WhatsApp Group Join Now
Telegram Group Join Now

ರಕ್ತ ಸಂಬಂಧಗಳಲ್ಲಿ ಮದುವೆ ಆದರೆ ಏನಾಗುತ್ತದೆ? ಹಾಗೆ ಗಂಡ ಹೆಂಡತಿ ಇಬ್ಬರ ಬ್ಲಡ್ ಗ್ರೂಪ್ ಒಂದೇ ಆಗಿದ್ದರೆ ಏನಾಗುತ್ತದೆ ಎಂದು ಈ ಲೇಖನದಲ್ಲಿ ವಿವರಿಸಲಾಗಿದೆ. ಎಷ್ಟೋ ಸಲ ಸಂಬಂಧಗಳಲ್ಲಿ ಮಕ್ಕಳು ಚಿಕ್ಕವರು ಇರುವಾಗಲೇ ಹುಡುಗ ಹುಡುಗಿಗೆ ಮದುವೆ ನಿಶ್ಚಯ ಮಾಡಿರುತ್ತಾರೆ. ಮತ್ತೆ ಕೆಲವರು ಕೌಟ್ಬಿಕ ಕಾರಣಗಳಿಂದಾಗಿ ಮನೆಯಲ್ಲಿಯೇ ತಮ್ಮ ಸಂಬಂಧಗಳಲ್ಲಿ ಅಂದರೆ ಸೋದರತ್ತೆಯ ಮಕ್ಕಳ ಜೊತೆ, ಸೋದರ ಮಾವನ ಮಕ್ಕಳ ಜೊತೆ ಹೇಗೆ ತಮ್ಮ ರಕ್ತ ಸಮಬಂಧಿಗಳಲ್ಲಿಯೆ ಮದುವೆ ಆಗುವುದು ನಮ್ಮ ದೇಶದಲ್ಲಿ ಚಾಲ್ತಿಯಲ್ಲಿದೆ.

ಕೆಲವು ಸಲ ನಮ್ಮ ಆಸ್ತಿ ತಮ್ಮ ಬಳಿಯೇ ಇರಲಿ ಎನ್ನುವ ಭಾವನೆಯೇ ಅಥವಾ ಮಕ್ಕಳನ್ನು ಹೊರಗೆ ಎಲ್ಲಿ ದೂರದ ಊರಿಗೆ ಮದುವೆ ಮಾಡಿ ಕೊಡಲು ಇಷ್ಟ ಇಲ್ಲದೆಯೂ, ತಮ್ಮ ಮನೆಯಲ್ಲಿಯೇ ಇರಲಿ ಎನ್ನುವ ಭಾವನೆಯೇ, ಹೀಗೆ ಕೆಲವು ಕಾರಣಗಳಿಂದ ರಕ್ತ ಸಂಬಂಧಗಳಲ್ಲಿ ಮದುವೆ ಆಗುವುದು ಸಾಮಾನ್ಯ ಆಗಿತ್ತು. ಇಂತಹ ಸಂದರ್ಭದಲ್ಲಿ ಮದುವೆ ಆದಾಗ ತಿಳುವಳಿಕೆ ಬಂದಾಗ ಎಷ್ಟೋ ಜನ ಮುಂದೆ ಏನಾದರೂ ತೊಂದರೆ ಆಗಬಹುದೇನೋ ಎಂದು ಭಯ ಪಟ್ಟುಕೊಂಡು ಇರುತ್ತಾರೆ. ಇನ್ನೂ ಕೆಲವರ ತಪ್ಪು ತಿಳುವಳಿಕೆ ಅಂದರೆ, ಒಂದೇ ರಕ್ತದ ಗುಂಪು ಅಥವಾ ರಕ್ತ ಸಂಬಂಧಿಗಳು ಮದುವೆ ಆಗುವುದು ಎರಡು ಒಂದೇ ಎಂದು ಹಲವಾರು ಜನರು ತಪ್ಪಾಗಿ ತಿಳಿದಿರುತ್ತಾರೆ. ಗಂಡ ಹೆಂಡತಿ ಇಬ್ಬರದ್ದು ಒಂದೇ ರಕ್ತದ ಗುಂಪು ಇದ್ದರೆ ಯಾವುದೇ ತೊಂದರೆ ಇಲ್ಲ.

ರಕ್ತ ಸಂಬಂಧಿಗಳಲ್ಲಿ ಮದುವೆ ಆದರೆ, ಎಲ್ಲರಲೂ ತೊಂದರೆ ಉಂಟಾಗುತ್ತದೆ ಎಂದು ಹೇಳಲು ಆಗುವುದಿಲ್ಲ. ಕೆಲವು ಅನುವಂಶಿಕ ತೊಂದರೆಗಳು, ವರ್ಣ ತಂತುಗಳ ತೊಂದರೆಗಳು ಕುಟುಂಬದಲ್ಲಿ ಇದ್ದರೆ, ಆ ಕುಟುಂಬದಲ್ಲಿ ಸುಮಾರು ೩/೪ ತಲೆಮಾರಿನ ಹಿಂದೆ ಯಾವುದೋ ನ್ಯೂನತೆ ಇದ್ದರೆ ಅಂತಹ ಸಮಯದಲ್ಲಿ ಈ ರಕ್ತ ಸಂಬಂಧಿಗಳ ಮದುವೆಯಲ್ಲಿ ಸ್ವಲ್ಪ ಮಟ್ಟಿಗೆ ತೊಂದರೆ ಆಗುವ ಸಾಧ್ಯತೆ ಇರುತ್ತದೆ. ಜನ ಸಾಮಾನ್ಯರಲ್ಲಿ ರಕ್ತ ಸಂಬಂಧಿಗಳ ಜೊತೆ ಮದುವೆ ಆಗದಿದ್ದರೆ ಯಾವುದೇ ನ್ಯೂನತೆ ಇಲ್ಲದ ಮಾಗು ಹುಟ್ಟುವುದಿಲ್ಲ ಎಂದೇನೂ ಇಲ್ಲ. ಅವರಲ್ಲಿಯೂ ಕೂಡ ನ್ಯೂನತೆ ಇರುವ ಮಗು ಹುಟ್ಟಬಹುದು.

ಆದರೆ ರಕ್ತ ಸಂಬಂಧಿಗಳಲ್ಲಿ ಅದರಲ್ಲೂ ಅವರ ಕುಟುಂಬದಲ್ಲಿ ಏನಾದರೂ ತೊಂದರೆ ಇರುವಂತಹ ಮಕ್ಕಳು ಜನಿಸಿದ್ದರೆ ಮೊದಲೇ ಯೋಚನೆ ಮಾಡಬೇಕಾಗುತ್ತದೆ. ಇಷ್ಟೆಲ್ಲಾ ಇದ್ದಾಗ ಮದುವೆಗೆ ಇನ್ನೇನು ಕೆಲವು ದಿನಗಳು ಇದೆ ಎನ್ನುವಾಗ ಈ ರೀತಿ ಆತಂಕ ಪಟ್ಟುಕೊಳ್ಳುವುದು ಯೋಚನೆ ಮಾಡುವ ಸಮಯ ಬಂದಾಗ ಯೋಚಿಸುವ ಅವಶ್ಯಕತೆ ಇಲ್ಲ. ಇಂದಿನ ಆಧುನಿಕ ವೈದ್ಯಕೀಯ ರಂಗಗಳಿಂದಾಗಿ, ತಾಂತ್ರಿಕ ಬೆಳವಣಿಗೆಯಿಂದಾಗಿ ಮೊದಲೇ ಅದಕ್ಕೆ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲು ಸಾಧ್ಯಆಗುತ್ತದೆ.

ಈ ಮುನ್ನೆಚ್ಚರಿಕಾ ಕ್ರಮಗಳು ಅಲ್ಲದೇ ಗರ್ಭ ಧಾರಣೆಯ ಮೊದಲು ಹಾಗೂ ನಂತರ ಪರೀಕ್ಷೆಗಳನ್ನು ಮಾಡುವ ಸಾಧ್ಯತೆ ಇರುತ್ತದೆ. ಗಂಡು ಮತ್ತು ಹೆಣ್ಣಿನ ಜೀವಕೋಶದ ಪರೀಕ್ಷೆ ನಡೆಸಲಾಗುತ್ತದೆ. ರಕ್ತ ಪರೀಕ್ಷೆ, ಹಲವಾರು ಸ್ಕ್ಯಾನಿಂಗ್ ಮಾಡಿದ ನಂತರ ಮಕ್ಕಳಲ್ಲಿ ಏನಾದರೂ ನ್ಯೂನತೆ ಇದೆಯಾ ಎಂದು ನೋಡಿ, ನ್ಯೂನತೆ ಇದ್ದರೆ ಗರ್ಭ ಪಾತ .ಆಡಲು ಸಹ ಅವಕಾಶ ಇರುತ್ತದೆ. ಹಾಗಾಗಿ ಮೊದಲು ವೈದ್ಯರನ್ನು ಭೇಟಿ ಆಗಿ ಆಪ್ತ ಸಮಾಲೋಚನೆ ನಡೆಸಿದರೆ ಹೆಚ್ಚು ಆತಂಕ ಪಡುವ ಅಗತ್ಯ ಇರುವುದಿಲ್ಲ. ಆದಷ್ಟು ರಕ್ತ ಸಂಬಂಧಿಗಳಲ್ಲಿ ಮದುವೆ ಆಗುವುದನ್ನು ಸಾಧ್ಯ ಆಗುವಷ್ಟು ತಡೆಗಟ್ಟುವುದು ಒಳ್ಳೆಯದು.

WhatsApp Group Join Now
Telegram Group Join Now

By

Leave a Reply

Your email address will not be published. Required fields are marked *

error: Content is protected !!
Footer code: