WhatsApp Group Join Now
Telegram Group Join Now

ಮನುಷ್ಯ ಸತ್ತ ನಂತರ ವಿವಿಧ ಧರ್ಮಗಳಲ್ಲಿ ಅವರವರ ಆಚರಣೆಯ ಪ್ರಕಾರ ಅಂತ್ಯಸಂಸ್ಕಾರವನ್ನು ಮಾಡಲಾಗುತ್ತದೆ. ಹಿಂದೂ ಧರ್ಮದಲ್ಲಿ ಹೆಚ್ಚಾಗಿ ಸತ್ತ ವ್ಯಕ್ತಿಗಳನ್ನು ಸುಡಲಾಗುತ್ತದೆ. ಇದು ಹಿಂದೂ ಸಂಪ್ರದಾಯವಾಗಿದೆ. ಆದರೆ ಹಿಂದೂ ಧರ್ಮದಲ್ಲಿ ನವಜಾತ ಶಿಶು ಮತ್ತು ಸನ್ಯಾಸಿಗಳು ಸತ್ತಾಗ ಸುಡುವುದಿಲ್ಲ. ಗರುಡ ಪುರಾಣದ ಪ್ರಕಾರ ನವಜಾತ ಶಿಶು ಮತ್ತು ಸನ್ಯಾಸಿಗಳನ್ನು ಸುಡುವುದಿಲ್ಲ. ವಿಷ್ಣು ವಾಹನನದ ಗರುಡನಿಗೆ ಒಮ್ಮೆ ಒಂದು ಯೋಚನೆ ಬರುತ್ತದೆ. ಹೀಗಾಗಿ ವಿಷ್ಣುವಿನಲ್ಲಿ ಗರುಡನು ಯಾಕೆ ಹೀಗೆ ಮಾಡುತ್ತಾರೆ ಎಂದು ಪ್ರಶ್ನಿಸುತ್ತಾರೆ. ಆಗ ವಿಷ್ಣು ದೇವನು ತಾಯಿಯ ಗರ್ಭದಲ್ಲಿರುವ ಶಿಶುವಿನ ಹುಟ್ಟಿದ ಎರಡು ವರ್ಷದ ಶಿಶುವನ್ನು ಸುಡುವ ಬದಲು ಹೂಳಬೇಕು ಎಂದು ಹೇಳುತ್ತಾರೆ. ಆದ್ದರಿಂದ ನಾವು ಇಲ್ಲಿ ಇದರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.

ಎರಡು ವರ್ಷದ ಮೇಲ್ಪಟ್ಟವರನ್ನು ಸುಡಬಹುದು ಎಂದು ಹೇಳುತ್ತಾರೆ. ಗರುಡ ಪುರಾಣದ ಪ್ರಕಾರ ಹುಟ್ಟಿದ ಎರಡು ವರ್ಷದವರೆಗೆ ಮಗುವಿಗೆ ಏನೂ ತಿಳಿಯುವುದಿಲ್ಲ. ಮಕ್ಕಳಿಗೆ ಮೋಹ ದುಃಖಗಳ ಪರಿಚಯವೂ ಕೂಡ ಇರುವುದಿಲ್ಲ. ಹಾಗಾಗಿ ಎರಡು ವರ್ಷದ ಒಳಗಿನ ಮಗು ಮೃತಪಟ್ಟಾಗ ಆ ದೇಹದಲ್ಲಿರುವ ಆತ್ಮಕ್ಕೂ ಮೋಹ ಮುಖಗಳ ಪರಿಚಯ ಇರುವುದಿಲ್ಲ. ಹೀಗಾಗಿ ಅದು ಸುಲಭವಾಗಿ ಮಗುವಿನ ದೇಹವನ್ನು ಬಿಟ್ಟು ಹೋಗುತ್ತದೆ. ಆದರೆ ಮನುಷ್ಯ ಬೆಳೆದಂತೆ ಮೋಹ, ಮಾಯೆ, ದುಃಖಗಳು, ಅಧಿಕವಾಗುತ್ತಾ ಹೋಗುತ್ತದೆ.

ಆಗ ಮನುಷ್ಯನ ದೇಹದಲ್ಲಿರುವ ಆತ್ಮಕ್ಕೂ ಆ ದೇಹದ ಬಗ್ಗೆ ಮೋಹ ಉಂಟಾಗುತ್ತದೆ. ಹಾಗಾಗಿ ಮನುಷ್ಯ ಸತ್ತ ನಂತರ ಆತ್ಮವು ದೇಹವನ್ನು ಅಷ್ಟು ಸುಲಭವಾಗಿ ಬಿಟ್ಟು ಹೋಗುವುದಿಲ್ಲ. ಹೀಗಾಗಿಯೇ ಮನುಷ್ಯನ ದೇಹವನ್ನು ಸುಡಲಾಗುತ್ತದೆ. ಮನುಷ್ಯನ ದೇಹವನ್ನು ಸುಡುವ ಕಾರಣವೆಂದರೆ ದೇಹದಿಂದ ಆತ್ಮವದಾಗಿದೆ. ಆಗ ದೇಹ ಮತ್ತು ಆತ್ಮದ ಸಂಬಂಧ ಮುರಿದು ಹೋಗುತ್ತದೆ. ಏಕೆಂದರೆ ಹಿಂದೂಧರ್ಮದಲ್ಲಿ ಬೆಂಕಿಯನ್ನು ಪ್ರವೇಶದ್ವಾರ ಎಂದು ನಂಬಲಾಗುತ್ತದೆ. ಸನ್ಯಾಸಿಗಳು ಕೂಡ ದೀರ್ಘ ತಪಸ್ಸು,  ಕಠಿಣ ವ್ರತಗಳನ್ನು ಮಾಡಿ ಇಂದ್ರಿಯ ನಿಗ್ರಹವನ್ನು ಸಾಧಿಸಿರುತ್ತಾರೆ.

ಹೀಗಾಗಿ ಅವರ ದೇಹದಲ್ಲಿರುವ ಆತ್ಮಕ್ಕೆ ಆ ದೇಹದ ಮೇಲೆ ಮೋಹ ವಿರುವುದಿಲ್ಲ. ಅವರ ಆತ್ಮ ಸುಲಭವಾಗಿಅವರ ದೇಹವನ್ನು ಬಿಟ್ಟು ಹೋಗುತ್ತದೆ. ಇನ್ನು ಗರುಡ ಪುರಾಣದಲ್ಲಿ ಆ ಮಗು ಮರಣ ಹೊಂದಿದ ನಂತರ ಆ ಮಗುವಿನ ಆತ್ಮ ಶಾಂತಿಗಾಗಿ ಹಾಲು ದಾನ ಮಾಡಬೇಕು, ದಾನ ಕಾರ್ಯಗಳನ್ನು ಮಾಡಬೇಕು ಎಂದು ಹೇಳಲಾಗುತ್ತದೆ.ಅನ್ನುವ ಸತ್ತ ಮಗುವಿಗೆ ಯಾವುದೇ ಶ್ರಾದ್ಧ ಕಾರ್ಯಗಳನ್ನು ಮಾಡಲಾಗುವುದಿಲ್ಲ. ಸತ್ತ ಮಗುವನ್ನು ಹೂಳಿ ಅದರ ಮೇಲೆ ತುಳಸಿ ಗಿಡವನ್ನು ನೆಡಬೇಕು.ಏಕೆಂದರೆ ತುಳಸಿಯಲ್ಲಿ ವಿಷ್ಣು ದೇವನು ಇರುತ್ತಾನೆ. ಅದರಿಂದ ಆ ಮಗುವಿಗೆ ಬೇಗನೆ ಮುಕ್ತಿ ದೊರಕುತ್ತದೆ. ಎಂದು ಗರುಡ ಪುರಾಣದಲ್ಲಿ ಹೇಳಲಾಗಿದೆ.

WhatsApp Group Join Now
Telegram Group Join Now

By

Leave a Reply

Your email address will not be published. Required fields are marked *

error: Content is protected !!
Footer code: