ತುಂಬಾ ಜನರು ತಮ್ಮ ದೇಹ ತೆಳ್ಳಗಿರಬೇಕು ಚೆನ್ನಾಗಿ ಕಾಣಬೇಕು ಎಂದು ಆಸೆ ಪಡುತ್ತಾರೆ ಆದರೆ ಕೆಲವರು ಅತಿಯಾದ ತೂಕದಿಂದ ನಾನಾ ರೀತಿಯ ಸಮಸ್ಯೆಗಳನ್ನು ಎದುರಿಸುತ್ತಾರೆ ತಮ್ಮ ತೂಕವನ್ನು ಕರಗಿಸಿ ಕೊಳ್ಳುವುದಕ್ಕಾಗಿ ಅನೇಕ ಪ್ರಯತ್ನಗಳನ್ನು ಮಾಡುತ್ತಿರುತ್ತಾರೆ. ಹಾಗಾಗಿ ನಾವಿಂದು ನಿಮಗೆ ಸುಲಭವಾಗಿ ಮನೆಯಲ್ಲಿ ಯಾವ ರೀತಿ ತೂಕವನ್ನು ಕಡಿಮೆ ಮಾಡಿಕೊಳ್ಳಬಹುದು ಎಂಬುದರ ಬಗ್ಗೆ ಮಾಹಿತಿಯನ್ನು ತಿಳಿಸಿಕೊಡುತ್ತೇವೆ ನಾವು ತಿಳಿಸುವ ಮನೆಮದ್ದನ್ನು ಮಾಡುವ ಮೂಲಕ ನೀವು ತಿಂಗಳಿಗೆ ಕಡಿಮೆಯೆಂದರೂ ಐದು ಕೆಜಿ ತೂಕವನ್ನು ಕಡಿಮೆ ಮಾಡಿಕೊಳ್ಳಬಹುದು.
ನಾವು ಹೇಳುವ ಔಷಧ ನಿಮ್ಮ ತೂಕವನ್ನು ಕಡಿಮೆ ಮಾಡುವುದರ ಜೊತೆಗೆ ನಿಮ್ಮ ಆರೋಗ್ಯಕ್ಕು ಕೂಡ ಒಳ್ಳೆಯದು ಅದನ್ನು ಬಳಸುವುದರಿಂದ ಜೀರ್ಣ ಕ್ರಿಯೆ ಉತ್ತಮವಾಗುತ್ತದೆ ಚಯಾಪಚಯ ಕ್ರಿಯೆಯನ್ನು ಹೆಚ್ಚಿಸುತ್ತದೆ ಇದನ್ನ ತೆಗೆದುಕೊಳ್ಳುವುದರಿಂದ ನಿಮಗೆ ಗೊತ್ತೇ ಆಗುವುದಿಲ್ಲ ನಿಮ್ಮ ತೂಕ ಕಡಿಮೆಯಾದದ್ದು. ಹಾಗಾದರೆ ಆ ಮನೆಮದ್ದು ಯಾವುದು ಎಂಬುದನ್ನು ತಿಳಿದುಕೊಳ್ಳೋಣ.
ನಾವು ನಿಮಗೆ ತಿಳಿಸುತ್ತಿರುವ ಮನೆಮದ್ದು ಬೆಳ್ಳುಳ್ಳಿಯ ಬಗ್ಗೆ. ಬೆಳ್ಳುಳ್ಳಿ ಚಯಾಪಚಯ ಕ್ರಿಯೆಯನ್ನು ಹೆಚ್ಚಿಸುತ್ತದೆ ತೂಕವನ್ನು ಕಡಿಮೆ ಮಾಡಿಕೊಳ್ಳಲು ಇದು ಉತ್ತಮ ರೀತಿಯಲ್ಲಿ ಪರಿಣಾಮ ಉಂಟುಮಾಡುತ್ತದೆ. ಬೆಳ್ಳುಳ್ಳಿಯನ್ನು ತಿನ್ನುವುದರಿಂದ ನಮ್ಮ ದೇಹದಲ್ಲಿ ಎನರ್ಜಿ ಹಾಗೆ ಉಳಿಯುತ್ತದೆ ನಾವು ತಿಂದಿರುವ ಆಹಾರವು ಶಕ್ತಿಯಾಗಿ ಪರಿವರ್ತನೆಯಾಗುವುದಕ್ಕೆ ಬೆಳ್ಳುಳ್ಳಿ ಸಹಾಯಕಾರಿಯಾಗಿದೆ. ಜೊತೆಗೆ ನಮ್ಮ ದೇಹದಲ್ಲಿ ತುಂಬಿಕೊಂಡಿರುವಂತಹ ಅನಾವಶ್ಯಕ ತೂಕವನ್ನು ಬೊಜ್ಜನ್ನು ಸುಲಭವಾಗಿ ಕರಗಿಸುತ್ತದೆ.
ತೂಕ ಜಾಸ್ತಿ ಆದಾಗ ಕೆಲವರಿಗೆ ಹೊಟ್ಟೆ ಮಾತ್ರ ದಪ್ಪ ಆಗಿರುತ್ತದೆ ಆಗ ಯಾವುದೇ ಬಟ್ಟೆಯನ್ನು ಹಾಕಿದರೂ ಸರಿಯಾಗಿ ಕಾಣಿಸುವುದಿಲ್ಲ. ಬೆಳ್ಳುಳ್ಳಿ ದೇಹದಲ್ಲಿರುವ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ ಜೊತೆಗೆ ಹೃದಯಕ್ಕೂ ಒಳ್ಳೆಯದು. ಜೀರ್ಣಕ್ರಿಯೆಯನ್ನು ಉತ್ತಮಗೊಳಿಸುವುದು ರಿಂದ ನಾವು ತಿನ್ನುವ ಆಹಾರ ಜೀರ್ಣವಾಗುತ್ತದೆ ಆಗ ನಮ್ಮ ದೇಹದಲ್ಲಿ ಬೊಜ್ಜು ಉಳಿದುಕೊಳ್ಳುವುದಿಲ್ಲ ರಕ್ತವನ್ನು ನೀರಾಗಿಸುವ ಗುಣ ಕೂಡ ಬೆಳ್ಳುಳ್ಳಿಯಲ್ಲಿದೆ.
ಹಾಗಾದರೆ ತೂಕವನ್ನು ಕಡಿಮೆ ಮಾಡಿಕೊಳ್ಳುವುದಕ್ಕೆ ಬೆಳ್ಳುಳ್ಳಿಯನ್ನು ಯಾವ ರೀತಿಯಾಗಿ ಸೇವಿಸಬೇಕು ಎಂಬುದನ್ನು ನೋಡುವುದಾದರೆ ಆರರಿಂದ ಏಳು ಬೆಳ್ಳುಳ್ಳಿ ಎಸಳುಗಳನ್ನು ತೆಗೆದುಕೊಂಡು ಸ್ವಲ್ಪ ಹುರಿದುಕೊಳ್ಳಬೇಕು ಹಸಿಯಾದ ಬೆಳ್ಳುಳ್ಳಿ ತಿನ್ನುವುದು ಒಳ್ಳೆಯದು ಆದರೆ ಅದರಿಂದ ಬಾಯಿ ಸುಡುತ್ತದೆ ಹಾಗಾಗಿ ಹುರಿದ ಬೆಳ್ಳುಳ್ಳಿ ಸೇವಿಸುವುದು ಒಳ್ಳೆಯದು.
ಈ ಹುರಿದ ಬೆಳ್ಳುಳ್ಳಿಯನ್ನು ತಿಂದಾದ ನಂತರ ಒಂದು ಗ್ಲಾಸ್ ಉಗುರು ಬೆಚ್ಚಗಿನ ನೀರಿಗೆ ಜೀರಿಗೆಯನ್ನು ಹುರಿದು ಪುಡಿ ಮಾಡಿಟ್ಟುಕೊಂಡು ಅದನ್ನು ಒಂದು ಚಮಚ ಹಾಕಿ ಕುಡಿಯಬೇಕು. ಅಥವಾ ನೇರವಾಗಿ ಒಂದು ಚಮಚ ಜೀರಿಗೆ ಪುಡಿಯನ್ನು ಬಾಯಲ್ಲಿ ಹಾಕಿಕೊಂಡು ನಂತರ ನೀರನ್ನು ಸ್ವಲ್ಪ ಸ್ವಲ್ಪ ಗುಟುಕು ಗುಟುಕಾಗಿ ಕುಡಿಯಬೇಕು. ಇದರಿಂದ ಜೀರ್ಣಕ್ರಿಯೆ ಉತ್ತಮಗೊಳ್ಳುತ್ತದೆ ಜೀರಿಗೆ ತೂಕವನ್ನು ಕಡಿಮೆ ಮಾಡಿಕೊಳ್ಳುವುದಕ್ಕೆ ತುಂಬಾ ಒಳ್ಳೆಯದು.
ಬೆಳ್ಳುಳ್ಳಿಯನ್ನು ತಿನ್ನುವುದರ ಜೊತೆಗೆ ಯಾಕೆ ಜೀರಿಗೆ ನೀರನ್ನು ಕುಡಿಯಬೇಕು ಎಂದರೆ ಇದರಿಂದ ತುಂಬಾ ವೇಗವಾಗಿ ತೂಕ ಕಡಿಮೆಯಾಗುತ್ತದೆ. ಬೆಳ್ಳುಳ್ಳಿ ಮತ್ತು ಜೀರಿಗೆ ಎರಡು ಕೂಡ ಜೀರ್ಣಕ್ರಿಯೆಯನ್ನು ತುಂಬಾ ಉತ್ತಮಗೊಳಿಸುತ್ತದೆ ದೇಹದಲ್ಲಿರುವ ಕಲ್ಮಶವನ್ನು ಬೋಜ್ಜನ ತೂಕವನ್ನು ಕರಗಿಸುವುದಕ್ಕೆ ಇದು ತುಂಬಾ ಸಹಾಯ ಮಾಡುತ್ತದೆ ಬೆಳಿಗ್ಗೆ ಎದ್ದ ತಕ್ಷಣ ಒಂದು ಎಸಳು ಬೆಳ್ಳುಳ್ಳಿಯನ್ನು ತಿನ್ನಬೇಕು ಹಾಗೂ ಒಂದು ಗ್ಲಾಸ್ ಜೀರಿಗೆ ನೀರನ್ನು ಕುಡಿಯಬೇಕು ಇದು ನಿಮ್ಮ ತೂಕವನ್ನು ಕಡಿಮೆ ಮಾಡುವುದಲ್ಲದೆ ನಿಮ್ಮ ಆರೋಗ್ಯವನ್ನು ಕೂಡ ಹೆಚ್ಚಿಸುತ್ತದೆ.
ಇದನ್ನು ಬಳಸುವುದರಿಂದ ನಿಮಗೆ ನಿಮ್ಮ ತೂಕ ಕಡಿಮೆಯಾಗಿ ದೇಹ ಹಗೂರಾಗಿರುವ ಅನುಭವವಾಗುತ್ತದೆ. ಒಂದು ತಿಂಗಳು ಹೀಗೆ ಮಾಡುವುದರಿಂದ ಕನಿಷ್ಠ ಐದು ಕೆಜಿ ತೂಕವನ್ನು ಕಳೆದುಕೊಳ್ಳಬಹುದು. ಇದರ ಜೊತೆಗೆ ನೀವು ವಾಕಿಂಗ್ ಮತ್ತು ರನ್ನಿಂಗ್ ಮಾಡುವುದನ್ನು ರೂಢಿ ಮಾಡಿಕೊಳ್ಳಬೇಕು. ಜೊತೆಗೆ ಅನ್ನಕ್ಕಿಂತ ಹೆಚ್ಚಿನ ಪ್ರಮಾಣದ ತರಕಾರಿಯನ್ನೇ ತಿನ್ನಬೇಕು.
ನಾವು ನಿಮಗೆ ತಿಳಿಸಿರುವ ಈ ಮನೆಮದ್ದನ್ನು ನೀವು ಮಾಡುವ ಸಂದರ್ಭದಲ್ಲಿ ವಾಕಿಂಗ್ ವ್ಯಾಯಾಮ ಸೂರ್ಯನಮಸ್ಕಾರ ಇವುಗಳನ್ನು ಮಾಡಿದರೆ ಉತ್ತಮ ಪರಿಣಾಮವನ್ನು ಕೊಂಡುಕೊಳ್ಳಬಹುದು. ಜೊತೆಗೆ ನೀವು ಯಾವಾಗಲೂ ಬಿಸಿನೀರನ್ನು ಕುಡಿಯಬೇಕು ಬಿಸಿ ನೀರನ್ನು ಕುಡಿಯುವುದರಿಂದ ಜೀರ್ಣ ಚೆನ್ನಾಗಿ ಆಗಿ ತೂಕ ಕಡಿಮೆಯಾಗುತ್ತದೆ. ಈ ರೀತಿಯಾಗಿ ನೀವು ಮನೆಯಲ್ಲಿಯೇ ಸಿಗುವ ಬೆಳ್ಳುಳ್ಳಿಯನ್ನು ಬಳಸಿಕೊಂಡು ಸುಲಭವಾಗಿ ನಿಮ್ಮ ತೂಕವನ್ನು ಕರಗಿಸಿಕೊಳ್ಳಬಹುದು. ಈ ಮಾಹಿತಿಯನ್ನು ನೀವು ತಿಳಿದುಕೊಳ್ಳುವುದರ ಜೊತೆಗೆ ಇತರರಿಗೂ ತಿಳಿಸಿರಿ.