ಈ ಕೆಳಗಿನವುಗಲ್ಲಿ ಯಾವುದು ಜ್ಞಾಪಕ ಶಕ್ತಿಯನ್ನು ಹೆಚ್ಚಿಸುತ್ತದೆ?

0

ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಲು ಸಾಮಾನ್ಯ ಜ್ಞಾನ ಬಹಳ ಮುಖ್ಯವಾದದ್ದು. ಸಾಮಾನ್ಯ ಜ್ಞಾನವನ್ನು ವಿವಿಧ ಮಾಧ್ಯಮಗಳ ಮೂಲಕ ಹಾಗೂ ನಾನಾ ಕಡೆಗಳಲ್ಲಿಯ ಮೂಲಗಳ ಮೂಲಕ ಕಾಲಾನಂತರದಲ್ಲಿ ಸಂಗ್ರಹಹಿಸುವ ಮಾಹಿತಿಯಾಗಿದೆ. ಇದು ಒಂದು ಮಾಧ್ಯಮಕ್ಕೆ ಸೀಮಿತವಾದ ವ್ಯಾಪಕವಾದ ತರಬೇತಿ ಮತ್ತು ಮಾಹಿತಿಯೊಂದಿಗೆ ಮಾತ್ರ ಪಡೆಯಬಹುದಾದ ವಿಶೇಷ ಕಲಿಕೆಯನ್ನು ಹೊರತುಪಡಿಸುತ್ತದೆ. ಸಾಮಾನ್ಯ ಜ್ಞಾನವು ಸ್ಫಟಿಕೀಕೃತ ಬುದ್ಧಿವಂತಿಕೆಯ ಅತ್ಯಗತ್ಯ ಅಂಶವಾಗಿದೆ. ಇದು ಸಾಮಾನ್ಯ ಬುದ್ಧಿವಂತಿಕೆ ಮತ್ತು ಅನುಭವಕ್ಕೆ ಮುಕ್ತತೆಯೊಂದಿಗೆ ಬಲವಾಗಿ ಸಂಬಂಧಿಸಿದೆ.

ಸಾಮಾನ್ಯ ಜ್ಞಾನವು ವಿಷಯದ ಪ್ರಾರಂಭ ಮತ್ತು ಅಂತ್ಯವನ್ನು ಊಹಿಸಲು ಸಾಧ್ಯವಿಲ್ಲ. ಪರೀಕ್ಷೆಗಳಲ್ಲಿ ಸಾಮಾನ್ಯ ಜ್ಞಾನದ ಪ್ರಶ್ನೆಗಳನ್ನು ಎಲ್ಲಿಂದ ಕೇಳಲಾಗುತ್ತದೆ ಎಂದು ನಿರ್ಧರಿಸಲಾಗಿಲ್ಲ. ಸಾಮಾನ್ಯ ಜ್ಞಾನದ ಪ್ರಶ್ನೆಗಳು ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಸಾಮಾನ್ಯ ಜ್ಞಾನದ ವಿಷಯ ಬರುತ್ತದೆ . ಬಹುತೇಕ ಎಲ್ಲಾ ರೀತಿಯ ಸ್ಪರ್ಧಾತ್ಮಕ ಪರೀಕ್ಷೆಗಳು ಮತ್ತು ಸಂದರ್ಶನ ಸುತ್ತುಗಳಲ್ಲಿ ಸಾಮಾನ್ಯ ಜ್ಞಾನದ ವಿಷಯದಿಂದ ಪ್ರಶ್ನೆಗಳನ್ನು ಕೇಳಲಾಗುತ್ತದೆ.

ಸಂದರ್ಶನದ ಸುತ್ತಿನಲ್ಲಿ, ಕೆಲವೊಮ್ಮೆ ಅಭ್ಯರ್ಥಿಗಳು ನಮ್ಮ ಸುತ್ತಮುತ್ತಲಿನ ವಿಷಯಗಳ ಬಗ್ಗೆ ಕೇಳುವ ಪ್ರಶ್ನೆಗಳಲ್ಲಿ ಸಿಕ್ಕಿಹಾಕಿಕೊಳ್ಳುತ್ತಾರೆ ಆದರೆ ನಮಗೆ ಅವುಗಳ ಬಗ್ಗೆ ಸಂಪೂರ್ಣ ಜ್ಞಾನವಿಲ್ಲ. ಸಾಮಾನ್ಯ ಜ್ಞಾನದ ವಿಭಾಗವು ಪ್ರತಿಯೊಬ್ಬ ವಿದ್ಯಾರ್ಥಿಗೆ ಬಹಳ ಮುಖ್ಯವಾಗಿದೆ ಮತ್ತು ಪ್ರತಿಯೊಬ್ಬರೂ ಅದರ ಮೇಲೆ ಚೆನ್ನಾಗಿ ಗಮನಹರಿಸಬೇಕು. ಜನರಲ್ ನಾಲೇಡ್ಜಿಗೆ ಸಂಬಂಧ ಪಟ್ಟಂತೆ ಕೆಲವು ಪ್ರಮುಖ ಪ್ರಶ್ನೆಗಳನ್ನು ,ಉತ್ತರಗಳನ್ನು ತಿಳಿಯೋಣ ಬನ್ನಿ.

ಮೊದಲನೇ ಪ್ರಶ್ನೆ : ಹಾವು ವಾಸನೆ ಕಂಡುಹಿಡಿಯಲು ದೇಹದ ಯಾವ ಭಾಗವನ್ನು ಬಳಸುತ್ತದೆ
A ಚರ್ಮ B: ನಾಲಿಗೆ, C ಕಾಲು D: ಕಣ್ಣು
ಸರಿಯಾದ ಉತ್ತರ B: ನಾಲಿಗೆ.

ಎರಡನೇ ಪ್ರಶ್ನೆ ಏಷ್ಯಾದ ಬೆಳಕು ಎಂದು ಯಾರನ್ನು ಕರೆಯುತ್ತಾರೆ
A: ಅಶೋಕ, B ಮಹಾತ್ಮಗಾಂಧಿ C ರಾಜೇಂದ್ರ ಪ್ರಸಾದ್ D ಗೌತಮ ಬುದ್ಧ
ಸರಿಯಾದ ಉತ್ತರ ಗೌತಮ ಬುದ್ಧ.

ಮೂರನೇ ಪ್ರಶ್ನೆ : ಲಕ್ಷ್ಮೀದೇವಿಯ ವಾಹನ ಯಾವುದು
A ನವಿಲು B ಗೂಬೆ C ಹದ್ದು D ಆಮೆ
ಸರಿಯಾದ ಉತ್ತರ ಗೂಬೆ

ನಾಲ್ಕನೇ ಪ್ರಶ್ನೆ : ಪ್ರಪಂಚದಲ್ಲಿ ಯಾವ ಪ್ರಾಣಿಯ ಹಾಲು ಅತ್ಯಂತ ದುಬಾರಿಯಾಗಿದೆ
A ಕತ್ತೆ, B ಎಮ್ಮೆ, C ಹಸು D ಮೇಕೆ
ಸರಿಯಾದ ಉತ್ತರ A : ಕತ್ತೆ

ಐದನೇ ಪ್ರಶ್ನೆ ಭಾರತದ ಟೀ ಗಾರ್ಡನ್ ಎಂದು ಯಾವ ರಾಜ್ಯವನ್ನು ಕರೆಯುತ್ತಾರೆ
A ಕರ್ನಾಟಕ B ಪಶ್ಚಿಮ ಬಂಗಾಳ C ಅಸ್ಸಾಂ D ಅರುಣಾಚಲ ಪ್ರದೇಶ
ಸರಿಯಾದ ಉತ್ತರ C ಅಸ್ಸಾಂ

ಆರನೇ ಪ್ರಶ್ನೆ : ಯಾವ ಹಣ್ಣಿನ ರಸ ನಿಮಿಷದಲ್ಲಿ ಸಕ್ಕರೆ ಕಾಯಿಲೆಯನ್ನು ನಿಯಂತ್ರಿಸುತ್ತದೆ
A ನಿಂಬೆರಸ, B ದಾಳಿಂಬೆ ರಸ C: ಕಿತ್ತಳೆ ರಸ D ದ್ರಾಕ್ಷಿ ರಸ
ಸರಿಯಾದ ಉತ್ತರ ದಾಳಿಂಬೆ ರಸ

ಏಳನೇ ಪ್ರಶ್ನೆ : ಭಾರತದಲ್ಲಿ ಯಾವ ನಗರವನ್ನು ರಕ್ತದ ನಗರ ಎಂದು ಕರೆಯಲಾಗುತ್ತದೆ
A: ತೇಜ್ಪುರ, B ಕಡಬ, C ಮುಂಬೈ, D ಬೋಪಾಲ್
ಸರಿಯಾದ ಉತ್ತರ A ತೇಜ್ಪುರ.

ಎಂಟನೇ ಪ್ರಶ್ನೆ ಭಾರತದಲ್ಲಿ ಯಾವ ನಗರವನ್ನು ಸರೋವರಗಳ ನಗರ ಎಂದು ಕರೆಯಲಾಗುತ್ತದೆ
A ಜೈಪುರ B ಉದಯಪುರ, C ಅಮರಾವತಿ, D ಕೊಲ್ಕತ್ತಾ
ಸರಿಯಾದ ಉತ್ತರ B ಉದಯಪುರ.

ಒಂಬತ್ತನೇ ಪ್ರಶ್ನೆ ಈ ಕೆಳಗಿನವುಗಳಲ್ಲಿ ಯಾವುದು ಜ್ಞಾಪನ ಶಕ್ತಿಯನ್ನು ಹೆಚ್ಚಿಸುತ್ತದೆ
A ತುಪ್ಪ , B ಜೇನುತುಪ್ಪ, C ಬಾದಾಮಿ , D ಮೊಟ್ಟೆ
ಸರಿಯಾದ ಉತ್ತರ A ತುಪ್ಪ.
ನಾಟಿ ತುಪ್ಪವನ್ನು ಪ್ರತಿನಿತ್ಯ ಮಿತವಾಗಿ ನಿಮ್ಮ ಊಟದಲ್ಲಿ ಸೇರಿಸಿ ಸೇವಿಸುವುದರಿಂದ ಜ್ಞಾಪಕ ಶಕ್ತಿಯನ್ನು ವೃದ್ಧಿಸುತ್ತದೆ.

ಇನ್ನು ಕೊನೆಯ ಹತ್ತನೇ ಪ್ರಶ್ನೆ : 25 ವರ್ಷಗಳ ಕಾಲಕ್ಕೆ ನಡೆಯುವ ಆಚರಣೆಯನ್ನು ಏನೆನ್ನುತ್ತಾರೆ
A ಗೋಲ್ಡನ್ ಜ್ಯುಬ್ಳಿ, B ಪ್ಲಾಟಿನಂ ಜ್ಯುಬ್ಳಿ, C ಸಿಲ್ವರ್ ಜ್ಯುಬ್ಳಿ, D ಡೈಮಂಡ್ ಜ್ಯುಬ್ಳಿ
ಸರಿಯಾದ ಉತ್ತರ C ಸಿಲ್ವರ್ ಜ್ಯುಬ್ಳಿ.

Leave A Reply

Your email address will not be published.

error: Content is protected !!