ಕನ್ನಡ ಸಿನಿಮಾರಂಗದಲ್ಲಿ ಡಿಂಪಲ್ ಕ್ವೀನ್ ಎಂದೇ ಖ್ಯಾತಿಯಾಗಿರುವ ರಚಿತಾ ರಾಮ್ ಹಾಗೂ ಅಜಯ್ ರಾವ್ ಅವರ ನಟನೆಯ ಲವ್ ಯು ರಚ್ಚು ಸಿನಿಮಾ ಈಗಾಗಲೇ ಬಿಡುಗಡೆಗೆ ಸಜ್ಜಾಗಿದೆ ಇದೇ ಡಿಸೆಂಬರ್ ಮೂವತ್ತೊಂದು ಎರಡು ಸಾವಿರದ ಇಪ್ಪತ್ತೊಂದರಂದು ಚಿತ್ರ ಬಿಡುಗಡೆಯಾಗಲಿದೆ. ಆ ಕುರಿತು ಮಾತನಾಡುವಾಗ ಡಿಂಪಲ್ ಕ್ವೀನ್ ರಚಿತಾ ರಾಮ್ ಅವರ ಕನ್ನಡ ಸಿನಿಮಾಗಳನ್ನು ಕನ್ನಡ ಭಾಷೆಯನ್ನು ಉಳಿಸಿ ಬೆಳೆಸುವುದರ ಕುರಿತು ಏನು ಹೇಳಿದ್ದಾರೆ ಎಂಬುದನ್ನು ನಾವಿಂದು ನಮಗೆ ತಿಳಿಸಿಕೊಡುತ್ತೇವೆ.

ರಚಿತಾ ರಾಮ್ ಅವರು ಅವರ ಸಿನಿಮಾ ಬಿಡುಗಡೆಯ ಬಗ್ಗೆ ಹೇಳುವ ಸಮಯದಲ್ಲಿ ಎಲ್ಲಾ ಕನ್ನಡ ಸಿನಿಮಾಗಳನ್ನು ಪ್ರೋತ್ಸಾಹಿಸಿ ದಯವಿಟ್ಟು ನಮ್ಮ ಭಾಷೆ ನಮ್ಮ ಸಿನಿಮಾ ನಮ್ಮ ಜನರನ್ನ ನಮ್ಮತನವನ್ನು ಎಂದು ಬಿಟ್ಟುಕೊಡಬಾರದು. ಬೇರೆ ರಾಜ್ಯದಲ್ಲಿ ಅವರವರ ಭಾಷೆಯ ಮೇಲೆ ಎಷ್ಟು ಅಭಿಮಾನ ಅವರವರ ಸಿನಿಮಾದ ಮೇಲೆ ಎಷ್ಟು ಅಭಿಮಾನ ಇರುತ್ತದೆ ನಮಗೂ ಕೂಡ ನಮ್ಮ ಭಾಷೆ ನಮ್ಮ ಸಿನಿಮಾದ ಮೇಲೆ ಅಷ್ಟೇ ಅಭಿಮಾನ ಇರಬೇಕು ನಾವು ಕನ್ನಡಿಗರು ಯಾವಾಗಲೂ ಹೇಳುತ್ತಿರುತ್ತೇವೆ ಕನ್ನಡಿಗರು ವಿಶಾಲ ಹೃದಯದವರು ಎಂದು ಎಲ್ಲಾ ಭಾಷೆಗಳನ್ನು ಒಪ್ಪಿಕೊಳ್ಳುತ್ತೇವೆ ಎಲ್ಲರನ್ನು ಪ್ರೋತ್ಸಾಹಿಸುತ್ತೇವೆ.

ಆ ಪ್ರೀತಿ ಹಾಗೆ ಇರಲಿ ಅದರ ಜೊತೆಗೆ ಕನ್ನಡ ಅಂತ ಬಂದರೆ ಅದು ನಮ್ಮ ಕನ್ನಡ ನಮ್ಮ ಹೆಮ್ಮೆಯ ಕನ್ನಡ ಹಾಗಾಗಿ ಯಾವುದೇ ಕಾರಣಕ್ಕೂ ನಾವು ನಮ್ಮ ನಾಡುನುಡಿಯನ್ನು ಬಿಟ್ಟುಕೊಡಬಾರದು. ದಯವಿಟ್ಟು ಕನ್ನಡ ಸಿನಿಮಾಗಳನ್ನು ಉಳಿಸಿ-ಬೆಳೆಸಿ ಹೊಸ ಸಿನಿಮಾಗಳನ್ನಾದರರೂ ಸರಿ ಈಗಾಗಲೇ ಬಿಡುಗಡೆಯಾಗಿರುವಂತಹ ಒಳ್ಳೆಯ ಕತೆಗಳನ್ನೊಳಗೊಂಡ ಸಿನಿಮಾಗಳಾಗಿರಬಹುದು ಅವುಗಳನ್ನು ನೋಡಿ ಪೋತ್ಸಾಹ ನೀಡಿ ಎಂದು ಜೊತೆಗೆ ಡಿಸೆಂಬರ್ ಮೂವತ್ತೊಂದರಂದು ಬಿಡುಗಡೆಯಾಗಲಿರುವ ತಮ್ಮ ಚಿತ್ರಕ್ಕೂ ಪ್ರೋತ್ಸಾಹ ನೀಡಿ ಎಂದು ಕೇಳಿಕೊಂಡಿದ್ದಾರೆ. ರಚಿತಾ ರಾಮ್ ಅವರು ಕನ್ನಡದ ಕುರಿತು ಇಷ್ಟು ಅಭಿಮಾನದಿಂದ ಮಾತನಾಡಿರುವುದು ಅವರ ಅಭಿಮಾನಿಗಳಿಗೆ ತುಂಬಾ ಸಂತೋಷವನ್ನುಂಟು ಮಾಡಿದೆ ಎಂದು ಹೇಳಬಹುದು.

By admin

Leave a Reply

Your email address will not be published. Required fields are marked *

error: Content is protected !!
Footer code: