ಚರ್ಮದ ಆರೋಗ್ಯ ಮತ್ತು ಸೌಂದರ್ಯವನ್ನು ಹೆಚ್ಚಿಸಲು ಸಪೋಟ ಹಣ್ಣಿನ ಸೇವನೆ ಉತ್ತಮ ಚರ್ಮವನ್ನು ಹೈಡ್ರೇಟ್ ಮಾಡಲು ಮತ್ತು ಚರ್ಮದ ಕೋಶಗಳನ್ನು ಪುನರ್ಯೌವನಗೊಳಿಸಲು ಇದು ಸಾಕಷ್ಟು ವಿಟಮಿನ್ ಎ ಸಿ ಇ ಮತ್ತು ಕೆ ಅನ್ನು ಹೊಂದಿರುತ್ತದೆ. ಇದಲ್ಲದೆ ಬಣ್ಣವನ್ನು ಸುಧಾರಿಸಲು ಸಹ ಇದು ಸಹಾಯ ಮಾಡುತ್ತದೆ ಹಾಗೆಯೇ ಚರ್ಮದ ಹೊಳಪನ್ನು ಹೆಚ್ಚಿಸಲು ಸಹಕಾರಿ ಅಧಿಕ ರಕ್ತದೊತ್ತಡವನ್ನು ನಿಯಂತ್ರಿಸಲು ಸಪೋಟ ಸಹಕಾರಿ ಇದರಲ್ಲಿ ಸಾಕಷ್ಟು ಪೊಟ್ಯಾಸಿಯಮ್ ಅಂಶ ಇರುತ್ತದೆ ಇದು ಸೋಡಿಯಂ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಮತ್ತು ರಕ್ತ ಪರಿಚಲನೆ ಉತ್ತಮವಾಗಿರಿಸುತ್ತದೆ ಇದರಿಂದ ರಕ್ತದೊತ್ತಡ ಕೂಡ ನಿಯಂತ್ರಣದಲ್ಲಿರುತ್ತದೆ.ನಾವು ಈ ಲೇಖನದ ಮೂಲಕ ಸಪೋಟ ಹಣ್ಣಿನ ಬಗ್ಗೆ ತಿಳಿದುಕೊಳ್ಳೊಣ.
ಸಪೋಟ ಹಣ್ಣು ಎಲ್ಲರಿಗೂ ಗೊತ್ತಿರುವ ಹಾಗೂ ರುಚಿಕರವಾದ ಹಣ್ಣು ಹಾಗೆಯೇ ಚಿಕ್ಕು ಹಣ್ಣಿನ ಮೂಲ ಮೆಕ್ಸಿಕೊ ಹಾಗೂ ವೆಸ್ಟ್ ಇಂಡೀಸ್ ಆಗಿದೆ ನಮ್ಮ ಕರ್ನಾಟಕದಲ್ಲಿ ಕರಾವಳಿ ಹಾಗೂ ಒಳನಾಡಿನಲ್ಲಿ ಅತಿ ಹೆಚ್ಚು ಬೆಳೆಯುತ್ತಾರೆ ಇತಿಹಾಸದ ಪ್ರಕಾರ ಪೋರ್ಚುಗೀಸ್ ರು ಭಾರತಕ್ಕೆ ಬಂದಾಗ ಹಲವಾರು ತರಕಾರಿ ಹಣ್ಣುಗಳ ಬೀಜವನ್ನು ತಂದು ನೆಟ್ಟಿದ್ದರು ಅದರಲ್ಲಿ ಒಂದು ಸಪೋಟ ಹಣ್ಣಾಗಿದೆ ತುಂಬಾ ಆರೋಗ್ಯದಾಯಕ ಹಣ್ಣು ಇದಾಗಿದೆ
ಈ ಹಣ್ಣಿನ ಸೇವನೆಯಿಂದ ದೃಷ್ಟಿ ದೋಷ ನಿವಾರಣೆ ಆಗುತ್ತದೆ. ವಯಸ್ಸು ಆದಂತೆ ಕಣ್ಣಿನ ದೃಷ್ಟಿ ಕಡಿಮೆ ಆಗುತ್ತದೆ ಆದರೆ ಕಣ್ಣಿನ ದೃಷ್ಟಿ ಕಡಿಮೆ ಆಗಲು ಅವರ ವಿಟಮಿನ್ ಎ ಕೊರತೆಯಿಂದ ಬರುತ್ತದೆ ಹಾಗೆಯೇ ಸಪೋಟ ಹಣ್ಣಿನಲ್ಲಿ ವಿಟಮಿನ್ ಎ ಅಧಿಕವಾಗಿದೆ ಈ ಹಣ್ಣನ್ನು ದಿನಕ್ಕೆ ಒಂದರಂತೆ ತಿಂದರೆ ದೃಷ್ಟಿ ದೋಷ ಕಡಿಮೆ ಆಗುತ್ತದೆ ಸಪೋಟ ಹಣ್ಣನ್ನು ಸೇವನೆ ಮಾಡುವುದರಿಂದ ಅಪಾರ ಶಕ್ತಿ ಬರುತ್ತದೆ .
ಸಪೋಟ ಹಣ್ಣು ಹೆಚ್ಚು ಸಿಹಿಯಾಗಿ ಹಾಗೂ ರುಚಿಕರವಾಗಿ ಇರುತ್ತದೆ ಹಾಗೆಯೇ ಗ್ಲೂಕೋಸ್ ಅಂಶವನ್ನು ಹೆಚ್ಚಾಗಿ ಹೊಂದಿದೆ ನಿಶಕ್ತಿ ಸಮಸ್ಯೆ ಇದ್ದವರುಹಾಗೂ ಕ್ರೀಡಾ ಪಟುಗಳಿಗೆ ವೈದ್ಯರು ಸಲಹೆ ನೀಡುತ್ತಾರೆ ಉರಿ ಮೂತ್ರ ನಿವಾರಣೆ ಆಗುತ್ತದೆ ಸಪೋಟದಲ್ಲಿ ಟ್ಯಾನಿಕ್ ಅಂಶ ಹೆಚ್ಚು ಇರುವುದರಿಂದ ಉರಿ ಮೂತ್ರವನ್ನು ನಿವಾರಣೆ ಮಾಡುತ್ತದೆಜೀರ್ಣಾಂಗ ವ್ಯವಸ್ಥೆಯನ್ನು ಉತ್ತಮ ಗೊಳಿಸುತ್ತದೆ. ಸಪೋಟದಲ್ಲಿ ಖನಿಜ ಕ್ಯಾಲ್ಸಿಯಂ ರಂಜಕ ತಾಮ್ರ ಮತ್ತು ಕಬ್ಬಿಣವು ಮೂಳೆಗಳನ್ನು ಬಲಪಡಿಸಲು ಸಹಾಯ ಮಾಡುತ್ತದೆ ಆಹಾರದಲ್ಲಿ ತಾಮ್ರದ ಕೊರತೆಯು ಆಸ್ಟಿಯೊಪೊರೋಸಿಸ್ ಅಪಾಯವನ್ನು ಹೆಚ್ಚಿಸುತ್ತದೆ ಈ ಸಂದರ್ಭದಲ್ಲಿ ಸಪೋಟದಲ್ಲಿರುವ ತಾಮ್ರದ ಅಂಶ ಮೂಳೆಗಳ ಆರೋಗ್ಯಕ್ಕೆ ಅವಶ್ಯಕವಾಗಿದೆ.ಹೀಗೆ ಸಪೋಟ ಹಣ್ಣು ಉಪಯುಕ್ತವಾಗಿದೆ