ಬೆಳಗ್ಗಿನ ಜಾವ ಬ್ರಾಹ್ಮೀ ಮುಹೂರ್ತ ಏಳುವವರ ಜೀವನ ಹೇಗಿರತ್ತೆ ಗೊತ್ತೇ? ಹತ್ತಾರು ಬದಲಾವಣೆ

0

ಬ್ರಾಹ್ಮೀ ಮುಹೂರ್ತದಲ್ಲಿ ಏಳುವುದು ಹಿಂದೂ ಸಂಪ್ರದಾಯದ ಪ್ರಕಾರ ಮಹತ್ವವಾಗಿದೆ. ಈ ಸಮಯದಲ್ಲಿ ಏಳುವುದರಿಂದ ಯಾವೆಲ್ಲಾ ಪ್ರಯೋಜನಗಳಿವೆ ಎಂಬುದನ್ನು ಈ ಲೇಖನದ ಮೂಲಕ ತಿಳಿಯೋಣ

ಬ್ರಾಹ್ಮೀ ಮುಹೂರ್ತ ಹಿಂದೂ ಸಂಪ್ರದಾಯದಲ್ಲಿ ಅತ್ಯಂತ ಮಹತ್ವದ ಸಮಯ. ಇದು ಪ್ರಮುಖವಾಗಿ ಎರಡು ಮೂಹೂರ್ತದ ಅವಧಿಯನ್ನು ಒಳಗೊಂಡಿದೆ. ಮುಂಜಾನೆಯ ಸಮಯಕ್ಕಿಂತ 1-30 ಗಂಟೆಯ ಪೂರ್ವದ ಅವಧಿಯನ್ನು ಬ್ರಾಹ್ಮೀ ಮುಹೂರ್ತ ಎನ್ನುವರು. ವೈಧಿಕ ಸಂಪ್ರದಾಯದ ಪ್ರಕಾರ ಈ ಸಮಯವು ಪ್ರಾರ್ಥನೆ ಮತ್ತು ಧ್ಯಾನ ಮಾಡಲು ಸೂಕ್ತವಾದ ಸಮಯವಾಗಿದೆ. ಈ ಸಮಯದಲ್ಲಿ ಏಳುವುದರಿಂದ ವ್ಯಕ್ತಿಯ ಜೀವನದಲ್ಲಿ ಹಲವು ಬದಲಾವಣೆಗಳನ್ನು ತರುತ್ತದೆ.

ಈ ಸಮಯ ವ್ಯಕ್ತಿಯಲ್ಲಿ ಭರವಸೆ, ಸ್ಪೂರ್ತಿ, ಶಾಂತಿ ಪ್ರಕಟವಾಗುವಂತೆ ಮಾಡುತ್ತದೆ. ಈ ಸಮಯ ಬ್ರಹ್ಮಜ್ಞಾನ, ಸರ್ವೋಚ್ಚ ಜ್ಞಾನ, ಶಾಶ್ವತ ಸಂತೋಷವನ್ನು ಪಡೆಯಲು ಪ್ರಚೋದಿಸುತ್ತದೆ. ದೀರ್ಘ ನಿದ್ರೆಯ ನಂತರ ಮನಸ್ಸು ಶಾಂತವಾಗಿರುತ್ತದೆ ಅಂತೆಯೇ ಪರಿಸರದಲ್ಲಿ ಶಾಂತಿ ಹಾಗೂ ತಂಪಾದ ವಾತಾವರಣ ನೆಲೆಸಿರುತ್ತದೆ. ಈ ಸಮಯದಲ್ಲಿ ಧ್ಯಾನ ಮಾಡಿದರೆ ಮಾನಸಿಕ ಕಾರ್ಯಕ್ಷಮತೆ ಹೆಚ್ಚುತ್ತದೆ ಅಲ್ಲದೆ ಮಾನಸಿಕ ಕಿರಿಕಿರಿ, ಮಂಕಾದ ಭಾವನೆಗಳು ನಿವಾರಣೆಯಾಗುತ್ತದೆ.

ಈ ಪವಿತ್ರ ಸಮಯದಲ್ಲಿ ದೇಹಕ್ಕೆ ಅಗತ್ಯವಾದ ಉನ್ನತ ಮಟ್ಟದ ಜೀವ ಶಕ್ತಿಯ ಗುಣವು ದೊರೆಯುತ್ತದೆ. ವಾತಾವರಣದಲ್ಲಿ ಮಾಲಿನ್ಯದ ಪ್ರಮಾಣ ಕಡಿಮೆಯಾಗಿರುತ್ತದೆ ಆದ್ದರಿಂದ ಈ ವಾತಾವರಣ ದೇಹ ಮತ್ತು ಮನಸ್ಸಿನ ಮೇಲೆ ಸಾಕಷ್ಟು ಪರಿಣಾಮವನ್ನು ಬೀರುತ್ತದೆ. ಸಂಸ್ಕೃತದಲ್ಲಿ ದಿನಚರಿಯನ್ನು ದಿನಾಚರ್ಯ ಎಂದು ಹೇಳಲಾಗುವುದು ದಿನ ಎಂದರೆ ದಿನ ಹಾಗೂ ಆಚಾರ್ಯ ಎಂದರೆ ಅನುಸರಿಸು ಎಂದರ್ಥವಾಗಿದೆ. ಹಾಗಾಗಿ ಆಚಾರ್ಯವು ಪ್ರಕೃತಿಗೆ ಅನುಗುಣವಾಗಿ ಇದ್ದರೆ ಆದರ್ಶ ದೈನಂದಿನ ವೇಳಾಪಟ್ಟಿಯನ್ನು ಹೊಂದಬಹುದು.

ಪ್ರತಿದಿನ ಸರಳವಾದ ರಕ್ಷಣಾ ಮಂತ್ರವನ್ನು ಪಠಿಸಬೇಕು. ಮಂತ್ರವನ್ನು ಪಠಿಸಿದ ನಂತರ ಸ್ವಲ್ಪ ಸಮಯ ಮೌನವಾಗಿ ಕುಳಿತುಕೊಂಡು ಎರಡು ಅಂಗೈಯನ್ನು ಜೋಡಿಸಿ ಬೊಗಸೆ ಹಿಡಿಯುವಂತೆ ಇಟ್ಟುಕೊಳ್ಳಬೇಕು. ಕರಾಗ್ರೇ ವಸತೇ ಲಕ್ಷ್ಮಿ, ಕರಮಧ್ಯೇ ಸರಸ್ವತಿ, ಕರ ಮೂಲೆ ತುಗೋವಿಂದ, ಪ್ರಭಾತೆ ಕರದರ್ಶನಂ ಎಂಬ ಮಂತ್ರವನ್ನು ಪಠಿಸಬೇಕು.

ಕೈ ಬೆರಳುಗಳ ತುದಿಯಲ್ಲಿ ಇರುವ ಲಕ್ಷ್ಮಿ, ಅಂಗೈನ ಮಧ್ಯದಲ್ಲಿ ವಾಸಿಸುವ ಸರಸ್ವತಿ, ಕೈಗಳ ಮೂಲೆಗಳಾದ ಮಣಿಕಟ್ಟುಗಳಲ್ಲಿ ಇರುವ ಭಗವಾನ್ ಗೋವಿಂದ, ಮುಂಜಾನೆ ಕೈ ನೋಡುವುದು ಶುಭಕರ ಎಂಬುದು ಈ ಮಂತ್ರದ ಅರ್ಥ. ನಂತರ ಪ್ರಾಣಾಯಾಮವನ್ನು ಮಾಡಬೇಕು. ನಂತರ ಆಂತರಿಕ ಕಣ್ಣುಗಳನ್ನು ಕೇಂದ್ರೀಕರಿಸಿ ದ್ಯಾನ ಮಾಡಿ. ಹೀಗೆ ಮಾಡುವುದರಿಂದ ಮಾನಸಿಕ ಹಾಗೂ ದೈಹಿಕ ನಿರಾಳತೆಯನ್ನು ಉಂಟಾಗುತ್ತದೆ.

ಮುಂಜಾನೆ ಸೂರ್ಯ ನಮಸ್ಕಾರ ಮಾಡುವ ಮೂಲಕ ವ್ಯಾಯಾಮವನ್ನು ಕೈಗೊಳ್ಳಬೇಕು. ನಂತರ ನಡಿಗೆ, ಈಜು ಇನ್ನಿತರ ವ್ಯಾಯಾಮವನ್ನು ಮಾಡಬೇಕು. ಬೆಳಗಿನ ಸಮಯದ ವ್ಯಾಯಾಮ ಜೀರ್ಣಕ್ರಿಯೆಯನ್ನು ಹೆಚ್ಚಿಸುವುದು ಮತ್ತು ಕೊಬ್ಬನ್ನು ನಿಯಂತ್ರಿಸುತ್ತದೆ.‌ ಮತ್ತು ಸದಾಕಾಲ ಸಂತೋಷದಿಂದಿರುವಂತೆ ಮಾಡುತ್ತದೆ.

ಪ್ರತಿದಿನ ಬ್ರಾಹ್ಮೀ ಮುಹೂರ್ತದಲ್ಲಿ ಏಳುವುದರಿಂದ ನಮ್ಮ ಶಕ್ತಿಯ ಮಟ್ಟ ಹೆಚ್ಚುತ್ತದೆ. ಶಾಂತವಾದ ವಾತಾವರಣ ನಮ್ಮನ್ನು ಕ್ರಿಯಾಶೀಲರನ್ನಾಗಿ ಮಾಡುತ್ತದೆ. ವೈಜ್ಞಾನಿಕ ಸಂಶೋಧನೆಯ ಪ್ರಕಾರ ಬ್ರಾಹ್ಮೀ ಮುಹೂರ್ತದಲ್ಲಿ ಆಮ್ಲಜನಕದ ಮಟ್ಟವು ಶೇಕಡ 41 ಕಿಂತ ಹೆಚ್ಚು ಇರುತ್ತದೆ. ಅಲ್ಲದೆ ಈ ಸಮಯದಲ್ಲಿ ಏಳುವುದರಿಂದ ಧನಾತ್ಮಕ ಶಕ್ತಿಯು ಹೆಚ್ಚುತ್ತದೆ.‌

ಋಷಿಮುನಿಗಳ ಪ್ರಕಾರ ಬ್ರಾಹ್ಮೀ ಮುಹೂರ್ತದಲ್ಲಿ ಧ್ಯಾನ, ಲಘು ವ್ಯಾಯಾಮ ಮಾಡುವುದರಿಂದ ಅವರ ದೈಹಿಕ, ಮಾನಸಿಕ ಹಾಗೂ ಭಾವನಾತ್ಮಕ ಸಾಮರ್ಥ್ಯ ಹೆಚ್ಚುತ್ತದೆ. ಈ ಸಮಯದಲ್ಲಿ ನಮ್ಮ ಸುತ್ತಮುತ್ತಲಿನ ಋಣಾತ್ಮಕ ಶಕ್ತಿ ದೂರವಾಗುತ್ತದೆ. ದೇಹದ ಆರೋಗ್ಯ ನಿಯಂತ್ರಿಸುವ ವಾತ, ಪಿತ್ತ, ಕಫದ ಮೇಲೆ ಆಳವಾದ ಪರಿಣಾಮ ಬೀರುತ್ತದೆ. ಒಟ್ಟಿನಲ್ಲಿ ಬ್ರಾಹ್ಮೀ ಮುಹೂರ್ತದಲ್ಲಿ ಏಳುವುದರಿಂದ ಜಡತ್ವ ನಿವಾರಣೆಯಾಗಿ ಕ್ರಿಯಾಶೀಲರಾಗುತ್ತಾರೆ.

Leave A Reply

Your email address will not be published.

error: Content is protected !!
Footer code: