ಬಿಗ್ ಬಾಸ್ ಸಂಜನಾ ಮಾಡುವೆ ಸಂಭ್ರಮ ಹುಡುಗ ಯಾರು ಗೊತ್ತೇ?

0

ಪ್ರೀತಿಸಿದವರು ತಮ್ಮ ಮನೆಯಲ್ಲಿ ಹೇಳದೆ, ಓಡಿ ಹೋಗಿ ಮದುವೆಯಾಗುವುದು ಸರ್ವೇ ಸಾಮಾನ್ಯವಾಗಿದೆ.‌ ಬಿಗ್ ಬಾಸ್ ಸ್ಪರ್ಧಿ ಹಾಗೂ ನಟಿ ಸಂಜನಾ ಅವರು ಪ್ರೀತಿಸಿದ ಹುಡುಗನನ್ನು ಕೆಲವೆ ದಿನಗಳಲ್ಲಿ ವಿವಾಹವಾಗಲಿದ್ದಾರೆ. ಹಾಗಾದರೆ ಸಂಜನಾ ಅವರು ಪ್ರೀತಿಸಿದ ಹುಡುಗ ಯಾರು, ಅವನ ಬಗ್ಗೆ ಒಂದಿಷ್ಟು ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.

ಬಿಗ್ ಬಾಸ್ ರಿಯಾಲಿಟಿ ಶೋನಲ್ಲಿ ಸ್ಪರ್ಧಿಸಿದ ಸಂಜನಾ ಅವರು ಉತ್ತಮ ಆಟದ ಪ್ರದರ್ಶನ ನೀಡಿದ್ದಾರೆ. ಅಲ್ಲದೆ ಸಂಜನಾ ಅವರು ಸೀರಿಯಲ್ ನಲ್ಲಿ ನಟಿಸುವ ಮೂಲಕ ಕನ್ನಡಿಗರ ಮನಸ್ಸನ್ನು ಗೆದ್ದಿದ್ದಾರೆ. ಅವರು ಸ್ಟಾರ್ ಸುವರ್ಣದಲ್ಲಿ ಪ್ರತಿದಿನ ಪ್ರಸಾರವಾಗುವ ಸಂಘರ್ಷ ಸೀರಿಯಲ್ ನಲ್ಲಿ ನಟಿಸುತ್ತಿದ್ದಾರೆ. ಸಂಜನಾ ಅವರು ಕೆಲವೆ ದಿನಗಳಲ್ಲಿ ಮದುವೆಯಾಗುವ ಸಂತೋಷದಲ್ಲಿದ್ದಾರೆ. ಸಂಜನಾ ಅವರು ತಮ್ಮ ಬಾಯ್ ಫ್ರೆಂಡ್ ಜೊತೆ ಇರುವ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಸಂಜನಾ ಅವರು ಮದುವೆಯಾಗುತ್ತಿರುವ ಹುಡುಗನ ಹೆಸರು ಮೋಹನ್. ಅವರು ಸಿನಿಮಾ ರಂಗದಲ್ಲಿ ಕೆಲಸ ಮಾಡುತ್ತಿದ್ದಾರೆ. ಸಿನಿಮಾ ಇಂಡಸ್ಟ್ರಿಯ ಮೂಲಕ ಇಬ್ಬರಿಗೂ ಪರಿಚಯವಾಯಿತು.

ಇವರಿಬ್ಬರು ಮೊದಲು ಬೆಸ್ಟ್ ಫ್ರೆಂಡ್ಸ್ ಆಗಿದ್ದರು ನಂತರ ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದರು ಇದೀಗ ಮದುವೆಯಾಗಲು ನಿರ್ಧರಿಸಿದ್ದಾರೆ. ಸಂಜನಾ ಅವರು ಹಾಗೂ ಮೋಹನ್ ಅವರ ಮನೆಯಲ್ಲಿ ಒಪ್ಪಿದ ನಂತರವೆ ಈ ವಿಷಯವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಸಂಜನಾ ಅವರು ಅವರ ಬಾಯ್ ಫ್ರೆಂಡ್ ಬಗ್ಗೆ ನನ್ನ ಜೀವನದಲ್ಲಿ ಬಂದು ಜೀವನವನ್ನು ಇನ್ನಷ್ಟು ಸುಂದರಗೊಳಿಸಿದ್ದಕ್ಕಾಗಿ ಧನ್ಯವಾದಗಳು, ನಿನ್ನಂತ ರತ್ನವನ್ನು ನನ್ನ ಜೀವನಕ್ಕೆ ಕಳುಹಿಸಿದಕ್ಕಾಗಿ ಧನ್ಯವಾದಗಳು ಎಂದು ಹೇಳಿಕೊಂಡಿದ್ದಾರೆ. ಈಗಾಗಲೆ ಸಂಜನಾ ಹಾಗೂ ಮೋಹನ್ ಅವರ ಮದುವೆಗೆ ಸಿದ್ಧತೆ ನಡೆದಿದ್ದು ಸ್ವಲ್ಪ ದಿನಗಳಲ್ಲೆ ಮದುವೆಯಾಗಲಿದ್ದಾರೆ. ಇವರಿಬ್ಬರಿಗೂ ಮೊದಲು ಎಂಗೇಜ್ಮೆಂಟ್ ನಡೆಯಲಿದೆ. ಅವರಿಬ್ಬರ ಫೋಟೊಗಳನ್ನು ಸಾಮಾಜಿಕ ಜಾಲತಾಣದಲ್ಲಿ ನೋಡಬಹುದು. ಒಟ್ಟಿನಲ್ಲಿ ಲವ್ ಕಮ್ ಅರೇಂಜ್ಡ್ ಮ್ಯಾರೇಜ್ ಆಗುತ್ತಿರುವ ಸಂಜನಾ ಹಾಗೂ ಮೋಹನ್ ಅವರ ಮುಂದಿನ ಜೀವನ ಸುಖಮಯವಾಗಿರಲಿ ಎಂದು ಆಶಿಸೋಣ.

Leave A Reply

Your email address will not be published.

error: Content is protected !!