ನೀವು ಸಾಲದ ಸುಳಿಯಿಂದ ಹೊರ ಬರುವುದು ಹೇಗೆ? ಈ ಮಾಹಿತಿ ತಿಳಿದುಕೊಳ್ಳಿ

0

ನಮ್ಮ ದಿನನಿತ್ಯದ ಜೀವನದ ಜೊತೆ ಇನ್ನಿತರ ಆಸೆಗಳನ್ನು ಪೂರೈಸಬೇಕು ಎಂದಾದರೆ ಹೆಚ್ಚಿನ ಹಣ ಬೇಕಾಗುತ್ತದೆ. ಈ ಕಾರಣದಿಂದ ಸಾಲ ಮಾಡಬೇಕು ಹಾಗಾದರೆ ಯಾವ ರೀತಿಯ ಸಾಲ ಮಾಡಬಹುದು, ಯಾವ ರೀತಿಯ ಸಾಲ ಮಾಡಬಾರದು ಎಂಬುದನ್ನು ಈ ಲೇಖನದಲ್ಲಿ ನೋಡೋಣ.
ನಮಗೆ ಆಸೆ ಹೆಚ್ಚು ಕಾರ್ ತಗೊಬೇಕು, ಮನೆ ಕಟ್ಟಸಬೇಕು, ಬೈಕ್ ಬೇಕು ಎಂಬಿತ್ಯಾದಿ ಆಸೆಗಳು ಇರುತ್ತದೆ ದುಡಿದ ಹಣವನ್ನು ಆಸೆಗಳಿಗೆ ಹಾಕಿದರೆ ಜೀವನ ಮಾಡುವುದು ಕಷ್ಟವಾಗುತ್ತದೆ. ಸಾಲ ಮಾಡಬಹುದು ಆದರೆ ಸಾಲ ಮಾಡುವುದರಿಂದ ಅನೇಕ ಸಮಸ್ಯೆ ಉಂಟಾಗುತ್ತದೆ. ಸಾಲ ಮಾಡುವಲ್ಲಿ ಕೆಟ್ಟ ಸಾಲ ಹಾಗೂ ಒಳ್ಳೆಯ ಸಾಲ ಎಂಬುದಿದೆ. ಒಂದು ಸೈಟ್ ತೆಗೆದುಕೊಳ್ಳುವುದಾದರೆ ಆ ಸೈಟ್ ಖರೀದಿಸುವುದರಿಂದ ನಮಗೆ ಆಗುವ ಲಾಭ ಏನು ಎನ್ನುವುದನ್ನು ನೋಡಬೇಕು.

ಸಾಲ ಮಾಡಿ ಸೈಟ್ ತೆಗೆದುಕೊಂಡರೆ ಲಾಭವಿದೆ ಅನಿಸಿದರೆ ಸಾಲ ಮಾಡಬಹುದು. ಬಿಸಿನೆಸ್ ಮಾಡಲು ಸಾಲ ಮಾಡುವುದಾದರೆ ಬಿಸಿನೆಸ್ ಮಾಡುವುದರಿಂದ ಹೂಡಿಕೆ ಮಾಡಿದ ಹಣ ವಾಪಸ್ ಬರುತ್ತದೆ ಎಂದಾದರೆ ಅಂತಹ ಸಾಲವನ್ನು ಮಾಡಬಹುದು. ಎಜುಕೇಶನ್ ಲೋನ್ ತೆಗೆಯಬಹುದು ಅದರಿಂದ ಕೆಲಸ ಸಿಕ್ಕೆ ಸಿಗುತ್ತದೆ ಹಣ ಸಂಪಾದನೆ ಮಾಡುತ್ತೇನೆ, ಆ ಎಜುಕೇಶನ್ ಗೆ ವ್ಯಾಲ್ಯೂ ಇದೆ ಎಂದಾದರೆ ಸಾಲ ಮಾಡಬಹುದು.

ರಿಯಲ್ ಎಸ್ಟೇಟ್ ಮಾಡಲು ಸಾಲ ಮಾಡುವುದಾದರೆ ಅದರಿಂದ ಲಾಭ ಬರುತ್ತದೆ ಎಂದರೆ ಅಂತಹ ಸಾಲ ಮಾಡಬಹುದು. ಇನ್ನು ನಾವು ಮಾಡುವ ಸಾಲಗಳಲ್ಲಿ ಕೆಟ್ಟ ಸಾಲ ಎನ್ನುವುದಿರುತ್ತದೆ. ಬೇರೆಯವರು ಕಾರ್ ಖರೀದಿಸಿರುವುದನ್ನು ನೋಡಿ ನಾವು ಕಾರ್ ತೆಗೆದುಕೊಳ್ಳಬೇಕು ಎಂದು ಅಥವಾ ಪ್ರತಿಷ್ಠೆಯ ಸಲುವಾಗಿ ಸಾಲ ಮಾಡಿ ಕಾರು ಖರೀದಿಸಿದರೆ ಅಂತಹ ಸಾಲದಿಂದ ಪ್ರಯೋಜನವಿಲ್ಲ. ಕಾರು ಬೇಕೇಬೇಕು ಎಂದರೆ ಸೆಕೆಂಡ್ ಹ್ಯಾಂಡ್ ಕಾರನ್ನು ಖರೀದಿಸಬಹುದು. ಬಟ್ಟೆ ಖರೀದಿಸಲು ಅಥವಾ ಫ್ರೆಂಡ್ಸ್ ಗೆ ಪಾರ್ಟಿ ಕೊಡಲು ಇಂತಹ ಉದ್ದೇಶಗಳಿಗೆ ಕ್ರೆಡಿಟ್ ಕಾರ್ಡ್ ಬಳಸುವುದು ಪ್ರಯೋಜನವಿಲ್ಲ. ಕ್ರೆಡಿಟ್ ಕಾರ್ಡ್ ಮೂಲಕ ಹಣ ಪಡೆದರೆ ಹೆಚ್ಚು ಬಡ್ಡಿಯನ್ನು ಪಾವತಿಸಬೇಕಾಗುತ್ತದೆ. ಖರೀದಿಸುವ ವಸ್ತು, ಸೈಟ್, ಮನೆಗೆ ಹೂಡಿಕೆ ಮಾಡಿದರೆ ವ್ಯಾಲ್ಯೂ ಇದೆ ಎಂಬುದನ್ನು ನೋಡಿ ಸಾಲ ಮಾಡಬೇಕು.

ಕೆಲವರು ಸಾಲ ಮಾಡಿ ಫಾರಿನ್ ಟೂರ್ ಹೋಗುತ್ತಾರೆ ಅದರಿಂದಲೂ ಪ್ರಯೋಜನವಿಲ್ಲ. ವೀಕೆಂಡ್ ನಲ್ಲಿ ತಿರುಗಲು ಕಾರು ಖರೀದಿಸುವ ಬದಲು ಕಾರನ್ನು ದುಡಿಯುವಂತೆ ಮಾಡಬಹುದು. ಸಾಲವನ್ನು ಒಳ್ಳೆಯ ಮೂಲಗಳಿಂದ ಪಡೆಯಬೇಕು. ಸಾಲ ತೆಗೆದುಕೊಳ್ಳುವಾಗ ಬಡ್ಡಿ ಎಷ್ಟು, ಅದರಿಂದ ಅಪಾಯ ಇದೆಯಾ ಎಂದು ನೋಡಿಕೊಳ್ಳಬೇಕು. ಕಡಿಮೆ ಬಡ್ಡಿ ಇರುವಲ್ಲಿ ಸಾಲ ಮಾಡುವುದು ಒಳ್ಳೆಯದು. ಮನೆಯಲ್ಲಿ ಬೇಡದ ವಸ್ತುಗಳು ಅಂದರೆ ಎರಡು ಕಾರು ಇದ್ದರೆ ಒಂದನ್ನು ಮಾರಾಟ ಮಾಡಬಹುದು.

ಕಾರ್ ಲೋನ್ ಮಾಡುವಾಗ 20% ಡೌನ್ ಪೇಮೆಂಟ್ ಮಾಡಬೇಕು, ಗರಿಷ್ಟ 4 ವರ್ಷಗಳ ಒಳಗೆ ಕಾರ್ ಲೋನ್ ತೀರಿಸುವಂತೆ ಪ್ಲಾನ್ ಮಾಡಬೇಕು. ಕಾರ್ ಲೋನ್ ನ ಇಎಂಐ ಆದಾಯದ 10% ಇರಬೇಕು. ಹೋಮ್ ಲೋನ್ ಮಾಡುವಾಗ ಆದಾಯದ 5 ಪಟ್ಟು ಮೀರದಂತೆ ಮನೆಯ ಮೌಲ್ಯ ಇರಬೇಕು, ಕನಿಷ್ಟ 25% ಡೌನ್ ಪೇಮೆಂಟ್ ಮಾಡಬೇಕು. ಆದಾಯದ 30% ಇಎಂಐ ಇರಬೇಕು. 20 ವರ್ಷಗಳ ಒಳಗೆ ಈ ಸಾಲ ತೀರುವ ಹಾಗೆ ನೋಡಿಕೊಳ್ಳಬೇಕು. ಎರಡು ವರ್ಷದಲ್ಲಿ ತೀರಿಸುತ್ತೇನೆ ಎಂಬ ಆತ್ಮವಿಶ್ವಾಸ ಇದ್ದರೆ ಆದಾಯದ 50% ಇಎಂಐ ಇರಬಹುದು.

ಯಾವ ಸಾಲದಿಂದ ಅಪಾಯವಿಲ್ಲ ಎಂಬುದನ್ನು ನೋಡಿಕೊಂಡು ಸಾಲ ಮಾಡಬೇಕು. ಯಾವುದೆ ಕಾರಣಕ್ಕೂ ಪ್ರತಿಷ್ಠೆ ಗಾಗಿ ಸಾಲ ಮಾಡಬೇಡಿ. ಅವಶ್ಯಕತೆ ಇದ್ದರೆ ಮಾತ್ರ ಸಾಲ ತೆಗೆದುಕೊಳ್ಳಬೇಕು. ಬ್ಯಾಂಕ್ ನಲ್ಲಿ ಸಾಲ ಕೊಡುವಾಗ ನಿಮ್ಮ ಕ್ರೆಡಿಟ್ ಕಾರ್ಡ್ ಬ್ಯಾಲೆನ್ಸ್ ಚೆಕ್ ಮಾಡುತ್ತಾರೆ, ನಿಮ್ಮ ಕೆಲಸ, ಸಂಬಳ, ವಾಸಮಾಡುವ ಎರಿಯಾ ಹಾಗೂ ನಿಮ್ಮ ಸೋಷಿಯಲ್ ಮೀಡಿಯಾದ ಬಗ್ಗೆಯೂ ನೋಡುತ್ತಾರೆ. ಬ್ಯಾಂಕ್ ಗೆ ನೀವು ಕೊಟ್ಟ ಮಾಹಿತಿಯನ್ನು ಸಂಗ್ರಹಿಸಿ ಎನ್ ಟಿಸಿ ಸ್ಕೋರ್ ಕೊಡುತ್ತಾರೆ ಅದರ ಮೂಲಕ ಸಾಲ ಕೊಡಬಹುದಾ ಬೇಡವಾ ಎಂದು ನಿರ್ಧಾರವಾಗುತ್ತದೆ.

ಎನ್ ಟಿಸಿ ಯಲ್ಲಿ ಸಾಲ ಪಡೆಯಲು ಫಿಟ್ ಇದ್ದರೆ ಸಾಲ ಅವಶ್ಯಕತೆ ಇದೆ ಎಂದರೆ ಮಾತ್ರ ಮಾಡಬೇಕು. ಸಾಲ ಎನ್ನುವುದು ಚಕ್ರವ್ಯೂಹದ ಹಾಗೆ ಸಾಲ ಮಾಡಲು ಹೋಗಿ ಸಿಕ್ಕಿಹಾಕಿಕೊಳ್ಳಬಹುದು. ಒಂದು ಸಾಲ ಮಾಡಲು ಇನ್ನೊಂದು ಸಾಲ ಹೀಗೆ ಸಾಲದ ಹಿಂದೆ ಸಾಲ ಮಾಡಬೇಕಾಗುತ್ತದೆ. ಮಲ್ಟಿಪಲ್ ಲೋನ್ ಮಾಡಬಾರದು. ಸಾಲ ಮಾಡುವ ಅವಶ್ಯಕತೆ ಇಲ್ಲ ಎಂದರೆ ಕ್ರೆಡಿಟ್ ಕಾರ್ಡ್ ವರ್ಥ್ ಇಟ್ಟುಕೊಳ್ಳಬೇಕು. ಈ ಮಾಹಿತಿಯನ್ನು ತಪ್ಪದೆ ಎಲ್ಲರಿಗೂ ತಿಳಿಸಿ, ಸಾಲ ಮಾಡಿ ತೊಂದರೆಗೆ ಸಿಕ್ಕಿಹಾಕಿಕೊಳ್ಳಬೇಡಿ.

Leave A Reply

Your email address will not be published.

error: Content is protected !!