ಪುನೀತ್ ಅವರಿಗೂ ಶಿವಣ್ಣಗೂ ಇರುವ ವ್ಯತ್ಯಾಸವೇನು ಗೊತ್ತಾ? ಸತ್ಯ ಬಿಚ್ಚಿಟ್ಟ ಗಿರಿರಾಜ್

0

ಡಾ.ರಾಜ್ ಕುಮಾರ್ ಅವರ ಮಕ್ಕಳಾದ ಶಿವರಾಜ್ ಕುಮಾರ್ ,ರಾಘವೇಂದ್ರ ರಾಜ್ ಕುಮಾರ್ ,ಪುನೀತ್ ರಾಜ್ ಕುಮಾರ್ ಅವರು ಕೂಡ ಅಪ್ಪನಂತೆಯೇ ಪ್ರತಿಭಾನ್ವಿತ ನಟರು ಹಾಗೂ ಗಾಯಕರು.ಅವರ ಧ್ವನಿಗೆ ಸೋಲದ ಮನಸುಗಳಿಲ್ಲ.ರಾಘವೇಂದ್ರ ರಾಜ್ ಕುಮಾರ್ ಅವರು ಅವರ ಅನಾರೋಗ್ಯದ ಕಾರಣದಿಂದಾಗಿ ಚಿತ್ರರಂಗದಿಂದ ಸ್ವಲ್ಪ ದೂರ ಉಳಿದರೆ ,ಪುನೀತ್ ರಾಜ್ ಕುಮಾರ್ ಹಾಗೂ ಶಿವಣ್ಣ ಚಿತ್ರರಂಗದಲ್ಲೇ ಸಂಪೂರ್ಣವಾಗಿ ತಮ್ಮನ್ನು ತಾವು ತೊಡಗಿಸಿಕೊಂಡವರು.ಒಡಹುಟ್ಟಿದವರಾದರೂ ಗುಣಗಳಲ್ಲಿ ,ಸ್ವಭಾವದಲ್ಲಿ ವ್ಯತ್ಯಾಸಗಳು ಇದ್ದೇ ಇರುತ್ತದೆ.ಹಾಗಾದರೆ ಶಿವಣ್ಣ ಹಾಗೂ ಅಪ್ಪು ಅವರ ನಡುವಿನಲ್ಲಿ ಇರುವ ವ್ಯತ್ಯಾಸಗಳೇನು ಅನ್ನೋದನ್ನ ನೋಡೋಣ ಬನ್ನಿ.

ಡಾ. ಶಿವರಾಜ್‍ಕುಮಾರ್ ಕನ್ನಡದ ಚಿತ್ರನಟ. ಡಾ. ರಾಜ್‍ಕುಮಾರ್‍ ಅವರ ಹಿರಿಯಪುತ್ರ. ಇವರನ್ನು ನಮ್ಮ ಸ್ಯಾಂಡಲ್ ವುಡ್ ನಲ್ಲಿ ಪ್ರೀತಿಯಿಂದ ಶಿವಣ್ಣ ಎಂದೇ ಕರೆಯುತ್ತಾರೆ . ಇನ್ನು ಇವರು ನಟಿಸಿದ ಮೊದಲ ಮೂರೂ ಚಿತ್ರಗಳು 100 ದಿನ ಪ್ರದರ್ಶನ ಕಂಡು ಹ್ಯಾಟ್ರಿಕ್ ಹೀರೋ ಎಂಬ ಬಿರುದು ಪಡೆದ ಹಿರಿಮೆ ಇವರದ್ದು. 1962 ರ ಜುಲೈನಲ್ಲಿ ಮದ್ರಾಸ್ ನಗರದಲ್ಲಿ ಡಾ. ರಾಜ್‍ಕುಮಾರ್ ಮತ್ತು ಪಾರ್ವತಮ್ಮ ದಂಪತಿಗಳಿಗೆ ಜನಿಸಿದರು. ಡಾ. ರಾಜ್‍ಕುಮಾರ್ ಮಗನಿಗೆ ಶಿವಪುಟ್ಟಸ್ವಾಮಿ ಎಂದು ತಮ್ಮ ತಂದೆ ಸಿಂಗಾನಲ್ಲೂರು ಪುಟ್ಟಸ್ವಾಮಯ್ಯನವರ ಜ್ಞಾಪಕಾರ್ಥವಾಗಿ ಅವರ ಹೆಸರನ್ನೇ ಮಗನಿಗೆ ಇಟ್ಟರು. ಬಾಲ್ಯದಿಂದಲೇ ಶಿಸ್ತು ಮತ್ತು ಸಂಯಮಗಳನ್ನು ರೂಢಿಸಿಕೊಂಡ ಶಿವರಾಜ್‍ಕುಮಾರ್, ಕ್ರೀಡಾಚಟುವಟಿಕೆಗಳಲ್ಲಿ ಹೆಸರು ಮಾಡಿದರು.

ಮುಂಬೈನಲ್ಲಿ ಅಭಿನಯದ ತರಬೇತಿ ಪಡೆದ ಶಿವರಾಜ್‍ಕುಮಾರ್, ಆನಂದ್ ಚಿತ್ರದ ಮೂಲಕ ಚಿತ್ರರಂಗ ಪ್ರವೇಶ ಮಾಡಿದರು.ಮುಂದಿನ ಎರಡೂ ಚಿತ್ರಗಳು ರಥಸಪ್ತಮಿ ಮತ್ತು ಮನಮೆಚ್ಚಿದ ಹುಡುಗಿ ಶತದಿನ ಪ್ರದರ್ಶನ ಕಂಡವು.ಅಭಿನಯದ ಮೊದಲ ಮೂರೂ ಚಿತ್ರಗಳೂ ಶತದಿನೋತ್ಸವದ ಯಶಸ್ಸು ಪಡೆದದ್ದರಿಂದ ‘ಹ್ಯಾಟ್ರಿಕ್ ಹೀರೋ’ ಎಂಬ ಬಿರುದಿಗೆ ಪಾತ್ರರಾದರು.ನಂತರ ಸಾಕಷ್ಟು ಏಳು ಬೀಳುಗಳನ್ನು ಕಂಡವು ಅವರ ಚಿತ್ರಗಳು.ಶಿವಣ್ಣ ಅವರಿಗೆ ವಯಸ್ಸು ಅರವತ್ತು ಆದರೂ ಇನ್ನೂ ಹರೆಯದ ಯುವಕನಂತೆ ಎನರ್ಜಿಯಿಂದ ಸಿನಿಮಾಗಳಲ್ಲಿ ನಟಿಸುವ ಅವರನ್ನು ಕಂಡಾಗಲೆಲ್ಲ ಒಂದು ಹೆಮ್ಮೆ ಮೂಡುವುದು.

1975, ಮಾರ್ಚ್ 17 ರಂದು ಚೆನ್ನೈನ ಕಲ್ಯಾಣಿ ಆಸ್ಪತ್ರೆಯಲ್ಲಿ ವರನಟ ಡಾ.ರಾಜಕುಮಾರ್ ಮತ್ತು ಪಾರ್ವತಮ್ಮರವರ ಕಿರಿಯ ಪುತ್ರನಾಗಿ ಜನಿಸಿದರು.ಇವರ ಹಿರಿಯ ಸಹೋದರರಾದ ಶಿವರಾಜಕುಮಾರ್ ಮತ್ತು ರಾಘವೇಂದ್ರ ರಾಜಕುಮಾರ್ ಕೂಡ ಕನ್ನಡ ಚಿತ್ರರಂಗದ ಯಶಸ್ವಿ ನಾಯಕನಟರು. ಇವರು ರಾಜ್ ದಂಪತಿಗಳ ಕಿರಿಯ ಮಗುವಾಗಿದ್ದರಿಂದ ಬಹು ಅಕ್ಕರೆಯಲ್ಲಿ ಬೆಳೆದರು. ಪುನೀತ್ ಮತ್ತು ಸಹೋದರಿ ಪೂರ್ಣಿಮಾರನ್ನು,ರಾಜ್ ತಮ್ಮ ಬಹುತೇಕ ಚಿತ್ರಗಳ ಶೂಟಿಂಗ್‌ಗೆ ಜೊತೆಯಲ್ಲಿ ಕರೆದುಕೊಂಡು ಹೋಗುತ್ತಿದ್ದರು.

ಹೀಗಾಗಿ ಬಾಲ್ಯದಿಂದಲೇ ಕಲೆಯ ಜೊತೆಗಿನ ನಂಟು ಆರಂಭವಾಯಿತು.ಅಪ್ಪು ಸಿನಿಮಾ ಮೂಲಕ ನಾಯಕ ನಟನಾಗಿ ಬೆಳ್ಳಿ ಪರದೆಯ ಮೇಲೆ ಮಿಂಚಿ ಜನ ಮನ್ನಣೆ ಪಡೆದವರು. ಪವರಸ್ಟಾರ್ ಪುನೀತ್ ರಾಜಕುಮಾರ್ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಪ್ರಮುಖ ನಾಯಕನಟ. ಅಭಿಮಾನಿಗಳಿಂದ ಅಪ್ಪು ಎಂದೇ ಕರೆಯಿಸಿಕೊಳ್ಳುವ ಪುನೀತ್ ನಟನೆಯಲ್ಲದೇ ಹಿನ್ನಲೆ ಗಾಯಕರಾಗಿ ,ನಿರ್ಮಾಪಕರಾಗಿಯೂ ಪ್ರಸ್ತುತರು. ಸುಮಾರು ನಾಲ್ಕು ದಶಕಗಳ ತಮ್ಮ ಸಿನಿಜೀವನದಲ್ಲಿ ಬಾಲ ಕಲಾವಿದನಾಗಿ 14 ಮತ್ತು ನಾಯಕನಾಗಿ 25 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ.ಸಾಕಷ್ಟು ಪ್ರಶಸ್ತಿಗಳನ್ನು ತಮ್ಮ ಮುಡಿಗೆರಿಸಿಕೊಂಡ ನಟ ಹಾಗೆ ಇಂದು ಎಲ್ಲರ ಮನದಲ್ಲೂ ಅಜರಾಮರವಾಗಿ ಉಳಿದು ಹೋಗಿದ್ದಾರೆ.

ಇನ್ನು ಚಿತ್ರರಂಗದಲ್ಲಿ ಅಷ್ಟೇ ಅಲ್ಲದೆ ಜೀವನದಲ್ಲೂ ಕೊಡುಗೈ ದಾನಿಗಳಾಗಿರುವ ಅಣ್ಣಾ ತಮ್ಮರ ನಡುವಿನ ಗುಣ ,ಸ್ವಭಾವಗಳ ವ್ಯತ್ಯಾಸ ತಿಳಿಯೋಣ. ಶಿವಣ್ಣದು ಡೇರಿಂಗ್ ಕ್ಯಾರೆಕ್ಟರ್ . ಏನೇ ಮಾತಾಡುವುದಿದ್ದರೂ ಸ್ವಲ್ಪ ಜೋರು ಧ್ವನಿಯಲ್ಲಿ ಬೈದ ಹಾಗೆ ಮಾತಾಡುವ ಮಗುವಿನ ಮನಸ್ಸಿರುವ ವ್ಯಕ್ತಿತ್ವ ಅವರದ್ದು.ಹಾಗೆ ಸ್ನೇಹಮಯಿ ಜೀವಿ.

ಆದರೆ ಅಪ್ಪು ಅವರದ್ದು ಸ್ವಲ್ಪ ಮೃತುತ್ವದ ಜೆಂಟಲ್ ಮ್ಯಾನ್ ಕ್ಯಾರೆಕ್ಟರ್. ಡಿಸ್ಟೆನ್ಸ್ ಮೈನ್ಟೈನ್ ಮಾಡಿದ್ರು ಎಲ್ಲರ ಜೊತೆ ಬೆರೆಯುವ ಗುಣ ಅವರದ್ದು.ಅತಿ ಹೆಚ್ಚಾಗಿ ಟ್ರಾವೆಲಿಂಗ್ ಇಷ್ಟ ಪಡುತ್ತಿದ್ದರು.ಆಹಾರ ಪ್ರಿಯ ,ಯೋಗ ,ವ್ಯಾಯಾಮದ ಕಡೆಗೆ ಅತಿ ಹೆಚ್ಚು ಗಮನ ಕೊಡುತ್ತಿದ್ದವರು.ಹಾಗೆ ಪ್ರತಿದಿನವನ್ನು ಹೊಸದಾಗಿ ನೋಡುತ್ತಿದ್ದ ವ್ಯಕ್ತಿತ್ವ ಅವರದ್ದು. ಒಟ್ಟಾರೆ ಹೇಳುವುದಾದರೆ ಇಬ್ಬರಲ್ಲೂ ಒಂದೇ ತೆರನಾದ ಒಂದಿಷ್ಟು ಗುಣಗಳು ಇದ್ದಾವೆ.ನಿರ್ಮಾಪಕರ ಬೊಕ್ಕಸ ಖಜಾನೆಯನ್ನು ತುಂಬಿಸುವ ಕುಬೇರರು ಆಗಿದ್ದಾರೆ.

Leave A Reply

Your email address will not be published.

error: Content is protected !!