ಪ್ರತಿದಿನ ಸಾವಿರಾರು ರೂಪಾಯಿ ಲಾಭ ಕೊಡುವ ಥ್ರೀಡಿ ವಾಲ್ಪೇಪರ್ ಬಿಜಿನೆಸ್ ಕುರಿತು ಮಾಹಿತಿ

0

ಪ್ರತಿಯೊಬ್ಬರಿಗೂ ಕೂಡ ತಮ್ಮದೇ ಆದಂತಹ ಒಂದು ಸ್ವಂತ ಉದ್ಯಮವನ್ನು ಪ್ರಾರಂಭಿಸಬೇಕು ಎಂಬ ಆಸೆ ಇರುತ್ತದೆ. ಆದರೆ ಅದಕ್ಕೆ ಸರಿಯಾದ ಬಂಡವಾಳದ ಕೊರತೆ ಇರುವುದರಿಂದ ತಮ್ಮ ಉದ್ಯಮವನ್ನು ಪ್ರಾರಂಭಿಸುವುದಕ್ಕೆ ಕೆಲವರು ಮುಂದಾಗುವುದಿಲ್ಲ. ಅಂತವರಿಗೆ ನಾವಿಂದು ಒಳ್ಳೆಯ ಬೇಡಿಕೆ ಇರುವಂತಹ ಒಂದು ಉದ್ಯಮದ ಕುರಿತಾದಂತಹ ಮಾಹಿತಿಯನ್ನು ತಿಳಿಸಿಕೊಡುತ್ತೇವೆ. ಈ ಉದ್ಯಮವನ್ನು ಮಾಡುವುದಕ್ಕೆ ನಿಮಗೆ ಅನುಭವದ ಅವಶ್ಯಕತೆ ಇಲ್ಲ ಯಂತ್ರಗಳ ಅವಶ್ಯಕತೆ ಇಲ್ಲ ಜತೆಗೆ ವಿದ್ಯುತ್ ನ ಅವಶ್ಯಕತೆ ಕೂಡ ಇಲ್ಲ. ನಾವು ನಿಮಗೆ ತಿಳಿಸುತ್ತಿರುವ ಉದ್ಯಮಕ್ಕೆ ಸಿಟಿಗಳಲ್ಲಿ ತುಂಬಾ ಬೇಡಿಕೆ ಇದೆ ಹಳ್ಳಿಗಳಲ್ಲಿ ಅದಕ್ಕೆ ಅಷ್ಟೇ ಬೇಡಿಕೆ ಇಲ್ಲ ನೀವು ಈ ಉತ್ಪನ್ನಗಳನ್ನು ಹೋಲ್ಸೇಲಾಗಿ ಖರೀದಿಸಿ ಒಳ್ಳೆಯ ರೀತಿಯಲ್ಲಿ ಮಾರ್ಕೆಟಿಂಗ್ ಮಾಡಿಕೊಂಡರೆ ತಿಂಗಳಿಗೆ ಲಕ್ಷ ರೂಪಾಯಿವರೆಗೂ ಸಂಪಾದನೆ ಮಾಡಬಹುದು.

ಪ್ರತಿಯೊಬ್ಬರಿಗೂ ತಮ್ಮ ತಮ್ಮ ಮನೆಗಳನ್ನು ಆಫೀಸ್ ಗಳನ್ನ ರೂಮುಗಳನ್ನು ಕಲರ್ ಫುಲ್ ಆಗಿ ಇಟ್ಟುಕೊಳ್ಳಬೇಕು ಎಂಬ ಆಸೆ ಇರುತ್ತದೆ ಅದಕ್ಕಾಗಿ ಕಲರ್ ಕಲರ್ ಪೇಂಟಿಂಗ್ ಮಾಡಿಸಿಕೊಳ್ಳುವುದು ಗೋಡೆಗಳಮೇಲೆ ಅನೇಕ ರೀತಿಯ ಒಳ್ಳೆಯ ಒಳ್ಳೆಯ ಚಿತ್ರಗಳನ್ನು ಬಿಡಿಸಿಕೊಳ್ಳುತ್ತಾರೆ. ಈ ರೀತಿಯಲ್ಲಿ ಮನೆ ನೋಡುವುದಕ್ಕೆ ಸುಂದರವಾಗಿ ಕಾಣಲಿ ಎಂದು ಬೇರೆ ಬೇರೆ ರೀತಿಯಲ್ಲಿ ಡಿಸೈನ್ ಗಳನ್ನು ಮಾಡುತ್ತಾರೆ. ಹೀಗೆ ಮಾಡುವುದರಿಂದ ಮನೆಗೂ ಕೂಡ ಒಂದು ಕಳೆ ಬರುತ್ತದೆ ನಮ್ಮ ಮನಸ್ಸಿಗೆ ಸಮಾಧಾನ ಆಗುತ್ತದೆ.

ಆ ಉದ್ದೇಶದಿಂದ ನಾವು ನಿಮಗೆ ತಿಳಿಸುತ್ತಿರುವ ಉತ್ಪನ್ನವನ್ನು ತೆಗೆದುಕೊಂಡು ನೀವು ಉದ್ಯಮವನ್ನು ಪ್ರಾರಂಭಿಸಿದರೆ ಉತ್ತಮವಾದಂತಹ ಲಾಭವನ್ನು ಗಳಿಸಬಹುದು. ಹಾಗಾದರೆ ಆ ಉದ್ಯಮ ಯಾವುದು ಎಂದರೆ ಥ್ರೀಡಿ ವಾಲ್ಪೇಪರ್ ಬಿಜಿನೆಸ್. ಇದು ಈಗ ಮಾರುಕಟ್ಟೆಯಲ್ಲಿ ಬೇಡಿಕೆಯಲ್ಲಿರುವ ಉದ್ಯಮವಾಗಿದೆ. ಥ್ರೀಡಿ ವಾಲ್ಪೇಪರ್ ಗಳಲ್ಲಿ ಗಮ್ ಇರುತ್ತದೆ ನೀವು ಒಂದು ಸಾರಿ ಅದನ್ನು ಗೋಡೆಗೆ ಅಂಟಿಸಿದರೆ ಅದು ಕಿತ್ತು ಬರುವುದಿಲ್ಲ ನೀವು ಅದನ್ನು ಜೋಡಿಸುವಾಗ ತುಂಬಾ ಸೂಕ್ಷ್ಮವಾಗಿ ಜೋಡಿಸಬೇಕು.

ಈ ಉದ್ಯಮ ಯಾರಿಗೆ ಸರಿಹೊಂದುತ್ತದೆ ಎಂದರೆ ಈಗಾಗಲೇ ಪೇಂಟಿಂಗ್ ಕೆಲಸ ಮಾಡುತ್ತಿರುವವರಿಗೆ ಕಾರ್ಪೆಂಟರ್ ಕೆಲಸ ಮಾಡುತ್ತಿರುವವರಿಗೆ ಸರಿಹೊಂದುತ್ತದೆ. ಅವರ ಬಳಿ ಈಗಾಗಲೇ ವ್ಯಾಪಾರಿಗಳು ಇರುತ್ತಾರೆ ಹಾಗಾಗಿ ಅವರಿಗೆ ಮಾರುಕಟ್ಟೆ ಮಾಡುವುದಕ್ಕೆ ಅಷ್ಟು ಕಷ್ಟ ಅನಿಸುವುದಿಲ್ಲ. ಉಳಿದವರು ಕೂಡ ಈ ಉದ್ಯಮವನ್ನು ಮಾಡಿಕೊಳ್ಳಬಹುದು ನೀವು ಈ ಉದ್ಯಮದಲ್ಲಿ ಯಶಸ್ಸನ್ನು ಕಾಣಿಸುತ್ತೀರಿ ಎನ್ನುವ ಭರವಸೆ ನಿಮಗೆ ಇದ್ದರೆ ಈ ಉದ್ಯಮವನ್ನು ಪ್ರಾರಂಭಿಸಬಹುದು.

ನಿಮ್ಮ ಮನೆಯ ಗೋಡೆಯ ಅಳತೆಗೆ ತಕ್ಕಂತೆ ಈ ಶೀಟ್ಗಳನ್ನು ಕತ್ತರಿಸಿಕೊಂಡು ಅಂಟಿಸ ಬೇಕಾಗುತ್ತದೆ ನೀವು ಈ ಉದ್ಯಮವನ್ನು ಪ್ರಾರಂಭಿಸಬೇಕು ಎಂದರೆ ಇಂಡಿಯಾ ಮಾರ್ಟ್ ವೆಬ್ಸೈಟ್ನಲ್ಲಿ ನಿಮಗೆ ಈ ಉದ್ಯಮದ ಹೋಲ್ಸೇಲ್ ಮಾರಾಟಗಾರರು ಬಗ್ಗೆ ಮಾಹಿತಿ ಸಿಗುತ್ತದೆ ಅಲ್ಲಿನ ಮಾಹಿತಿಯನ್ನು ತೆಗೆದುಕೊಂಡು ನೀವು ಅವರನ್ನು ಸಂಪರ್ಕಿಸಬಹುದು. ಸಾಮಾನ್ಯವಾಗಿ ನಿಮಗೆ ವಾಲ್ಪೇಪರ್ ಒಂದು ಸ್ಕ್ವೇರ್ ಫೀಟ್ ಗೆ ಇಪ್ಪತ್ತೈದು ರೂಪಾಯಿಯಿಂದ ಎರಡು ನೂರು ರೂಪಾಯಿ ಅವರಿಗೂ ಕೂಡ ಸಿಗುತ್ತದೆ. ಅದರಲ್ಲಿ ನಿಮಗೆ ಯಾವ ಗುಣಮಟ್ಟದ ವಾಲ್ಪೇಪರ್ ಬೇಕು ಅವುಗಳನ್ನು ಆಯ್ಕೆ ಮಾಡಿಕೊಳ್ಳಬಹುದು.

ಇನ್ನು ಈ ಉದ್ಯಮದಿಂದ ಯಾವ ರೀತಿಯಾದಂತಹ ಲಾಭ ದೊರೆಯುತ್ತದೆ ಎಂಬುದನ್ನು ನೋಡುವುದಾದರೆ ಒಂದು ರೂಮಿಗೆ ನೀವು ಇದನ್ನು ಅಂಟಿಸಬೇಕು ಎಂದರೆ ಅಲ್ಲಿ ಮೂರು ಗೋಡೆಗಳು ಇದ್ದೇ ಇರುತ್ತದೆ ಒಂದು ರೂಮಿನ ಗೋಡೆ ಒಂದು ಸ್ಕ್ವೇರ್ ಫೀಟ್ ವರೆಗೆ ಇರುತ್ತದೆ ಎಂದುಕೊಂಡರೆ ಆ ರೂಮಿಗೆ ಥ್ರೀಡಿ ವಾಲ್ಪೇಪರ್ ಗಳನ್ನು ಅಂಟಿಸಬೇಕು ಎಂದರೆ ಮುನ್ನೂರು ಸ್ಕ್ವೇರ್ ಫೀಟ್ ವಾಲ್ಪೇಪರ್ ಬೇಕಾಗುತ್ತದೆ. ಒಂದು ಸ್ಕ್ವೇರ್ ಫೀಟ್ ಗೆ ಇಪ್ಪತ್ತೈದು ರೂಪಾಯಿ ಅಂದರೆ ಮುನ್ನೂರು ಸ್ಕ್ವೇರ್ ಫೀಟ್ ಅಂದರೆ ಏಳರಿಂದ ಎಂಟುಸಾವಿರ ರೂಪಾಯಿವರೆಗೆ ಖರ್ಚು ಬರುತ್ತದೆ. ನೀವು ಪ್ರತಿ ಸ್ಕ್ವೇರ್ ಫೀಟ್ ಗೆ ಐದು ರೂಪಾಯಿ ಅಂತೆ ಫಿನಿಶಿಂಗ್ ಚಾರ್ಜ್ ತೆಗೆದುಕೊಂಡರೆ ಮುನ್ನೂರು ಸ್ಕ್ವೇರ್ ಫೀಟ್ ಗೆ ಸಾವಿರದ ಐದು ನೂರು ರೂಪಾಯಿ ನಿಮಗೆ ಸಿಗುತ್ತದೆ.

ಒಂದು ಮನೆಯಲ್ಲಿ ಎರಡು ಮೂರು ಕೋಣೆಗಳಿದ್ದರೆ ನಿಮಗೆ ಇನ್ನು ಹೆಚ್ಚಿನ ಲಾಭ ದೊರೆಯುತ್ತದೆ. ನೀವು ಈ ಉದ್ಯಮವನ್ನು ಉತ್ತಮ ರೀತಿಯಲ್ಲಿ ಮಾರ್ಕೆಟಿಂಗ್ ಮಾಡಿಕೊಂಡರೆ ತಿಂಗಳಿಗೆ ಒಂದು ಲಕ್ಷ ರೂಪಾಯಿವರೆಗೆ ನೀವು ಆದಾಯವನ್ನು ಗಳಿಸಬಹುದು. ನೀವು ಹೂಡಿಕೆ ಮಾಡಿದ್ದಕ್ಕಿಂತ ಹೆಚ್ಚಿನ ಹಣವನ್ನು ಉದ್ಯಮದಿಂದ ನೀವು ಗಳಿಸಬಹುದು. ಹಳ್ಳಿಗಳಲ್ಲಿ ಈ ಉದ್ಯಮಕ್ಕೆ ಅಷ್ಟು ಬೇಡಿಕೆ ಇಲ್ಲದ ಕಾರಣ ನೀವು ಸಿಟಿಗಳಲ್ಲಿ ಈ ಉದ್ಯಮವನ್ನು ಪ್ರಾರಂಭಿಸಬಹುದು. ಈ ರೀತಿಯಾಗಿ ಯಾವುದೇ ಖರ್ಚಿಲ್ಲದೆ ಕಡಿಮೆ ಬಂಡವಾಳದ ಸಹಾಯದಿಂದ ನೀವು ಉದ್ಯಮದಲ್ಲಿ ಯಶಸ್ಸನ್ನು ಸಾಧಿಸಬಹುದು ಈ ಮಾಹಿತಿಯನ್ನು ನೀವು ತಿಳಿದುಕೊಳ್ಳುವುದರೊಂದಿಗೆ ನಿಮ್ಮ ಸ್ನೇಹಿತರು ಹಾಗು ಪರಿಚಿತರಿಗೂ ತಿಳಿಸಿರಿ.

Leave A Reply

Your email address will not be published.

error: Content is protected !!