ದಕ್ಷ ಐಪಿಎಸ್ ಅಧಿಕಾರಿ ರವಿ ಡಿ ಚೆನ್ನಣ್ಣನವರ್ ಅವರು ತಮ್ಮ ಮಾತು ನಡೆ ನುಡಿ ಕರ್ತವ್ಯಪಾಲನೆ ಪ್ರಾಮಾಣಿಕತೆಯಿಂದ ಯುವಕರಿಗೆ ರೋಲ್ ಮಾಡೆಲ್ ಆಗಿದ್ದಾರೆ. ಇದೀಗ ರವಿ ಚೆನ್ನಣ್ಣನವರ್ ಅವರ ವಿರುದ್ಧ ವಕೀಲರಾಗಿರುವ ಜಗದೀಶ್ ಅವರು ಮಾಡಿರುವ ಆರೋಪಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಹಾಗಾದರೆ ಜಗದೀಶ್ ಅವರು ರವಿ ಚೆನ್ನಣ್ಣನವರ್ ಅವರು ಗಳಿಸಿರುವ ಆಸ್ತಿಯ ಕುರಿತಾಗಿ ಏನು ಮಾಹಿತಿಯನ್ನು ನೀಡಿದ್ದಾರೆ ಎಂಬುದನ್ನು ನಾವು ನಿಮಗೆ ತಿಳಿಸಿ ಕೊಡುತ್ತೇವೆ.

ನೆಲಮಂಗಲದ ರೈಲ್ವೆ ಗೊಲ್ಲಹಳ್ಳಿ ಯಲ್ಲಿ 3 ಎಕರೆ ಮೂವತ್ತು ಗುಂಟೆ ತೋಟ ಅದರಲ್ಲಿ ಬೋರ್ವೆಲ್ ಅನ್ನ ಹಾಕಿದ್ದಾರೆ ಬೋರ್ವೆಲ್ ಹಾಕಿರುವ ವ್ಯಕ್ತಿ ದೊಡ್ಡಬಳ್ಳಾಪುರದ ಚಿಕ್ಕಮಧುರೆ ಗೆ ಹೋಗುವ ರಸ್ತೆಯಲ್ಲಿ ರವಿ ಚೆನ್ನಣ್ಣನವರ್ ಅವರಿಗೆ ಸಂಬಂಧಿಸಿದ ಐವತ್ತು ಎಕರೆ ಆಸ್ತಿ ಇರುವುದಾಗಿ ವಕೀಲ ಜಗದೀಶ್ ಅವರಿಗೆ ಮಾಹಿತಿಯನ್ನು ನೀಡಿದ್ದಾರೆ. ಜಮೀನಿಗೆ ಪೊಲೀಸ್ ಅವರೇ ಕಾಂಪೌಂಡನ್ನು ಮಾಡಿಸಿದ್ದಾರೆ ಪೊಲೀಸ್ ಅವರೇ ಮಣ್ಣಿನ ಹೊಡೆದು ಪೊಲೀಸ್ ಅವರೇ ಮಟ್ಟ ಮಾಡಿಸಿದ್ದಾರೆ ಅಲ್ಲಿ ಮೂರು ಬೋರ್ವೆಲ್ ಗಳಿವೇ ಎಂದು ತಿಳಿಸಿದ್ದಾರೆ. ಒಬ್ಬ ರೌಡಿಶೀಟರ್ ತನ್ನ ರೌಡಿಶೀಟರ್ ತೆಗೆಸುವಂತೆ ದಾಬಸ್ಪೇಟೆ ವಲಯದಲ್ಲಿ ಎರಡು ಎಕರೆ ಜಮೀನನ್ನು ನೀಡಿದ್ದಾನೆ ಅದನ್ನ ಸಾಹೇಬರು ತೆಗೆದುಕೊಂಡು ರಿಜಿಸ್ಟರ್ ಮಾಡಿಕೊಂಡಿದ್ದಾರೆ ಎಂದು ಹೇಳಿದ್ದಾರೆ.

ಅದೇ ರೀತಿ ದಾಬಸ್ಪೇಟೆಯ ಸೋಂಪುರ ತಾಲೂಕಿನಲ್ಲಿ ಮೇಡಂ ಹೆಸರಿನಲ್ಲಿ ಇಪ್ಪತ್ತೈದು ಎಕರೆ ಜಾಗ ಇದೆ ಈ ಕುರಿತಾದಂತಹ ದಾಖಲೆಗಳು ನನ್ನ ಬಳಿ ಇವೆ ನಾನು ಇದನ್ನು ಹೈಕೋರ್ಟ್ಗೆ ಹಾಕುತ್ತೇನೆ ಎಂದು ಜಗದೀಶ್ ಅವರು ಹೇಳಿದ್ದಾರೆ. ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನಲ್ಲಿ ಇವರ ಹೆಸರಿಗೆ ಸಂಬಂಧಪಟ್ಟ ಸಾಕಷ್ಟು ಬೇನಾಮಿ ಆಸ್ತಿ ಗಳು ಇವೆ ಅವುಗಳ ದಾಖಲೆಗಳು ನನ್ನ ಬಳಿ ಇದ್ದು ನಾನು ಅವರನ್ನು ಜೈಲಿಗೆ ಕಳುಹಿಸುತ್ತೇನೆ ಯಾವ ಸಿಬಿಐ ಗಳು ಮಾಡದ ಯಾವ ಸಿಐಡಿಗಳು ಮಾಡದ ಯಾವ ಕತರ್ನಾಕ್ ಪೊಲೀಸ್ ಇಲಾಖೆಗಳು ಮಾಡದ ಇನ್ವೆಸ್ಟಿಗೇಶನ್ ಅನ್ನು ನನ್ನ ತಂಡ ಮಾಡಿದೆ. ಆ ವ್ಯಕ್ತಿ ಭ್ರಷ್ಟ ಎಂದು ತೋರಿಸುವುದಕ್ಕೆ ನನ್ನ ತಂಡ ಸತತವಾಗಿ ಕೆಲಸವನ್ನು ಮಾಡಿದೆ ದಾಖಲೆಗಳನ್ನು ಹೊಂದಿಸಿದೆ. ದಾಬಸ್ ಪೇಟೆ ಯಲ್ಲಿ ಎರಡು ಎಕರೆ ನೀಡಿರುವ ರೌಡಿಶೀಟರ್ ಕುಡಿಯುತ್ತಾ ನಾನು ಅವರಿಗೆ ಎರಡು ಎಕರೆ ಜಮೀನನ್ನು ಕೊಟ್ಟಿರುವುದಾಗಿ ಹಾಗೂ ಅವರು ನನ್ನ ಕೇಸನ್ನ ಮುಚ್ಚಿ ಹಾಕಿರುವುದಾಗಿ ಹೇಳಿಕೊಂಡಿರುವ ವಿಡಿಯೋ ಇವರ ಬಳಿ ಇದೆ ಎಂದು ಹೇಳಿದ್ದಾರೆ.

ಯಾರು ಏನೇ ವಾದ ಮಾಡಿದರೂ ಭ್ರಷ್ಟ ಭ್ರಷ್ಟನೆ. ಮುಖವಾಡವನ್ನು ಹಾಕಿಕೊಂಡು ತಾನೊಬ್ಬ ಸಾಚಾ ತಾನೊಬ್ಬ ಒಳ್ಳೆಯ ಭಾಷಣಗಾರ ನಾನೊಬ್ಬ ನಿಯತ್ತಿನ ಮನುಷ್ಯ ತಾನು ನೊಂದ ಕುಟುಂಬದಿಂದ ಬಂದವನು ನನಗೆ ಧರ್ಮ ದೊಡ್ಡದು ಈ ಕೆಲಸ ಚಿಕ್ಕದು ಎಂದು ಹೇಳುತ್ತಾ ಭ್ರಷ್ಟಾಚಾರವನ್ನ ಮಾಡುತ್ತಿದ್ದ ಅಂತಹ ಒಬ್ಬ ಅಧಿಕಾರಿಯನ್ನು ನಾನಿಂದು ಹಿಡಿದಿದ್ದೇನೆ ಎಂದು ಜಗದೀಶ್ ಅವರು ಹೇಳಿದ್ದಾರೆ. ಇವರು ಮಾಡಿರುವ ಜಮೀನುಗಳಿಗೆ ಕಾಂಪೌಂಡನ್ನು ನಿರ್ಮಿಸುವುದಕ್ಕೆ ಹತ್ತಾರು ಕೋಟಿ ಬೇಕಾಗಿದೆ. ಎರಡು ಸಾವಿರದ ಒಂಬತ್ತರಲ್ಲಿ ಇವರ ಬಳಿ ಯಾವುದೇ ಆಸ್ತಿ ಇರಲಿಲ್ಲ ಆದರೆ ಎರಡು ಸಾವಿರದ ಇಪ್ಪತ್ತೆರಡರ ವೇಳೆಗೆ ಬಿಲಿಯನ್ನುಗಟ್ಟಲೆ ಆಸ್ತಿಯನ್ನು ಹೊಂದಿದ್ದಾರೆ. ನಮಗೆ ದೊರೆತಿರುವ ಅಂದಾಜಿನ ಪ್ರಕಾರ ಇವರ ಬಳಿ ಎರಡರಿಂದ ಮೂರು ಸಾವಿರ ಕೋಟಿ ಆಸ್ತಿ ಇದೆ ಎಂಬ ಅಂದಾಜು ದೊರೆತಿದೆ.

ಅವರು ಮುಖವಾಡವನ್ನು ಧರಿಸಿರುವ ಭ್ರಷ್ಟ ಅವರಿಗೆ ನೈತಿಕತೆ ಇದ್ದರೆ ಮಾಧ್ಯಮದ ಮುಂದೆ ಬರಲಿ ನಾನು ಕೂಡ ಮಾಧ್ಯಮದವರಿಗೆ ಅವರ ಆಸ್ತಿ ದಾಖಲೆಯನ್ನು ತೋರಿಸುತ್ತೇನೆ ನಿನ್ನ ಅಕ್ರಮಗಳ ಒಂದೊಂದು ದಾಖಲೆಯನ್ನು ತೆರೆ ಬಿಡುತ್ತೇನೆ ಅದರಿಂದ ನಮಗೆ ಎಷ್ಟೇ ನಷ್ಟವಾದರೂ ಪರವಾಗಿಲ್ಲ. ಇವತ್ತಿದ್ದು ನಾಳೆ ಸಾಯುವ ಈ ಜೀವನಕ್ಕೆ ಇಷ್ಟೆಲ್ಲಾ ಆಸ್ತಿ ಮಾಡುವ ಅವಶ್ಯಕತೆ ಇದೆಯೇ ಎಂಬುದು ನನ್ನ ಪ್ರಶ್ನೆ ಇಷ್ಟೆಲ್ಲಾ ಆಸ್ತಿಯನ್ನು ಮಾಡುತ್ತಿದ್ದಾಗ ಇಷ್ಟು ಅಕ್ರಮವನ್ನು ಮಾಡುತ್ತಿದ್ದಾಗ ಪೊಲೀಸ್ ಇಲಾಖೆ ಏನು ಮಾಡುತ್ತಿತ್ತು ಎಂದು ಜಗದೀಶ್ ಅವರು ಪ್ರಶ್ನಿಸಿದ್ದಾರೆ. ಇದಿಷ್ಟು ವಕೀಲ್ ಜಗದೀಶ್ ಅವರು ಡಿ ರವಿ ಚನ್ನಣ್ಣನವರ್ ಅವರ ಮೇಲೆ ಮಾಡಿರುವ ಆರೋಪಗಳಾಗಿವೆ ಈ ಆರೋಪಗಳು ಈಗ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿವೆ. Video Credit For Third Eye

By admin

Leave a Reply

Your email address will not be published. Required fields are marked *

error: Content is protected !!
Footer code: