ಭ’ಯಪಟ್ಟು ಬಂದವನಿಗೆ ಭಗವಾನ್ ಬುದ್ಧ ನೀಡಿದ ಸಂದೇಶ ಎಂತವರಿಗೂ ಧೈರ್ಯ ನೀಡುತ್ತೆ

0

ಗೌತಮ ಬುದ್ಧನ ತತ್ವಸಿದ್ಧಾಂತಗಳು ಸತ್ಯದ ಆಧಾರವಾಗಿವೆ. ಇವನು ಮಾನವತ್ವದ ಸಂಕೇತವಾಗಿದ್ದಾನೆ. ಬುದ್ಧನು ತನ್ನ ಪರಿಶ್ರಮ ಮತ್ತು ತಪಸ್ಸಿನಿಂದ ಜ್ಞಾನೋದಯವನ್ನು ಪಡೆದಿದ್ದಾನೆ. ಮನಸ್ಸನ್ನು ಕೇಂದ್ರಬಿಂದುವಾಗಿರಿಸಿಕೊಂಡು ಮನಸ್ಸೇ ಎಲ್ಲದಕ್ಕೂ ಕಾರಣ ಎಂದು ಬುದ್ಧ ಹೇಳಿದ್ದಾನೆ. ಭಯಪಟ್ಟು ಬಂದ ವ್ಯಕ್ತಿಗೆ ಬುದ್ಧ ನೀಡಿದ ಸಂದೇಶದ ಬಗ್ಗೆ ನಾವು ಇಲ್ಲಿ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.

ಒಮ್ಮೆ ಒಬ್ಬ ವ್ಯಕ್ತಿ ಬಂದು ಗೌತಮ ಬುದ್ಧನನ್ನು ಕೇಳುತ್ತಾನೆ. ನನಗೆ ಯಾವ ವ್ಯಕ್ತಿಯನ್ನು ನೋಡಿದರೂ ಭಯವಾಗುತ್ತಿದೆ. ದಿನದಿಂದ ದಿನಕ್ಕೆ ನನ್ನ ಭಯ ಹೆಚ್ಚುತ್ತಿದೆ. ನನ್ನ ಹಿಂದಿನ ಜೀವನದಲ್ಲಿ ನಡೆದ ಘಟನೆಗಳು ನನ್ನನ್ನು ಹೀಗೆ ಮಾಡಿದೆ. ಇದರಿಂದಾಗಿ ನನಗೆ ನನ್ನ ಮೇಲೆ ನಂಬಿಕೆ ಇಲ್ಲ. ಹಾಗೆಯೇ ಬೇರೆಯವರ ಮೇಲೂ ಕೂಡ ನಂಬಿಕೆಯನ್ನು ಕಳೆದುಕೊಳ್ಳುತ್ತಿದ್ದೇನೆ. ಗಾಡಾಂಧಕಾರದಲ್ಲಿ ಬೆಳಕು ಹೇಗೆ ಮುಖ್ಯವೋ ಹಾಗೇ ನನ್ನ ಜೀವನಕ್ಕೂ ಬೆಳಕು ಬೇಕಿದೆ. ನೀವು ಇಲ್ಲಿ ಬಂದಿದ್ದನ್ನು ತಿಳಿದು ಪರಿಹಾರಕ್ಕಾಗಿ ಓಡಿ ಬಂದೆನು ಪರಿಹಾರವನ್ನು ನೀವೇ ಕೊಡಬೇಕು ಎಂದು ಹೇಳಿದನು.

ಆಗ ಗೌತಮ ಬುದ್ಧನು ಭಯ ಪಡಬೇಡ. ಪ್ರತಿಯೊಬ್ಬ ಮಾನವರಲ್ಲೂ ಭಯ ಎನ್ನುವುದು ಸ್ವಲ್ಪ ಆದರೂ ಇರುತ್ತದೆ. ಆ ಭಯ ಎನ್ನುವುದು ಹೆಚ್ಚಾದಾಗ ಮಿತಿಮೀರಿದ ಅನಾರ್ಥಗಳು ಸಂಭವಿಸುತ್ತವೆ. ಮನುಷ್ಯನಲ್ಲಿಯೇ ಹುಟ್ಟಿ ಮನುಷ್ಯನಲ್ಲಿಯೇ ಬೆಳೆದು ಕೊನೆಯದಾಗಿ ಮನುಷ್ಯನನ್ನೇ ನಾಶ ಮಾಡುತ್ತದೆ. ಹಾಗೆಯೇ ನಿನ್ನಂತೆ ಭಯ ಪಡುವವರು ಬಹಳ ಇದ್ದಾರೆ. ಹೇಗೆ ಭಯವನ್ನು ದೂರ ಮಾಡಬೇಕು ಎನ್ನುವುದನ್ನು ತಿಳಿಯದೇ ಅದಕ್ಕೆ ಭ್ರಮೆ ಎಂಬ ಹೊದಿಕೆ ಮಾಡಿ ಭಯವನ್ನು ಹೆಚ್ಚಿಗೆ ಮಾಡಿಕೊಳ್ಳುತ್ತಾರೆ.

ಸಮಸ್ಯೆಗಳನ್ನು ಊಹಿಸಿಕೊಂಡು ಸುಮ್ಮನೆ ಭಯ ಪಡಬಾರದು. ಸಮಸ್ಯೆಗಳ ಪರಿಹಾರವನ್ನು ಕಂಡುಕೊಳ್ಳಬೇಕು. ಹಾಗೆಯೇ ಅನಗತ್ಯವಾಗಿ ಯಾವುದನ್ನೂ ಚಿಂತೆ ಮಾಡಬಾರದು. ಸೂರ್ಯನು ಪ್ರತಿದಿನವೂ ಹೊಸತಾಗಿ ಉದಯಿಸುತ್ತಾನೆ. ಹಾಗೆಯೇ ಹೊಸತಾಗಿ ಹೊಸ ಹೊಸ ಆಲೋಚನೆಗಳೊಂದಿಗೆ ಬದುಕಬೇಕು. ಹಳೆಯ ಭ್ರಮೆಗಳನ್ನು ನೆನೆಸಿಕೊಂಡು ಬದುಕಬಾರದು. ಆಗ ನಿನ್ನ ಹತ್ತಿರ ಇರುವ ಜನರ ಬಳಿ ನಂಬಿಕೆ ಎನ್ನುವುದು ಹುಟ್ಟುತ್ತದೆ ಎಂದು ಬುದ್ಧ ಹೇಳುತ್ತಾನೆ.

Leave A Reply

Your email address will not be published.

error: Content is protected !!
Footer code: