ಫೆಬ್ರುವರಿ ತಿಂಗಳಿನಲ್ಲಿ ಮೇಷ ರಾಶಿಯವರ ಗುಣ ಸ್ವಭಾವ ಉದ್ಯೋಗ ವ್ಯಾಪಾರ ವ್ಯವಹಾರ ಹೇಗಿರಲಿದೆ ನೋಡಿ

0

ಫೆಬ್ರುವರಿ ತಿಂಗಳಿನಲ್ಲಿ ಮೇಷ ರಾಶಿಯವರ ಗುಣ ಸ್ವಭಾವ ಉದ್ಯೋಗ ವ್ಯಾಪಾರ ವ್ಯವಹಾರ ಆರೋಗ್ಯ ವಿದ್ಯಾಭ್ಯಾಸ ಇವುಗಳ ಕುರಿತಾದ ಮಾಹಿತಿಯನ್ನು ನಾವಿಂದು ನಿಮಗೆ ತಿಳಿಸಿಕೊಡುತ್ತೇವೆ. ಫೆಬ್ರುವರಿ ಎರಡನೇ ತಾರೀಖಿನಿಂದ ಮಾಘ ಮಾಸ ಪ್ರಾರಂಭವಾಗುತ್ತದೆ ಮಾಘಮಾಸ ಶುಭವಾಗಿದೆ ಇಲ್ಲಿ ಯಾವುದೇ ಶುಭ ಕಾರ್ಯಗಳು ಇದ್ದರೂ ಮಾಡಬಹುದಾಗಿದೆ. ಮಾಘಮಾಸದ ಫೆಬ್ರುವರಿ ಹನ್ನೆರಡನೇ ತಾರೀಖಿನಂದು ರವಿ ಕುಂಭ ರಾಶಿಗೆ ಪ್ರವೇಶ ಮಾಡುತ್ತಾನೆ ಇಪ್ಪತ್ತಾರನೇ ದಿನಾಂಕದಂದು ಕುಜ ಮಕರ ರಾಶಿಗೆ ಪ್ರವೇಶ ಮಾಡುತ್ತಾನೆ ಇಪ್ಪತ್ತೆಳನೇ ತಾರೀಖಿನಂದು ಶುಕ್ರ ಮಕರ ರಾಶಿಗೆ ಪ್ರವೇಶ ಮಾಡುತ್ತಾನೆ ಈ ಗ್ರಹಗತಿಗಳ ಬದಲಾವಣೆಯಿಂದ ಮೇಷ ರಾಶಿಯ ಮೇಲೆ ಯಾವ ಪರಿಣಾಮ ಉಂಟಾಗುತ್ತದೆ ಎಂಬುದನ್ನು ತಿಳಿಯೋಣ.

ಮೊದಲಿಗೆ ಮೇಷ ರಾಶಿಯವರಿಗೆ ಹನ್ನೊಂದನೇ ಮನೆಯಲ್ಲಿ ಗುರು ಇರುವುದರಿಂದ ಸ್ವಸಾಮರ್ಥ್ಯ ಹೆಚ್ಚಾಗುತ್ತದೆ. ಮನೆಗೆ ಬೇಕಾದಂತಹ ವಸ್ತುಗಳನ್ನು ನೀವು ತರುತ್ತೀರಿ ನೀವು ವಾಹನವನ್ನು ಖರೀದಿ ಮಾಡಬೇಕು ಎಂದರೆ ಫೆಬ್ರವರಿ ತಿಂಗಳು ನಿಮಗೆ ಸಶಕ್ತವಾಗಿದೆ ಹಾಗೆ ಭೂಮಿ ಖರೀದಿಗೆ ಒಳ್ಳೆಯ ಕಾಲವಾಗಿದೆ ಜೊತೆಗೆ ಉತ್ತಮ ವಸ್ತ್ರಗಳನ್ನು ಖರೀದಿ ಮಾಡುತ್ತೀರಿ. ಮೇಷ ರಾಶಿಯವರು ಸರ್ಕಾರಿ ಉದ್ಯೋಗಕ್ಕಾಗಿ ಪ್ರಯತ್ನ ಪಡುತ್ತಿದ್ದರೆ ಫೆಬ್ರವರಿ ತಿಂಗಳು ಅವರಿಗೆ ಸೂಕ್ತವಾಗಿದೆ ಈಗಾಗಲೇ ನೌಕರಿಯಲ್ಲಿರುವವರಿಗೆ ಬಡ್ತಿ ಸಿಗಬಹುದು ಅಭಿವೃದ್ಧಿಯನ್ನು ಕಾಣಬಹುದು. ಮೇಷ ರಾಶಿಯ ರಾಜಕೀಯ ವ್ಯಕ್ತಿಗಳಿಗೂ ಕೂಡ ಫೆಬ್ರವರಿ ತಿಂಗಳು ತುಂಬಾ ಒಳ್ಳೆಯದಿದೆ. ಆರ್ಥಿಕವಾಗಿಯೂ ನಿಮಗೆ ಎಲ್ಲಾ ಕ್ಷೇತ್ರಗಳಲ್ಲಿ ಲಾಭವಾಗುತ್ತದೆ. ವಿದ್ಯಾಭ್ಯಾಸದಲ್ಲಿ ಕೂಡ ಯಾವುದೇ ರೀತಿಯ ತೊಂದರೆ ಉಂಟಾಗುವುದಿಲ್ಲ.

ಹೈನುಗಾರಿಕೆಯನ್ನು ಮಾಡುತ್ತಿರುವವರಿಗು ಕೂಡ ಒಳ್ಳೆಯ ಫಲ ಉಂಟಾಗಲಿದೆ. ಇದು ಗುರು ಹನ್ನೊಂದನೇ ಮನೆಯಲ್ಲಿ ಇರುವುದರಿಂದ ಉಂಟಾಗುವಂತಹ ಪರಿಣಾಮಗಳು ಇನ್ನು ಮೇಷ ರಾಶಿಯವರಿಗೆ ಎರಡನೇ ಮನೆಯಲ್ಲಿ ರಾಹು ಎಂಟನೇ ಮನೆಯಲ್ಲಿ ಕೇತು ಇದ್ದಾನೆ ಇದರಿಂದ ಯಾವುದೇ ರೀತಿಯಾದಂತಹ ತೊಂದರೆಗಳು ಇಲ್ಲ ರಾಶಿಂದ ಹತ್ತನೇ ಮನೆಯಲ್ಲಿ ಶನಿ ಪರಮಾತ್ಮನಿದ್ದಾನೆ. ಇದರಿಂದ ನಿಮಗೆ ಉದ್ಯೋಗದಲ್ಲಿ ಒಳ್ಳೆಯ ಯಶಸ್ಸು ದೊರೆಯುತ್ತದೆ.

ಬೇರೆಯವರ ಕೈ ಕೆಳಗೆ ಕೆಲಸ ಮಾಡುತ್ತಿದ್ದರೆ ನೀವೇ ಉದ್ಯೋಗವನ್ನು ಮಾಡುವಂತಹ ಅವಕಾಶ ದೊರೆಯಬಹುದು ಅದಕ್ಕೆ ನಿಮ್ಮ ಪ್ರಯತ್ನ ಇರಬೇಕು. ನಿಮಗೆ ಬೇರೆಯವರ ಮೇಲೆ ತುಂಬಾ ಪ್ರೀತಿ ವಿಶ್ವಾಸ ಗೌರವ ನಮ್ರತೆ ಭಕ್ತಿ ಇರುತ್ತದೆ ಯಾರದ್ದಾದರೂ ಮೇಲೆ ಕೆಟ್ಟ ಅಭಿಪ್ರಾಯ ಬಂದರೂ ಕೂಡ ಅದನ್ನು ನೀವು ಸರಿಪಡಿಸಿಕೊಳ್ಳುತ್ತಿರಿ. ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಅಧಿಕಾರದಲ್ಲಿ ಇರುವವರಿಗೆ ತುಂಬಾ ಒಳ್ಳೆಯ ಫಲ ದೊರೆಯುತ್ತದೆ. ಹತ್ತನೇ ಮನೆಯಲ್ಲಿ ಶನಿ ಇರುವುದರಿಂದ ನೀವು ಬಹಳ ಚತುರರಾಗುತ್ತಿರಿ ಹಣದ ಗಳಿಕೆಯಲ್ಲಿ ಅನುಕೂಲವುಂಟಾಗುತ್ತದೆ.

ಇದರ ಜೊತೆಗೆ ಮನೆಯಲ್ಲಿ ಮಾತೃ ಪ್ರೀತಿ ದೊರೆಯುತ್ತದೆ ತಂದೆಯ ಜೊತೆ ಮಾತನಾಡುವಾಗ ಸ್ವಲ್ಪ ಎಚ್ಚರಿಕೆಯಿಂದ ಇರಬೇಕು. ಚಿಕ್ಕ ಮಕ್ಕಳು ಮೇಕೆ ಹಾಲನ್ನು ದೊಡ್ಡವರು ಹಸುವಿನ ಹಾಲನ್ನು ಹಾಗೂ ಕಡಲೆ ಬೀಜವನ್ನು ಸೇವಿಸಬೇಕು ಇದರಿಂದ ತುಂಬಾ ಒಳ್ಳೆಯದಾಗುತ್ತದೆ. ನಿಮಗೆ ಅಧಿಕಾರ ಅನ್ನುವಂಥದ್ದು ಸಿಗುತ್ತದೆ

ಮೇಷ ರಾಶಿಯವರಿಗೆ ವಿವಾಹ ವಿಷಯದಲ್ಲಿ ಮನಸ್ತಾಪಗಳು ಉಂಟಾಗುತ್ತದೆ ವಿವಾಹ ಆದಂತಹ ದಂಪತಿಗಳಲ್ಲಿ ಸಣ್ಣಪುಟ್ಟ ವ್ಯಾಜ್ಯಗಳು ಬರುತ್ತದೆ ಕುಟುಂಬದಲ್ಲಿ ಸಣ್ಣಪುಟ್ಟ ಜಗಳಗಳು ಉಂಟಾಗುತ್ತವೆ. ಮೇಷ ರಾಶಿಯವರು ಮಂಗಳವಾರ ಅಥವಾ ಶುಕ್ರವಾರ ಯಾವುದಾದರೂ ಅಮ್ಮನವರ ದೇವಸ್ಥಾನಕ್ಕೆ ಹೋಗಿ ಅಲ್ಲಿ ದೀಪವನ್ನು ಹಚ್ಚಿ ಅರ್ಚನೆ ಮಾಡಿಸುವುದರಿಂದ ಒಳ್ಳೆಯದಾಗುತ್ತದೆ. ಒಟ್ಟಾರೆಯಾಗಿ ಮೇಷ ರಾಶಿಯವರಿಗೆ ಕುಟುಂಬದಲ್ಲಿ ಸಂತೋಷದ ವಾತಾವರಣ ಮೂಡುತ್ತದೆ.

ಸಾಲ ಬಾಧೆ ಕಡಿಮೆಯಾಗುತ್ತದೆ ಆರೋಗ್ಯದಲ್ಲಿ ಉತ್ತಮವಾದಂತಹ ಚೇತರಿಕೆ ಇಕಂದುಬರುತ್ತದೆ ಪ್ರಯಾಣದಲ್ಲಿ ಹೆಚ್ಚಿನ ಆಸಕ್ತಿಯನ್ನು ವಹಿಸುತ್ತೀರಿ ಸಹೋದರರಿಂದ ಸಹಾಯವಾಗುತ್ತದೆ. ಬಂಧುಗಳ ಆಗಮನವಾಗುತ್ತದೆ ವ್ಯಾಪಾರ-ವ್ಯವಹಾರದಲ್ಲಿ ಅಭಿವೃದ್ಧಿ ಕಂಡುಬರುತ್ತದೆ. ಬಂಡವಾಳ ಹೂಡಿಕೆಗೆ ಈ ತಿಂಗಳಲ್ಲಿ ಉತ್ತಮ ಫಲವಿದೆ. ತೈಲ ವ್ಯಾಪಾರಿಗಳಿಗೆ ಸ್ವಲ್ಪ ಪ್ರಗತಿ ಕಡಿಮೆ ಇರುತ್ತದೆ ಅಧಿಕವಾದ ಪ್ರಯಾಣದ ಕಾರಣದಿಂದ ಸ್ವಲ್ಪ ಭಯವಿರುತ್ತದೆ.

ಆಲಸ್ಯ ಸೋಂಬೇರಿತನ ಕಾಣಿಸಿಕೊಳ್ಳುತ್ತದೆ. ಫೆಬ್ರವರಿ ತಿಂಗಳಿನಲ್ಲಿ ಒಂದು ಮತ್ತು ಮೂರು ಮೇಷ ರಾಶಿಯವರಿಗೆ ಶುಭ ಸಂಖ್ಯೆಯಾಗಿರುತ್ತದೆ. ಹಳದಿ ಮತ್ತು ಕೆಂಪು ಬಣ್ಣ ಶುಭದಾಯಕವಾಗಿರುತ್ತದೆ ಈ ರೀತಿಯಾಗಿ ಫೆಬ್ರವರಿ ತಿಂಗಳಿನಲ್ಲಿ ಮೇಷ ರಾಶಿಯವರಿಗೆ ಮಿಶ್ರಿತ ಫಲಗಳಿದ್ದು ನಾವು ಮೇಲೆ ತಿಳಿಸಿರುವ ಪರಿಹಾರವನ್ನು ಮಾಡಿಕೊಳ್ಳುವ ಮೂಲಕ ಒಳ್ಳೆಯ ಫಲವನ್ನು ನಿಮ್ಮದಾಗಿಸಿಕೊಳ್ಳಿ.

Leave A Reply

Your email address will not be published.

error: Content is protected !!