WhatsApp Group Join Now
Telegram Group Join Now

ಅತಿಯಾದ ತೂಕವನ್ನು ಇಳಿಸಿಕೊಳ್ಳುವ ಕಾರುಬಾರಲ್ಲಿ ಮಿಂದೇಳುವುದೇ ದೊಡ್ಡ ಮಾತು. ಸ್ಥೂಲಕಾಯತೆ ಎಂದಿಗೂ ಅಪಾಯವೇ. ಮಧುಮೇಹ, ರಕ್ತದೊತ್ತಡ, ಹೃದ್ರೋಗ ಸೇರಿ ಅನೇಕ ರೀತಿಯ ಆರೋಗ್ಯ ಸಮಸ್ಯೆಗಳಿಗೆ ಸ್ಥೂಲ ಶರೀರವೇ ಹೆಬ್ಬಾಗಿಲಾಗಿಬಿಡುತ್ತದೆ. ಹೀಗಾಗಿಯೇ ಅನೇಕರು ತಮ್ಮ ಹೆಚ್ಚಾದ ತೂಕ ಇಳಿಸಲು ವ್ಯಾಯಾಮ ಕಟ್ಟುನಿಟ್ಟಿನ ಡಯಟ್‌ ಇತ್ಯಾದಿಗಳಲ್ಲಿ ನಿರತರಾಗುತ್ತಾರೆ. ತೂಕ ಕಳೆದುಕೊಳ್ಳಬೇಕು ಅನ್ನೋದು ಪ್ರತಿಯೊಬ್ಬರ ಕನಸಾಗುತ್ತದೆ

ಹೀಗಾಗಿ ಜನರು ಮಾಡದ ಪ್ರಯತ್ನೆಗಳೇ ಇರೋದಿಲ್ಲ. ದೈಹಿಕ ಕಸರತ್ತಿನಿಂದ ಹಿಡಿದು ಮನೆ ಮದ್ದಿನವರೆಗೆ ಎಲ್ಲವನ್ನ ಪ್ರಯತ್ನ ಮಾಡಿರುತ್ತಾರೆ. ಅದರಲ್ಲೂ ಮನೆಯಲ್ಲೀ ಹೀಗೆ ಮಾಡಿದರೆ ತೂಕ ಇಳಿಯುತ್ತೆ ಅಂತ ಯಾರಾದ್ರೂ ಹೇಳಿದ್ರೆ ಸಾಕು ನಿಯಮಿತವಾಗಿ ಮಾಡೋದಕ್ಕೆ ಶುರು ಮಾಡುತ್ತಾರೆ. ಬೆಳಗ್ಗೆ ಎದ್ದು ಜೀರಿಗೆ ನೀರು, ಮೆಂತ್ಯೆ ನೀರು, ಬಿಸಿ ನೀರಿಗೆ ನಿಂಬೆ ಹಣ್ಣು ಸೇರಿಸಿ ಸೇವನೆ ಮಾಡೋದು ಸೇರಿ ಎಲ್ಲಾ ರೀತಿಯ ಪ್ರಯತ್ನಗಳನ್ನ ತೂಕ ಇಳಿಸಿಕೊಳ್ಳಲು ಬಯಸುವವರು ಮಾಡಿರುತ್ತಾರೆ.

ಆದರೆ ಇದು ಕೆಲವರಿಗೆ ತೂಕ ಇಳಿಕೆಗೆ ಸಹಕಾರಿ ಆಗದೇ ಇದ್ರೂ ಹಲವರು ಉಪಯೋಗಗಳನ್ನ ನೀಡಿದರೆ, ಇನ್ನು ಕೆಲವರಿಗೆ ಇದರಿಂದ ಯಾವ ಪ್ರಯೋಜನ ಕೂಡ ಆಗಿರೋದಿಲ್ಲ. ಆದರೆ ನೀವು ನಾವಿಲ್ಲಿ ತಿಳಿಸುವ ಹಾಗೇ ಪ್ರತಿನಿತ್ಯ ತಪ್ಪದೆ ಮಾಡಿದರೆ ನಿಮ್ಮ ತೂಕವು ಇಳಿಯಲಿದೆ ಜೊತೆಗೆ ನಿಮ್ಮ ಆರೋಗ್ಯವು ಕೂಡ ವೃದ್ಧಿಯಾಗಲಿದೆ. ತುಂಬಾ ಕಷ್ಟ ಏನೂ ಅಲ್ಲ ಇದು ಬಹಳ ಸುಲಭ ಬಿಸಿ ನೀರಿನೊಂದಿಗೆ ಬೆಲ್ಲವನ್ನು ಸೇವಿಸಬೇಕು ಅಷ್ಟೇ. ಹೇಗೆ ? ಏನೆಲ್ಲಾ ಪ್ರಯೋಜನ ಸಿಗಲಿದೆ ಎನ್ನುವುದನ್ನು ನಾವು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.

ಬೆಳಗ್ಗೆ ಎದ್ದ ತಕ್ಷಣ ಒಂದು ಲೋಟ ಬಿಸಿ ನೀರು ಕುಡಿದರೆ ಅದರಿಂದ ಜೀರ್ಣಕ್ರಿಯೆಯು ಸರಾಗವಾಗಿ ಆಗುವುದು ಎಂದು ಈಗಾಗಲೇ ನಾವು ತಿಳಿದುಕೊಂಡಿರುವ ವಿಚಾರ. ಇದಕ್ಕೆ ಇನ್ನೊಂದು ಸಾಮಗ್ರಿ ಸೇರ್ಪಡೆ ಮಾಡಿದರೆ ಅದರ ಲಾಭವು ದುಪ್ಪಟ್ಟು ಆಗುವುದು. ಇದು ಹೃದಯದ ಆರೋಗ್ಯಕ್ಕೂ ಅದ್ಭುತವಾಗಿ ನೆರವಾಗುವುದು. ಇದು ದೇಹಕ್ಕೆ ಒಳ್ಳೆಯ ಶಕ್ತಿ ನೀಡುವುದು ಮತ್ತು ಆರೋಗ್ಯವನ್ನೂ ಸಹ ವೃದ್ಧಿಸುತ್ತದೆ. ಹೀಗಾಗಿ ಬೆಲ್ಲ ಹಾಗೂ ಬಿಸಿನೀರಿನಿಂದ ಸಿಗುವ ಆರೋಗ್ಯಕಾರಿ ಪ್ರಯೋಜನಗಳು ಯಾವುವು ಎನ್ನುವ ಬಗ್ಗೆ ಮಾಹಿತಿ ಇಲ್ಲಿದೆ.

ಬೆಲ್ಲದ ಅತಿ ಪ್ರಸಿದ್ಧ ಲಾಭವೆಂದರೆ ರಕ್ತ ಶುದ್ಧೀಕರಣ. ನಿತ್ಯವೂ ಸೀಮಿತ ಪ್ರಮಾಣದಲ್ಲಿ ಬೆಲ್ಲ ಸೇವಿಸುವುದರಿಂದ ರಕ್ತ ಶುದ್ಧವಾಗಿ ದೇಹವನ್ನು ಆರೋಗ್ಯವಾಗಿಡುತ್ತದೆ.ಹೀಗಾಗಿ ಬೆಳಗ್ಗೆ ಬಿಸಿ ನೀರಿನೊಂದಿಗೆ ಬೆಲ್ಲ ಸೇವನೆ ಮಾಡಿದ್ರೆ ಹೃದಯದ ಆರೋಗ್ಯ ಕೂಡ ಕಾಪಾಡಿಕೊಳ್ಳಬಹುದು ಮೊದಲಿಗೆ ಚರ್ಮದ ಸಮಸ್ಯೆ ನಿವಾರಣೆ: ಮೊಡವೆ ಮತ್ತು ಚರ್ಮದ ಹಲವು ಸಮಸ್ಯೆಯಿದ್ದರೆ ಆಗ ನೀವು ಬಿಸಿ ನೀರಿಗೆ ಹಾಕಿಕೊಂಡು ಬೆಲ್ಲ ಸೇವಿಸಬೇಕು. ಇದು ರಕ್ತವನ್ನು ಶುದ್ಧೀಕರಿಸುವ ಗುಣ ಹೊಂದಿದೆ ಮತ್ತು ಚರ್ಮದ ಸಮಸ್ಯೆಯನ್ನು ದೂರ ಮಾಡಲು ಇದು ಅದ್ಭುತವಾದ ಮನೆಮದ್ದಾಗಿದೆ. ಇದು ವಯಸ್ಸಾಗುವ ಲಕ್ಷಣಗಳನ್ನು ಕೂಡ ತಡೆಹಿಡಿಯುವುದು.

ಎರಡನೆಯದಾಗಿ ತೂಕ ಇಳಿಕೆಗೆ ಸಹಕಾರಿ: ತಮ್ಮ ದೇಹದ ತೂಕ ಇಳಿಸಿಕೊಳ್ಳಬೇಕು ಎಂದು ಬಯಸುತ್ತಾ ಇರುವವರಿಗೆ ಇದು ತುಂಬಾ ಪರಿಣಾಮಕಾರಿ ಔಷಧಿಯಾಗಿದೆ. ಯಾಕೆಂದರೆ ಇದು ತೂಕ ಹೆಚ್ಚಳಕ್ಕೆ ನೆರವಾಗುವ ಸಕ್ಕರೆಗೆ ಪರ್ಯಾಯವಾಗಿದೆ ಮತ್ತು ಇದರಲ್ಲಿ ಪೊಟಾಶಿಯಂ, ಮೆಗ್ನಿಶಿಯಂ, ವಿಟಮಿನ್ ಬಿ1, ಬಿ6 ಮತ್ತು ವಿಟಮಿನ್ ಸಿ ಸಮೃದ್ಧವಾಗಿದೆ. ಇದು ಅಧಿಕ ಕ್ಯಾಲರಿ ಕಡಿಮೆ ಮಾಡುವುದು.

ಮೂರನೆಯದಾಗಿ ನಿದ್ರಾ ಹೀನತೆ ಸಮಸ್ಯೆ ನಿವಾರಣೆ: ನೀವು ಏನದರೂ ನಿದ್ರಾಹೀನತೆ ಸಮಸ್ಯೆಯಿಂದ ಬಳಲುತ್ತಿದ್ದರೆ ಬೆಲ್ಲ, ಬಿಸಿ ನೀರು ಹೆಚ್ಚು ಸಹಕಾರಿಯಾಗಿದೆ. ಬೆಲ್ಲವು ಖಿನ್ನತೆ ವಿರೋಧಿ ಗುಣ ಹೊಂದಿದೆ. ಬಿಸಿ ನೀರಿನ ಜತೆಗೆ ರಾತ್ರಿ ಮಲಗುವ ಮೊದಲು ಕುಡಿದರೆ ಅದು ದೇಹದಲ್ಲಿ ಒಳ್ಳೆಯ ಹಾರ್ಮೋನ್ ಬಿಡುಗಡೆ ಮಾಡುವುದು. ಖಿನ್ನತೆಗೆ ಒಳಗಾಗಿರುಂತಹ ಜನರಿಗೆ ರಾತ್ರಿ ನಿದ್ರೆ ಮಾಡಲು ತುಂಬಾ ಕಷ್ಟವಾಗುವುದು. ನಿದ್ರಾಹೀನತೆಗೆ ಶತಮಾನಗಳಿಂದಲೂ ಬೆಲ್ಲವನ್ನು ಮನೆಮದ್ದಾಗಿ ಬಳಸಿಕೊಂಡು ಬರಲಾಗುತ್ತಿದೆ.

ಬಾಯಿಯ ಆರೋಗ್ಯ ಕಾಪಾಡಲು ಸಹಕಾರಿ ಬೆಲ್ಲವು ಕಡಿಮೆ ಸಿಹಿ ಹೊಂದಿದೆ ಮತ್ತು ಸಕ್ಕರೆಗೆ ಹೋಲಿಕೆ ಮಾಡಿದರೆ ಇದರಲ್ಲಿ ಕೊಬ್ಬಿನಾಂಶವು ಕಡಿಮೆ. ಸಕ್ಕರೆ ಬದಲಿಗೆ ಬೆಲ್ಲ ತಿಂದರೆ ಅದರಿಂದ ಬಾಯಿ ಹಾಗೂ ಒಸಡುಗಳ ಆರೋಗ್ಯವು ಉತ್ತಮವಾಗಿ ಇರುವುದು. ಬೆಲ್ಲವನ್ನು ಏಲಕ್ಕಿ ಜತೆಗೆ ಸೇರಿಸಿಕೊಂಡು ತಿಂದರೆ ಅದು ಬಾಯಿಯಲ್ಲಿ ಇರುವ ಬ್ಯಾಕ್ಟೀರಿಯಾ ನಿವಾರಣೆ ಮಾಡುವುದು. ಬಾಯಿಯ ದುರ್ವಾಸನೆಯು ಹೋಗುವುದು ಮತ್ತು ಬಾಯಿಯಲ್ಲಿನ ಹಾನಿಕಾರಕ ಬ್ಯಾಕ್ಟೀರಿಯಾ ನಿವಾರಣೆಯಾಗಿ ಅದರಿಂದ ಬಾಯಿಗೆ ಸಂಬಂಧಿಸಿದ ಹಲವಾರು ಸಮಸ್ಯೆಗೆ ಪರಿಹಾರ.

ಮಲಬದ್ಧತೆ ನಿವಾರಣೆ: ಗ್ಯಾಸ್ ಮತ್ತು ಮಲಬದ್ಧತೆಯಂತಹ ಸಮಸ್ಯೆಯಿಂದ ಬಳಲುತ್ತಿದ್ದರೆ ಆಗ ನೀವು ಬಿಸಿ ನೀರಿಗೆ ಬೆಲ್ಲ ಹಾಕಿಕೊಂಡು ರಾತ್ರಿ ಮಲಗುವ ಮೊದಲು ಕುಡಿಯಿರಿ. ಇದರಿಂದ ಜೀರ್ಣಕ್ರಿಯೆ ಸರಾಗವಾಗಿ ನಡೆದು ಮಲಬದ್ಧತೆ ನಿವಾರಣೆಯಾಗುವುದು. ಮುಖ್ಯವಾಗಿ ಕಿಡ್ನಿ ಕಲ್ಲು ನಿವಾರಣೆ: ಕಿಡ್ನಿಯಲ್ಲಿ ಕಲ್ಲಿನ ಸಮಸ್ಯೆ ನಿವಾರಣೆ ಮಾಡಲು ನೀವು ಬಿಸಿ ನೀರಿಗೆ ಬೆಲ್ಲ ಹಾಕಿಕೊಂಡು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯಿರಿ.

ಇದು ಕಲ್ಲನ್ನು ವಿಘಟಿಸುವುದರ ಜೊತೆಗೆ ಸಣ್ಣ ಗಾತ್ರದ ಕಲ್ಲನ್ನು ಮೂತ್ರದ ಮೂಲಕ ಹೊರಹಾಕಲು ಇದು ಸಹಕಾರಿ ಆಗಿರುವುದು. ಇನ್ನೂ ಕೊನೆಯದಾಗಿ ರಕ್ತ ಶುದ್ಧೀಕರಣ: ಬೆಲ್ಲದ ಅತಿ ಪ್ರಸಿದ್ಧ ಲಾಭವೆಂದರೆ ರಕ್ತ ಶುದ್ಧೀಕರಣ. ನಿತ್ಯವೂ ಸೀಮಿತ ಪ್ರಮಾಣದಲ್ಲಿ ಬೆಲ್ಲ ಸೇವಿಸುವುದರಿಂದ ರಕ್ತ ಶುದ್ಧವಾಗಿ ದೇಹವನ್ನು ಆರೋಗ್ಯವಾಗಿಡುತ್ತದೆ.ಹೀಗಾಗಿ ಬೆಳಗ್ಗೆ ಬಿಸಿ ನೀರಿನೊಂದಿಗೆ ಬೆಲ್ಲ ಸೇವನೆ ಮಾಡುವುದರಿಂದ ಹೃದಯದ ಆರೋಗ್ಯ ಕೂಡ ಕಾಪಾಡಿಕೊಳ್ಳಬಹುದು.

WhatsApp Group Join Now
Telegram Group Join Now

By

Leave a Reply

Your email address will not be published. Required fields are marked *

error: Content is protected !!
Footer code: