ರವಿಚಂದ್ರನ್ ತಮ್ಮ ಕನಸಿನ ಮನೆ ದಿಡೀರ್ ಖಾಲಿ ಮಾಡಿದ್ಯಾಕೆ ಗೊತ್ತಾ,ಇಲ್ಲಿದೆ ನೋಡಿ

0

ಕ್ರೇಜಿ ಸ್ಟಾರ್ ರವಿ ಚಂದ್ರನ್ ಈ ಹೆಸರು ಯಾರು ತಾನೇ ಕೇಳಿಲ್ಲ ಹೇಳಿ, ಕನ್ನಡದಲ್ಲಿ ಅದೆಷ್ಟೋ ಹಿಟ್ ಸಿನಿಮಾಗಳನ್ನು ನೀಡಿದ ಅದ್ಭುತ ನಟ ನಿರ್ದೇಶಕ, ನಿರ್ಮಾಪಕ ನಮ್ಮ ರವಿ ಮಾಮ ಎಂದರೆ ತಪ್ಪಾಗುವುದಿಲ್ಲ. ಇನ್ನು ನಟ ರವಿಚಂದ್ರನ್ ಅವರ ಬಗ್ಗೆ ಇದೀಗ ಒಂದು ಸುದ್ದಿ ಸೋಷಿಯಲ್ ಮಿಡಿಯಾದಲ್ಲಿ ಸಕತ್ ಸದ್ದು ಮಾಡುತ್ತಿದೆ. ಹೌದು ಸದ್ಯ ನಟ ರವಿಚಂದ್ರನ್ ತಮ್ಮ ಮನೆ ಖಾಲಿ ಮಾಡಿದ್ದಾರೆ ಎನ್ನಲಾಗುತ್ತಿದೆ. ಹಾಗಾದರೆ ಎನಿದು ಸುದ್ದಿ ಎಂದು ಈ ಬಗ್ಗೆ ಸಂಪೂರ್ಣ ಮಾಹಿತಿ ನೀಡುತ್ತೆವೆ, ಈ ಪುಟವನ್ನು ಮುಂದಕ್ಕೆ ಓದಿ.

ಪ್ರೇಮ ಲೋಕದ ರಾಜ ಈ ಕ್ರೇಜಿ ಸ್ಟಾರ್ ವಿ. ರವಿಚಂದ್ರನ್. ಇವರ ಸಿನಿಮಾದ ಹಾಡುಗಳೆ ಇರಲಿ, ಏನೇ ಇದ್ದರೂ ಅದರಲ್ಲಿ ಏನಾದರೂ ಒಂದು ವಿಶೇಷತೆ ಇದ್ದೆ ಇರುತ್ತದೆ. ಅಂದಹಾಗೆ, ಪ್ರೇಮಲೋಕದ ದೊರೆ ಎಂದೇ ಕರೆಯುವ ಇವರಿಗೆ ಸಾಕಷ್ಟು ಅಭಿಮಾನಿ ಬಳಗವೇ ಇದೆ ಎಂದರೆ ತಪ್ಪಾಗಲಾರದು. ಇನ್ನು ಕನ್ನಡ ಚಿತ್ರರಂಗದಲ್ಲಿ ಸಿನಿಮಾಗಳಿಗೆ ಹೇಗೆ ಹಣವನ್ನು ಖರ್ಚು ಮಾಡುವುದು ಅಂತ ಹೇಳಿಕೊಟ್ಟವರೇ ಈ ಕ್ರೇಜಿಸ್ಟಾರ್ ರವಿಚಂದ್ರನ್. ಸಿನಿಮಾಗೆ ಹಾಕಿದ ಬಂಡವಾಳವನ್ನು ಹೇಗೆ ಮರುಗಳಿಸುವುದು ಎಂಬುದು ಆ ಕಾಲಕ್ಕೆ ಇವರು ಚೆನ್ನಾಗಿಯೇ ಅರಿತಿದ್ದರು.1987, ಡಾ.ರಾಜ್ ಕುಮಾರ್, ವಿಷ್ಣುವರ್ಧನ್, ಅಂಬರೀಶ್ ರಂತಹ ದಿಗ್ಗಜರು ಕನ್ನಡ ಸಿನಿಮಾ ರಂಗದಲ್ಲಿ ಸ್ಟಾರ್ ನಟರಾಗಿ ಮಿಂಚುತ್ತಿದ್ದ ಕಾಲವದು.

ಈ ನಡುವೆಯೂ ಕನ್ನಡ ಸಿನಿಮಾಗಳು ಅಷ್ಟು ಪರಿಚಯವಿಲ್ಲದಿದ್ದರು, ಲವ್ ಸ್ಟೋರಿಯ ಸಿನಿಮಾದ ಮೂಲಕ ಸಿನಿ ರಂಗದಲ್ಲಿ ಬದುಕು ಕಟ್ಟಿಕೊಳ್ಳುವುದು ಅಷ್ಟು ಸುಲಭದ ಮಾತಲ್ಲ. ಆ ವೇಳೆಯಲ್ಲೇ ಧೈರ್ಯ ಮಾಡಿ ಸಿನಿಮಾರಂಗದಲ್ಲಿ ಹೊಸ ಸಂಚಲನ ಬರೆಯಲು ಮುಂದಾದವರು ಕ್ರೇಜಿ ಸ್ಟಾರ್ ರವಿಚಂದ್ರನ್. ಕ್ರೇಜಿಸ್ಟಾರ್ ಕೇವಲ ನಟ ಮಾತ್ರವಲ್ಲ ಒಂದೊಳ್ಳೆ ನಿರ್ದೇಶಕ ಎಂಬುದನ್ನು ಸಾಭಿತು ಮಾಡಿದ್ದಾರೆ. ಇಡೀ ಚಿತ್ರರಂಗ ಹಿಂದೆ ತಿರುಗಿ ನೋಡುವಂತೆ ಮಾಡಿದವರು ಈ ಕ್ರೇಜಿ ಸ್ಟಾರ್ ರವಿಚಂದ್ರನ್. ಪ್ರೇಮಕಥೆಗಳನ್ನು ಹೀಗೂ ಕೂಡ ತೆರೆ ಮೇಲೆ ತರಬಹುದು ಎಂದು ತೋರಿಸಿ ಕೊಟ್ಟಿದ್ದಾರೆ.

ಇವರ ತಂದೆ ಖ್ಯಾತ ನಿರ್ಮಾಪಕ ವೀರಾಸ್ವಾಮಿಯವರು ಸ್ಥಾಪಿಸಿದ ಈಶ್ವರಿ ಸಂಸ್ಥೆಯ ಮೂಲಕ ಹಲವು ಚಿತ್ರಗಳನ್ನು ನಿರ್ಮಿಸಿದ್ದರು. ನಟ ರವಿಚಂದ್ರನ್ ಅವರ ಸಿನಿಮಾಗಳು ಎಂದರೆ ಈಗಲೂ ಸಹ ಅದೆಷ್ಟೋ ಜನರ ಫೇವರೇಟ್. ಯಾವ ದೃಶ್ಯ ಹೇಗೆ ಚಿತ್ರೀಕರಣ ಮಾಡಬೇಕು ಎನ್ನುವುದು ರವಿಚಂದ್ರನ್ ಅವರಿಗಿಂತ ಬೆರೆಯವರಿಗೆ ತಿಳಿದಿರುವುದಿಲ್ಲ. ಇನ್ನು ಈಗಲೂ ಕೂಡ ತಮ್ಮ ಅದ್ಭುತ ನಟನೆಯ ಮೂಲಕ ನಟ ರವಿಚಂದ್ರನ್ ಕನ್ನಡ ಸಿನಿಮಾರಂಗದಲ್ಲಿ ಸಕ್ರಿಯರಾಗಿದ್ದಾರೆ. ಇನ್ನು ಸದ್ಯ ರವಿಚಂದ್ರನ್ ಅವರು ತಮ್ಮ ಮನೆ ಖಾಲಿ ಮಾಡಿದ್ದು, ಇದೀಗ ಈ ಬಗ್ಗೆ ಸುದ್ದಿಗಳು ಹರಿದಾಡುತ್ತಿದೆ. ನಟ ರವಿಚಂದ್ರನ್ ಅವರು ರಾಜಾಜಿನಗರದಲ್ಲಿರುವ ತಮ್ಮ ನೆಚ್ಚಿನ ಮನೆ ಖಾಲಿ ಮಾಡಿದ್ದಾರೆ ಎನ್ನುವ ಸುದ್ದಿ ಸದ್ಯ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ.

ಇನ್ನು ತಮ್ಮ ನೆಚ್ಚಿನ ಮನೆಯನ್ನು ಬಿಟ್ಟು ಹೊಸಕೆರೆ ಹಳ್ಳಿಯಲ್ಲಿರುವ ಮತ್ತೊಂದು ಮನೆಗೆ ನಟ ರವಿಚಂದ್ರನ್ ತೆರೆಳಿದ್ದಾರೆ ಎನ್ನಲಾಗುತ್ತಿದೆ. ಮನೆ ಕಾಲಿ ಮಾಡಿರುವ ಹಿಂದಿನ ಕಾರಣ ಇನ್ನು ತಿಳಿದು ಬಂದಿಲ್ಲ, ಆದರೆ ಮೂಲಗಳ ಪ್ರಕಾರ ಮನೆ ರಿನೋವೇಷನ್ ಗಾಗಿ ಕಾಲಿ ಮಾಡಿದ್ದಾರೆ ಎನ್ನಲಾಗುತ್ತಿದೆ. ಇತ್ತೀಚೆಗಷ್ಟೇ ರವಿಚಂದ್ರನ್ ಪುತ್ರ ಮನೋರಂಜನ್ ಮದುವೆಯಾಗಿದ್ದಾರೆ, ಇನ್ನು ಅವರಿಗಾಗಿ ಮನೆ ರಿನೋವೇಷನ್ ಮಾಡಿಸುತ್ತಿದ್ದು, ಹಾಗೂ ಮನೆಯ ವಾಸ್ತು ಕೂಡ ಸರಿ ಇಲ್ಲವಂತೆ, ಕೆಲವರು ಮನೆಯನ್ನು ಕೆಲವು ದಿನಗಳ ಕಾಲಿ ಮಾಡಿ ಎಂದು ಸಲಹೆ ನೀಡಿದ್ದಾರೆ. ಈ ಕಾರಣದಿಂದ ರವಿಚಂದ್ರನ್ ತಮ್ಮ ಮನೆಯನ್ನು ಖಾಲಿ ಮಾಡಿ, ತಮ್ಮ ಹೊರಕೆರೆಯ ಹಳ್ಳಿ ಮನೆಗೆ ತೆರಳಿದ್ದಾರೆ ಎನ್ನಲಾಗುತ್ತಿದೆ.

Leave A Reply

Your email address will not be published.

error: Content is protected !!
Footer code: