WhatsApp Group Join Now
Telegram Group Join Now

ಸಾಮಾನ್ಯವಾಗಿ ಪುರುಷರು ಮಾತ್ರ ಬಾಡಿ ಬಿಲ್ಡ್ ಮಾಡುವುದು ರೂಢಿಯಲ್ಲಿ ಇತ್ತು ಆದರೆ ಈಗ ಸ್ತ್ರೀಯರೂ ಕೂಡ ಯಾವುದೇ ಕ್ಷೇತ್ರದಲ್ಲಿಯೂ ತಾವೇನೂ ಕಡಿಮೆ ಇಲ್ಲ ಎನ್ನುವುದನ್ನು ಸಾಬೀತು ಪಡಿಸುತ್ತಾ ಇದ್ದಾರೆ. ಹಾಗೆಯೇ ಎಲ್ಲಾ ಕ್ಷೇತ್ರಗಳಲ್ಲಿ ಕೂಡಾ ಪುರುಷರ ಸಮಾನವಾಗಿ ಕಾರ್ಯ ನಿರ್ವಹಿಸುತ್ತಾ ತಾನೂ ಕೂಡಾ ಪುರುಷರಷ್ಟೇ ಸಮಾನಳು ಎನ್ನುವುದನ್ನು ಹಲವಾರು ಸಾಧನೆಗಳ ಮೂಲಕ ಸಾಕಷ್ಟು ಮಹಿಳೆಯರು ಜಗತ್ತಿಗೆ ತಿಳಿಸಿಕೊಟ್ಟಿದ್ದಾರೆ.

ಅದರಂತೆಯೇ ಪುರುಷರು ಬಾಡಿ ಬಿಲ್ಡ್ ಮಾಡುವ ಹಾಗೆಯೇ ಮಹಿಳೆಯರೂ ಸಹ ವರ್ಕೌಟ್ ಮಾಡಿ , ಬಾಡಿ ಬಿಲ್ಡ್ ಮಾಡುವುದು ಇತ್ತೀಚಿನ ಟ್ರೆಂಡ್ ಅಂತಲೇ ಹೇಳಬಹುದು. ಅಂತವರ ಸಾಲಿಗೆ ಸೇರುತ್ತಾರೆ 45 ವರ್ಷದ ಈ ಒಬ್ಬ ಮಹಿಳೆ. ಇವರು ಸಿಕ್ಸ್ ಪ್ಯಾಕ್ ಜೊತೆಗೆ ಸಿಲ್ಕ್ ಸೀರೆಯಲ್ಲಿ ಮಿಂಚುತ್ತಿದ್ದಾರೆ. ಅಷ್ಟಕ್ಕೂ ನಲವತ್ತೈದು ವರ್ಷ ವಯಸ್ಸಾದರೂ ಸಹ ಪುರುಷ ಬಾಡಿ ಬಿಲ್ಡರ್​ಗಳನ್ನ ನಾಚಿಸುವಂತೆ ತನ್ನ ದೇಹವನ್ನು ಬೆಳೆಸಿಕೊಂಡ ಈ ಮಹಿಳಾ ಬಾಡಿ ಬಿಲ್ಡರ್ ಯಾರೂ? ಅವರು ಎಲ್ಲಿಯವರು? ಎನ್ನುವುದರ ಕುರಿತಾದ ಮಾಹಿತಿಯನ್ನು ನಾವು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.

ಸಾಮಾನ್ಯವಾಗಿ ಜಿಮ್ ಇರುವುದು ಪುರುಷರಿಗೆ ಮಾತ್ರವೇ ಮಹಿಳೆಯರಿಗೆ ಅಲ್ಲಾ ಎಂದುಕೊಂಡು ಮಹಿಳೆಯರು ಅದರತ್ತ ಮುಖವೇ ಮಾಡುವುದಿಲ್ಲ. ಆದರೂ ಕೆಲವು ಮಹಿಳೆಯರು ಫಿಟ್ನೆಸ್ ಗೆ ಮಹತ್ವ ನೀಡುತ್ತಾ ಜಿಮ್ ಸೇರುತ್ತಾರೆ.

ಆದರೆ ಅವರಲ್ಲಿ ಬಾಡಿ ಬಿಲ್ಡ್ ಮಾಡುವ ಮಹಿಳೆಯರು ಬಹಳ ಕಡಿಮೆ ಅಂತಲೇ ಹೇಳಬಹುದು. ಆದರೆ ಇದಕ್ಕೆ ವಿರುದ್ಧವಾಗಿ 45 ವರ್ಷದ ಈ ಮಹಿಳೆ ತಾನೂ ಕೂಡಾ ಪುರುಷರಷ್ಟೇ ಜಿಮ್ ಗೆ ಹೋಗಿ ಬಾಡಿ ಬಿಲ್ಡರ್ ಆಗಬಲ್ಲೆ ಎನ್ನುವುದನ್ನು ಸಿಕ್ಸ್ ಪ್ಯಾಕ್ ಸಮೇತ ಸಾಬೀತು ಪಡಿಸಿದ್ದಾರೆ. ಪುರುಷ ಬಾಡಿ ಬಿಲ್ಡರ್ ಗಳೂ ನಾಚಿಕೆ ಪಡುವಂತೆ ಈ ಮಹಿಳೆ ತನ್ನ ದೇಹವನ್ನು ಬೆಳೆಸಿಕೊಂಡಿದರುವ ಈ ಮಹಿಳೆಯ ಹೆಸರು ಕಿರಣ್ ದೇಂಬ್ಲಾ. ವಿವಾಹವಾದ ನಂತರದ ದಿನಗಳಲ್ಲಿ ಹೈದರಾಬಾದ್ನಲ್ಲಿ ವಾಸ ಮಾಡುತ್ತಿರುವ ಕಿರಣ್ ಮೂಲತಃ ಉತ್ತರ ಪ್ರದೇಶದ ಆಗ್ರದವರು.

2006ರಲ್ಲಿ ಕಿರಣ್ ದೇಂಬ್ಲಾ ಅವರಿಗೆ ಮೆದುಳಿನಲ್ಲಿ ಟ್ಯೂಮರ್ ಕಾಣಿಸಿಕೊಂಡಿತು. ನಂತರ ಸರಿಯಾದ ಚಿಕಿತ್ಸೆ ಪೆಡೆದು ಮನೆಯಲ್ಲಿ ಇದ್ದುಕೊಂಡು 3 ವರ್ಷ ಸರಿಯಾದ ಉಪಚಾರ ತೆಗೆದುಕೊಂಡರು. ಕಿರಣ್ ಅವರಿಗೆ ಈ ಸಮಯದಲ್ಲಿ ತನ್ನ ಆರೋಗ್ಯವನ್ನು ಸುಧಾರಿಸಿಕೊಳ್ಳುವ ಸಮಯದಲ್ಲಿ ಅವರ ದೇಹದ ತೂಕ ಹೆಚ್ಚಾಗಿತ್ತು. ನಂತರ ದೇಹದ ತೂಕವನ್ನು ಇಳಿಸುವ ನಿಟ್ಟಿನಲ್ಲಿ ವ್ಯಾಯಾಮ ಮಾಡಲು ನಿರ್ಧರಿಸಿ ಸ್ವಲ್ಪ ದಿನಗಳ ಬಳಿಕ ಜಿಮ್ ಸೇರಿಕೊಂಡರು. ಎರಡು ಮಕ್ಕಳ ತಾಯಿ ಆಗಿರುವ ಕಿರಣ್ ಅವರು ಹೀಗೆ ಜಿಮ್​ಗೆ ಹೋಗುತ್ತಾ ಜಿಮ್ ಟ್ರೇನರ್ ಕೂಡಾ ಆದರು. ಸದ್ಯ ಇವರು ಸೆಲೆಬ್ರಟಿಗಳಿಗೂ ಕೂಡಾ ಟ್ರೇನಿಂಗ್ ಕೊಡುತ್ತಿದ್ದಾರೆ.

ಕಿರಣ್ ದೇಂಬ್ಲಾ ಅವರು ಸತತ ಪ್ರಯತ್ನದಿಂದ ಸಿಕ್ಸ್ ಪ್ಯಾಕ್ಸ್ ಆಬ್ಸ್ ಬರಿಸಿಕೊಂಡಿದ್ದಾರೆ. ಸಿಕ್ಸ್ ಪ್ಯಾಕ್ ತರಿಸಿಕೊಂಡ ನಲವತ್ತೈದು ವರ್ಷದ ಕಿರಣ್ ಅವರು ಇತ್ತೀಚೆಗೆ ರೇಷ್ಮೆ ಸೀರೆ ತೊಟ್ಟು ತೆಗೆಸಿಕೊಂಡ ಫೋಟೋ ಒಂದು ಸಾಕಷ್ಟು ವೈರಲ್ ಆಗುತ್ತಿದೆ. ಇದಕ್ಕೆ ಹೇಳುವುದು ಮಹಿಳೆಯರು ಮನಸ್ಸು ಮಾಡಿದರೆ ತನ್ನಿಂದ ಆಗದು, ಅಸಾಧ್ಯ ಎನ್ನುವ ಯಾವುದೇ ಕೆಲಸವೂ ಕೂಡಾ ಸಾಧ್ಯವಾಗಿಸಿ ಸಾಧನೆ ಮಾಡಿ ತೋರಿಸುತ್ತಾರೆ.

WhatsApp Group Join Now
Telegram Group Join Now

By

Leave a Reply

Your email address will not be published. Required fields are marked *

error: Content is protected !!
Footer code: