1940ರಲ್ಲಿ ಶಬರಿಮಲೆ ಹೇಗಿತ್ತು ಗೊತ್ತಾ? ಇಲ್ಲಿದೆ ನೀವು ನೋಡಿರದ ಅಪರೂಪದ ಚಿತ್ರಣ

0

ಶಬರಿಮಲೆ ಅಯ್ಯಪ್ಪ ದೇವಾಲಯದ ಬಗ್ಗೆ ಎಲ್ಲರೂ ಕೇಳಿರುತ್ತಾರೆ. ಪ್ರತಿವರ್ಷ ಹೆಚ್ಚಿನ ಸಂಖ್ಯೆಯ ಭಕ್ತರು ಶಬರಿಮಲೆಗೆ ಭೇಟಿ ನೀಡಿ ಅಯ್ಯಪ್ಪ ಸ್ವಾಮಿಯ ದರ್ಶನ ಪಡೆಯುತ್ತಾರೆ. ಶಬರಿಮಲೆ ಅಯ್ಯಪ್ಪ ಸ್ವಾಮಿಯ ಬಗ್ಗೆ ಹಾಗೂ ಶತಮಾನಗಳ ಹಿಂದೆ ಶಬರಿಮಲೆ ಹೇಗಿತ್ತು ಎನ್ನುವುದನ್ನು ಈ ಲೇಖನದ ಮೂಲಕ ತಿಳಿಯೋಣ.

ಕಲಿಯುಗದಲ್ಲಿ ಬೇಗನೆ ವರಪ್ರಸಾದ ಕರುಣಿಸುವ ದೇವರೆಂಬ ನಂಬಿಕೆಗೆ ಪಾತ್ರರಾಗಿರುವ ಶ್ರೀಅಯ್ಯಪ್ಪಸ್ವಾಮಿಯ ನೆಲೆ ಕೇರಳದ ಶಬರಿಮಲೆ. ಅತಿ ಹೆಚ್ಚು ಭಕ್ತರು ಸಂದರ್ಶಿಸುವ ಧಾರ್ಮಿಕ ತಾಣಗಳಲ್ಲಿ ಶಬರಿಮಲೆ ಒಂದು ಎಂದು ನಂಬಲಾಗಿದೆ. ತಿರುಪತಿಯ ನಂತರ ವಿಶ್ವದ ಎರಡನೆ ಅತಿದೊಡ್ಡ ವಾರ್ಷಿಕ ಯಾತ್ರಾ ಕೇಂದ್ರ ಶಬರಿಮಲೆ ಎಂದು ಹೇಳಲಾಗುತ್ತಿದೆ. ಕಳೆದ ನವೆಂಬರ್ ತಿಂಗಳಿನಿಂದ ಜನವರಿ ತಿಂಗಳವರೆಗೆ ಸುಮಾರು 6 ಕೋಟಿಗೂ ಹೆಚ್ಚು ಭಕ್ತರು ಅಯ್ಯಪ್ಪನ ಸನ್ನಿಧಿಗೆ ಬಂದಿದ್ದರು ಎಂದು ನಂಬಲಾಗಿದೆ. ಶಬರಿಮಲೆಯಲ್ಲಿ ಅಯ್ಯಪ್ಪ ಕಲಿಯುಗದ ವರದನಾಗಿ ನೆಲೆನಿಂತಿದ್ದಾನೆ.

ದಕ್ಷಿಣ ಭಾರತದ ಪ್ರಸಿದ್ಧ ಯಾತ್ರಾ ಕೇಂದ್ರಗಳಲ್ಲಿ ಒಂದಾಗಿರುವ ಶಬರಿಮಲೆ ಕೇರಳ ಹಾಗೂ ತಮಿಳುನಾಡಿನ ಗಡಿಯಲ್ಲಿರುವ ಪಶ್ಚಿಮಘಟ್ಟದಲ್ಲಿದೆ. ದಟ್ಟ ಅರಣ್ಯದಿಂದ ಕೂಡಿದ 18 ಪರ್ವತಗಳಿಂದ ಈ ಕ್ಷೇತ್ರ ಆವೃತವಾಗಿದೆ. ಅಯ್ಯಪ್ಪಸ್ವಾಮಿ ವಿಗ್ರಹವನ್ನು ಪರಶುರಾಮ ಸ್ಥಾಪಿಸಿದನು ಎಂಬ ನಂಬಿಕೆಯಿದೆ. ಭಸ್ಮಾಸುರನನ್ನು ವಧಿಸಲು ಮೋಹಿನಿ ರೂಪ ತಾಳಿ ಬಂದ ವಿಷ್ಣುವಿನ ರೂಪಕ್ಕೆ ಈಶ್ವರ ಮನಸೋಲುತ್ತಾನೆ ಅವರಿಬ್ಬರ ನಡುವೆ ಪ್ರೀತಿ ಬೆಳೆಯುತ್ತದೆ. ಅವರಿಬ್ಬರ ಸಾಂಗತ್ಯದಿಂದ ಅಯ್ಯಪ್ಪ ಜನಿಸುತ್ತಾನೆ. ಅಯ್ಯಪ್ಪನನ್ನು ಶಿವ ಹಾಗೂ ವಿಷ್ಣು ಕಾಡಿನಲ್ಲಿ ಬಿಟ್ಟು ಪುತ್ರ ಸಂತಾನಕ್ಕಾಗಿ ಪ್ರಾರ್ಥನೆ ಮಾಡುತ್ತಿದ್ದ ಬಂದಳಾ ರಾಜ ಭೇಟೆಗೆಂದು ಕಾಡಿಗೆ ಬಂದಾಗ ಅವನಿಗೆ ಸಿಗುವಂತೆ ಮಾಡುತ್ತಾರೆ.

ಮುಂದೆ ಅಯ್ಯಪ್ಪ ಬಂದಳಾ ರಾಜನ ಅರಮನೆಯಲ್ಲಿ ಬೆಳೆಯುತ್ತಾನೆ. ಅಯ್ಯಪ್ಪಸ್ವಾಮಿ ದೇವಾಲಯದಲ್ಲಿ ನವೆಂಬರ್ 15 ರಿಂದ ಜನವರಿ 14 ರವರೆಗೆ ಮಂಡಲ ಪೂಜೆ ಹಾಗೂ ಪ್ರಧಾನ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತದೆ. ಮಲೆಯಾಳಂ ವರ್ಷದ ಮೊದಲ 5 ದಿನಗಳು, ಕೇರಳದ ವಿಶೇಷ ಉತ್ಸವ, ನವೆಂಬರ್ ನಿಂದ ಜನವರಿ 14 ರವರೆಗೆ ಹೊರತಾಗಿ ಉಳಿದ ಸಮಯದಲ್ಲಿ ಈ ದೇವಾಲಯ ಮುಚ್ಚಿರುತ್ತದೆ. ಇರುಮುಡಿ ಕಟ್ಟಿ ಅಯ್ಯಪ್ಪ ಯಾತ್ರಿಗಳು ತರುವ ತುಪ್ಪವನ್ನು ಅಯ್ಯಪ್ಪ ವಿಗ್ರಹದ ಮೇಲೆ ಅಭಿಷೇಕ ಮಾಡಲಾಗುತ್ತದೆ.

ಅಯ್ಯಪ್ಪ ಯಾತ್ರಿಗಳು ಇಲ್ಲಿ ಹಲವು ದಿವ್ಯ ಅನುಭವ ಪಡೆದು ಪುನೀತರಾಗುತ್ತಾರೆ. ಮಾಲೆ ಧರಿಸಿ ಪಾದರಕ್ಷೆ ಧರಿಸದೆ ದಿನಕ್ಕೆ ಒಂದು ಹೊತ್ತು ಅನ್ನವನ್ನು ಮಾತ್ರ ಸೇವಿಸಿ ಕೆಂಪು ಬಣ್ಣದ ಅಥವಾ ಕಪ್ಪು ಬಣ್ಣದ ವಸ್ತ್ರ ಧರಿಸಿ 41 ದಿನಗಳ ವ್ರತಾಚರಣೆ ಕೈಗೊಂಡು ಅಯ್ಯಪ್ಪನ ಸನ್ನಿಧಿಗೆ ತೆರಳಿ ಇರುಮುಡಿ ಸಮರ್ಪಿಸಿ ಬರುವ ಭಕ್ತರಿಗೆ ಒಂದು ರೀತಿಯ ಅಲೌಕಿಕ ದಿವ್ಯ ಅನುಭವ ಸಿಗುತ್ತದೆ. ಚಿತ್ರರಂಗದ ರಜನಿಕಾಂತ್, ಅಮಿತಾಬ ಬಚ್ಚನ್, ರಾಜಕುಮಾರ್, ದರ್ಶನ್ ಇತ್ತೀಚೆಗೆ ಶಿವಣ್ಣ ಹಾಗೂ ದಿವಂಗತ ಪುನೀತ್ ರಾಜಕುಮಾರ್ ಅವರು ಅಯ್ಯಪ್ಪ ಸ್ವಾಮಿಯ ಮಾಲೆ ಹಾಕಿದ್ದರು.

ಶಬರಿಮಲೆಗೆ ಪಂಪಾನದಿಯವರೆಗೆ ವಾಹನಗಳಲ್ಲಿ ಬರುವ ಭಕ್ತರು ಅಲ್ಲಿಂದ 4 ಕಿಮೀ ಕಡಿದಾದ ಗುಡ್ಡದ ದಾರಿಯಲ್ಲಿ ನಡೆಯಬೇಕಾಗುತ್ತದೆ. ದೇವಸ್ಥಾನದ ಆಡಳಿತವನ್ನು ತಿರುವಾಂಕೂರು ಆಡಳಿತ ಮಂಡಳಿಯು ನೋಡಿಕೊಳ್ಳುತ್ತದೆ. ಇತ್ತೀಚಿನ ದಿನಗಳಲ್ಲಿ ಶಬರಿಮಲೆ ದೇವಸ್ಥಾನಕ್ಕೆ ಬರುವುದು ಅಷ್ಟೇನು ಕಷ್ಟವಲ್ಲ ಆದರೆ ಶತಮಾನಗಳ ಹಿಂದೆ ದೇವಸ್ಥಾನಕ್ಕೆ ಭೇಟಿ ಕೊಡುವುದು ಕಷ್ಟವಾಗಿತ್ತು. ಕಠಿಣ ಪರಿಶ್ರಮ ವಹಿಸಿ ದೇವಸ್ಥಾನಕ್ಕೆ ಹೋಗಬೇಕಾಗಿತ್ತು.

ಶಬರಿಮಲೆ ಘೋರವಾದ ಅರಣ್ಯದ ನಡುವೆ ಅಡಗಿತ್ತು. ಅಲ್ಲಿ ಹುಲಿಗಳು ವಾಸಿಸುತ್ತಿದ್ದು ಪ್ರಾಣಿಗಳ ಭಯವಿತ್ತು. ಕೇವಲ ಶ್ರೀಮಂತ ಭಕ್ತರು ಮಾತ್ರ ಆನೆಗಳ ಮೂಲಕ ದೇವಸ್ಥಾನ ತಲುಪುತ್ತಿದ್ದರು. 1940 ರ ಆಸು ಪಾಸು ಈ ದೇವಾಲಯದ ಜೀರ್ಣೋದ್ಧಾರ ಪ್ರಾರಂಭವಾಯಿತು. ಯಾತ್ರಾರ್ಥಿಗಳು ಹೋಗಿಬರಲು ಅನುಕೂಲವಾಗುವಂತೆ ಚಿಕ್ಕ ಚಿಕ್ಕ ದಾರಿಗಳನ್ನು ನಿರ್ಮಿಸಲಾಯಿತು. ಜೀವನದಲ್ಲಿ ಒಮ್ಮೆಯಾದರೂ ಅಯ್ಯಪ್ಪನ ದೇವಾಲಯಕ್ಕೆ ಭೇಟಿ ಕೊಡಬೇಕು ಅಯ್ಯಪ್ಪನ ದರ್ಶನ ಪಡೆಯಬೇಕು.

Leave A Reply

Your email address will not be published.

error: Content is protected !!