ಶಮಿಕಾ ಚೆನ್ನಾಗಿ ಓದುತ್ತಿದ್ದಾಳೆ. ಕಲಿಕೆಯ ಜೊತೆಗೆ ಸಿನಿ ರಂಗಕ್ಕೆ ಪ್ರವೇಶ ಮಾಡಲು ಒಳ್ಳೆಯ ತಯಾರಿ ನಡೆಯುತ್ತಿದೆ ಎಂಬ ಸುದ್ದಿ ಸಿಕ್ಕಿದೆ. ಶಮಿಕಾಗೆ ಓದಿನ ಜೊತೆಗೆ ಸಿನಿಮಾ ಬಗ್ಗೆ ಆಸಕ್ತಿ ಇದೆ ಅದರಲ್ಲೂ ಡ್ಯಾನ್ಸ್ ಬಗ್ಗೆ ಹೆಚ್ಚಿನ ಆಸಕ್ತಿ ಹೊಂದಿದ್ದಾಳೆ. ಈಗಾಗಲೆ ಶಮಿಕಾ ತಮಗಿಷ್ಟವಾದ ಡ್ಯಾನ್ಸ್ ಕಲಿಯುತ್ತಿದ್ದು ಅದರ ಜೊತೆಗೆ ಹಾರ್ಸ್ ರೈಡಿಂಗ್, ಕರಾಟೆ ಇತರ ಅಗತ್ಯ ತರಬೇತಿಯನ್ನು ಕಲಿಯುತ್ತಿದ್ದಾಳೆ ಅಲ್ಲದೆ ವೃತ್ತಿಪರ ಕಲಾವಿದರಿಂದ ನಟನೆಯ ಬಗ್ಗೆ ತರಬೇತಿ ಪಡೆಯುತ್ತಿದ್ದಾಳೆ.

ಆದಷ್ಟು ಬೇಗ ತಮ್ಮದೆ ಪ್ರೊಡಕ್ಷನ್ ಮೂಲಕ ಮಗಳನ್ನು ಹೀರೋಯಿನ್ ಆಗಿ ಚಿತ್ರರಂಗಕ್ಕೆ ಪರಿಚಯಿಸುವ ಆಸೆ ರಾಧಿಕಾ ಅವರದಾಗಿದೆ. ಈಗಾಗಲೆ ರಾಧಿಕಾ ಅವರು ಮಗಳನ್ನು ಚಿತ್ರರಂಗಕ್ಕೆ ಪರಿಚಯಿಸಲು ಎಲ್ಲ ರೀತಿಯ ಸಿದ್ಧತೆ ಮಾಡಿಕೊಂಡಿದ್ದಾರೆ. ಶಮಿಕಾ ಕೂಡ ಆಸಕ್ತಿಯಿಂದ ಎಲ್ಲವನ್ನೂ ಕಲಿಯುತ್ತಿದ್ದಾಳೆ. ಮುಂದಿನ ದಿನಗಳಲ್ಲಿ ಶಮಿಕಾ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿ ರಾಧಿಕಾ ಅವರಂತೆ ಸ್ಟಾರ್ ನಟಿಯಾಗುವಲ್ಲಿ ಯಾವುದೆ ಸಂಶಯವಿಲ್ಲ. ಒಟ್ಟಿನಲ್ಲಿ ರಾಧಿಕಾ ಅವರ ಆಸೆಯಂತೆ ಶಮಿಕಾ ಚಿತ್ರರಂಗಕ್ಕೆ ಬಂದು ಯಶಸ್ಸು ಪಡೆಯಲಿ ಎಂದು ಆಶಿಸೋಣ.

Leave A Reply

Your email address will not be published.

error: Content is protected !!
Footer code: