ಗುರುಗಾವ್ ನ ವಿವ್ ಸೊಸೈಟಿಯ ಅಪಾರ್ಟ್ಮೆಂಟ್ ನ ಕಾಂಪ್ಲೆಕ್ಸ್ ನ ಮೇಲಂತಸ್ತಿನ ಪ್ಲಾಟ್ ಒಂದನ್ನ ಅದರ ಒನರ್  ಆಗಿದ್ದ ಮಾಜಿ ಜರ್ನಲಿಸ್ಟ ಶೆಫಾನಿ ಬನ್ಸಿಂಗ್ ತಿವಾರಿ ಎಂಬ 35 ವರ್ಷದ ಈಕೆ ಅದನ್ನು ಮಾರಾಟಕ್ಕೆ ಇಟ್ಟಿದ್ದಳು. ನ್ಯೂಸ್ ಪೇಪರ್ ನಲ್ಲಿ ಈ ಮಾಹಿತಿಯನ್ನು ಗಮನಿಸಿದ ಆ ವ್ಯಕ್ತಿ ಶೆಫಾನೀಗೆ ಕರೆ ಮಾಡುತ್ತಾನೆ, ಆತನ ಹೆಸರು ವಿಕ್ರಂ ಚೌಹಾಣ್ ಇವರು ಅಲ್ಲಿನ ರಿಯಲ್ ಎಸ್ಟೇಟ್ ಒಂದರಲ್ಲಿ ಸೀನಿಯರ್ ಎಂಪ್ಲೊಯ್ ಆಗಿದ್ದವರು. ಸೂರ್ಯನ ಎಳೆ ಬಿಸಿಲು ಅದರ ಬಾಲ್ಕನಿಗೆ ನೇರವಾಗಿ ಬೀಳುವುದರಿಂದ ಅದು ಅವರಿಗೆ ಇಷ್ಟವಾಗಿ ಅದನ್ನು ಖರೀದಿ ಮಾಡಲು ಮುಂದಾಗಿದ್ದ.

ಎಲ್ಲ ಬರೀ ಮಾತುಕತೆ ನಡೆದು ಮುಂದಿನ ಮೂರು ದಿನಗಳಲ್ಲಿ ಅಗ್ರಿಮೆಂಟ್ ಮಾಡಿಕೊಂಡು ಬ್ಯಾಂಕ್ ನಿಂದ ಅದಕ್ಕೆ ಬೇಕಾದ ಲೋನ್ ಅನ್ನು ಕೂಡ ಪಡೆದುಕೊಂಡಿದ್ದ ವಿಕ್ರಂ ಶೆಫಾನಿಯ ಬಳಿ ಬರುತ್ತಾನೆ. ಇದಾಗಿ ಆ ಪ್ಲಾಟ್ ಆತನ ವಶಕ್ಕೆ ಬಂದಾಗ ಅದಕ್ಕೆ ಹೊಸದಾಗಿ ಬಣ್ಣ ಹಾಗೂ ಆಲಟ್ರೆಷನ್ ಕೊಟ್ಟ ವಿಕ್ರಂ ಮುಂದಿನ 3 ವಾರಗಳಲ್ಲಿ ಎಲ್ಲಾ ತಯಾರಿ ಮಾಡಿಕೊಂಡು ಅದರ ಗೃಹ ಪ್ರವೇಶಕ್ಕೆ ತನ್ನ ಪತ್ನಿ ದೀಪಿಕಾ ಹಾಗೂ ಆ ಪ್ಲಾಟ್ ಮಾರಿದ ಶೆಫಾನಿ ಮತ್ತು ಆಕೆಯ ಪತಿಯನ್ನು ಕೂಡ ಕರೆಯುತ್ತಾನೆ.

ಇನ್ನು ವಿಕ್ರಂ ನ ಪತ್ನಿ ದೀಪಿಕಾ ಅಲ್ಲಿನ ಬ್ಯಾಂಕ್ ಒಂದರಲ್ಲಿ ಅಸಿಸ್ಟಂಟ್ ಮ್ಯಾನೆಜರ್  ಆಗಿದ್ದರು. ಮೂಲತಃ ಸಿರಿವಂತ ಕುಟುಂಬದವಳಾಗಿದ್ದ ಈಕೆಗೆ ಯಾವ ಸಂಕಷ್ಟವು ಇರಲಿಲ್ಲ, ವಿಕ್ರಂ ಗೆ ದಿನವು ವಾಕಿಂಗ್ ಮಾಡುವ ಅಭ್ಯಾಸವಿದ್ದರಿಂದ ದಿನವು ಬೆಳಗ್ಗೆ ವಾಕಿಂಗ್ ಹೋಗುವಾಗ ಆತನ ಜೊತೆ ಶೆಫಾನಿಯು ವಾಕಿಂಗ್ ಹೋಗುತ್ತಿದ್ದಳು. ದಿನವು ಅದು ಇದು ಮಾತನಾಡುತ್ತಿದ್ದ ಅವರ ನಡುವಿನ ಆಪ್ತತೆ ಈ ಭೇಟಿಯಿಂದ ಹೆಚ್ಚಾಗಿತ್ತು. ಪ್ಲಾಟ್ ಖರೀದಿಯ ಸಮಯದಲ್ಲಿ ಮೊಬೈಲ್ ನಂಬರ್ ಎಕ್ಸ್‌ಚೇಂಜ್‌ ಆಗಿದ್ದರಿಂದ ಅವರು ಮಾತಿನಲ್ಲಿ ಕೂಡ ಕಾಲ ಕರೆಯುತ್ತಿದ್ದರು.

ಹೀಗೆ ದಿನ ಭೇಟಿ ಮಾಡುವುದರಿಂದ ಮಾತಾಡುವುದರಿಂದ ಇವರಿಬ್ಬರ ಮಧ್ಯೆ ಅಸಹಜ ಬಾಂಧವ್ಯ ಉಂಟಾಗಿತ್ತು. ವಿಕ್ರಂ ಪತ್ನಿ ಕೆಲಸಕ್ಕೆ ಹೋದ ತಕ್ಷಣವೇ ಶೆಫಾನಿ ವಿಕ್ರಂನ ಮನೆಗೆ ಬಂದು ಗಂಟೆಗಟ್ಟಲೇ ಕಾಲ ಕರೆಯುತ್ತಿದ್ದರು. ದೀಪಿಕಾ ಅವರಿಗೆ ಅನುಮಾನ ಬರಬಾರದೆಂದು ಮಕ್ಕಳಿಗೆ ಆಟಿಕೆ ಕೊಡುವ ನೆಪದಲ್ಲಿ ಸಹ ವಿಕ್ರಂ ಮನೆಗೆ ಬಂದು ಹೋಗುತ್ತಿದ್ದಳು.ಆದರು ದೀಪಿಕಾ ಅವರಿಗೆ ತನ್ನ ಗಂಡನ ಜೊತೆಗಿನ ಶೆಫಾನಿ ಮಾತು ನಡುವಳಿಕೆ ಕಂಡು ಅನುಮಾನ ಬಂದು ಅವರನ್ನು ಸೂಕ್ಷ್ಮವಾಗಿ ಗಮನಿಸಿದ್ದಲ್ಲದೆ ಅವರು ವಾಕಿಂಗ್ ಹೋದಾಗ ಹಿಂಬಾಲಿಸಿ ಅವರ ಪ್ರೇಮದಾಟವನ್ನು ಕಣ್ಣಾರೆ ಕಾದಿದ್ದರು. ನಂತರ ದೀಪಿಕಾ ಗಂಡನಿಗೆ ಬೆದರಿಕೆ ಹಾಕಿದ್ದಳು ಶೆಫಾನಿಯೊಂದಿಗೆ ಸೇರಬೇಡಿ ಎಂದು ಆಗಿನಿಂದ ಅವರು ಮನೆಯಲ್ಲಿ ಭೇಟಿ ಮಾಡದೇ ಟ್ರಿಪ್ಗೆಂದು ಹೋಗಿ ಅಲ್ಲಿ ಕಾಲ ಕಳೆದು ಬರುತ್ತಿದ್ದರು.

ಅದೇ ಸಮಯದಲ್ಲಿ ದೀಪಿಕಾ ಎರಡನೇ ಬಾರಿ ಗರ್ಭವತಿ ಆಗಿದ್ದರಿಂದ ತವರು ಮನೆಗೆ ಹೋದಾಗ ಇವರ ಆಟಕ್ಕೆ ಲಗಾಮು ಇಲ್ಲದಂತೆ ಆಗಿತ್ತು ಆಗ ಶೆಫಾನಿ ಕೂಡ ವಿಕ್ರಂ ಇಂದ ಗರ್ಭ ಧರಿಸುತ್ತಾಳೆ. ಆಗಿನಿಂದ ಶೆಫಾನಿ, ವಿಕ್ರಂ ಗೆ ತನ್ನ ಹೆಂಡತಿ ಗೆ ವಿಚ್ಛೇದನ ನೀಡು ಎಂದು ಪಿಡಿಸುತ್ತಿರುತ್ತಾಳೆ, ಅದನ್ನು ಅವನು ಹೆಂಡತಿ ಬಳಿ ಕೇಳಿದಾಗಲೂ ಅವಳು ನಿರಾಕರಿಸಿದ್ದಳು ವಿಚ್ಛೇದನ ನೀಡಲು. ಎರಡನೇ ಮಗು ಗಂಡು ಮಗುವಿಗೆ ಜನ್ಮ ನೀಡಿದ್ದಳು ದೀಪಿಕಾ.

ಇದರ ಮಧ್ಯೆ ಶೆಫಾನಿ ತನ್ನ ಪತಿ ಯೊಂದಿಗೆ ಮಾತಾಡಿ ವಿಚ್ಛೇದನವನ್ನು ಕೂಡ ಪಡೆದುಕೊಂಡಿದ್ದಳು. ಶೆಫಾನಿ ದೀಪಿಕಾಳನ್ನು ಕೊಲೆ ಮಾಡು ಎಂದು ವಿಕ್ರಂ ಗೆ ಒತ್ತಡ ಹೇರುತ್ತಿದ್ದರಿಂದ 2018 ಅಕ್ಟೋಬರ್ 24 ರಂದು ಅಲ್ಲಿನ ನ್ಯಾನೋ ಹಿಲ್ ಹೋಟೆಲ್ ಗೆ ಕರೆದುಕೊಂಡು ಹೋಗಿದ್ದ ಆದರೆ ಅಲ್ಲಿ ಅವನ ಪ್ರಯತ್ನ ಕೈಗೂಡದ್ದರಿಂದ ಶೆಫಾನಿಗೆ ಮತ್ತಷ್ಟು ಕೋಪ ಹೆಚ್ಚಾಗಿತ್ತು ದೀಪಿಕಾ ಮೇಲೆ.. ಪತಿಯ ಒಳಿತಿಗಾಗಿ ದೀಪಿಕಾ ಆ ಒಂದು ದಿನ ಪೂರ್ತಿ ಉಪವಾಸವಿದ್ದು ಪೂಜೆ ಮಾಡುತ್ತಿದ್ದಳು ಆಗ ಇವರಿಬ್ಬರ ಮನಸ್ತಾಪದ ಬಗ್ಗೆ ಅರಿವಿದ್ದ ಕುಟುಂಬದವರು ಇಬ್ಬರಿಗೆ ತಿಳಿ ಹೇಳಿ ಹೋಗಿದ್ದರಿಂದ ವಿಕ್ರಂ ಗೆ ದೀಪಿಕಾ ಮೇಲೆ ಮತ್ತಷ್ಟು ಸಿಟ್ಟು ಹೆಚ್ಚಾಗಿತ್ತು.

ಆಗ ಮತ್ತೊಮ್ಮೆ ವಿಚ್ಛೇದನಕ್ಕೆ ಒತ್ತಾಯಿಸಿದ್ದ ಆದರೆ ದೀಪಿಕಾ ಇದನ್ನು ನಿರಾಕರಿಸದ್ದರಿಂದ ವಿಕ್ರಂ ಆಕೆಯ ಕೈ ಮತ್ತು ಜುಟ್ಟನ್ನು ಹಿಡಿದು ಬಾಲ್ಕನಿಗೆ ಬಲವಂತವಾಗಿ ಎಳೆದು ತಂದು ವಿಚ್ಛೇದನಕ್ಕೆ ಒಪ್ಪದೇ ಹೋದರೆ ಕೆಳಕ್ಕೆ ತಳ್ಳುತ್ತಿನಿ ಎಂದು ಬೆದರಿಕೆ ಹಾಕಿದ್ದ ಆದರೆ ಒಪ್ಪದ ದೀಪಿಕಾಳನ್ನು 8 ನೇ ಮಹಡಿಯಿಂದ ಕೆಳಕ್ಕೆ ತಳ್ಳಿದ್ದ, ಇದರಿಂದ ದೀಪಿಕಾ ಸ್ಥಳದಲ್ಲಿ ಮೃತ ಪಟ್ಟಿದ್ದಳು. ಪೊಲೀಸರಿಗೆ ವಿಕ್ರಂ ಗೆ ಈ ಉಪಾಯವನ್ನು ಕೊಟ್ಟಿದ್ದು ಶೆಫಾನಿ ಎಂದು ತಿಳಿದಿತ್ತು ಅವರ ಕಾಲ್ ಲಿಸ್ಟ್ ಹಾಗೂ ಸಂದೇಶಗಳಿಂದ ಹಾಗಾಗಿ ಇವರಿಬ್ಬರನ್ನು ಅರೆಸ್ಟ್ ಮಾಡಿದ್ದರು.

By admin

Leave a Reply

Your email address will not be published. Required fields are marked *

error: Content is protected !!
Footer code: