ಬೆಳಗ್ಗೆ ಎದ್ದ ತಕ್ಷಣ ಯಾವುದೇ ಕಾರಣಕ್ಕೂ ಈ ವಸ್ತುಗಳನ್ನು ನೋಡಬೇಡಿ ಯಾಕೆ ಗೊತ್ತಾ

0

ಬೆಳಿಗ್ಗೆ ನಾವು ಎದ್ದ ತಕ್ಷಣ ನಮ್ಮ ಮನಸ್ಸು ಹೇಗಿರುತ್ತದೆಯೋ ಆ ದಿನ ಕೂಡ ಹಾಗೆ ಇರುತ್ತದೆ, ಇನ್ನು ಸಾಮಾನ್ಯವಾಗಿ ನಾವು ಬೆಳಿಗ್ಗೆ ಎದ್ದ ತಕ್ಷಣ ಕೆಲವು ವಸ್ತುಗಳನ್ನ ನೋಡುವುದರಿಂದ ನಮ್ಮ ಆ ದಿನ ಶುಭವಾಗಿ ಇರುವುದಿಲ್ಲ ಎಂದು ಹೇಳುತ್ತದೆ ಜ್ಯೋತಿಷ್ಯ ಶಾಸ್ತ್ರ. ಇನ್ನು ಆ ವಸ್ತುಗಳನ್ನ ನಾವು ಬೆಳಿಗ್ಗೆ ಎದ್ದ ತಕ್ಷಣ ನೋಡುವುದರಿಂದ ನಾವು ಆ ದಿನ ಕೆಲವು ಸಮಸ್ಯೆಗಳಿಗೆ ಸಿಲುಕಿಕೊಳ್ಳುವ ಸಾಧ್ಯತೆ ಇರುತ್ತದೆ ಮತ್ತು ಕೆಲವು ವಿಷಯದಲ್ಲಿ ನಷ್ಟವನ್ನ ಅನುಭವಿಸುವ ಸಾಧ್ಯತೆ ಕೂಡ ಜಾಸ್ತಿ ಇರುತ್ತದೆ ಹೇಳುತ್ತಿದೆ ಜ್ಯೋತಿಷ್ಯ ಶಾಸ್ತ್ರ. ಹಾಗಾದರೆ ನಾವು ಬೆಳಿಗ್ಗೆ ಎದ್ದ ತಕ್ಷಣ ಯಾವ ವಸ್ತುಗಳನ್ನ ನೋಡಬಾರದು ಮತ್ತು ಯಾವ ವಸ್ತುಗಳನ್ನ ನೋಡಬೇಕು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ.

ನಾವು ಬೆಳಿಗ್ಗೆ ತಕ್ಷಣ ಯಾವುದೇ ಕಾರಣಕ್ಕೂ ಒಡೆದ ಕನ್ನಡಿಯನ್ನ ನೋಡಲೇಬಾರದು, ನಾವು ಬೆಳಿಗ್ಗೆ ಎದ್ದ ತಕ್ಷಣ ಒಡೆದ ಕನ್ನಡಿಯನ್ನ ನೋಡುವುದರಿಂದ ನಮ್ಮ ಆ ದಿನ ಅಷ್ಟಾಗಿ ಒಳ್ಳೆಯದಾಗಿ ಇರುವುದಿಲ್ಲ ಮತ್ತು ನಾವು ಆ ದಿನ ಕಷ್ಟಗಳನ್ನ ಎದುರಿಸಬೇಕಾದ ಸಾಧ್ಯತೆ ಜಾಸ್ತಿ ಇರುತ್ತದೆ. ಇನ್ನು ಬೆಳಿಗ್ಗೆ ಎದ್ದ ತಕ್ಷಣ ನಾವು ಒಡೆದ ಕನ್ನಡಿಯನ್ನ ನೋಡುವುದರಿಂದ ನಾವು ಆ ದಿನ ಮೂರನೇ ವ್ಯಕ್ತಿಯ ಜೊತೆ ಜಗಳವನ್ನ ಮಾಡಿಕೊಳ್ಳುವ ಸಾಧ್ಯತೆ ಜಾಸ್ತಿ ಇರುತ್ತದೆ ಎಂದು ಪುರಾಣಗಳಲ್ಲಿ ಹೇಳಲಾಗಿದೆ.

ಇನ್ನು ಬೆಳಿಗ್ಗೆ ಎದ್ದ ತಕ್ಷಣ ಯಾವುದೇ ಕಾರಣಕ್ಕೂ ಕೂದಲು ಬಿಟ್ಟುಕೊಂಡ ಮಹಿಳೆಯನ್ನ ನೋಡಬಾರದು. ಬೆಳಿಗ್ಗೆ ಎದ್ದ ತಕ್ಷಣ ನಾವು ಕೂದಲು ಬಿಟ್ಟುಕೊಂಡಿರುವ ಮಹಿಳೆಯನ್ನ ನೋಡುವುದರಿಂದ ನಾವು ಕೆಲವು ವಿಷಯದಲ್ಲಿ ನಿರಾಸೆಯನ್ನ ಅನುಭವಿಸಬೇಕಾಗುತ್ತದೆ ಮತ್ತು ನಮ್ಮ ಮನಸ್ಸು ಆ ದಿನ ಸರಿ ಇರುವುದಿಲ್ಲ ಎಂದು ಹೇಳಿದರೆ ತಪ್ಪಾಗಲ್ಲ.

ಇನ್ನು ಕೂದಲು ಬಿಟ್ಟಿರುವ ಮಹಿಳೆಯನ್ನ ಎದ್ದ ತಕ್ಷಣ ನೋಡುವುದರಿಂದ ನಾವು ಆ ದಿನ ಕೆಲವು ವಿಷಯದಲ್ಲಿ ಸೋಲನ್ನ ಅನುಭವಿಸಬೇಕಾಗುತ್ತದೆ ಮತ್ತು ಹಣದ ಹರಿವು ಜಾಸ್ತಿ ಆಗುವ ಸಾಧ್ಯತೆ ಇರುತ್ತದೆ. ಇನ್ನು ಬೆಳಿಗ್ಗೆ ಎದ್ದ ತಕ್ಷಣ ಯಾವುದೇ ಕಾರಣಕ್ಕೂ ಕಪ್ಪು ಬಣ್ಣದ ವಸ್ತುವನ್ನಾಗಲಿ ಅಥವಾ ನಮ್ಮ ಮುಖವನ್ನ ನಾವೇ ಕನ್ನಡಿಯಲ್ಲಿ ನೋಡಿಕೊಳ್ಳಬಾರದು.

ನಾವು ಬೆಳಿಗ್ಗೆ ಎದ್ದ ಸಮಯದಲ್ಲಿ ಕಪ್ಪು ಬಣ್ಣದ ವಸ್ತು ಅಥವಾ ನಮ್ಮ ಮುಖವನ್ನ ನಾವೇ ಕನ್ನಡಿಯಲ್ಲಿ ನೋಡುವುದರಿಂದ ಮಾಡುವ ಕೆಲಸದಲ್ಲಿ ನಷ್ಟವನ್ನ ಅನುಭವಿಸುವ ಸಾಧ್ಯತೆ ಇರುತ್ತದೆ ಮತ್ತು ಸಂಸಾರದಲ್ಲಿ ಜಗಳ ಆಗುವ ಸಾಧ್ಯತೆ ಇರುತ್ತದೆ. ಇನ್ನು ಕಪ್ಪು ಬಣ್ಣದ ವಸ್ತು ನೋಡುವುದರಿಂದ ನಮ್ಮ ಮೇಲೆ ನೆಗೆಟಿವ್ ಎನರ್ಜಿ ದಾಳಿ ಮಾಡುವ ಸಾಧ್ಯತೆ ಮತ್ತು ಶತ್ರುಭಾದೆ ನಮ್ಮನ್ನ ಕಾಡುವ ಸಾಧ್ಯತೆ ಜಾಸ್ತಿ ಇರುತ್ತದೆ ಎಂದು ಹೇಳಲಾಗಿದೆ. ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವವರು ಯಾವುದೇ ಕಾರಣಕ್ಕೂ ಬೆಳಿಗ್ಗೆಯ ಸಮಯದಲ್ಲಿ ಕಪ್ಪು ಬಣ್ಣದ ವಸ್ತು ಮತ್ತು ಕನ್ನಡಿಯಲ್ಲಿ ತಮ್ಮ ಮುಖ ತಾವು ನೋಡಿಕೊಳ್ಳಬಾರದು.

ಇನ್ನು ಬೆಳಿಗ್ಗೆ ಎದ್ದ ತಕ್ಷಣ ನಾವು ಪುಟ್ಟ ಮಕ್ಕಳ ಮುಖವನ್ನ ನೋಡಿದರೆ ನಮ್ಮ ಆ ದಿನ ಶುಭವಾಗಿ ಇರುತ್ತದೆ ಎಂದು ಹೇಳಲಾಗುತ್ತದೆ. ಪುಟ್ಟ ಮಕ್ಕಳ ಮುಖ ಅಥವಾ ದೇವರ ಮುಖ ನೋಡುವುದರಿಂದ ನಾವು ಆ ದಿನ ಮಾಡುವ ಕೆಲಸದಲ್ಲಿ ನಮಗೆ ಲಾಭ ಬರುತ್ತದೆ ಮತ್ತು ಆ ದಿನ ಸಂತೋಷಮಯವಾಗಿ ಇರುತ್ತದೆ. ಇನ್ನು ಬೆಳಿಗ್ಗೆ ಎದ್ದ ತಕ್ಷಣ ನಾವು ಸೂರ್ಯ ದೇವರ ದರ್ಶನವನ್ನ ಮಾಡುವುದು ಒಳ್ಳೆಯದು ಮತ್ತು ಹೆತ್ತ ತಾಯಿಯ ಮುಖವನ್ನ ನೋಡಿದರೆ ಆ ದಿನ ನಾವು ಯಾವುದೇ ಕೆಲಸಕ್ಕೆ ಕೈ ಹಾಕಿದರು ಅದರಲ್ಲಿ ಯಶಸ್ಸು ನಮ್ಮದಾಗಲಿದೆ.

Leave A Reply

Your email address will not be published.

error: Content is protected !!