WhatsApp Group Join Now
Telegram Group Join Now

ಪ್ರಜ್ವಲ್ ಡೈನಾಮಿಕ್ ಹೀರೋ ಎಂದು ಜನಪ್ರಿಯರಾಗಿರುವ ಪ್ರಸಿದ್ಧ ಕನ್ನಡ ನಟ ದೇವರಾಜ್ ಅವರ ಪುತ್ರರಾಗಿದ್ದಾರೆ. ಪ್ರಜ್ವಲ್ ದೇವರಾಜ್ ಅವರು 4 ಜುಲೈ1987 ರಲ್ಲಿ ಜನಿಸುತ್ತಾರೆ. ಅವರಿಗೆ ಪ್ರಣಮ್ ಎಂಬ ಕಿರಿಯ ಸಹೋದರನಿದ್ದಾನೆ. ಪ್ರಜ್ವಲ್ ತನ್ನ ಸ್ನಾತಕ ಹಂತದ ಪದವಿಯನ್ನು ಜೈನ್ ವಿಶ್ವವಿದ್ಯಾಲಯದ  ಮ್ಯಾನೇಜ್ಮೆಂಟ್ ಅಧ್ಯಯನ ಕೇಂದ್ರ ಬೆಂಗಳೂರಿನಲ್ಲಿ ಪೂರ್ಣಗೊಳಿಸಿದರು. ಅವರು ಶ್ರೀ ಅರಬಿಂದೋ ಸ್ಮಾರಕ ಶಾಲೆಯಲ್ಲಿ ತಮ್ಮ ಶಾಲಾ ಶಿಕ್ಷಣವನ್ನು ಮಾಡಿದರು. ಪ್ರಜ್ವಲ್ ದೇವರಾಜ್ ಅವರು ಚಲನಚಿತ್ರೋದ್ಯಮಕ್ಕೆ ಪಾದರ್ಪಣೆ ಮಾಡುತ್ತಾರೆ.ಆದ್ದರಿಂದ ನಾವು ಇಲ್ಲಿ ಪ್ರಜ್ವಲ್ ದೇವರಾಜ್ ಮತ್ತು ಅವರ ಪತ್ನಿ ಅವರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.

ಸಿಕ್ಸರ್ ಮೂಲಕ ಸ್ಯಾಂಡಲ್ವುಡ್ ಗೆ ಪಾದಾರ್ಪಣೆ ಮಾಡಿದರು. ಇದಕ್ಕಾಗಿ ಅವರು ಸುವರ್ಣ ಚಲನಚಿತ್ರ ಪ್ರಶಸ್ತಿಗಳಲ್ಲಿ ಅತ್ಯುತ್ತಮ ಚೊಚ್ಚಲ ನಟ ಪ್ರಶಸ್ತಿಯನ್ನು ಗೆದ್ದರು. ಇದರ ನಂತರ ಗ್ಯಾಂಗ್ಸ್ಟರ್ ಚಿತ್ರ ಗೆಳೆಯ ಗಲ್ಲಾಪೆಟ್ಟಿಗೆಯಲ್ಲಿ ಯಶಸ್ವಿಯಾಯಿತು. ನಂತರ ಹಲವಾರು ಚಿತ್ರಗಳನ್ನು ಮಾಡಿ ಯಶಸ್ಸನ್ನು ಕಾಣುತ್ತಾರೆ. ಅವರ ಇತರ ಗಮನಾರ್ಹ ಚಿತ್ರಗಳೆಂದರೆ ಮೆರವಣಿಗೆ, ಗುಲಾಮ, ಮುರಳಿ ಮೀಟ್ಸ್ ಮೀರಾ, ಸೂಪರ್ ಶಾಸ್ತ್ರಿ ಮತ್ತು ಗಲಾಟೆ. ಅವರು ಕನ್ನಡ ಚಿತ್ರರಂಗದ ಪ್ರಮುಖ ನಟರಲ್ಲಿ ಒಬ್ಬರಾಗಿದ್ದಾರೆ. ರೂಪದರ್ಶಿ ಮತ್ತು ಶಾಸ್ತ್ರೀಯ ನರ್ತಕಿಯಾಗಿರುವ ಅವರ ಬಾಲ್ಯದ ಗೆಳತಿ ರಾಗಿಣಿ ಅವರನ್ನು 2015 ರಲ್ಲಿ ವಿವಾಹವಾದರು.

ರಾಗಿಣಿ ಬೆಂಗಳೂರಿನಲ್ಲಿ ಜನಿಸಿದ್ದಾರೆ. ನೃತ್ಯ ಎಂದರೆ ರಾಗಿಣಿಗೆ ಅಚ್ಚುಮೆಚ್ಚು. ನಾಲ್ಕು ವರ್ಷದ ಪುಟ್ಟ ಬಾಲಕಿಯಾಗಿರುವಾಗಲೇ ಭರತನಾಟ್ಯ ಕಲಿಯುವುದಕ್ಕೆ ರಾಗಿಣಿ ಆರಂಭಿಸಿದರು. ನಂತರ ಶೈಮಕ್ ದಾವರ್ ಡ್ಯಾನ್ಸ್ ಇನ್ಸ್ಟಿಟ್ಯೂಟ್ ಮತ್ತು ಇಮ್ರಾನ್ ಸರ್ದಾರಿಯಾ ಡ್ಯಾನ್ಸ್ ಕ್ಲಾಸ್ ನಲ್ಲಿ  ಮತ್ತು ಫ್ರೀ ಸ್ಟೈಲ್ ನೃತ್ಯ ಕಲಿತರು. ರಾಗಿಣಿ ಚಂದ್ರನ್ ಗೆ ಪ್ರಜ್ವಲ್ ದೇವರಾಜ್ ಈ ಸಮಯದಲ್ಲೇ ಪರಿಚಯವಾಗುತ್ತದೆ. ಖ್ಯಾತ ನೃತ್ಯಗಾರ್ತಿ ಶ್ರೀಮತಿ ನಿರುಪಮ ರಾಜೇಂದ್ರ ಮತ್ತು ಶ್ರೀ ರಾಜೇಂದ್ರ ರವರ ಅಭಿನವ ಡ್ಯಾನ್ಸ್ ಕಂಪನಿಯಲ್ಲಿ ರಾಗಿಣಿ ಚಂದ್ರನ್ ಕಥಕ್ ಡ್ಯಾನ್ಸರ್ ಆಗಿದ್ದಾರೆ. ವಿಶ್ವದಾದ್ಯಂತ ಕಥಕ್ ನೃತ್ಯ ಪ್ರದರ್ಶನ ನೀಡುತ್ತಿದ್ದಾರೆ.

ರಾಗಿಣಿ ಅವರು ಪ್ರಜ್ವಲ್ ದೇವರಾಜ್ ಜೊತೆ ಸೇರಿ ಯುರಿಧಮಿಕ್ಸ್ ಅನ್ನುವ ಡ್ಯಾನ್ಸ್ ಮತ್ತು ಫಿಟ್ನೆಸ್ ಸ್ಟುಡಿಯೋ ಕೂಡ ಶುರುಮಾಡಿದ್ದಾರೆ. ಪ್ರಜ್ವಲ್ ದೇವರಾಜ್ ಹಾಗೂ ರಾಗಿಣಿ ಇಬ್ಬರಿಗೂ ಕರೋನ ಪಾಸಿಟಿವ್ ಆಗಿ ಇಬ್ಬರು ಹೋಮ್ ಕ್ವಾರಂಟೈನ್ ಆಗಿದ್ದರು. ಕ್ವಾರಂಟೈನ್ ಮುಗಿದ ನಂತರ ಇವರಿಬ್ಬರು ವರ್ಕೌಟ್ ಮಾಡುತ್ತಿದ್ದಾರೆ. ಈ ವರ್ಕೌಟ್ ವಿಡಿಯೋವನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.
ಇವರಿಬ್ಬರ ಜೋಡಿ  ಆರೋಗ್ಯವಾಗಿ ಮತ್ತು ಅತ್ಯುತ್ತಮವಾಗಿ ಜೀವನವನ್ನು ನಡೆಸಿಕೊಂಡು ಹೋಗುತ್ತಿದೆ.

WhatsApp Group Join Now
Telegram Group Join Now

By

Leave a Reply

Your email address will not be published. Required fields are marked *

error: Content is protected !!
Footer code: