ಮಹಿಳೆಯರ ದೇಹದಲ್ಲಿ ಈ ಮಚ್ಚೆ ಇದ್ರೆ ಅವಳೇ ಭಾಗ್ಯಶಾಲಿ ಸ್ತ್ರೀ

0

ಹಿಂದೂ ಧರ್ಮದಲ್ಲಿ ಮಹಿಳೆಯರನ್ನು ಮನೆಯ ಭಾಗ್ಯಲಕ್ಷ್ಮೀ ಎಂದು ಕರೆಯುತ್ತಾರೆ ಮತ್ತು ಅವರನ್ನು ಪೂಜ್ಯನೀಯ ಭಾವದಿಂದ ನೋಡುತ್ತಾರೆ. ಸಾಮುದ್ರಿಕ ಶಾಸ್ತ್ರದಲ್ಲಿ ಸೌಭಾಗ್ಯಶಾಲಿ ಮಹಿಳೆಯರ ಬಗ್ಗೆ ಕೆಲವೊಂದು ವಿಶೇಷತೆಗಳನ್ನು ತಿಳಿಸಲಾಗಿದೆ. ಅವು ಹೀಗಿವೆ ಸ್ತ್ರೀಯರು ಹೊಸ ಜೀವದ ಮುಲಾಧಾರವಾಗಿರುತ್ತಾರೆ. ಮಹಿಳೆಗೆ ಗೌರವ ನೀಡುವ ಮನೆಯಲ್ಲಿ ಲಕ್ಷ್ಮೀದೇವಿ ನೆಲೆಸುತ್ತಾಳೆ ಇಂತಹ ಮಹಿಳೆ ತನ್ನ ಗಂಡ ಮತ್ತು ತನ್ನ ಮನೆಯವರಿಗೆ ಭಾಗ್ಯಶಾಲಿಯಾಗಿರುತ್ತಾಳೆ. ಶಾಸ್ತ್ರಗಳಲ್ಲಿ ತಿಳಿಸಿದ ಪ್ರಕಾರ ಮಹಿಳೆಯರ ಈ ಅಂಗಗಳಲ್ಲಿ ಮಚ್ಚೆ ಇದ್ದರೆ ಅವರು ಆ ಕುಟುಂಬಕ್ಕೆ ತುಂಬಾ ಸೌಭಾಗ್ಯಶಾಲಿಗಳು ಆಗಿರುತ್ತಾರೆ.

ದೇಹದ ಈ ಭಾಗಗಳಲ್ಲಿ ಮಚ್ಚೆ ಇದ್ದರೆ ನೀವು ತುಂಬಾ ಅದೃಷ್ಟಶಾಲಿಗಳು. ನಮ್ಮ ದೇಹದ ಹಲವಾರು ಭಾಗಗಳ ಮೇಲೆ ಮಚ್ಚೆ ಇರುವುದನ್ನು ನಾವು ನೋಡಿದ್ದೆವೆ ಆದರೆ ಸಾಕಷ್ಟು ಜನ ಇದರ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ ಕೆಲವರಿಗಂತು ಮಚ್ಚೆ ಇರಲಿ ಇಲ್ಲದಿರಲಿ ಅದರ ಉಪಯೋಗ ಏನಿದೆ ಎಂದು ನಿರ್ಲಕ್ಷ್ಯ ಮಾಡುತ್ತಾರೆ ಆದರೆ ನಮ್ಮ ದೇಹದ ಭಾಗಗಳ ಮಚ್ಚೆ ಒಂದೊಂದು ಸೂಚನೆಯನ್ನು ನೀಡುತ್ತದೆ ಎನ್ನುವುದು ತುಂಬಾನೇ ಕುತೂಹಲಕಾರಿ ಸಂಗತಿ ಹಾಗಾದರೆ ಬನ್ನಿ ನಾವು ಈಗ ಈ ಲೇಖನದಲ್ಲಿ ಈ ಭಾಗಗಳಲ್ಲಿ ಮಚ್ಚೆ ಇದ್ದರೆ ಅದರಿಂದ ಏನು ಲಾಭ ಎಂದು ತಿಳಿಯೋಣ.

ಮೊದಲನೆಯದು ನಮ್ಮ ಗದ್ದದ ಮೇಲೆ ಅಂದರೆ ತುಟಿಗಳ ಕೆಳಗೆ ಮಚ್ಚೆ ಇದ್ದರೆ ಅದು ಅದೃಷ್ಟಕರ ಅಂತ ಹೇಳುತ್ತಾರೆ ಮಹಿಳೆಯರಿಗೆ ಆಗಲಿ ಪುರುಷರಿಗೆ ಆಗಲಿ ಈ ಭಾಗದಲ್ಲಿ ಮಚ್ಚೆ ಇದ್ದರೆ ಬಹಳಷ್ಟು ಅದೃಷ್ಟ ಶಾಲಿಗಳು. ಗದ್ದದ ಮೇಲೆ ಮಚ್ಚೆ ಇದ್ದರೆ ಅವರು ಹಣಕಾಸಿನ ವಿಷಯದಲ್ಲಿ ತುಂಬಾ ಉನ್ನತ ಮಟ್ಟದಲ್ಲಿ ಇರುತ್ತಾರೆ ಅವರಿಗೆ ಯಾವುದೇ ರೀತಿಯಿಂದಲೂ ಸಹ ಹಣದ ಬಾದೆ ಬರುವುದಿಲ್ಲ.

ಸದಾಕಾಲ ಹಣವನ್ನು ಹೊಂದಿ ಸದಾಕಾಲ ಸುಖದ ಜೀವನವನ್ನು ನಡೆಸುತ್ತಾರೆ. ಹಾಗೇನೇ ಮಹಿಳೆಯರಿಗಂತು ಇದು ಬಹಳಷ್ಟು ಸುಂದರವಾದ ರೂಪವನ್ನು ನೀಡುತ್ತೆ ಅಂತಾನೇ ಹೇಳಬಹುದು ಗದ್ದದ ಮೇಲೆ ಮಚ್ಚೆ ಇರುವ ಹೆಂಗಸರು ಸದಾಕಾಲ ತಮ್ಮ ಸೌಂದರ್ಯದ ಬಗ್ಗೆ ಯೋಚನೆ ಮಾಡುತ್ತಿರುತ್ತಾರೆ ಯಾವ ರೀತಿ ಸುಂದರವಾಗಿ ಕಾಣಬೇಕು ಅಂತಾ ಯೋಚನೆ ಮಾಡುತ್ತಾರೆ ಹಾಗೂ ಈ ಮಚ್ಚೆ ಅವರಿಗೆ ಒಂದು ವಿಶೇಷ ಅಂತಾನೆ ಹೇಳಬಹುದು ಅದು ಅವರ ಆಕರ್ಷಣೆಯ ಒಂದು ಭಾಗ ಅಂದರು ಸಹ ಸುಳ್ಳಲ್ಲ. ಎರಡನೆಯದು ಮೂಗಿನ ಮೇಲೆ ಮಚ್ಚೆ ಹೌದು ನಿಮಗೇನಾದರೂ ಮೂಗಿನ ಮೇಲೆ ಮಚ್ಚೆ ಇದೆಯಾ ಹಾಗಾದರೆ ನೀವು ಅಂದುಕೊಂದಂತಹ ಕೆಲಸಗಳೆಲ್ಲವು ಯಾವುದೇ ಒಂದು ವಿಘ್ನವಿಲ್ಲದೆ ನಡೆಯುತ್ತದೆ.

ಇಂತಹ ವ್ಯಕ್ತಿಗಳು ಬಹಳಷ್ಟು ಹೃದಯವಂತರು ಅಂತಾನೆ ಹೇಳಬಹುದು ಯಾವುದೇ ಕಾರಣಕ್ಕೂ ಬೇರೆಯವರ ಮೇಲೆ ದ್ವೇಷ ಸಾಧಿಸುವುದಿಲ್ಲ ಇವರು ಬೆಳೆಯುತ್ತ ಬೆಳೆಯುತ್ತ ಯಶಸ್ಸನ್ನು ಕಾಣುತ್ತಾರೆ ಹಾಗೇನೇ 25 ವರ್ಷಗಳ ನಂತರ ಇವರು ಬಹಳಷ್ಟು ಎತ್ತರಕ್ಕೆ ಬೆಳೆಯುತ್ತಾರೆ. ಇನ್ನು ಹೆಂಗಸರಲ್ಲಿ ಮೂಗಿನ ಮೇಲೆ ಮಚ್ಚೆ ಇದ್ದರೆ ಅವರು ತಮ್ಮ ಜೀವನದ ಬಗ್ಗೆ ಬಹಳಷ್ಟು ಯೋಚನೆ ಮಾಡುತ್ತಾರೆ ಯಾವಾಗಲೂ ಸಹ ತಮ್ಮ ವೃತ್ತಿ ಜೀವನದಲ್ಲಿ ಬಹಳಷ್ಟು ಮುಂದೆ ಬರುತ್ತಾರೆ. ಮೂರನೆಯದು ಕೈಯಲ್ಲಿ ಅಂದರೆ ಅಂಗೈಯಲ್ಲಿ ಮಚ್ಚೆ ಅಂಗೈಯಲ್ಲಿ ಮಚ್ಚೆ ಇದ್ದರೆ ಬಹಳಷ್ಟು ಅದೃಷ್ಟ ಅವರ ಅಂಗೈ ಮುಚ್ಚಿದಷ್ಟು ಆ ಮಚ್ಚೆ ಮರೆಯಾದರೆ ಅವರಿಗೆ ಅದೃಷ್ಟ ಎನ್ನುವುದು ಸದಾಕಾಲ ಅವರ ಮುಷ್ಟಿಯಲ್ಲೇ ಇರುತ್ತದೆ ಎಂದು ಹೇಳುತ್ತಾರೆ

ಏಕೆಂದರೆ ಇವರು ಹಣವನ್ನು ಸಹ ಕೈಯಲ್ಲಿ ಹಿಡಿದಿಟ್ಟುಕೊಳ್ಳುತ್ತಾರೆ ಎಸ್ಟೇ ಹಣವಿದ್ದರು ಸಹ ಅವರಿಗೆ ಯಾವ ರೀತಿ ಖರ್ಚು ಮಾಡಬೇಕು ಎನ್ನುವ ಜ್ಞಾನ ಹೆಚ್ಚಾಗಿ ಇರುತ್ತದೆ ಆದ್ದರಿಂದ ಹಣವನ್ನು ವ್ಯರ್ಥ ಮಾಡದೆ ಸಾಕಷ್ಟು ಹಣವನ್ನು ಉಳಿತಾಯ ಮಾಡುತ್ತಾರೆ. ನಾಲ್ಕನೆಯದು ಬೆನ್ನುಮೇಲೆ ಮಚ್ಚೆ ಬೆನ್ನುಮೇಲೆ ಮಚ್ಚೆ ಇರುವ ವ್ಯಕ್ತಿಗಳು ಬಹಳಷ್ಟು ಸುತ್ತಾಡುವುದನ್ನು ಇಸ್ಟ ಪಡುತ್ತಾರೆ ಸದಾಕಾಲ ಅಲ್ಲಿಂದ ಇಲ್ಲಿಗೆ ಇಲ್ಲಿಂದ ಅಲ್ಲಿಗೆ ಪ್ರವಾಸ ಮಾಡಿ ಹೆಚ್ಚೆಚ್ಚು ಪ್ರಯೋಗಗಳನ್ನು ಮಾಡಿ ತಮ್ಮ ಪರಿಸರ ಜ್ಞಾನವನ್ನು ಹೆಚ್ಚಿಸಿಕೊಳ್ಳುತ್ತಾರೆ

ಹಾಗೇನೇ ಇವರು ತುಂಬಾ ಗಟ್ಟಿ ಮನಸ್ಸಿನವರು ಅಂತ ಹೇಳುತ್ತಾರೆ ಮತ್ತೆ ಇವರಿಗೆ ಅವರ ಕುಟುಂಬ ಎಂದರೆ ತುಂಬಾನೇ ಇಸ್ಟ ಅವರು ಯಾವುದೇ ಒಂದು ಕಾರಣಕ್ಕೂ ಸಹ ತಮ್ಮ ಕುಟುಂಬವನ್ನು ಬಿಟ್ಟು ಹೋಗುವುದಕ್ಕೆ ಬಯಸುವುದಿಲ್ಲ ಇಂತಹ ವ್ಯಕ್ತಿಯನ್ನು ಪಡೆದ ಕುಟುಂಬ ತುಂಬಾ ಅದೃಷ್ಟವಂತದ್ದು ಅಂತಾನೆ ಹೇಳಬಹುದು. ಈ ಭಾಗದಲ್ಲಿ ಮಚ್ಚೆ ಇರುವ ವ್ಯಕ್ತಿಗಳು ಆದಷ್ಟು ಒಳ್ಳೆಯವರು ಮತ್ತೆ ಹೃದಯವಂತರು ಆದಷ್ಟು ಬೇಗ ಶ್ರೀಮಂತರಾಗುತ್ತಾರೆ ನಿಮಗೂ ಸಹ ಈ ಭಾಗಗಳಲ್ಲಿ ಮಚ್ಚೆ ಇದ್ದರೆ ನೀವು ಸಹ ಅದೃಷ್ಟವಂತರು.

Leave A Reply

Your email address will not be published.

error: Content is protected !!