WhatsApp Group Join Now
Telegram Group Join Now

ರಾಜ್ಯ ಸರ್ಕಾರದ ವತಿಯಿಂದ ಎಲ್ಲಾ ಬಡವರಿಗೆ ಹಿಂದುಳಿದ ವರ್ಗದವರಿಗೆ ಹಾಗೂ ಮಧ್ಯಮ ವರ್ಗದವರಿಗೆ ಬರ್ಜರಿಯಾದಂತಹ ಸಿಹಿಸುದ್ದಿ ಒಂದಿದೆ. ಯಾರಿಗೆ ವಾಸಿಸುವುದಕ್ಕೆ ಸ್ವಂತ ಮನೆ ಇಲ್ಲ ಬಾಡಿಗೆ ಮನೆಯಲ್ಲಿ ವಾಸ ಮಾಡುತ್ತಿರುವವರಿಗೆ ಹಾಗೂ ಸ್ವಂತ ಜಾಗ ಇಲ್ಲದವರಿಗೆ ಇದೀಗ ಸಚಿವರಿಂದ ಬಂಪರ್ ಮಾಹಿತಿ ಬಂದಿದ್ದು ನೀವು ಉಚಿತವಾಗಿ ಸ್ವಂತ ಮನೆಯನ್ನು ಕಟ್ಟಿಸಿ ಕೊಳ್ಳಬಹುದಾಗಿದೆ ಏನಿದು ಎಂಬುದರ ಕುರಿತಾದ ಸಂಪೂರ್ಣ ಮಾಹಿತಿಯನ್ನು ನಾವಿಂದು ನಿಮಗೆ ತಿಳಿಸಿಕೊಡುತ್ತೇವೆ.

ನಮ್ಮ ಸರ್ಕಾರಗಳು ಬಡವರ ಕಲ್ಯಾಣಕ್ಕೊಸ್ಕರ ಅನೇಕ ಯೋಜನೆಗಳನ್ನು ಜಾರಿಗೆ ತೆಗೆದುಕೊಂಡು ಬರುತ್ತಿವೆ ಅದರಲ್ಲಿ ವಸತಿ ಯೋಜನೆಗಳು ಕೂಡ ಬಹುಮುಖ್ಯ ಪಾತ್ರವನ್ನು ಪಡೆದುಕೊಂಡಿವೆ. ನಮ್ಮ ರಾಜ್ಯದ ವಸತಿ ಸಚಿವರಾದ ವಿ ಸೋಮಣ್ಣನವರು ರಾಜ್ಯದ ಜನತೆಗೆ ಭರ್ಜರಿಯಾದ ಸಿಹಿಸುದ್ದಿಯನ್ನು ನೀಡಿದ್ದು ವಿಶೇಷ ಅನುದಾನದ ಅಡಿಯಲ್ಲಿ ಎಲ್ಲಾ ಬಡಕುಟುಂಬದ ವರ್ಗದವರಿಗೆ ಹಿಂದುಳಿದವರ್ಗದವರಿಗೆ ಸೇರಿದಂತೆ ಮಧ್ಯಮವರ್ಗದ ಜನರಿಗೆ ಯಾರಿಗೆ ವಾಸ ಮಾಡುವುದಕ್ಕೆ ಸ್ವಂತ ಮನೆ ಇಲ್ಲ ಅಂತವರಿಗೆ ರಾಜ್ಯ ಸರ್ಕಾರದಿಂದ ವಿವಿಧ ಯೋಜನೆಗಳ ಅಡಿಯಲ್ಲಿ ಒಟ್ಟು ಐದು ಲಕ್ಷ ಮನೆಯನ್ನು ಮಂಜೂರು ಮಾಡಲಾಗುತ್ತಿದೆ ಎಂಬ ಮಾಹಿತಿಯನ್ನು ಕೊಟ್ಟಿದ್ದಾರೆ.

ಆಸಕ್ತರು ಬಸವ ವಸತಿ ಯೋಜನೆ ಡಾಕ್ಟರ್ ಬಿಆರ್ ಅಂಬೇಡ್ಕರ್ ವಸತಿ ನಿಗಮದ ಯೋಜನೆ ಹಾಗೂ ಪ್ರಧಾನ ಮಂತ್ರಿ ಆವಾಸ್ ಯೋಜನೆ ಸೇರಿದಂತೆ ರಾಜೀವ್ ಗಾಂಧಿ ಆವಾಸ್ ಯೋಜನೆ ಮುಖ್ಯಮಂತ್ರಿ ಅವರ ಒಂದು ಲಕ್ಷ ಬಹುಮಹಡಿ ಮನೆ ಯೋಜನೆ ಸೇರಿದಂತೆ ವಿವಿಧ ಯೋಜನೆಗಳಡಿಯಲ್ಲಿ ಯಾರಿಗೆ ಸ್ವಂತ ಮನೆ ಇಲ್ಲ ಅಂತವರು ತಮ್ಮ ಅರ್ಜಿಯನ್ನು ಸಲ್ಲಿಸಿ ಇದೀಗ ನೀವು ಮನೆಯನ್ನು ಪಡೆದುಕೊಳ್ಳಬಹುದು. ಈಗಾಗಲೇ ಮನೆಯಿಲ್ಲದೆ ಸಾಕಷ್ಟು ಕಷ್ಟವನ್ನು ಅನುಭವಿಸಿರುವ ಅಂಥವರು ತಮ್ಮದೇ ಆದ ಸ್ವಂತ ಮನೆಯನ್ನು ನಿರ್ಮಿಸಿ ಕೊಳ್ಳುವುದಕ್ಕೆ ಇದೊಂದು ಸುವರ್ಣ ಅವಕಾಶ ವಾಗಿದೆ ಎಂದು ಹೇಳಬಹುದು.

ಆಯಾ ಗ್ರಾಮ ಪಂಚಾಯಿತಿಗಳಲ್ಲಿ ಮನೆಯನ್ನು ಅನುಮೋದನೆ ಮಾಡಿ ಪಟ್ಟಿಯನ್ನು ಬಿಡುಗಡೆ ಮಾಡಲಾಗುತ್ತಿದ್ದು ಮುಂದಿನ ದಿನಗಳಲ್ಲಿ ತಲಾ ಒಂದು ಗ್ರಾಮಪಂಚಾಯಿತಿಗೆ ಹತ್ತರಿಂದ ಇಪ್ಪತ್ತು ಮನೆಗಳನ್ನು ಮಂಜೂರು ಮಾಡಲಾಗುವುದು ಎಂದು ವಸತಿ ಸಚಿವರು ಮಾಹಿತಿಯನ್ನು ನೀಡಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ನೀವು ನಿಮ್ಮ ವಲಯದ ಗ್ರಾಮ ಪಂಚಾಯಿತಿಯನ್ನು ಸಂಪರ್ಕಿಸಬಹುದಾಗಿದೆ. ನೀವು ಕೂಡ ಈ ಒಂದು ಯೋಜನೆಗೆ ಅರ್ಜಿಯನ್ನು ಸಲ್ಲಿಸುವುದರ ಮೂಲಕ ನಿಮ್ಮದೇ ಆದ ಸ್ವಂತ ಮನೆಯನ್ನು ಕಟ್ಟಿಸಿಕೊಳ್ಳುವ ಸುವರ್ಣಾವಕಾಶದ ಸದುಪಯೋಗವನ್ನು ಪಡೆದುಕೊಳ್ಳಿ. ಈ ಮಾಹಿತಿಯನ್ನು ನೀವು ತಿಳಿದುಕೊಳ್ಳುವುದರ ಜೊತೆಗೆ ನಿಮ್ಮ ಸ್ನೇಹಿತರು ಹಾಗೂ ಪರಿಚಿತರಿಗೂ ತಿಳಿಸಿರಿ.

WhatsApp Group Join Now
Telegram Group Join Now

By

Leave a Reply

Your email address will not be published. Required fields are marked *

error: Content is protected !!
Footer code: