ರಾಜ್ಯದಲ್ಲಿ ಅತಿ ಬಡ ಜಿಲ್ಲೆ ಯಾವುದು ಗೊತ್ತೇ, ನಿಮ್ಮ ಜಿಲ್ಲೆ ಎಷ್ಟನೇ ಸ್ಥಾನದಲ್ಲಿದೆ ನೋಡಿ

0

ಪ್ರತಿವರ್ಷ ಸ್ವಚ್ಛತೆಯ ಬಗ್ಗೆ, ಬಡತನ ಹೀಗೆ ದೇಶ, ರಾಜ್ಯ, ಜಿಲ್ಲೆಗಳ ನಡುವೆ ಮಾನದಂಡದ ಆಧಾರದ ಮೇಲೆ ಅಳೆಯಲಾಗುತ್ತದೆ ಅದರಂತೆ ನೀತಿ ಆಯೋಗ ಬಡತನ ಸೂಚ್ಯಂಕ ವರದಿಯನ್ನು ಬಿಡುಗಡೆ ಮಾಡಿದೆ ಯಾವ ಪಟ್ಟಿಯಲ್ಲಿ ಯಾವ ಜಿಲ್ಲೆಯ ಹೆಸರಿದೆ ಎಂಬುದನ್ನು ಈ ಲೇಖನದ ಮೂಲಕ ತಿಳಿಯೋಣ.

ನೀತಿ ಆಯೋಗದ ಬಹು ಆಯಾಮದ ಬಡತನ ಸೂಚ್ಯಂಕ ವರದಿ ಪ್ರಕಟವಾಗಿದೆ. ಬಿಹಾರ, ಜಾರ್ಖಂಡ್ ಮತ್ತು ಉತ್ತರ ಪ್ರದೇಶಗಳು ಭಾರತದಲ್ಲೆ ಅತಿ ಬಡವರನ್ನು ಹೊಂದಿರುವ ರಾಜ್ಯ ಎಂಬ ಹಣೆಪಟ್ಟಿಗೆ ಭಾಜನವಾಗಿದೆ. ಈ ಪಟ್ಟಿಯಲ್ಲಿ ಕರ್ನಾಟಕ 19ನೆ ಸ್ಥಾನವನ್ನು ಪಡೆದಿದೆ. ಸೂಚ್ಯಂಕ ಪಟ್ಟಿಯಲ್ಲಿ ಬಿಹಾರ ಮೊದಲ ಸ್ಥಾನ ಪಡೆದಿದೆ. ಬಿಹಾರ ರಾಜ್ಯದ ಜನಸಂಖ್ಯೆಯಲ್ಲಿ 51.91% ಬಡವರಿದ್ದಾರೆ.

ನಂತರದ ಸ್ಥಾನಗಳನ್ನು ಪಡೆದ ಜಾರ್ಖಂಡ್ 42.16%, ಉತ್ತರ ಪ್ರದೇಶ 37.79%, ಮಧ್ಯಪ್ರದೇಶ 36.65% ಹಾಗೂ ಮೇಘಾಲಯದಲ್ಲಿ 32.67% ಬಡವರನ್ನು ಹೊಂದಿದೆ. ಕೇರಳ ರಾಜ್ಯ ಅತಿ ಕಡಿಮೆ ಬಡವರನ್ನು ಹೊಂದಿರುವ ಪಟ್ಟಿಗೆ ಸೇರಿದೆ. ಕೇರಳದ ಒಟ್ಟು ಜನಸಂಖ್ಯೆಯಲ್ಲಿ 0.71ರಷ್ಟು ಮಾತ್ರ ಬಡವರಿದ್ದಾರೆ. ನಂತರದ ಸ್ಥಾನಗಳನ್ನು ಗೋವಾ (3.76%), ಸಿಕ್ಕಿಂ(3.82%), ತಮಿಳುನಾಡು(4.89%) ಹಾಗೂ ಪಂಜಾಬ್ (5.59%) ಪಡೆದುಕೊಂಡಿದೆ. ಬಡತನ ಸೂಚ್ಯಂಕ ಪಟ್ಟಿಯಲ್ಲಿ ಕರ್ನಾಟಕ ರಾಜ್ಯ 19ನೆ ಸ್ಥಾನವನ್ನು ಪಡೆದುಕೊಂಡಿದೆ. ಕರ್ನಾಟಕದ ಜನಸಂಖ್ಯೆಯಲ್ಲಿ 13.16% ರಷ್ಟು ಬಡವರಿದ್ದಾರೆ.

ಕರ್ನಾಟಕದ ಜಿಲ್ಲೆಗಳಲ್ಲಿ ಯಾದಗಿರಿ ಅತಿ ಹೆಚ್ಚು ಬಡವರನ್ನು ಹೊಂದಿರುವ ಜಿಲ್ಲೆಯಾಗಿದೆ. ನಂತರದ ಸ್ಥಾನಗಳಲ್ಲಿ ರಾಯಚೂರು, ಕೊಪ್ಪಳ, ಬಳ್ಳಾರಿ, ವಿಜಯಪುರ ಮತ್ತು ಕಲಬುರಗಿ ಜಿಲ್ಲೆಗಳಿವೆ. ಹಾಗೆಯೆ ಶ್ರೀಮಂತ ಜಿಲ್ಲೆಗಳಲ್ಲಿ ಬೆಂಗಳೂರು ನಗರ ಮುಂಚೂಣಿಯಲ್ಲಿದೆ, ಮಂಡ್ಯ, ಹಾಸನ, ದಕ್ಷಿಣ ಕನ್ನಡ, ಮೈಸೂರು ನಂತರದ ಸ್ಥಾನಗಳನ್ನು ಪಡೆದುಕೊಂಡಿದೆ. ಬಡತನದಲ್ಲಿ ನಂ.1 ಸ್ಥಾನದಲ್ಲಿರುವ ಯಾದಗಿರಿ ಜಿಲ್ಲೆಯಲ್ಲಿ ಒಟ್ಟು ಜನಸಂಖ್ಯೆಯಲ್ಲಿ 41.67%ರಷ್ಟು ಜನರು ಬಡವರಾಗಿದ್ದಾರೆ.

ನಂತರದ ಸ್ಥಾನಗಳಲ್ಲಿರುವ ರಾಯಚೂರು (32.19%) ಕೊಪ್ಪಳ (24.6%) ಹೊಸದಾಗಿ ಸ್ಥಾಪನೆಯಾದ ವಿಜಯನಗರ ಜಿಲ್ಲೆ ಸೇರಿದಂತೆ ಬಳ್ಳಾರಿ(23.4%), ಬಿಜಾಪುರ(22.4%) ಕಲಬುರ್ಗಿ (21.8%), ಗದಗ (20.27%), ಬಾಗಲಕೋಟೆ (20.23%), ಬೀದರ್ (19.42%), ಚಾಮರಾಜನಗರ (18.91%), ಚಿತ್ರದುರ್ಗ (15.79%), ಹಾವೇರಿ (15.61%), ಚಿಕ್ಕಬಳ್ಳಾಪುರ (15.16%), ತುಮಕೂರು (14.00%), ಉತ್ತರಕನ್ನಡ(13.21%), ಶಿವಮೊಗ್ಗ (12.72%), ಬೆಳಗಾವಿ (12.26%), ದಾವಣಗೆರೆ (11.71%), ಚಿಕ್ಕಮಗಳೂರು(11.19%), ಉಡುಪಿ(10.32%), ಕೋಲಾರ (10.30%), ಧಾರವಾಡ (9.65%), ರಾಮನಗರ (8.77%), ಕೊಡಗು (8.74%), ಬೆಂಗಳೂರು ಗ್ರಾಮಾಂತರ(8.39%), ಮೈಸೂರು(7.79%), ದಕ್ಷಿಣಕನ್ನಡ (6.69%), ಹಾಸನ(6.64%), ಮಂಡ್ಯ(6.62%), ಬೆಂಗಳೂರು (2.31) ಬಡವರಿದ್ದಾರೆ.

ಜಾಗತಿಕ ಮನ್ನಣೆ ಪಡೆದ ಆಕ್ಸ್‌ಫರ್ಡ್ ಬಡತನ ಮತ್ತು ಮಾನವ ಅಭಿವೃದ್ಧಿ ಉಪಕ್ರಮ ಹಾಗೂ ವಿಶ್ವ ಸಂಸ್ಥೆಯ ಅಭಿವೃದ್ಧಿ ಯೋಜನೆಯ ಸಮೀಕ್ಷಾ ಮಾನದಂಡವನ್ನು ಅನುಸರಿಸಿ ಈ ಸೂಚ್ಯಂಕವನ್ನು ಸಿದ್ಧಪಡಿಸಲಾಗುತ್ತದೆ ಎಂದು ನೀತಿ ಆಯೋಗ ತಿಳಿಸಿದೆ. ಆರೋಗ್ಯ, ಶಿಕ್ಷಣ ಹಾಗೂ ಜೀವನ ಮಟ್ಟವನ್ನು ಆಧರಿಸಿ ಬಡತನದ ಮಟ್ಟವನ್ನು ಅಳೆಯಲಾಗಿದೆ ಅಲ್ಲದೆ ಮಾನದಂಡದಲ್ಲಿ ಪೌಷ್ಟಿಕತೆ, ಶಿಶು ಮರಣ, ಕುಡಿಯುವ ನೀರು, ನೈರ್ಮಲ್ಯ, ವಿದ್ಯುತ್, ಬ್ಯಾಂಕ್ ಖಾತೆ ಇತ್ಯಾದಿಗಳನ್ನು ಒಳಗೊಂಡಿದೆ. ಒಟ್ಟಿನಲ್ಲಿ ಭಾರತ ದೇಶ ಮೊದಲಿನಿಂದಲೂ ಎದುರಿಸುತ್ತಿರುವ ಪ್ರಮುಖ ಸಮಸ್ಯೆಗಳಲ್ಲಿ ಬಡತನ ಪ್ರಮುಖ ಸಮಸ್ಯೆಯಾಗಿದೆ. ಯಾದಗಿರಿ ಜಿಲ್ಲೆಯು ಕೆಲವು ಅಂಶಗಳಲ್ಲಿ ಬಹಳಷ್ಟು ಮುಂದುವರೆಯಬೇಕಿದೆ.

Leave A Reply

Your email address will not be published.

error: Content is protected !!