ನೀವು ಬರಿ 20 ಸಾವಿರಕ್ಕೆ ಹೋಂಡಾ ಆಕ್ಟೀವಾ ಖರೀದಿಸುವ ಅವಕಾಶ ಇಲ್ಲಿದೆ

0

2001 ರಲ್ಲಿ ಆಕ್ಟಿವಾ ದ್ವಿ ಚಕ್ರವಾಹನವನ್ನು ಭಾರತದಲ್ಲಿ ಪರಿಚಯಿಸಿದ ಹೋಂಡಾ ಮೋಟಾರು ಕಂಪೆನಿಯು ಇತ್ತೀಚೆಗಷ್ಟೇ ಬಿಎಸ್‌6 ನಿಬಂಧನೆಯ ಹೋಂಡಾ ಅಕ್ಟಿವಾ 6ಜಿ ಸ್ಕೂಟರ್‌ನ್ನು ಭಾರತದಲ್ಲಿ ಬಿಡುಗಡೆಗೊಳಿಸಿದೆ. ಈ 6ಜಿ ಸ್ಕೂಟರ್‌ ವಿನ್ಯಾಸದಲ್ಲಿ, ವೈಶಿಷ್ಟ್ಯತೆಯಲ್ಲಿ ಆದುನೀಕ ತಂತ್ರಜ್ಞಾನವನ್ನು ಅಳವಡಿಸಿಕೊಂಡಿದೆ. ಇದೀಗ ಹೋಂಡಾ ಆಕ್ಟೀವಾ ಉತ್ತಮ ಮೈಲೇಜ್ ಮತ್ತು ಉತ್ತಮ ವೈಶಿಷ್ಟ್ಯಗಳೊಂದಿಗೆ ಜನಪ್ರಿಯ ಸ್ಕೂಟರ್​ ಆಗಿ ಹೊರಹೊಮ್ಮಿದೆ. ವಸ್ತುಗಳನ್ನು ಸಾಗಿಸಲು ಮತ್ತು ಪ್ರಯಾಣಿಸಲು ಹೇಳಿ ಮಾಡಿಸಿದಂತಿದೆ. ಇದರ ಕುರಿತಾಗಿ ಹೆಚ್ಚಿನ ಮಾಹಿತಿಯನ್ನು ನಾವು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.

ಭಾರತ ದ್ವಿಚಕ್ರ ವಾಹನಗಳ ವಿಭಾಗದಲ್ಲಿ ದೊಡ್ಡ ಮಾರುಕಟ್ಟೆಯನ್ನು ಹೊಂದಿದೆ. ದ್ವಿಚಕ್ರ ವಾಹನಗಳಲ್ಲೂ ಹಲವಾರು ಆಯ್ಕೆಗಳಿವೆ. ಸದ್ಯ ಮಾರುಕಟ್ಟೆಯಲ್ಲಿ ನಾನಾ ವಿಶೇಷತೆಗಳನ್ನು ಒಳಗೊಂಡಿರುವ ವಹನಗಳು ಮಾರುಕಟ್ಟೆಗೆ ಧಾವಿಸುತ್ತಿದೆ. 60 ಸಾವಿರದಿಂದ ಪ್ರಾರಂಭವಾಗಿ ದ್ವಿಚಕ್ರ ವಾಹನಗಳು ಖರೀದಿಗೆ ಸಿಗುತ್ತಿವೆ. ಜೊತೆಗೆ ಗ್ರಾಹಕರನ್ನು ಕೇಂದ್ರೀಕರಿಸಿ ರಿಯಾಯಿತಿ ಬೆಲೆಗೂ ಮಾರಾಟ ಮಾಡುತ್ತಿದೆ. ಅದರಂತೆ ಇದೀಗ ಹೋಂಡಾ ಆಕ್ಟೀವಾ ಸ್ಕೂಟರ ಅನ್ನು ಕೇವಲ 23 ಸಾವಿರಕ್ಕೆ ಖರೀದಿಸಬಹುದಾದ ಅವಕಾಶವೊಂದಿದೆ.

ಹೋಂಡಾ ಮೋಟಾರ್‌ ಸೈಕಲ್‌ ಭಾರತವು ಇತ್ತೀಚೆಗಷ್ಟೇ ತನ್ನ ಬಿಎಸ್‌6 ನಿಬಂಧನೆಯ ಹೋಂಡಾ ಆಕ್ಟಿವಾ 6ಜಿ ಸ್ಕೂಟರ್‌ನ್ನು ಎರಡು ಆವೃತ್ತಿಯಲ್ಲಿ ಹಾಗೂ 63,912 ರೂಪಾಯಿಗಳ ಎಕ್ಸ್‌ ಶೋರೂಂ ಬೆಲೆಯಲ್ಲಿ ಭಾರತೀಯ ವಾಹನ ಮಾರುಕಟ್ಟೆಗೆ ಬಿಡುಗಡೆಗೊಳಿಸಿದೆ. ಹೋಂಡಾ ಆಕ್ಟೀವಾ ಉತ್ತಮ ಮೈಲೇಜ್ ಮತ್ತು ಉತ್ತಮ ವೈಶಿಷ್ಟ್ಯಗಳೊಂದಿಗೆ ಜನಪ್ರಿಯ ಸ್ಕೂಟರ್​ ಆಗಿ ಹೊರಹೊಮ್ಮಿದೆ. ವಸ್ತುಗಳನ್ನು ಸಾಗಿಸಲು ಮತ್ತು ಪ್ರಯಾಣಿಸಲು ಹೇಳಿ ಮಾಡಿಸಿದಂತಿದೆ. ಇದೀಗ ಹೋಂಡಾ ಸೆಂಕೆಂಡ್​ ಹ್ಯಾಂಡ್​ ಉಪ್ಪಂದ ಮೂಲಕ ಡ್ರಮ್​ ವೆಬ್​ಸೈಟ್​​ನಲ್ಲಿ ಆಕ್ಟಿವಾ ಸ್ಕೂಟರ್​ ಅನ್ನು ಕಡಿಮೆ ಬೆಲೆಗೆ ಸೇಲ್ ಮಾಡುತ್ತಿದೆ.

ಗ್ರಾಹಕರು ಕೇವಲ 20 ಸಾವಿರಕ್ಕೆ ಹೋಂಡಾ ಆಕ್ಟೀವಾ ಖರೀದಿಸಬಹುದಾಗಿದೆ. ಪ್ರಸ್ತುತ ಮಾರುಕಟ್ಟೆಯಲ್ಲಿ ಹೋಂಡಾ ಆಕ್ಟೀವಾ 110ಸಿಸಿ ಎಕ್ಸ್​ಶೋ ರೂ. ಬೆಲೆ 64 ಸಾವಿರದಿಂದ 65 ಸಾವಿರದವರೆಗೆ ಇರಲಿದೆ. ಹೋಂಡಾ ಆಕ್ಟೀವಾ ಅನ್ನು ಹಲವು ವರ್ಷಗಳಿಂದ ನವೀಕರಿಸಿದ ಆವೃತ್ತಿಯಲ್ಲಿ ಪರಿಚಯಿಸುತ್ತಾ ಬಂದಿದೆ. ಆದರೆ ಸೆಕೆಂಡ್ ಹ್ಯಾಂಡ್​ ಸ್ಕೂಟರ್​ ಖರೀದಿಸುವ ಮೊದಲುಎಲ್ಲ ವಿವರಗಳನ್ನನು ಸರಿಯಾಗಿ ಪರಿಶೀಲಿಸುವುದು ಉತ್ತಮ. ಮತ್ತು ನಿಯಮ, ಷರತ್ತುಗಳನ್ನು ಪರಿಶೀಲಿಸಿ ಮುಂದಿನ ಒಪ್ಪಂಡವನ್ನು ಮಾಡುವುದು ಸೂಕ್ತ. ಅದಕ್ಕಾಗಿ ಬಳಕೆದಾರರು ಕೇವಲ 499 ರೂ ಪಾವತಿಸಬೇಕಾಗುತ್ತದೆ.

ಅಂದಹಾಗೆಯೇ ಈ ಹೋಂಡಾ ಆಕ್ಟೀವಾ ಸ್ಕೂಟರ್​ ಸುಸ್ಥಿತಿಯಲ್ಲಿದ್ದು, 28 ಸಾವಿರ ಕಿಲೋ ಮೀಟರ್​ ಕ್ರಮಿಸಿದೆ. 2013ರ ಮಾಡೆಲ್​ ಹೋಂಡಾ ಆಕ್ಟೀವಾ 110 ದೆಹಲಿ 75 ಆರ್​ಟಿಒ ನೊಂದಾಯಿಸಿಕೊಂಡಿದ್ದುಮ ಈ ಸ್ಕೂಟರ್​ 109ಸಿಸಿ ಎಂಜಿನ್​ನಿಂದ 55 ಕೆಎಂಪಿಎಲ್​ ಮೈಲೇಜ್​ ಅನ್ನು ಹೊಂದಿದೆ. 5 ಲೀಟರ್​ ಇಂಧನ ಟ್ಯಾಂಕ್ ಹೊಂದಿದ್ದು, 7500 ಆರ್​ಪಿಎಂ ಮತ್ತು 8ಬಿಎಚ್​ಪಿ ಶಕ್ತಿಯನ್ನು ನೀಡುತ್ತದೆ. 5500 ಆರ್​ಪಿಎಂನಲ್ಲಿ 9ಎನ್​ಎಮ್​ ಟಾರ್ಕ್​ನಲ್ಲಿ ಚಲಿಸುತ್ತದೆ. ಕಂಪನಿಯು ಕೂಡ ಹೋಂಡಾ ಆಕ್ಟೀವಾ ಖರೀದಿಸಲು ಬುಕ್ಕಿಂಗ್​ ಆಯ್ಕೆಯನ್ನು ನೀಡುತ್ತಿದೆ. ಹಾಗಾಗಿ ಸೆಕೆಂಡ್​ ಹ್ಯಾಂಡ್​ ವಾಹನಗಳನ್ನು ಖರೀದಿಸುವ ಮೊದಲು ಸರಿಯಾಗಿ ಪರಿಶೀಲಿಸಿ ಸರಿಯಾದ ಬೆಲೆ ಖರೀದಿಸುವುದು ಬೆಸ್ಟ್​.

Leave A Reply

Your email address will not be published.

error: Content is protected !!