WhatsApp Group Join Now
Telegram Group Join Now

ಪ್ರಧಾನ ಮಂತ್ರಿ ಮುದ್ರಾ ಯೋಜನೆ(PMMY) ಭಾರತ ಸರ್ಕಾರದ ಒಂದು ಪ್ರಮುಖ ಯೋಜನೆಯಾಗಿದೆ, “ಅನಿಧಿತರಿಗೆ ನಿಧಿ” ಒದಗಿಸುವುದರ ಮೂಲಕ ಉದ್ಯಮಗಳು, ಔಪಚಾರಿಕ ಆರ್ಥಿಕ ವ್ಯವಸ್ಥೆಗೆ ಉತ್ತಮ ಮುನ್ನುಡಿಯಾಗಿದೆ. ಇದು ಸಣ್ಣ ಮತ್ತು ಅತಿ ಸಣ್ಣ ಉದ್ಯಮದಾರರಿಗೆ ಕೃಷಿಯೇತರ ಆದಾಯದ ಚಟುವಟಿಕೆಗಳಿಗೆ ಪಿಎಸ್ಯು ಬ್ಯಾಂಕುಗಳು, ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳು, ಮತ್ತು ಸಹಕಾರಿ ಬ್ಯಾಂಕುಗಳು, ಖಾಸಗಿ ವಲಯದ ಬ್ಯಾಂಕ್, ವಿದೇಶಿ ಬ್ಯಾಂಕುಗಳು, ಕಿರು ಹಣಕಾಸು ಸಂಸ್ಥೆಗಳು (MFI), ಮತ್ತು ನಾನ್ ಬ್ಯಾಂಕಿಂಗ್ ಹಣಕಾಸು ಕಂಪೆನಿಗಳು (NBFC) ಇವುಗಳ ಮೂಲಕ 10 ಲಕ್ಷ ರೂಪಾಯಿವರೆಗೆ ಸಾಲ ಪಡೆಯಲು ಎಡೆ ಮಾಡಿಕೊಡುತ್ತದೆ. ಈ ಯೋಜನೆಯನ್ನು ಮಾನ್ಯ ಪ್ರಧಾನ ಮಂತ್ರಿಗಳು ಏಪ್ರಿಲ್ 8, 2015 ರಂದು ಬಿಡುಗಡೆ ಮಾಡಿದರು. ಇದು 5.75 ಕೋಟಿಗೂ hechhu ಸಣ್ಣ  ಮತ್ತು ಸಣ್ಣ ಪ್ರಮಾಣದ ಉದ್ಯಮಗಳ ಆರ್ಥಿಕ ಅಗತ್ಯಗಳನ್ನು ಪೂರೈಸಲು ಗಮನ ಹರಿಸುತ್ತದೆ, ಇದು 12 ಕೋಟಿ ಜನರಿಗೆ ಉದ್ಯೋಗಗಳನ್ನು ಒದಗಿಸುತ್ತದೆ..

ದೇಶದಲ್ಲಿ ನಿರುದ್ಯೋಗ ಸಮಸ್ಯೆ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರವು ಪ್ರತಿಯೊಬ್ಬರಿಗೂ ಕೂಡ ಸ್ವಯಂ ಉದ್ಯೋಗ ಕೈಗೊಳ್ಳಲು ಸರಳ ರೀತಿಯಲ್ಲಿ ಸಾಲ ಸೌಲಭ್ಯವನ್ನು ನೀಡುವ ಉದ್ದೇಶದಿಂದಾಗಿ ಈಗ ಮತ್ತೆ ಮುದ್ರಾ ಯೋಜನೆಯಡಿಯಲ್ಲಿ ಮತ್ತಷ್ಟು ಸರಳತೆಯನ್ನು ಜಾರಿಗೆತರಲಾಗಿತ್ತು. ಅರ್ಜಿ ಸಲ್ಲಿಸಿದ ಏಳು ಕೆಲಸದ ದಿನಗಳಲ್ಲಿ ಅರ್ಜಿದಾರರ ಖಾತೆಗೆ ಹಣ ವರ್ಗಾವಣೆ ಮಾಡುವುದರ ಜೊತೆಗೆ ಸಾಕಷ್ಟು ಬದಲಾವಣೆಗಳನ್ನು ಜಾರಿಗೆತರಲಾಗಿದೆ. ಇದರಲ್ಲಿ ಸಂಪೂರ್ಣ 3 ಲಕ್ಷದವರೆಗೆ ಸಬ್ಸಿಡಿ ನೀಡಲಾಗುತ್ತಿದ್ದು ಇದರ ಬಗ್ಗೆ ಪೂರ್ಣ ಮಾಹಿತಿ ಈ ಕೆಳಗಿನಂತಿದೆ.

ಸಾಲದ ನಿರೀಕ್ಷೆಯಲ್ಲಿದ್ದವರಿಗೆ ಕೇಂದ್ರ ಸರ್ಕಾರವು ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದು ಉದ್ಯೋಗವನ್ನು ಹೆಚ್ಚಿಸಲು ಜನರು ಆರ್ಥಿಕವಾಗಿ ಬೆಳೆಯಲು ವಿವಿಧ ಯೋಜನೆಗಳನ್ನು ಲಭ್ಯವಾಗುವಂತೆ ಮಾಡಲಾಗುತ್ತಿದೆ. ಕೇಂದ್ರ ಸರ್ಕಾರ ಜಾರಿಗೆ ತಂದ ಯೋಜನೆಗಳಲ್ಲಿ ಪ್ರಧಾನ ಮಂತ್ರಿ ಮುದ್ರಾ ಯೋಜನೆಯು ಒಂದು. ಈ ಯೋಜನೆಯಲ್ಲಿ ಬ್ಯಾಂಕುಗಳು ಕೂಡ ಸಾಲ ನೀಡಲಿವೆ, ಈ ಯೋಜನೆಯ ಮೂಲಕ ಅರ್ಹರಿಗೆ ಸುಲಭವಾಗಿ ಸಾಲ ಪಡೆಯುವ ಅವಕಾಶ ಇರುತ್ತದೆ. ಹೊಸ ಬಿಸಿನೆಸ್ ಸ್ಟಾರ್ಟರ್ಸ್ಗಳು ಅರ್ಜಿ ಸಲ್ಲಿಸಬಹುದು. ಪ್ರಧಾನ ಮಂತ್ರಿ ಮುದ್ರಾ ಯೋಜನೆಯಡಿಯಲ್ಲಿ ಗರಿಷ್ಠ 10 ಲಕ್ಷ ರೂಪಾಯಿವರೆಗೆ ಸಾಲವನ್ನು ನೀಡಲಾಗುವುದು, ಅರ್ಹರು ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳನ್ನು ತಿಳಿಯೋಣ.

ವಿಳಾಸ, ಗುರುತಿನ ಪುರಾವೆ, ಎರಡು ಫೋಟೋ ಮತ್ತು ವ್ಯವಹಾರದ ಪುರಾವೆ, ಬ್ಯಾಂಕ್ ಠೇವಣಿ ಪುಸ್ತಕ, ಯಂತ್ರೋಪಕರಣಗಳನ್ನು ಮತ್ತು ಇತರ ವಸ್ತುಗಳನ್ನು ಖರೀದಿಸುವ ಉದ್ಧರಣ, ಯಂತ್ರೋಪಕರಣಗಳು ಮತ್ತು ವಸ್ತು ಸರಬರಾಜುದಾರರ ಹೆಸರು ಮತ್ತು ವಿವರ, ಮಾಲೀಕತ್ವಕ್ಕೆ ಸಂಬಂಧಿಸಿದ ನೋಂದಣಿ ಪ್ರಮಾಣ ಪತ್ರಗಳು,ಇತ್ಯಾದಿ ಇದ್ರೆ ಸಾಲವನ್ನು ಪಡೆಯಬಹುದು. ಇದಕ್ಕಾಗಿ ಬ್ಯಾಂಕ್ ಶಾಖೆಗೆ ಹೋಗಬಹುದು ಅಥವಾ ಆನ್‌ಲೈನ್ ಮುಖಾಂತರ ಅರ್ಜಿಯನ್ನು ಸಲ್ಲಿಸಬಹುದು. ಮುದ್ರಾ ವೆಬ್ ಸೈಟ್ ಗೆ ಹೋಗಿ ಸಾಲಕ್ಕೆ ಅರ್ಜಿಯನ್ನು ಸಲ್ಲಿಸಬಹುದು, ಸಾಲದ ದರಗಳು ಬ್ಯಾಂಕುಗಳ ಆಧಾರದ ಮೇಲೆ ಬದಲಾಗುತ್ತದೆ, udyamamitra.in ಲಿಂಕ್ ಮೂಲಕ ನೀವು ಸಾಲಕ್ಕೆ ಅರ್ಜಿಯನ್ನು ನೀಡಬಹುದು. ಮೀನುಗಾರಿಕೆ, ಜೇನು ಸಾಕಾಣಿಕೆ, ಕೋಳಿ ಸಾಕಾಣಿಕೆ, ಜಾನುವಾರು ಸಾಗಾಣಿಕೆ, ಕೃಷಿ ಕೈಗಾರಿಕೆಗಳು, ಡೈರಿ, ಕೃಷಿ ವ್ಯವಹಾರ ಕೇಂದ್ರಗಳು, ಆಹಾರ ಮತ್ತು ಕೃಷಿ ಸಂಸ್ಕರಣೆಗೆ ಸಂಬಂಧಿಸಿದಂತೆ ಅರ್ಹವಾಗಿದೆ. ಸಾಲ ಪಡೆಯಲು ಬೇಕಾಗುವ ಅರ್ಹತೆ ಈ ಕೆಳಗಿನಂತಿದೆ..

ಯಾವುದೇ ಭಾರತೀಯ ನಾಗರಿಕ ಕೃಷಿಯೇತರ ಆದಾಯದ ಚಟುವಟಿಕೆಗೆ ಉದಾಹರಣೆಗೆ ಉತ್ಪಾದನೆ, ಪರಿಷ್ಕರಣೆ, ವ್ಯಾಪಾರ ಅಥವಾ ಸೇವಾವಲಯ ಇವುಗಳಲ್ಲಿ ತೊಡಗಲು ಇಚ್ಛಿಸಿ 10 ಲಕ್ಷ ರೂಪಾಯಿವರೆಗೆ ಸಾಲ ಪಡೆಯಲು ಬಯಸಿದ್ದಲ್ಲಿ ಬ್ಯಾಂಕ್, ಎಂ,ಎಫ್,ಐ ಅಥವಾ ಎನ್,ಬಿ,ಎಫ್,ಐ ಸಂಪರ್ಕಿಸಿ ಮೈಕ್ರೋ ಯೂನಿಟ್ ಡೆವಲಪ್ಮೆಂಟ್ ಮತ್ತು ರಿಫೈನೆನ್ಸ್ ಏಜೆನ್ಸಿ ಲಿಮಿಟೆಡ್ (ಮುದ್ರಾ). ಪ್ರಧಾನ ಮಂತ್ರಿ ಯೋಜನೆ (PMMY) ಅಡಿಯಲ್ಲಿ ಸಾಲ ಪಡೆಯಬಹುದು.

WhatsApp Group Join Now
Telegram Group Join Now

By

Leave a Reply

Your email address will not be published. Required fields are marked *

error: Content is protected !!
Footer code: