ರತನ್ ಟಾಟಾ ಅವರೊಂದಿಗೆ ಅಷ್ಟೊಂದು ಕ್ಲೋಸ್ ಇರುವ ಈ ಹುಡುಗ ನಿಜಕ್ಕೂ ಯಾರು ಗೊತ್ತಾ? ರತನ್ ಟಾಟಾ ಅವರಿಗೆ ಫ್ರೆಂಡ್ ಆಗಿದ್ದು ಹೇಗೆ ನೋಡಿ ಇಂಟ್ರೆಸ್ಟಿಂಗ್ ಸ್ಟೋರಿ

0

ರತನ್ ಟಾಟಾ ಈ ಹೆಸರು ಭಾರತದ ಉದ್ಯಮ ಕ್ಷೇತ್ರದಲ್ಲಿ ಪ್ರತ್ಯೇಕ ಸ್ಥಾನ ಹಾಗೂ ತೂಕವನ್ನು ಹೊಂದಿದೆ. ಅವರನ್ನು ಭಾರತದ ಉದ್ದಿಮೆಗಾರರ ಪಿತಾಮಹ ಎಂದು ಕರೆಯುತ್ತಾರೆ. ತಮ್ಮ ಒಡೆತನದ ಸಂಸ್ಥೆ ಅದೆಷ್ಟೇ ನಷ್ಟದಲ್ಲಿದ್ದರೂ ಅದನ್ನು ಮೇಲೆ ತರುವಲ್ಲಿ ಅವರು ತೋರುವ ದಿಟ್ಟತನ ಇತರರಿಗೆ ಸ್ಪೂರ್ತಿದಾಯಕವಾದದ್ದು ರತನ್ ಟಾಟಾ ಗಳಿಕೆಯಲ್ಲಿ ನ ಶೇಕಡ ತೊಂಬತ್ತರಷ್ಟು ಸೇವಾಕಾರ್ಯಗಳಿಗೆ ಟ್ರಸ್ಟ್ ಗಳಿಗೆ ಚಾರಿಟಿಗಳಿಗೆ ವಿನಿಯೋಗಿಸುತ್ತಾರೆ.

ಈ ಕಾರಣದಿಂದ ಇವರನ್ನು ಉದ್ಯಮದಾರ ಎನ್ನುವುದಕ್ಕಿಂತ ಮಾನವತಾವಾದಿ ಎಂದು ಜನ ಗೌರವಿಸುತ್ತಾರೆ. ಇವರೆಗೂ ಭಾರತದ ಹಲವಾರು ಸಂಕಷ್ಟಕರ ಸಮಯದಲ್ಲಿ ರತನ್ ಟಾಟಾ ಅವರು ನೆರವಾಗಿದ್ದಾರೆ. ಅಷ್ಟೇ ಅಲ್ಲ ತನ್ನ ದೇಶಕ್ಕೆ ಹಾಗೂ ಜನರಿಗೆ ಏನೇ ಕಷ್ಟ ಬರಲಿ ಅವರಿಗಾಗಿ ತನ್ನ ಒಟ್ಟು ಆಸ್ತಿಯನ್ನು ತಾನು ನೀಡುವುದಕ್ಕೆ ಸಿದ್ಧ ಎಂದು ಅವರು ಹೇಳುತ್ತಾ ಬಂದಿದ್ದಾರೆ. ಇವರ ಆ ಹೇಳಿಕೆಯಿಂದ ಅವರು ಎಂತಹ ದೊಡ್ಡ ಉದಾರ ವ್ಯಕ್ತಿ ಎಂದು ನಾವು ಗ್ರಹಿಸಬಹುದು.

ನಾವಿಂದು ನಿಮಗೆ ರತನ್ ಟಾಟಾ ಅವರ ರೋಚಕ ವ್ಯಕ್ತಿತ್ವದ ಕುರಿತು ಪರಿಚಯ ಮಾಡಿಕೊಡುತ್ತವೆ. ಸಾಮಾನ್ಯವಾಗಿ ನೀವು ರತನ್ ಟಾಟಾ ಅವರೊಟ್ಟಿಗೆ ಒಬ್ಬ ಚಿಕ್ಕ ಹುಡುಗನ ಫೋಟೋವನ್ನು ನೋಡಿರಬಹುದು ಆ ಹುಡುಗ ಅವರ ಉದ್ಯಮದ ಪಾರ್ಟ್ನರ್ ಅಲ್ಲ ಅವರ ಸಂಬಂಧಿಯಲ್ಲ ಅವರ ಬೆಂಬಲಿಗನು ಅಲ್ಲ ರತನ್ ಅವರ ಪಕ್ಕದಲ್ಲಿ ನಿಂತಿರುವ ಆ ಹುಡುಗ ಅವರ ವೈಯಕ್ತಿಕ ಸ್ನೇಹಿತ. ಹಾಗೆ ಹೇಳಿದರೆ ಎಲ್ಲರಿಗೂ ಅಚ್ಚರಿಯಾಗುತ್ತದೆ ಅಷ್ಟು ಚಿಕ್ಕ ವಯಸ್ಸಿನ ಹುಡುಗ ಯಾಕೆ ಮತ್ತು ಹೇಗೆ ಇವರ ಸ್ನೇಹಿತನಾದ ಎಂಬುದನ್ನು ತಿಳಿದುಕೊಳ್ಳೋಣ.

ಆ ಹುಡುಗನ ಹೆಸರು ಶಾಂತನು ನಾಯ್ಡು ಆತ ಎರಡು ಸಾವಿರದ ಹದಿನಾಲ್ಕರಲ್ಲಿ ತನ್ನ ಇಂಜಿನಿಯರ್ ಪದವಿಯನ್ನು ಮುಗಿಸಿಕೊಂಡು ಟಾಟಾ ಸಂಸ್ಥೆಯಲ್ಲಿ ಉದ್ಯೋಗಕ್ಕೆ ಸೇರಿಕೊಳ್ಳುತ್ತಾನೆ. ಹೀಗಿರುವಾಗ ಒಂದು ಸಾರಿ ಆಫೀಸ್ ಕೆಲಸವನ್ನು ಮುಗಿಸಿಕೊಂಡು ಮನೆಗೆ ಬರುತ್ತಿದ್ದಾಗ ರಸ್ತೆಯಲ್ಲಿ ದುರ್ವ್ಯವಸ್ತೆಯಲ್ಲಿ ಒಂದು ನಾಯಿ ರಕ್ತಸಿಕ್ತ ಗೊಂಡು ಅತ್ಯಂತ ದಾರುಣ ಸ್ಥಿತಿಯಲ್ಲಿ ಬಿದ್ದು ಹೊರಳಾಡುತ್ತಿತ್ತು. ಅಂದರೆ ಅದಕ್ಕೆ ಹೊಡೆದು ಯಾರೋ ಏಟು ಮಾಡಿ ಓಡಿ ಹೋಗಿದ್ದರು.

ಶಾಂತನು ನಾಯ್ಡುಗೆ ಈ ನಾಯಿಯನ್ನು ಕಂಡು ಬಹಳ ಕನಿಕರ ಉಂಟಾಯಿತು ತಕ್ಷಣ ತನ್ನ ಸ್ನೇಹಿತರಿಗೆ ಕರೆಮಾಡಿ ಅಲ್ಲಿಗೆ ಕರೆಸಿಕೊಳ್ಳುತ್ತಾನೆ. ನಂತರ ನಾಯಿಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಾರೆ ದೇವರ ದಯೆಯಿಂದ ನಿತ್ರಾಣಗೊಂಡಿದ್ದ ಆ ನಾಯಿ ಆಸ್ಪತ್ರೆಯಲ್ಲಿ ಬದುಕುಳಿಯಿತು. ಈ ಘಟನೆಯ ನಂತರ ಗಂಭೀರವಾದ ಯೋಚನೆಯೊಂದು ಶಾಂತನು ತಲೆಯಲ್ಲಿ ತಲೆದೋರುತ್ತದೆ ಇದೇ ರೀತಿ ಅದೆಷ್ಟು ಬೀದಿನಾಯಿಗಳು ಪ್ರತಿದಿನ ರಸ್ತೆಯಲ್ಲಿ ನೋವನ್ನು ಅನುಭವಿಸುತ್ತವೆ ಅವಕ್ಕೆಲ್ಲ ಏನಾದರೂ ಒಂದು ಪರಿಹಾರವನ್ನು ಮಾಡಬೇಕು ಎಂದು. ಆ ಯೋಚನೆಯನ್ನು ಆತ ತನ್ನ ಸ್ನೇಹಿತರಿಗೆ ತಿಳಿಸುತ್ತಾನೆ ಇದೊಂದು ಯೋಚನೆ ಮುಂದೆ ಆತನ ಜೀವನವನ್ನು ಬದಲಾಯಿಸುತ್ತದೆ. ಪ್ರತಿನಿತ್ಯ ರಸ್ತೆಯಲ್ಲಿ ವಾಹನ ಚಾಲಕರ ಆತುರದಿಂದ ಬೀದಿನಾಯಿಗಳು ಅನೇಕ ತರದ ಅಪಘಾತಕ್ಕೆ ಒಳಗಾಗುತ್ತಿರುತ್ತವೆ. ಇದಕ್ಕಾಗಿ ಶಾಂತನು ತನ್ನ ಸ್ನೇಹಿತರೊಂದಿಗೆ ಸೇರಿಕೊಂಡು ಅತ್ಯಾಧುನಿಕ ಬೆಲ್ಟ್ ಒಂದನ್ನು ಕಂಡುಹಿಡಿಯುತ್ತಾರೆ.

ಅದನ್ನ ಬೀದಿನಾಯಿಗಳ ಕೊರಳಿಗೆ ಹಾಕಿದಾಗ ನಾಯಿಗಳು ರಾತ್ರಿ ಅಡ್ಡಾಡುವಾಗ ಅವುಗಳ ಕುತ್ತಿಗೆಯಲ್ಲಿರುವ ಬೆಲ್ಟ್ ವಾಹನ ಸವಾರರ ಹೆಡ್ ಲೈಟ್ ಗಳು ಪ್ರತಿಯಾಗಿ ರಿಫ್ಲೆಕ್ಟ್ ಆಗಿ ಆಗುವ ಅನಾಹುತಗಳಿಂದ ರಕ್ಷಣೆ ಪಡೆಯಬಹುದಾಗಿತ್ತು. ಇದು ನಿಜಕ್ಕೂ ಪ್ರಯೋಜನಕಾರಿ ಆಗಿತ್ತು ಶಾಂತನು ತನ್ನ ಗಳಿಕೆಯನ್ನೆಲ್ಲ ಈ ಬೆಲ್ಟ್ ಗಳನ್ನ ತಯಾರಿಸುವುದಕ್ಕೆ ಬಳಸುತ್ತಾನೆ. ನನ್ನ ಕಣ್ಣಿಗೆ ಬಿದ್ದ ಬೀದಿನಾಯಿಗಳಿಗೆ ಈ ಬೆಲ್ಟನ್ನು ತೊಡಿಸುತ್ತಾನೆ ಇದರಿಂದ ಶಾಂತನುವಿಗೆ ಯಾವುದೇ ಪ್ರತಿಫಲಾಪೇಕ್ಷೆ ಇರಲಿಲ್ಲ. ಬೀದಿನಾಯಿಗಳ ಜೀವ ಉಳಿದರೆ ಸಾಕು ಎಂದು ಈ ಕಾರ್ಯವನ್ನು ಪ್ರಾರಂಭಿಸಿದ್ದ. ಯಾವಾಗ ಇದು ಉಪಕಾರಿ ಎನಿಸಿತು ಆಗ ಎಲ್ಲಾ ಕಡೆಗಳಿಂದ ಆತನು ತಯಾರಿಸಿದ ಬೆಲ್ಟ್ ಗಳಿಗಾಗಿ ಬೇಡಿಕೆ ಬರುವುದಕ್ಕೆ ಪ್ರಾರಂಭವಾಯಿತು.

ಪ್ರತಿಯೊಬ್ಬರು ತನಗೆ ಅದನ್ನ ಕೊಡು ಎಂದು ಆತನನ್ನು ಕೇಳಲು ಆರಂಭಿಸಿದರು. ಆಗ ಆತ ತನ್ನ ಶ್ರಮ ಹಾಗೂ ಉದ್ದೇಶ ಸಾರ್ಥಕವಾಯಿತು ಎಂದು ಸಂತೋಷಪಟ್ಟ. ಈಗ ಅಷ್ಟು ಪ್ರಮಾಣದಲ್ಲಿ ಬೆಲ್ಟ್ ಗಳನ್ನ ತಯಾರಿಸಬೇಕು ಎಂದರೆ ಮಾಡುತ್ತಿರುವ ಕೆಲಸವನ್ನು ಬಿಟ್ಟು ಆ ಕೆಲಸದಲ್ಲಿ ತೊಡಗಿಸಿಕೊಳ್ಳಬೇಕು ಅದಕ್ಕೆ ಲಕ್ಷಾಂತರ ಫಂಡ್ ಬೇಕು ಎಂದು ತನ್ನ ತಂದೆಯೊಡನೆ ಚರ್ಚಿಸಿದಾಗ ಅವರ ತಂದೆ ಆ ಕುರಿತು ಟಾಟಾ ಅವರಿಗೆ ಒಂದು ಪತ್ರವನ್ನು ಬರೆಯುವಂತೆ ಸೂಚಿಸುತ್ತಾರೆ.

ಆದರೆ ಶಾಂತನೂ ಟಾಟಾ ಅವರು ತನ್ನ ಅಹವಾಲನ್ನು ಸ್ವೀಕರಿಸುವುದಿಲ್ಲ ಎಂದು ಸಂಶಯವನ್ನು ವ್ಯಕ್ತಪಡಿಸುತ್ತಾನೆ. ಆದರೆ ಆದದ್ದಾಗಲಿ ಎಂದು ತಂದೆ ಹೇಳಿದ ಕಾರಣದಿಂದ ಆ ವಿಷಯವನ್ನು ಉದ್ದೇಶಿಸಿ ಅವರಿಗೆ ಒಂದು ಪತ್ರವನ್ನು ಬರೆಯುತ್ತಾನೆ ಕೆಲ ದಿನಗಳ ನಂತರ ಟಾಟಾ ಅವರಿಂದಲೇ ಪತ್ರಕ್ಕೆ ಉತ್ತರ ಬರುತ್ತದೆ. ಆ ಉತ್ತರ ಶಾಂತನುವಿನ ಜೀವನವನ್ನ ಬದಲಾಯಿಸುತ್ತದೆ. ಪತ್ರದಲ್ಲಿ ಟಾಟಾ ಅವರು ಶಾಂತನುವಿಗೆ ಒಂದು ಸಾರಿ ತನ್ನ ಮುಂಬೈ ಕಚೇರಿಗೆ ಬರುವಂತೆ ಬರೆದಿದ್ದರು.

ಸರಿ ಎಂದು ಶಾಂತನು ಟಾಟಾ ಅವರನ್ನ ಕಾಣುವುದಕ್ಕೆ ಮುಂಬೈಗೆ ಹೋಗುತ್ತಾನೆ. ಜೊತೆಗೆ ಅವನ ಕಾರ್ಯವನ್ನು ಮೆಚ್ಚಿಕೊಳ್ಳುವುದರೊಂದಿಗೆ ಅವನಿಗೆ ಫಂಡ್ ನೀಡುವುದಕ್ಕೆ ಒಪ್ಪಿಗೆಯನ್ನು ಸೂಚಿಸಿದರು. ಇದರಿಂದ ಖುಷಿಯಾದ ಶಾಂತನು ಅವರ ಸಹಾಯದಿಂದ ಮೋಟೋಫಾರ್ಸ್ ಎಂಬ ಸಂಸ್ಥೆಯನ್ನು ಪ್ರಾರಂಭಿಸುತ್ತಾನೆ ಆ ಸಂಸ್ಥೆಯ ಒಡೆತನವನ್ನು ತನ್ನ ಸ್ನೇಹಿತರಿಗೆ ವಹಿಸಿ ಆತನ ವಿದೇಶಕ್ಕೆ ಹೋಗುತ್ತಾನೆ. ಅದಕ್ಕೆ ಕಾರಣ ಈ ಮೊದಲು ರತನ್ ಟಾಟಾ ಅವರು ಓದಿರುವ ಕಾರ್ನಲ್ ಯುನಿವರ್ಸಿಟಿಯಲ್ಲಿ ಶಾಂತನುವಿಗೆ ಸೀಟು ಸಿಕ್ಕಿತು ಹಾಗಾಗಿ ಅಲ್ಲಿ ಓದಲು ಅವನು ಮುಂದಾಗಿದ್ದ. ಈ ನಡುವೆ ಶಾಂತನು ಹಾಗೂ ಟಾಟಾರವರ ನಡುವಿನ ಸಂಬಂಧ ಆಪ್ತವಾಗಿತ್ತು ಇಬ್ಬರೂ ಉತ್ತಮ ಗೆಳೆಯರಾಗಿದ್ದರು.

ಶಾಂತನುವಿನ ಗ್ರಾಜುಯೇಷನ್ ಮುಗಿಯುತ್ತಿದ್ದಂತೆ ಆತನನ್ನು ನೋಡುವುದಕ್ಕೆ ರತನ್ ಟಾಟಾ ಅವರು ವಿದೇಶಕ್ಕೆ ಹೋಗಿದ್ದರು ಇದರಿಂದ ಶಾಂತನುವಿಗೆ ತುಂಬಾ ಖುಷಿಯಾಗಿತ್ತು. ನಂತರ ಟಾಟಾ ಅವರು ಶಾಂತನುವಿಗೆ ನೀನು ವಿದೇಶದಿಂದ ಭಾರತಕ್ಕೆ ಹಿಂತಿರುಗಿದ ನಂತರ ತನ್ನ ಅಸಿಸ್ಟೆಂಟ್ ಆಗಿ ಕೆಲಸ ಮಾಡುತ್ತೀಯಾ ಎಂದು ಕೇಳುತ್ತಾರೆ. ಆ ಮಾತುಗಳಿಂದ ಶಾಂತನುವಿನ ಕಣ್ಣುಗಳು ತೇವಗೊಂಡಿದ್ದವು. ಒಂದು ಕ್ಷಣ ಆತನಿಗೆ ತಾನು ಏನು ಹೇಳಬೇಕು ಏನು ಮಾಡಬೇಕು ಎಂದು ತೋಚಲಿಲ್ಲ.

ಶಾಂತನುವಿನಲ್ಲಿ ಟಾಟಾರವರ ಗಮನ ಸೆಳೆದದ್ದು ಆತನ ದಯಾಮಯ ಗುಣ ಇವತ್ತಿನ ಈ ಕ್ರೂರ ಹಾಗೂ ಸ್ವಾರ್ಥ ಲೋಕದಲ್ಲಿ ಇಂತಹ ಒಬ್ಬ ಪರರ ಸಂಕಷ್ಟ ಗಳಿಗಾಗಿ ಮರುಗುವ ಹೃದಯಗಳು ಅತ್ಯಂತ ವಿರಳ ಶಾಂತನುವಿನ ವಿಷಯಕ್ಕೆ ಬರುವುದಾದರೆ ಆತನು ಇನ್ನೂ ಚಿಕ್ಕವನು ಕೆಲಸ ಮಾಡಿಕೊಂಡು ಬೀದಿಬದಿಯ ಮೂಖ ಜೀವಿಗಳಿಗಾಗಿ ಆತನ ಮನ ಮಿಡಿದಿತ್ತು ಅವುಗಳಿಗಾಗಿ ಏನಾದರೂ ಮಾಡಬೇಕು ಎಂದು ಅವನ ಮನಸ್ಸಿನಲ್ಲಿತ್ತು. ಅವನ ಗುಣಕ್ಕೆ ರತನ್ ಟಾಟಾ ಅವರು ಮಾರುಹೋಗಿದ್ದರು.

ಆತನಲ್ಲಿ ತಮ್ಮನ ಕಂಡುಕೊಂಡಿದ್ದರು ಆಗಿನಿಂದ ಶಾಂತನೂ ರತನ್ ಟಾಟಾರವರ ಬಲಗೈ ಬಂಟನೇ ಆಗಿಹೋದ. ಮೀಟಿಂಗ್ ಗಳಿಗೆ ಅವರ ಜೊತೆ ಹೋಗುವುದು ಪ್ರಮುಖ ನೋಟ್ಸ್ ಗಳನ್ನು ಮಾಡಿಕೊಳ್ಳುವುದು ಆಯಾ ದಿನಗಳ ಕಾರ್ಯಗಳ ಬಗ್ಗೆ ಅವರ ಬಳಿ ಚರ್ಚೆ ಮಾಡುವುದು ಹೀಗೆ ಅವರ ನೆರಳಿನಂತೆ ಶಾಂತನು ಇದ್ದ. ಇಬ್ಬರ ನಡುವಿನ ವಯಸ್ಸಿನ ಅಂತರದ ಹೊರತಾಗಿ ಇಬ್ಬರ ಸ್ವಭಾವ ಮನೋಭಾವ ಚಿಂತನೆ ದೃಷ್ಟಿಕೋನ ಅಭಿರುಚಿ ಆಸಕ್ತಿ ಇವೆಲ್ಲವೂ ಒಂದೇ ರೀತಿ ಆಗಿದ್ದವು. ವ್ಯಕ್ತಿಯ ಒಳ್ಳೆಯತನವನ್ನು ಗ್ರಹಿಸಿ ಮೆಚ್ಚುವ ಗುಣ ಎಲ್ಲರಲ್ಲಿಯೂ ಇರುವುದಿಲ್ಲ ಟಾಟಾರವರ ಸರಳತೆ ಸಜ್ಜನಿಕೆ ಹಾಗೂ ಅವರ ನಿರ್ಗವಿ ಗುಣವೇ ಅವರನ್ನು ಇಂದು ಈ ಎತ್ತರಕ್ಕೆ ಏರಿಸಿದೆ.

ಶಾಂತನು ಟಾಟಾರವರ ಸ್ನೇಹ ವಿಶ್ವಾಸವನ್ನು ಗಳಿಸಿದ್ದಾನೆ ಇಂತಹ ಅದೃಷ್ಟ ಯಾರಿಗೂ ಅಷ್ಟು ಸುಲಭವಾಗಿ ಸಿಗುವುದಿಲ್ಲ. ದಯೆಯೇ ಧರ್ಮದ ಮೂಲ ಎಂದು ಹೇಳುತ್ತಾರೆ ದಯಾ ಗುಣವನ್ನು ಹೊಂದಿದ್ದರೆ ಆ ದೇವರು ಕೂಡ ನಮಗೆ ಶರಾಣಾಗಬಲ್ಲ ಎಂಬ ರೂಢಿ ಮಾತಿದೆ. ಇದಕ್ಕೆ ಪ್ರಸ್ತುತ ಶಾಂತನು ಹಾಗೂ ರತನ್ ಟಾಟಾ ಅವರ ಅಪರೂಪದ ಸಂಗಮವೇ ಉತ್ತಮ ಸಾಕ್ಷಿ ಎಂದು ಹೇಳಬಹುದು.

Leave A Reply

Your email address will not be published.

error: Content is protected !!
Footer code: