ಬಾಹುಬಲಿ ಸಿನಿಮಾದ ಪೈಟಿಂಗ್ ಪ್ರಾಕ್ಟೀಸ್ ಮಾಡುತ್ತಿರುವ ಪ್ರಭಾಸ್ ಹಾಗೂ ಅನುಷ್ಕಾ

0

ಬಾಹುಬಲಿ ಸಿನಿಮಾವನ್ನು ಸಾಮಾನ್ಯವಾಗಿ ಎಲ್ಲರೂ ನೋಡಿದ್ದಾರೆ. ಸೂಪರ್ ಹಿಟ್ ಆಗಿರುವ ಬಾಹುಬಲಿ ಸಿನಿಮಾದಲ್ಲಿ ನಟಿಸಿರುವ ನಟರು ಅದ್ಬುತವಾಗಿ ನಟಿಸಿದ್ದಾರೆ. ಬಾಹುಬಲಿ ಸಿನಿಮಾ ಬಗ್ಗೆ, ಸಿನಿಮಾದಲ್ಲಿ ಬರುವ ಪಾತ್ರದ ಬಗ್ಗೆ ಹಾಗೂ ಸಿನಿಮಾದಲ್ಲಿ ನಟಿಸಿದ ನಟರ ಬಗ್ಗೆ ಕೆಲವು ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ.

ಹಿಂದಿಯಲ್ಲಿ ಮೂಡಿಬಂದಿರುವ ಬಾಹುಬಲಿ ಸಿನಿಮಾ ಚಿತ್ರರಂಗದಲ್ಲಿ ಅತ್ಯಂತ ಯಶಸ್ವಿ ಚಿತ್ರವಾಗಿದೆ. ರಾಜಮೌಳಿ ನಿರ್ದೇಶನದ ಬಾಹುಬಲಿ ಎಲ್ಲರ ಮನಸ್ಸನ್ನು ಗೆದ್ದಿದೆ ಹಾಗೆಯೇ ಅದರಲ್ಲಿ ಬರುವ ಕಥಾಹಂದರ ಹಾಗೂ ಪಾತ್ರಗಳು ಇತಿಹಾಸ ಹಾಗೂ ಪುರಾಣದ ಹಿನ್ನೆಲೆಯನ್ನು ಹೊಂದಿದೆ. ಬಾಹುಬಲಿ ಸಿನಿಮಾದಲ್ಲಿ ಬರುವ ಮಾಹಿಷ್ಮತಿ ಎಂಬ ನಗರ ಮಧ್ಯಪ್ರದೇಶದಲ್ಲಿದ್ದು ಪರಮಾರರ ಶಾಸನದಲ್ಲಿ ಉಲ್ಲೇಖಿತವಾದಂತೆ ಇದು ಆವಂತಿ ಸಾಮ್ರಾಜ್ಯದ ದಕ್ಷಿಣದ ಒಂದು ಪ್ರಮುಖ ನಗರವಾಗಿದೆ. ಈ ಚಿತ್ರದಲ್ಲಿ ಪಲ್ಲವರ ಒಂದನೇ ಮಹೇಂದ್ರವರ್ಮನ ಪಾತ್ರವನ್ನು ಪ್ರಭಾಸ್ ಅವರು ಮಹೇಂದ್ರ ಎಂಬ ಹೆಸರಿನಲ್ಲಿ ನಟಿಸಿದರು. ಬಾಹುಬಲಿ ಎಂಬ ಹೆಸರು ಜೈನರ ಮೊದಲ ತೀರ್ಥಂಕರ, ಆದಿನಾಥನ ಹಿರಿಯ ಮಗನಾಗಿದ್ದು ಭರತನ ಅಣ್ಣನಾಗಿದ್ದಾನೆ. ಬಾಹುಬಲಿಯನ್ನು ಗೊಮ್ಮಟೇಶ್ವರ ಎಂತಲೂ ಕರೆಯುತ್ತಾರೆ.

ಬಾಹುಬಲಿ ಚಿತ್ರದಲ್ಲಿ ತಮನ್ನಾ ಅವರು ಆವಂತಿಕ ಎಂಬ ಹೆಸರಿನ ಪಾತ್ರವನ್ನು ನಿರ್ವಹಿಸಿದ್ದಾರೆ. ಆವಂತಿಕ ಇದು ಗಂಗಾನದಿ ಮತ್ತು ಪಾರ್ವತಿದೇವಿಯ ಇನ್ನೊಂದು ಹೆಸರು. ಉಜ್ಜಯಿನಿಯ ಮೊದಲ ಹೆಸರು ಆವಂತಿ ಅಥವಾ ಆವಂತಿಕ ಆಗಿತ್ತು, ಆವಂತಿಕ ಎಂದರೆ ಉಜ್ಜಯನಿಯ ರಾಜಕುಮಾರಿ ಎಂದರ್ಥ. ಅನುಷ್ಕಾ ಶೆಟ್ಟಿ ದೇವಸೇನಾ ಎಂಬ ಪಾತ್ರದಲ್ಲಿ ನಟಿಸಿದ್ದಾರೆ. ದೇವಸೇನಾ ಹಿಂದೂ ದೇವತೆಯ ಹೆಸರಾಗಿದ್ದು, ಇಂದ್ರನ ಮಗಳಾಗಿದ್ದು, ಕಾರ್ತಿಕೇಯನ ಮೊದಲ ಪತ್ನಿ. ಈ ಚಿತ್ರದಲ್ಲಿ ಬಿಜ್ಜಳದೇವ ಎಂಬ ಪಾತ್ರವೂ ಬರುತ್ತದೆ. 12ನೇ ಶತಮಾನದಲ್ಲಿ ಕಳಚೂರ್ಯ ದೊರೆ ಬಿಜ್ಜಳನೆಂಬ ಅರಸ ಇದ್ದಾನೆಂದು ಉಲ್ಲೇಖನೀಯ. ಬಲ್ಲಾಳದೇವ ಎಂಬ ಪಾತ್ರವನ್ನು ಈ ಚಿತ್ರದಲ್ಲಿ ನೋಡಬಹುದು. ಹೊಯ್ಸಳರ ಸಾಮ್ರಾಜ್ಯವನ್ನು ಕೆಲವು ವರ್ಷಗಳ ಕಾಲ ಮೂರನೇ ಬಲ್ಲಾಳ ಆಳುತ್ತಾನೆ. ಬಾಹುಬಲಿ ಚಿತ್ರದಲ್ಲಿ ಕಾಲಕೇಯ ಎಂದ ರಾಕ್ಷಸನನ್ನು ನೋಡುತ್ತೇವೆ. ಕಾಲಕೇಯ ಇವನು ಅತ್ಯಂತ ಕ್ರೂರಿ ಹಾಗೂ ಶಕ್ತಿಶಾಲಿ ರಾಕ್ಷಸನಾಗಿದ್ದನು.

ಬಾಹುಬಲಿ ಚಿತ್ರದಲ್ಲಿ ಪ್ರತಿಯೊಬ್ಬ ಕಲಾವಿದರು ಅತ್ಯುತ್ತಮವಾಗಿ ನಟಿಸಿದ್ದಾರೆ. ಅವರಲ್ಲಿ ಮುಖ್ಯ ಪಾತ್ರದಲ್ಲಿ ನಟಿಸಿದ ಪ್ರಭಾಸ್ ಅವರು ಅಕ್ಟೋಬರ್ 23, 1979ರಲ್ಲಿ ತಮಿಳುನಾಡಿನ ಚೆನ್ನೈನಲ್ಲಿ ಜನಿಸಿದ್ದಾರೆ. ಇವರ ತಂದೆಯ ಹೆಸರು ಸೂರ್ಯನಾರಾಯಣ ರಾಜು, ತಾಯಿಯ ಹೆಸರು ಸಿವ ಕುಮಾರಿ. ಇವರಿಗೆ ಇಬ್ಬರು ಸಹೋದರರಿದ್ದಾರೆ , ಒಬ್ಬಳು ಸಹೋದರಿ ಇದ್ದಾಳೆ. ಇವರು ನಟನಾಗಿ ಅನೇಕ ಸಿನಿಮಾಗಳಲ್ಲಿ ಅಭಿನಯಿಸಿ ಜನರ ಮೆಚ್ಚುಗೆಯನ್ನು ಗಳಿಸಿದ್ದಾರೆ. ಬಾಹುಬಲಿ ಚಿತ್ರದಲ್ಲಿ ಮುಖ್ಯ ಪಾತ್ರದಲ್ಲಿ ನಟಿಸಿದ ಇನ್ನೊಬ್ಬ ನಟಿ ಅನುಷ್ಕಾ ಶೆಟ್ಟಿ ಅವರು ನವೆಂಬರ್ 7, 1981ರಲ್ಲಿ ಕರ್ನಾಟಕದ ಮಂಗಳೂರಿನಲ್ಲಿ ಜನಿಸಿದ್ದಾರೆ. ಇವರ ಮಾತೃಭಾಷೆ ತುಳು. ಇವರು ಬಿಸಿಎ ಪದವಿಯನ್ನು ಪಡೆದಿದ್ದಾರೆ. ಅನುಷ್ಕಾ ಅವರ ತಂದೆಯ ಹೆಸರು ಎ.ಎನ್ ವಿಠಲ್ ಶೆಟ್ಟಿ, ತಾಯಿಯ ಹೆಸರು ಪ್ರಫುಲ್ಲ ಶೆಟ್ಟಿ, ಇವರಿಗೆ ಒಬ್ಬ ಸಹೋದರನಿದ್ದಾನೆ. ಇವರು ನಟಿಯಾಗಿ ಅನೇಕ ಹಿಂದಿ, ತೆಲುಗು ಸಿನಿಮಾಗಳಲ್ಲಿ ನಟಿಸಿ ಜನರ ಮೆಚ್ಚುಗೆ ಗಳಿಸಿದ್ದಾರೆ. ಬಾಹುಬಲಿ ಚಿತ್ರದಲ್ಲಿ ಪ್ರಭಾಸ್ ಹಾಗೂ ಅನುಷ್ಕಾ ಶೆಟ್ಟಿ ಅವರು ಖಡ್ಗಗಳಿಂದ ಫೈಟಿಂಗ್ ಸೀನ್ ಮಾಡಬೇಕಾಗಿದ್ದು ಶೂಟಿಂಗ್ ಮಾಡುವ ಮೊದಲು ಪ್ರಾಕ್ಟೀಸ್ ಮಾಡುತ್ತಿದ್ದರು. ಅವರು ಪ್ರಾಕ್ಟೀಸ್ ಮಾಡುವ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ನೋಡಬಹುದು. ಪ್ರಭಾಸ್ ಹಾಗೂ ಅನುಷ್ಕಾ ಶೆಟ್ಟಿ ಅವರಿಗೆ ಹೆಚ್ಚಿನ ಅವಕಾಶಗಳು ಸಿಗಲಿ, ಹೆಚ್ಚು ಮನರಂಜನೆ ನೀಡಲಿ ಎಂದು ಆಶಿಸೋಣ.

Leave A Reply

Your email address will not be published.

error: Content is protected !!
Footer code: