ಆತ್ಮೀಯ ಓದುಗರೇ ಕನ್ನಡದ ಕಣ್ಮಣಿ ಕರ್ನಾಟಕದ ಯುವರತ್ನ ಪವರ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದದ ಅಪ್ಪು ಅವರು ನಮ್ಮ ಕನ್ನಡ ಸಿನಿಮಾ ರಂಗದಲ್ಲಿ ಮಾತ್ರವಲ್ಲ ಬೇರೆ ಭಾಷೆಗಳಲ್ಲಿಯೂ ಬಹಳ ಖ್ಯಾತಿ ಪಡೆದುಕೊಂಡಿದ್ದರು ಆದರೆ ಇವರು ಕನ್ನಡ ಭಾಷೆ ಬಿಟ್ಟು ಬೇರೆ ಚಿತ್ರರಂಗದಲ್ಲಿ ನಟನೆ ಮಾಡಿರಲಿಲ್ಲ ತಂದೆ ನಟ ಸಾರ್ವಭೌಮ ರಾಜಕುಮಾರ್ ಅವರ ಹಾಗೆಯೇ ಜನರಿಗೆ ಒಳ್ಳೆಯ ಸಂದೇಶವನ್ನು ನೀಡುತ್ತಿದ್ದಂತಹ ಸಿನಿಮಾಗಳನ್ನ ಮಾಡುತ್ತಾ ಇದ್ದರು

ನಿಜಕ್ಕೂ ಪ್ರೀತಿಯ ಅಪ್ಪು ಅವರಲ್ಲಿ ಇಂತಹ ಗುಣ ಇತ್ತು ಅಂದ್ರೆ ಇವರು ಇತರರನ್ನು ಪ್ರೋತ್ಸಾಹ ನೀಡಿ ಬೆಳೆಸುವ ಗುಣ ಹೊಂದಿದ್ದರು ಹಾಗೂ ಒಳ್ಳೆಯ ವಿಷಯಕ್ಕೆ ಸದಾ ಪ್ರೋತ್ಸಾಹ ನೀಡುತ್ತಿದ್ದರೂ ಪುನೀತ್ ರಾಜ್ ಕುಮಾರ್. ದೊಡ್ಮನೆ ಹುಡುಗ ನಾಗಿ ಹುಟ್ಟಿದ ಇವರು ಇವರ ವ್ಯಕ್ತಿತ್ವಕ್ಕೆ ಪ್ರತಿಯೊಬ್ಬರೂ ಕೂಡ ಮಾರುಹೋಗಿದ್ದರು ಹಾಗೆ ಇವರ ದಾಂಪತ್ಯದ ವಿಚಾರಕ್ಕೆ ಬರುವುದಾದರೆ ನಿವೆಲ್ಲರೂ ಈಗಾಗಲೇ ಪುನೀತ್ ಅವರ ಪತ್ನಿ ಅಶ್ವಿನಿ ಅವರನ್ನು ನೋಡಿದ್ದೀರಾ.

ಇನ್ನು ಅಪ್ಪು ಅವರ ದಾಂಪತ್ಯ ಜೀವನಕ್ಕೆ ಬರುವುದಾದರೆ, ಪುನೀತ್ ರಾಜಕುಮಾರ್ ಅವರು ತಮ್ಮ ಪತ್ನಿಯನ್ನು ಪ್ರೀತಿಸುವ ವಿಷಯವನ್ನೂ ಮನೆಯಲ್ಲಿ ಹೇಳಲು ಬಹಳ ಕಷ್ಟ ಪಟ್ಟಿದ್ದರಂತೆ, ಬೇರೆ ದಾರಿ ಇಲ್ಲದೆ ಧೈರ್ಯ ಮಾಡಿ ಮನೆಯಲ್ಲಿ ತಂದೆ ರಾಜಕುಮಾರ್ ಅವರ ಬಳಿ ಹೇಳಿಕೊಂಡಿದ್ದ ಅಪ್ಪು ನಂತರ ರಾಜಕುಮಾರ್ ಅವರು ಆಯ್ತು ನಿಮ್ಮ ತಾಯಿ ಬಳಿ ಹೇಳುವ ಎಂದು ಹೇಳಿದರಂತೆ ನಂತರ ಅಪ್ಪು ಅವರು ತಮ್ಮ ತಾಯಿ ಪಾರ್ವತಮ್ಮ ಅವರ ಬಳಿ ಕೂಡ ಹೇಳಿ ಅವರ ಒಪ್ಪಿಗೆ ಪಡೆದ ನಂತರ ಡಿಸೆಂಬರ್ ಒಂದು 1999 ರಲ್ಲಿ ಅಶ್ವಿನಿ ಅವರ ಜೊತೆಗೆ ವಿವಾಹವಾದರು.

೨೨ ವರುಷ ದಾಂಪತ್ಯ ಜೀವನದಲ್ಲಿ ನೆಮ್ಮದಿಯಾಗಿದ್ದ ಈ ದಂಪತಿಗಳಿಗೆ, ಇಬ್ಬರೂ ಹೆಣ್ಣು ಮಕ್ಕಳಿದ್ದಾರೆ ಮೊದಲ ಮಗಳು ಧೃತಿ ಎರಡನೇ ಮಗಳ ವಂದಿತ. ಮಕ್ಕಳು ಇಬ್ಬರು ದೊಡ್ಡ ಸ್ಟಾರ್ ನಟರ ಮಕ್ಕಳು ಎಂದು ಎಲ್ಲಿಯು ತೋರಿಸಿಕೊಳ್ಳುವುದಿಲ್ಲಾ. ಇತ್ತ ಬಹಳ ಶಿಸ್ತಿನಿಂದ ಕೂಡ ತಮ್ಮ ಮಕ್ಕಳನ್ನು ಪುನೀತ್ ಮತ್ತು ಅಶ್ವಿನಿ ಅವರು ಬೆಳೆಸಿದ್ದು, ಸಾಮಾನ್ಯವಾಗಿ ಪುನೀತ್ ರಾಜಕುಮಾರ್ ಅವರ ಇಬ್ಬರೂ ಹೆಣ್ಣು ಮಕ್ಕಳು ಕೂಡ ಕ್ಯಾಮೆರಾ ಕಣ್ಣಿಗೆ ಬೀಳುವುದು ಬಹಳ ಅಪರೂಪ.

ಇನ್ನು ಪುನೀತ್ ರಾಜಕುಮಾರ್ ಅವರು ಸಿನಿಮಾ ಕಡೆ ಹೆಚ್ಚು ಗಮನ ಕೊಟ್ಟರೆ, ಅಶ್ವಿನಿ ಅವರು ಮನೆ ಹಾಗೂ ಮಕ್ಕಳ ಜವಾಬ್ಧಾರಿ ಜೊತೆಗೆ ತಮ್ಮ ಪತಿಗೂ ಕೂಡಾ ಸದಾಕಾಲ ಪ್ರೋತ್ಸಾಹ ನೀಡುತ್ತಾರೆ. ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಹಾಗೂ ಅಶ್ವಿ,ನಿ ಪುನೀತ್ ರಾಜಕುಮಾರ್ ಅವರ ನಡುವಿನ ವಯಸ್ಸಿನ ಅಂತರ ಎಷ್ಟು ಎಂದು ನಾವು ನೋಡುವುದಾದರೆ, ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರಿಗೆ 46 ವರ್ಷವಾದರೆ ಇನ್ನು ಅವರ ಪತ್ನಿ ಅಶ್ವಿನಿ ಪುನೀತ್ ರಾಜಕುಮಾರ್ ಅವರಿಗೆ ಇದೀಗ 44 ವರ್ಷ ವಯಸ್ಸಾಗಿದೆ.

ಈ ದಂಪತಿಗಳ ನಡುವಿನ ವಯಸ್ಸಿನ ಅಂತರ ಎರಡು ವರ್ಷ ಆಗಿದ್ದು, ಇವರಿಬ್ಬರು ಸಂತೋಷ ಹಾಗೂ ಸುಖ ಸಂಸಾರದಿಂದ ನಡೆಸುತ್ತಿದ್ದರು. ನಟ ಪುನೀತ್ ರಾಜಕುಮಾರ್ ಅವರು ಪಿ ಆರ್ ಕೆ ಸಿನಿಮಾ ಪ್ರೊಡಕ್ಷನ್ ಆರಂಭಿಸಿ ಹೊಸ ಕನಸನ್ನು ಹೊತ್ತು ಬಂದ ಹೊಸ ಹೊಸ ಪ್ರತಿಭೆಗಳಿಗೆ ಅವಕಾಶವನ್ನು ನೀಡುವುದರ ಜೊತೆಗೆ ವಿಭಿನ್ನ ರೀತಿಯ ಸಿನಿಮಾಗಳನ್ನು ಸಹ ಬೆಳಕಿಗೆ ತರುತ್ತಿದ್ದೆ

ಯುವರತ್ನ ಅಪ್ಪು ಅವರ ಇನ್ನೊಂದು ದೊಡ್ಡ ಗುಣ ಎಂದರೆ ಒಂದು ಕೈಯ್ಯಲ್ಲಿ ಮಾಡಿದ ಸಹಾಯ ಇನ್ನೊಂದು ಕೈಗೆ ತಿಳಿಯಬಾರದು ಅಂತ ಸ್ವಭಾವ ಅಪ್ಪು ಅವರದ್ದು. ಹೆಚ್ಚಿನ ಮಂದಿಗೆ ಗೊತ್ತಿಲ್ಲಾ ಸಿನಿಮಾದ ಸಹವಾಸವೆ ಬೇಡ ಅಂದುಕೊಡಿದ್ದ ಪುನೀತ್ ಬಾಲ್ಯದಿಂದಲೂ ನಟನೆಯಲ್ಲಿ ತೊಡಗಿಸಿಕೊಂಡಿದ್ದರು. ಅಷ್ಟೇ ಅಲ್ಲ ಪ್ರೀತಿಯ ಅಣ್ಣನಾದ ಶಿವರಾಜ್ಕುಮಾರ್ ಅವರ ಸಿನಿಮಾ ಪಯಣಕ್ಕೂ ಅಪ್ಪು ನಿಜಕ್ಕೂ ಪ್ರೇರಣೆಯಾಗಿದ್ದಾರೆ

ಇನ್ನು ನಾಯಕ ನಟನಾಗಿ ಅಪ್ಪು ಸಿನಿಮಾದ ಮೂಲಕ ಚಿತ್ರ ರಂಗಕ್ಕೆ ಪಾದರ್ಪಾಣೆ ಮಾಡಿದ ಅವರು ಸೆನ್ ಷೇಶನ್ ಹುಟ್ಟಿಸಿ ಇಂದು ಕನ್ನಡದ ಟಾಪ್ ನಟನಾಗಿ ಬೆಳೆದು ನಿಂತಿದ್ದರು. ಪುನೀತ್ ರಾಜಕುಮಾರ್ ಅವರ ಸಿನಿಮಾ ಎಂದರೆ ನಿರ್ಮಾಪಕರು ಸದಾ ಸಿದ್ದರಿರುತ್ತಿದ್ದರು ಪುನಿತ್ ಸಿನೆಮಾಗೆ ಹೂಡಿಕೆ ಮಾಡಲು ತಯಾರಿರುತ್ತ ಇದ್ದರು.

By admin

Leave a Reply

Your email address will not be published. Required fields are marked *

error: Content is protected !!
Footer code: