WhatsApp Group Join Now
Telegram Group Join Now

ಸಾಮಾನ್ಯವಾಗಿ ಸಿನಿಮಾ ನಟ ನಟಿಯರು ತಮ್ಮ ಫಿಟ್ನೆಸ್ ಬಗ್ಗೆ ಹೆಚ್ಚಿನ ಮುತುವರ್ಜಿ ವಹಿಸುತ್ತಾರೆ. ಅವರು ಪ್ರತಿದಿನ ವ್ಯಾಯಾಮ, ಯೋಗಾಭ್ಯಾಸ ಮಾಡುತ್ತಾರೆ. ಅದರಂತೆ ಕನ್ನಡ ಹಾಗೂ ಇತರೆ ಭಾಷೆಗಳಲ್ಲಿ ನಟಿಸಿದ ಲಾಸ್ಯ ನಾಗರಾಜ್ ಅವರು ತಮ್ಮ ಯೋಗಾಭ್ಯಾಸದ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಅದರ ಬಗ್ಗೆ ಇನ್ನಷ್ಟು ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ.

ಸಾಮಾನ್ಯವಾಗಿ ನಟಿಯರ ಫೋಟೊದಲ್ಲಿ ಆಕರ್ಷಣೆ ಇದ್ದೆ ಇರುತ್ತದೆ. ಅದರಲ್ಲೂ ವಿಶೇಷವಾಗಿ ಫೋಟೊ ಶೂಟ್ ಮಾಡಿದರೆ ಆಗ ಹೇಳ ಬೇಕಾಗಿಲ್ಲ. ನಟಿ ಲಾಸ್ಯ ನಾಗರಾಜ್ ಬಗ್ಗೆ ಎಲ್ಲರಿಗೂ ಗೊತ್ತಿರುತ್ತದೆ. ಬಿಗ್ ಬಾಸ್ ಸೀಸನ್ 5 ರಲ್ಲಿ ವಿಶೇಷ ಸ್ಪರ್ಧಿಯಾಗಿ ಜನರಿಗೆ ಸಖತ್ ಮನೋರಂಜನೆ ನೀಡಿದಂತಹ ನಟಿ ಲಾಸ್ಯ ನಾಗರಾಜ್. ಇವರು ದಕ್ಷಿಣ ಚಿತ್ರರಂಗದಲ್ಲಿ ಬಹುಭಾಷಾ ನಟಿ ಎಂದು ಕರೆಸಿಕೊಂಡಿದ್ದಾರೆ. ಇವರು ಓದಿದ್ದು ಬೆಂಗಳೂರಿನ ಮೌಂಟ್ ಕಾರ್ಮೆಲ್ ಕಾಲೇಜಿನಲ್ಲಿ ನಂತರ ಆರಾಧನಾ ಭರತನಾಟ್ಯ ಸಂಸ್ಥೆಯಲ್ಲಿ ನೃತ್ಯ ನಿರ್ದೇಶಕಿಯಾಗಿದ್ದರು.

ಲಾಸ್ಯ ಅವರು ಮೊಟ್ಟ ಮೊದಲು ಅಭಿನಯಿಸಿದ್ದು ಕನ್ನಡದ ಅಸತೋಮ ಸದ್ಗಮಯ ಚಿತ್ರದಲ್ಲಿ. ಅದೆ ರೀತಿ ನೆಟ್ ಫ್ಲಿಕ್ಸ್ ನಲ್ಲಿ ಪ್ರಸಾರ ಆಗುತ್ತಿದ್ದ ಮಿಡ್ ನೈಟ್ ಚಿಲ್ಡ್ರನ್ ಎಂಬ ವೆಬ್ ಸೀರಿಸ್ ನಲ್ಲಿ ನಟಿಸಿದ್ದರು. ಇನ್ನು ಅನೇಕ ಚಿತ್ರಗಳಲ್ಲಿ ಪೋಷಕ ಪಾತ್ರಗಳಲ್ಲಿ ಹಾಗೂ ಐಟಂ ಸಾಂಗ್ ಗಳಿಗೆ ಹೆಜ್ಜೆ ಹಾಕುವುದರ ಮೂಲಕ ಕಾಣಿಸಿಕೊಂಡಿದ್ದಾರೆ. ಇದರ ಮಧ್ಯೆ ಲಾಸ್ಯ ನಾಗರಾಜ್ ಅವರು ತಮ್ಮ ವಿಶೇಷ ರೀತಿಯ ಫೋಟೋ ಶೂಟ್ ಗಳ ಮೂಲಕವೂ ಫೇಮಸ್ ಆದರು. ಈ ಹಿಂದೆ ತಮ್ಮ ಮಾದಕ ಫೋಟೊ ಶೂಟ್ ಮಾಡಿಸಿದ್ದರು, ಅದು ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಮುದ್ದು ಮುದಾಗಿ ಇರುವ ಜೊತೆಗೆ ಗುಳಿ ಕೆನ್ನೆಯ ಫೋಟೊ ಶೂಟ್ ಗೆ ಪಡ್ಡೆ ಹುಡುಗರು ನಿದ್ದೆ ಗೆಟ್ಟಿದ್ದರು. ಸದಾ ಸೋಶಿಯಲ್ ಮೀಡಿಯಾದಲ್ಲಿ ಆಕ್ಟೀವ್ ಆಗಿರುವ ಲಾಸ್ಯ ನಾಗರಾಜ್, ಪ್ರತಿದಿನ ಒಂದಲ್ಲ ಒಂದು ರೀತಿಯ ಫೋಟೋಗಳನ್ನು, ವಿಡೀಯೋಗಳನ್ನು ಅಪ್ ಲೋಡ್ ಮಾಡುತ್ತಾ ಅಭಿಮಾನಿಗಳ ಜೊತೆ ಸಂಪರ್ಕದಲ್ಲಿರುತ್ತಾರೆ.

ಇದೀಗ ಲಾಸ್ಯ ಅವರು ವಿಶಿಷ್ಟ ರೀತಿಯ ಫೋಟೋಗಳನ್ನು ಅಪ್ಲೋಡ್ ಮಾಡಿದ್ದಾರೆ, ಇದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಲಾಸ್ಯ ನಾಗರಾಜ್ ಅವರಿಗೆ ಯೋಗಭ್ಯಾಸದ ಮೇಲೆ ವಿಶೇಷವಾದ ಅಭಿರುಚಿ ಇದೆ. ತಮ್ಮ ಆರೋಗ್ಯದ ಜೊತೆ ಫಿಟ್ನೆಸ್ ಕಾಯ್ದುಕೊಳ್ಳಲು ಅವರು ಯೋಗಭ್ಯಾಸ ಮಾಡುತ್ತಾರೆ. ಇದೀಗ ತಮ್ಮ ಇನ್ಸಟಾಗ್ರಾಂ ಖಾತೆಯಲ್ಲಿ ಕೆಂಬಣ್ಣದ ಲೆಗ್ಗಿನ್ಸ್ ಹಾಗೂ ಬಿಳಿ ಬಣ್ಣದ ಬನಿಯನ್ ಹಾಕಿಕೊಂಡು ವಿಶಿಷ್ಟ ಭಂಗಿಯಲ್ಲಿ ಯೋಗಾಭ್ಯಾಸ ಮಾಡಿರುವ ಫೋಟೋಗಳನ್ನು ಅಪ್ಲೋಡ್ ಮಾಡಿದ್ದಾರೆ. ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದ್ದು ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ. ಲಾಸ್ಯ ಅವರು ಸಿನಿಮಾ ನಟಿ ಶಿಲ್ಪಾ ನಾಗರಾಜ್ ಅವರಂತೆ ಫಿಟ್ನೆಸ್ ಕಾಯ್ದುಕೊಳ್ಳುತ್ತಾರೆ ಎಂದು ಅಭಿಮಾನಿಗಳು ಅಭಿಪ್ರಾಯ ಪಟ್ಟಿದ್ದಾರೆ.

WhatsApp Group Join Now
Telegram Group Join Now

By

Leave a Reply

Your email address will not be published. Required fields are marked *

error: Content is protected !!
Footer code: