ಪಾರು ಸೀರಿಯಲ್ ನಟಿಯ 7 ತಿಂಗಳ ಸೀಮಂತ ಶಾಸ್ತ್ರ ವಿಡಿಯೋ

0

ಕೆಲವೊಬ್ಬರಿಗೆ ತಮ್ಮ ನೆಚ್ಚಿನ ಧಾರಾವಾಹಿಯನ್ನು ಒಂದು ದಿನ ನೋಡಲಿಲ್ಲ ಎಂದರೆ ಆ ದಿನ ಕಳೆಯುವುದೇ ಇಲ್ಲ. ಅದರಲ್ಲೂ ಹೆಣ್ಣು ಮಕ್ಕಳಿಗಂತೂ ಮನರಂಜನೆ ಅಂದರೆ ಅದು ಧಾರಾವಾಹಿ ಮಾತ್ರವೇ. ಕೆಲವರಿಗೆ ಧಾರಾವಾಹಿ ಎಂದರೆ ಪಂಚಪ್ರಾಣ. ಇನ್ನು ಕೆಲವರಿಗಂತು ಮನೆಯಲ್ಲಿ ಧಾರಾವಾಹಿ ಹಾಕಿದರೆ ಸಾಕು ಎಳ್ಳೆಣ್ಣೆ ಕುಡಿದಂತೆ ಮುಖವನ್ನು ಮಾಡುತ್ತಾರೆ. ಕೆಲವೊಂದು ಧಾರಾವಾಹಿಗಳನ್ನು ನೋಡುತ್ತಿದ್ದರೆ, ಮನರಂಜನೆಯೂ ಸಿಗುತ್ತದ ಹಾಗೆಯೇ ಕಾಲವೂ ಕಳೆಯುತ್ತದೆ. ಕೆಲವರ ಅನಿಸಿಕೆಯ ಪ್ರಕಾರ ಧಾರಾವಾಹಿ ನೋಡುವುದರಿಂದ ಮನೆ ಹಾಳು ಆಗುವುದು ಎಂದು. ಆದರೆ ಇನ್ನೂ ಕೆಲವೊಂದು ಧಾರಾವಾಹಿಗಳಂತೂ ಆರು ವರ್ಷಗಳಾದರೂ ಮುಕ್ತಾಯ ಮಾಡದೇ, ಬೇಡದ ದೃಶ್ಯಗಳನ್ನು ಸೇರಿಸಿ ರಬ್ಬರ್ ಎಳೆಯುವಂತೆ ಎಳೆದಿರುತ್ತಾರೆ.

ಇನ್ನು ಜೀ ವಾಹಿನಿಯಲ್ಲಿ ಪ್ರಸಾರವಾಗುವ ಪಾರು ಧಾರಾವಾಹಿ ಯಾರಿಗೆ ತಾನೇ ತಿಳಿದಿಲ್ಲ ಹೇಳಿ? ಅಪಾರ ಜನಮನ್ನಣೆಯನ್ನು ಪಡೆದುಕೊಂಡಿರುವ ಈ ಧಾರಾವಾಹಿಯಲ್ಲಿ ಪ್ರತಿಯೊಂದು ಪಾತ್ರವೂ ಕೂಡ ನೋಡುಗರ ಮನಸ್ಸಿನಲ್ಲಿ ವಿಶೇಷ ಪರಿಣಾಮವನ್ನು ಬೀರಿತ್ತು. ಪಾರು ಧಾರಾವಾಹಿಯಲ್ಲಿ ನಟನೆ ಮಾಡಿರುವ ಈ ನಟಿಯನ್ನು ನಾವು ಕೆಜಿಎಫ್ ಸಿನಿಮಾದಲ್ಲಿಯೂ ಕೂಡ ನೋಡಿರಬಹುದು. ಕೆಜಿಎಫ್ ಸಿನಿಮಾದಲ್ಲಿ ಒಂದು ಮಗುವನ್ನು ಎತ್ತಿಕೊಂಡು ಮಧ್ಯ ರಸ್ತೆಯಲ್ಲಿ ಬನ್ ತೆಗೆದುಕೊಳ್ಳಲು ಪಾರದಾಡುತ್ತಿದ್ದ ಈ ಮಹಿಳೆಯನ್ನು ನೋಡಿದ ರಾಖಿ ಭಾಯ್, ಎಲ್ಲರನ್ನು ಅಡ್ಡಗಟ್ಟಿ ಬನ್ ತೆಗೆದುಕೊಳ್ಳಲು ಸಹಾಯ ಮಾಡುತ್ತಾರೆ. ಈ ಮಹಿಳೆ ಬೇರೆ ಯಾರು ಅಲ್ಲ ಅವರೇ ಪಾರು ಧಾರಾವಾಹಿಯಲ್ಲಿ ಅಭಿನಯಿಸಿರುವ ದಿವ್ಯಾ ಪಾತ್ರಧಾರಿ ನಟಿ ಶಾಂಭವಿ ಅವರು.

ಕೆಜಿಎಫ್ ಚಿತ್ರದ ಮೂಲಕ ಒಂದು ಸಣ್ಣ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಈ ನಟಿ ಅಪಾರ ಜನಪ್ರಿಯತೆಯನ್ನು ಕಂಡು ಕೊಂಡರು. ಪಾರು ಧಾರಾವಾಹಿಯಲ್ಲಿ ಅನೇಕ ಸಂಚಿಕೆಗಳಲ್ಲಿ ಕಾಣಿಸಿಕೊಂಡಿರುವ ಈ ನಟಿ ಪಾರು ಧಾರಾವಾಹಿಯಲ್ಲಿ ಖಳನಾಯಕಿಯ ಪಾತ್ರದಲ್ಲಿ ಅಭಿನಯಿಸಿದ್ದರು. ಈ ನಟಿ ವಿವಾಹವಾಗಿದ್ದರಿಂದ ನಟನೆಯಲ್ಲಿ ಮತ್ತೆ ಕಾಣಿಸಿಕೊಳ್ಳಲಿಲ್ಲ. ಈಗ ಗರ್ಭಿಣಿ ಆಗಿರುವ ನಟಿ ಶಾಂಭವಿ ಅವರಿಗೆ ಏಳನೇ ತಿಂಗಳ ಸೀಮಂತ ಶಾಸ್ತ್ರ ಮನೆಯಲ್ಲಿಯೇ ಸರಳವಾಗಿ ನಡೆದಿದ್ದು, ಮನೆಯಲ್ಲಿ ಹೋಮ ಹವನವೆಲ್ಲಾ ನಡೆದಿದೆ. ಈ ವಿಡಿಯೋದಲ್ಲಿ ಶಾಂಭವಿ ಅವರ ಸೀಮಂತ ಶಾಸ್ತ್ರವನ್ನು ನೋಡಬಹುದು ಹಾಗೂ ಅವರಿಗೆ ಯಾವ ವಿಘ್ನವೂ ಬಾರದೇ ಹೆರಿಗೆಯಾಗಲಿದೆ ಎಂದು ಹಾರೈಸೋಣ.

Leave A Reply

Your email address will not be published.

error: Content is protected !!