ರಸ್ತೆಯಲ್ಲಿ ಹಣ ಸಿಕ್ಕರೆ ಮನೆಗೆ ತರುವುದರಿಂದ ಏನಾಗುತ್ತೆ ಗೊತ್ತಾ, ತಿಳಿದುಕೊಳ್ಳಿ

0

ನಾವಿಂದು ನಿಮಗೆ ಒಂದು ಮಹತ್ವವಾದ ವಿಷಯದ ಕುರಿತು ಮಾಹಿತಿಯನ್ನು ತಿಳಿಸಿಕೊಡುತ್ತೇವೆ ಆ ವಿಷಯದ ಮಹತ್ವವನ್ನು ನಿಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ನಿಮ್ಮ ಜೀವನದಲ್ಲಿ ಚಮತ್ಕಾರಿ ಬದಲಾವಣೆಯನ್ನು ಕಂಡುಕೊಳ್ಳಬಹುದು. ನಾವಿಂದು ತಿಳಿಸುತ್ತಿರುವ ಮಹತ್ವದ ವಿಷಯ ನಾವು ರಸ್ತೆಯಲ್ಲಿ ಹೋಗುತ್ತಿರುವಾಗ ನಾಣ್ಯ ನೋಟು ಕಾಣಿಸಿಕೊಂಡರೆ ಅದನ್ನು ತೆಗೆದುಕೊಳ್ಳಬೇಕೇ ಬೇಡವೇ ಎಂಬುದು. ಮನುಷ್ಯನ ಜೀವನದಲ್ಲಿ ಮನುಷ್ಯನಿಗಿಂತ ದುಡ್ಡಿಗೆ ಹೆಚ್ಚು ಬೆಲೆ ಇದೆ ಎಂದರೆ ತಪ್ಪಾಗಲಿಕ್ಕಿಲ್ಲ ಏಕೆಂದರೆ ಪ್ರತಿಯೊಂದು ಕ್ಷೇತ್ರದಲ್ಲಿಯೂ ದುಡ್ಡಿನ ಮಹತ್ವ ಅಪಾರವಾಗಿದೆ. ಯಾರ ಬಳಿ ದುಡ್ಡು ಇರುತ್ತದೆ ಅವರನ್ನು ಎಲ್ಲರೂ ಅವರನ್ನು ಪ್ರೀತಿಯಿಂದ ಮಾತನಾಡಿಸುತ್ತಾರೆ. ಮತ್ತು ಹೆಚ್ಚು ಗೌರವವನ್ನು ನೀಡುತ್ತಾರೆ. ಯಾರ ಬಳಿ ದುಡ್ಡು ಇರುವುದಿಲ್ಲ ಅವರನ್ನು ಪ್ರೀತಿ ವಿಶ್ವಾಸದಿಂದ ಮಾತನಾಡಿಸುವುದಿಲ್ಲ ಬರೀ ಅವಮಾನಗಳನ್ನು ನೀಡುತ್ತಾರೆ ಇದು ಜಗತ್ತಿನ ಕಟು ಸತ್ಯ.

ಆಚಾರ್ಯ ಚಾಣಕ್ಯನ ಪ್ರಕಾರ ಇಂದಿನ ಯುಗವು ಅರ್ಥ ಆಧಾರಿತವಾಗಿದೆ ಅಂದರೆ ಹಣವನ್ನು ಅವಲಂಬಿಸಿದೆ ಇತ್ತೀಚಿನ ದಿನದಲ್ಲಿ ಸಂಪತ್ತಿಗೆ ಹೆಚ್ಚಿನ ಆದ್ಯತೆಯನ್ನು ನೀಡಲಾಗುತ್ತಿದೆ ಜೀವನವನ್ನು ಸರಳ ಮತ್ತು ಸುಲಭವಾಗಿಸಲು ಹಣ ಸಹಾಯಮಾಡುತ್ತದೆ ಅದಕ್ಕಾಗಿ ಪ್ರತಿಯೊಬ್ಬ ವ್ಯಕ್ತಿಯು ಶ್ರೀಮಂತ ಆಗುವುದಕ್ಕೆ ಬಯಸುತ್ತಾನೆ. ಚಾಣಕ್ಯನ ಪ್ರಕಾರ ಒಬ್ಬ ವ್ಯಕ್ತಿಗೆ ಕಷ್ಟದ ಸಮಯ ಬಂದಾಗ ಹಣ ನಿಜವಾದ ಸ್ನೇಹಿತನ ಪಾತ್ರವಹಿಸುತ್ತದೆ ಅದರಿಂದ ಹಣದ ಮಹತ್ವವನ್ನು ಅರ್ಥ ಮಾಡಿಕೊಳ್ಳಬೇಕು. ಹಣದ ಮಹತ್ವವನ್ನು ಅರಿತುಕೊಂದವನು ಮಾತ್ರ ಜೀವನದಲ್ಲಿ ಶ್ರೀಮಂತ ಆಗುವುದಕ್ಕೆ ಸಾಧ್ಯ ಎಂದು ಹೇಳುತ್ತಾರೆ ಚಾಣಕ್ಯ. ಅವರ ಪ್ರಕಾರ ಹಣವನ್ನು ಖರ್ಚು ಮಾಡುವಾಗ ಕಾಳಜಿವಹಿಸಬೇಕು ಹಣವನ್ನು ಖರ್ಚು ಮಾಡುವಾಗ ಆದಾಯಕ್ಕಿಂತ ಹೆಚ್ಚಿನ ಹಣವನ್ನು ಖರ್ಚು ಮಾಡುವುದಕ್ಕೆ ಹೋಗಬಾರದು ಇದರಿಂದ ಜೀವನದಲ್ಲಿ ತೊಂದರೆಯನ್ನು ಅನುಭವಿಸಬೇಕಾಗುತ್ತದೆ ಹಣ ವ್ಯಕ್ತಿಯ ಅಗತ್ಯಗಳನ್ನು ಪೂರೈಸುತ್ತದೆ.

ವ್ಯಕ್ತಿಯು ತನ್ನ ಅಗತ್ಯತೆಗಳನ್ನು ಸೀಮಿತಗೊಳಿಸಬೇಕು ಯಾವ ವ್ಯಕ್ತಿ ತನ್ನ ಅಗತ್ಯಕ್ಕೆ ತಕ್ಕಂತೆ ಹಣವನ್ನು ಖರ್ಚು ಮಾಡುತ್ತಾನೆ ಆ ವ್ಯಕ್ತಿ ಜೀವನದಲ್ಲಿ ಲಕ್ಷ್ಮಿ ದೇವಿಯ ಕೃಪೆಗೆ ಪಾತ್ರನಾಗುತ್ತಾನೆ ಅಗತ್ಯಕ್ಕಿಂತ ಹೆಚ್ಚಿನ ಹಣದ ಖರ್ಚು ಲಕ್ಷ್ಮೀದೇವಿಯ ಕೋಪಕ್ಕೆ ಕಾರಣವಾಗುತ್ತದೆ. ಶ್ರಮವಹಿಸಿ ಕೆಲಸ ಮಾಡುವವರಿಗೆ ಲಕ್ಷ್ಮೀದೇವಿ ಕರುಣೆಯನ್ನು ತೋರಿಸುತ್ತಾಳೆ ಹಣದ ಮಹತ್ವವನ್ನು ಅರ್ಥಮಾಡಿಕೊಳ್ಳದೆ ನಿಷ್ಪ್ರಯೋಜಕ ಕೆಲಸಗಳಿಗಾಗಿ ಹಣವನ್ನು ಖರ್ಚು ಮಾಡುವ ಜನರು ಒಂದಲ್ಲ ಒಂದು ದಿನ ಹಣದ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ ಸಂಪತ್ತನ್ನು ಗೌರವಿಸಿ ಮತ್ತು ಭವಿಷ್ಯಕ್ಕಾಗಿ ಅದನ್ನು ಸಂಗ್ರಹಿಸಿ. ಕೆಟ್ಟಕಾಲದಲ್ಲಿ ಹಣವು ನಿಜವಾದ ಸ್ನೇಹಿತನಾಗುತ್ತದೆ ಇಲ್ಲದಿದ್ದರೆ ಹಣವೇ ಭವಿಷ್ಯದಲ್ಲಿ ವಿಷವಾಗುತ್ತದೆ. ಮನುಷ್ಯ ತುಂಬಾ ಇಷ್ಟಪಡುವಂತಹ ವಸ್ತುಗಳಲ್ಲಿ ಹಣ ಮೊದಲನೆಯದು. ಎಲ್ಲರಿಗೂ ಅಚ್ಚುಮೆಚ್ಚಾದ ವಸ್ತು ರಸ್ತೆಯಲ್ಲಿ ಸಿಕ್ಕರೆ ಅದನ್ನು ತೆಗೆದುಕೊಳ್ಳಬಹುದೇ ಹಾಗೆ ತೆಗೆದುಕೊಂಡರೆ ಅದು ಒಳ್ಳೆಯದ್ದಾ ಅಥವಾ ಕೆಟ್ಟದ್ದಾ ಎನ್ನುವ ಅನುಮಾನ ಎಲ್ಲರಿಗೂ ಇದ್ದೇ ಇರುತ್ತದೆ.

ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ ರಸ್ತೆಯಲ್ಲಿ ನೋಟು ಬಿದ್ದಿದ್ದರೆ ಅದನ್ನು ತೆಗೆದುಕೊಳ್ಳುತ್ತೇವೆ ಮುಖದಲ್ಲಿ ನಗು ಮೂಡುತ್ತದೆ ಸಂತೋಷ ಹೆಚ್ಚುತ್ತದೆ. ಆದರೆ ಹೀಗೆ ಸಿಕ್ಕ ಹಣವನ್ನು ಏನು ಮಾಡಬೇಕು ಎಂಬ ಗೊಂದಲ ಇರುತ್ತದೆ ಕೆಲವರು ಸಿಕ್ಕ ಹಣವನ್ನು ತೆಗೆದುಕೊಂಡು ಜೇಬಿನಲ್ಲಿ ಇಟ್ಟುಕೊಂಡರೆ ಇನ್ನು ಕೆಲವರು ಅದನ್ನು ನಿರ್ಗತಿಕರಿಗೆ ದಾನ ಮಾಡುತ್ತಾರೆ ಇನ್ನು ಕೆಲವರು ಅದನ್ನು ದೇವಸ್ಥಾನದ ಹುಂಡಿಗೆ ಹಾಕುತ್ತಾರೆ. ದಾರಿಯಲ್ಲಿ ಹಣ ಸಿಕ್ಕರೆ ಅದು ಅದೃಷ್ಟದ ಸಂಕೇತ ದಾರಿಯಲ್ಲಿ ನಾಣ್ಯ ಸಿಕ್ಕರೆ ಅದು ಆಧ್ಯಾತ್ಮಿಕತೆಗೆ ಸಂಬಂಧಿಸಿದ ವಿಚಾರವಾಗಿದೆ. ವಾಸ್ತು ಶಾಸ್ತ್ರದ ಪ್ರಕಾರ ನಿಮಗೆ ರಸ್ತೆಯಲ್ಲಿ ಹಣ ಸಿಕ್ಕಿದೆ ಎಂದರೆ ನಿಮ್ಮ ಪೂರ್ವಜರ ಆಶೀರ್ವಾದ ನಿಮ್ಮೊಂದಿಗೆ ಇದೆ ಎಂದು ಅರ್ಥ. ಒಂದು ದಿವ್ಯಶಕ್ತಿ ನಿಮಗೆ ಏನೋ ಒಂದು ಸೂಚನೆಯನ್ನು ನೀಡುತ್ತಿದೆ ಎಂದು ಅರ್ಥ ನೀವು ಪೂರ್ಣ ಶ್ರಮದಿಂದ ಯಾವುದೇ ಕೆಲಸವನ್ನು ಮಾಡಿದರೆ ಅದರಿಂದ ನಿಮಗೆ ಯಶಸ್ಸು ಸಿಗುತ್ತದೆ ಮತ್ತು ಪ್ರಗತಿ ಹೊಂದುತ್ತಿರಿ ಎಂದು ಅರ್ಥ.

ನಮ್ಮಲ್ಲಿ ಸಂಪತ್ತನ್ನು ಲಕ್ಷ್ಮೀದೇವಿಗೆ ಹೋಲಿಸಲಾಗುತ್ತದೆ ಹಾಗಾಗಿ ರಸ್ತೆಯಲ್ಲಿ ಹಣ ಸಿಕ್ಕಿದರೆ ಲಕ್ಷ್ಮಿಯ ಸಂಪೂರ್ಣ ಕೃಪೆ ನಿಮಗೆ ಸಿಕ್ಕಿದೆ ಎಂದು ಜ್ಯೋತಿಷ್ಯ ಪ್ರಕಾರದಲ್ಲಿ ಹೇಳಲಾಗುತ್ತದೆ. ರಸ್ತೆಯಲ್ಲಿ ಹಣ ಸಿಕ್ಕಿದರೆ ಅದು ನಮ್ಮ ಹೊಸ ಜೀವನದ ಆರಂಭದ ಸಂಕೇತವಾಗಿರಬಹುದು ಹೊಸ ಯೋಚನೆ ಹೊಸ ವ್ಯವಹಾರ ಅಥವಾ ಹೊಸ ಉದ್ಯೋಗವನ್ನು ಹುಡುಕುತ್ತಿದ್ದರೆ ನಿಮ್ಮ ಕೆಲಸ ಕೈಗೂಡುವ ಸಂಕೇತವನ್ನು ಆ ಹಣ ನೀಡಬಹುದು. ನೀವು ಕೆಲಸದಿಂದ ಹಿಂದಿರುಗುವಾಗ ದಾರಿಯಲ್ಲಿ ನಿಮಗೆ ಹಣ ಸಿಕ್ಕಿದರೆ ನಿಮಗೆ ಹಣಕಾಸಿನ ಪ್ರಯೋಜನ ಸಿಗಲಿದೆ ಎಂದು ಅರ್ಥ. ರಸ್ತೆಯಲ್ಲಿ ಸಿಕ್ಕಿದ ಹಣವನ್ನು ದೇವಸ್ಥಾನದ ಹುಂಡಿಗೆ ಹಾಕುವುದು ಅಥವಾ ದಾನ ಮಾಡುವುದು ಸರಿಯಲ್ಲ ಬದಲಾಗಿ ಅದನ್ನು ನಿಮ್ಮ ಪರ್ಸನಲ್ಲಿ ಇಟ್ಟುಕೊಳ್ಳಬೇಕು. ಈ ರೀತಿಯಾಗಿ ಸಿಕ್ಕ ಹಣವನ್ನು ನಿಮ್ಮಲ್ಲಿಯೇ ಇರಿಸಿಕೊಳ್ಳಬೇಕು ಅದನ್ನು ಖರ್ಚು ಮಾಡಬಾರದು ಹಣವನ್ನ ವ್ಯವಹಾರದ ದೃಷ್ಟಿಯಿಂದ ಅದೃಷ್ಟದ ಸಂಕೇತ ಎಂದು ಹೇಳಲಾಗುತ್ತದೆ. ಜೊತೆಗೆ ಲಕ್ಷ್ಮಿ ಅನುಗ್ರಹ ಯಾರ ಮೇಲಿರುತ್ತದೆ ಅವರ ಬಳಿ ಹಣ ಸ್ಥಿರವಾಗಿ ಉಳಿಯುತ್ತದೆ.

ವ್ಯಕ್ತಿಗೆ ರಸ್ತೆಯಲ್ಲಿ ಹೋಗುವಾಗ ಒಂದು ರೂಪಾಯಿ ನಾಣ್ಯ ಸಿಕ್ಕರೆ ಹೆಚ್ಚಿನ ಹಣ ಅವನಿಗೆ ಪ್ರಾಪ್ತಿಯಾಗುತ್ತದೆಂದು ನಮ್ಮ ಗ್ರಂಥಗಳಲ್ಲಿ ಹೇಳಲಾಗುತ್ತದೆ. ಸಿಕ್ಕ ಹಣಕ್ಕೆ ಅನುಗುಣವಾಗಿ ಅದರ ಪರಿಣಾಮ ಕೂಡ ಬದಲಾಗುತ್ತದೆ ವಿಶೇಷವಾಗಿ ರಸ್ತೆಯಲ್ಲಿ ಸಿಕ್ಕ ಹಣವನ್ನು ಉಪಯೋಗಿಸಬಾರದು ಎಂದು ನಮ್ಮ ಹಿರಿಯರು ಹೇಳುತ್ತಾರೆ ಮನೆಯಲ್ಲಿ ಒಂದು ಗಾಜಿನ ಬಾಟಲಿಯಲ್ಲಿ ನೀರನ್ನು ತುಂಬಿಸಿ ಸಿಕ್ಕಿರುವ ನಾಣ್ಯವನ್ನು ಇಡಬೇಕು ಕಚೇರಿಗೆ ಅಥವಾ ನಿಮ್ಮ ಕೆಲಸಕ್ಕೆ ಹೋಗುವ ಸಮಯದಲ್ಲಿ ಹಣ ಸಿಕ್ಕರೆ ಅದನ್ನು ನಿಮ್ಮ ಕಚೇರಿಯ ಒಂದು ಸ್ಥಳದಲ್ಲಿ ಇಡಬೇಕು ಇದರಿಂದ ನೀವು ಮಾಡುವ ಕೆಲಸದಲ್ಲಿ ಯಶಸ್ಸನ್ನು ಪಡೆದುಕೊಳ್ಳುತ್ತಿರಿ. ಕಚೇರಿಯಲ್ಲಿ ಮೇಲಧಿಕಾರಿಗಳಿಂದ ಹೊಗಳಿಕೆಯನ್ನು ಪಡೆಯುತ್ತೀರಿ. ದಾರಿಯಲ್ಲಿ ಸಿಕ್ಕುವ ನಾಣ್ಯವನ್ನು ಖರ್ಚಿಗೆ ಬಳಕೆ ಮಾಡಿಕೊಳ್ಳಬಾರದು ಅದನ್ನು ತಂದು ಅರಿಶಿಣದ ನೀರಿನಲ್ಲಿ ತೊಳೆದು ದೇವರ ಮನೆಯಲ್ಲಿ ದೇವರ ಮುಂದೆ ಇಡಬೇಕು ದೇವರಿಗೆ ಪೂಜೆ ಸಲ್ಲಿಸುವ ಸಮಯದಲ್ಲಿ ಅರಿಶಿನ ಕುಂಕುಮ ಹೂವನ್ನ ಹಾಕಬೇಕು.

ನಿಮಗೆ ರಸ್ತೆಯಲ್ಲಿ ನೋಟು ಸಿಕ್ಕರೆ ಅರಿಶಿಣದ ನೀರನ್ನು ಸಿಂಪಡಿಸಿ ಅದನ್ನು ದೇವರ ಮನೆಯಲ್ಲಿಟ್ಟು ಪೂಜಿಸಬೇಕು. ಹೀಗೆ ಮಾಡುವುದರಿಂದ ನಿಮ್ಮ ಹಣಕಾಸಿನ ಸಮಸ್ಯೆ ದೂರವಾಗುತ್ತದೆ. ನಿಮಗೆ ದಾರಿಯಲ್ಲಿ ಮಂಗಳಮುಖಿಯರು ಸಿಕ್ಕು ದುಡ್ಡನ್ನು ಕೇಳಿದರೆ ಅವರಿಗೆ ದುಡ್ಡು ಕೊಟ್ಟು ಅವರಿಂದ ಒಂದು ರೂಪಾಯಿಯನ್ನು ಹಿಂಪಡೆಯಬೇಕು ಅವರು ಒಂದು ರೂಪಾಯಿಯನ್ನು ತಮ್ಮ ಬಳಗೆ ತಾಗಿಸಿ ಕೊಡುತ್ತಾರೆ ಆ ಒಂದು ರೂಪಾಯಿಯನ್ನು ಕೂಡ ನೀವು ಇನ್ನು ಖರ್ಚು ಮಾಡಬಾರದು. ಅದನ್ನು ತಂದು ಅರಿಶಿನದ ನೀರಿನಲ್ಲಿ ತೊಳೆದು ನಿಮ್ಮ ಪರ್ಸ್ ಅಥವಾ ಕಪಾಟಿನಲ್ಲಿ ಇಟ್ಟುಕೊಂಡರೆ ಒಳ್ಳೆಯದಾಗುತ್ತದೆ. ಈ ಮಾಹಿತಿಯನ್ನು ನೀವು ತಿಳಿದುಕೊಳ್ಳುವುದರ ಜೊತೆಗೆ ನಿಮ್ಮ ಪರಿಚಿತರು ಹಾಗೂ ಸ್ನೇಹಿತರೊಂದಿಗೆ ಹಂಚಿಕೊಳ್ಳಿರಿ.

Leave A Reply

Your email address will not be published.

error: Content is protected !!
Footer code: