WhatsApp Group Join Now
Telegram Group Join Now

ವೈಜ್ಞಾನಿಕವಾಗಿ ಮತ್ತು ಭೌಗೋಳಿಕವಾಗಿ ಗಮನಿಸಿದಾಗ ಈ ಸ್ಥಳ ದಟ್ಟ ಕಾಡುಗಳಿಂದ ಆವೃತ್ತವಾಗಿದ್ದು ವಾಸಕ್ಕೆ ಯೋಗ್ಯವಾಗಿದೆ.ವಿಪರೀತವಾದಂತಹ ಕಾಡು ಪ್ರಾಣಿಗಳು ಇದ್ದ ಸ್ಥಳದಲ್ಲಿ ಬಿಡು ಬಿಡುತ್ತಿದ್ದರು ಎಂದು ನಂಬಲಾಗಿದೆ. ಮನುಷ್ಯರಿಲ್ಲದ ದಟ್ಟಕಾಡು ಅದಾಗಿದ್ದರಿಂದ ತಪಸ್ಸು ಮಾಡಲು ಯೋಗ್ಯವಾದ ಸ್ಥಳ ಅಂತ ಋಷಿಮುನಿಗಳು ಇದನ್ನು ಆಯ್ಕೆ ಮಾಡಿ ಕೊಂಡಿದ್ದರು. ಈ ಕಾರಣಕ್ಕೆ ದೇಶದ ಹಲವಾರು ಋಷಿ ಮುನಿಗಳು ಈ ಒಂದು ಸ್ಥಳಕ್ಕೆ ಬಂದು ವಾಸ ಮಾಡುತ್ತಿದ್ದರು. ಕಾಲ ಕೇಮೇಣ ಈ ಒಂದು ಪ್ರದೇಶದಲ್ಲಿ ಕೂಡ ಕಾಡು ನಾಶವಾಗುತ್ತಿದೆ ಆದರೂ ಈ ದಟ್ಟ ಕಾಡಿನ ವೈಭವ ಇನ್ನು ಇದೆ  ಅಂತ ಕೂಡ ಹೇಳಿದ್ದಾರೆ.

ಇದುವೇ ಚಾಮರಾಜನಗರ ಜಿಲ್ಲೆಯ ಪೂರ್ವ ದಿಕ್ಕಿನಲ್ಲಿ ಇರುಗವಂತಹ ಪ್ರಕೃತಿ ರಮಣೀಯ ವನಸಿರಿಯಲ್ಲಿರುವಂತಹ ಪವಿತ್ರ ಪುಣ್ಯ ಕ್ಷೇತ್ರ ಮಲೆ. ಮಹದೇಶ್ವರ ಬೆಟ್ಟ.ಮೈಸೂರಿನಿಂದ 185 ಕಿಲೋಮೀಟರ್ ಚಾಮರಾಜನಗರದಿಂದ 115 ಕಿಲೋಮೀಟರ್, ಕೊಳ್ಳೇಗಾಲದಿಂದ 78 ಕಿಲೋಮೀಟರ್ ಹಾಗೂ ರಾಜ್ಯದ ರಾಜಧಾನಿ ಬೆಂಗಳೂರಿನಿಂದ ಸುಮಾರು 208 ಕಿಲೋಮೀಟರ್ ದೂರದಲ್ಲಿರುವ ಮಲೆ ಮಹದೇಶ್ವರ ಬೆಟ್ಟ ಎಂ ಎಂ ಹಿಲ್ಸ್ ಎಂದೇ ಪ್ರಖ್ಯಾತಿ ಆಗಿದೆ. ಮಲೆ ಮಹದೇಶ್ವರ ಬೆಟ್ಟ ಸಮುದ್ರ ಮಟ್ಟಕ್ಕಿಂತ ಸುಮಾರು 3000 ಅಡಿ ಎತ್ತರದಲ್ಲಿದೆ. ಹಸಿರಿನ ವಿಶಾಲವಾದ ಪ್ರಧಾನ ಬೆಟ್ಟದ ಮೇಲೆ ಮಹದೇಶ್ವರ ಸ್ವಾಮಿ ತಪಾಸ್ಸನ್ನು ಆಚರಿಸಿ ಇಲ್ಲಿ ನೆಲೆ ಗೊಂಡಿದ್ದಾರೆ ಎಂಬ ಇತಿಹಾಸವಿದೆ.

15 ನೇ ಶತಮಾನದಲ್ಲಿ ಜೀವಿಸಿದರು ಮತ್ತು ಹಲವಾರು ಸಮಸ್ಯೆಗಳನ್ನು ತಮ್ಮ ಅಲೌಕಿಕ ಶಕ್ತಿಯಿಂದ ದೇವಾಂಶ ಸಂಭೂತರೆಂದು ಹೇಳಲಾಗುವ ಜಾನಪದರ ಆರಾಧ್ಯ ದೈವನಿಗೆ ಇಲ್ಲಿ ಒಂದು ದೇವಸ್ಥಾನವಿದೆ.ಮಹದೇಶ್ವರರ ಕಥಾಕದಂತೆ ಅಲ್ಲಿನ ಏಳು ಮಲೆಗಳನ್ನು ವಿವಿಧ ಜಾನಪದ ಹೆಸರುಗಳಿಂದ ಕರೆಯುಲಾಗುತ್ತದೆ.77 ಬೆಟ್ಟಗಳಲ್ಲಿ ಆನೆ ಮಲೆ, ಜೇನು ಮಲೆ, ಕಾನು ಮಲೆ, ಪಚ್ಚೆ ಮಲೆ, ಪವಳ ಮಲೆ, ವಿಭೂತಿ ಮಲೆ ಬೆಟ್ಟಗಳಿಂದ ಸುತ್ತುವರೆದು ಸಂಪೂರ್ಣ ಪ್ರದೇಶವನ್ನು ಮಹದೇಶ್ವರ ಬೆಟ್ಟ ಎಂದು ಕರೆಯಲಾಗುತ್ತದೆ.

ಒಮ್ಮೆ 6 ಜನ ಭಕ್ತರು ಮಲೆ ಮಹದೇಶ್ವರನ ದರುಶನ ಮಾಡಲು ಪಾದಯಾತ್ರೆ ಗೆ ಬೆಟ್ಟದ ದಾರಿಯಿಂದ ಬರುತ್ತಿರುವಾಗ ಭಾರಿ ಪವದವೊಂದು ನೆಡೆದಿತ್ತು ಅದೇನೆಂದರೆ 6 ಜನ ಭಕ್ತರಲ್ಲಿ ಒಬ್ಬರಿಗೆ ಹುಲಿ ಮೇಲೆ ಕೂತು ಬರುತ್ತಿರುವ ಮಹದೇಶ್ವನ ದೃಶ್ಯ ಕಾಣಿಸಿತ್ತಂತೆ ಇದನ್ನು ಕಂಡ ಭಕ್ತ ಅಲ್ಲೆಯೇ ಮೂರ್ಛೆ ಹೋಗಿದ್ದ ಎಂದು ಹೇಳಲಾಗುತ್ತೆ.ಇಂತಹ ಪವಾಡಗಳು ಇಲ್ಲಿ ಆಗಾಗ ನೆಡೆಯುತ್ತವೆ ಎಂದು ಹೇಳುತ್ತಾರೆ.

WhatsApp Group Join Now
Telegram Group Join Now

By

Leave a Reply

Your email address will not be published. Required fields are marked *

error: Content is protected !!
Footer code: