ನಿಮ್ಮ LIC ಪಾಲಿಸಿಯನ್ನು ಕ್ಲೇಮ್ ಮಾಡಿಕೊಳ್ಳುವುದು ಹೇಗೆ? ಸಂಪೂರ್ಣ ಮಾಹಿತಿ

0

ನೀವು ಈಗಾಗಲೇ ಎಲ್ಐಸಿ ಪಾಲಿಸಿ ಮಾಡಿಸಿದರೆ ಮುಖ್ಯವಾಗಿ ಎಲ್ಐಸಿ ಪಾಲಿಸಿ ಐದು ವರ್ಷ ಹತ್ತು ವರ್ಷ ಹದಿನೈದು ವರ್ಷ ಮತ್ತು ಇಪ್ಪತ್ತು ವರ್ಷ ಮೆಚುರಿಟಿ ಅವಧಿ ಪೂರ್ಣವಾದ ಮೇಲೆ ಮತ್ತು ಎಲ್ಐಸಿ ಹೋಲ್ಡರ್ ಮರಣಹೊಂದಿದರೆ ಎಲ್ಐಸಿಯಲ್ಲಿ ಇಟ್ಟಿರುವ ಹಣವನ್ನು ಯಾವ ರೀತಿಯಾಗಿ ಮರಳಿ ಪಡೆಯಬೇಕು ಎಂಬುದರ ಬಗ್ಗೆ ನಾವಿಂದು ನಿಮಗೆ ತಿಳಿಸಿಕೊಡುತ್ತೇವೆ.

ಮೊದಲಿಗೆ ಎಲ್ಐಸಿ ಪಾಲಿಸಿಯನ್ನು ಕ್ಲೇಮ್ ಮಾಡಿಕೊಳ್ಳುವುದಕ್ಕೆ ಯಾವೆಲ್ಲಾ ದಾಖಲೆಗಳನ್ನು ಒದಗಿಸಬೇಕು ಎಂಬುದರ ಕುರಿತು ನೋಡುವುದಾದರೆ ಕ್ಲೈಂ ಅರ್ಜಿ ಎಲ್ಐಸಿ ಏಜೆಂಟ್ ಹತ್ತಿರ ಸಿಗುತ್ತದೆ ಮತ್ತು ಎಲ್ಐಸಿ ಕಚೇರಿಯಲ್ಲಿಯೂ ಸಹ ಸಿಗುತ್ತದೆ. ಅದನ್ನು ತೆಗೆದುಕೊಂಡು ಅಲ್ಲಿ ಕೇಳಿರುವ ಮಾಹಿತಿಯನ್ನು ಸಂಪೂರ್ಣವಾಗಿ ಭರ್ತಿ ಮಾಡಿ ಆಧಾರ್ ಕಾರ್ಡ್ ವೋಟರ್ ಐಡಿ ಬ್ಯಾಂಕ್ ಅಕೌಂಟ್ ನ ಪಾಸ್ ಬುಕ್ ಜೆರಾಕ್ಸ್ ಅಥವಾ ಕ್ಯಾನ್ಸಲ್ ಆಗಿರುವಂತಹ ಚೆಕ್ ಬೇಕಾಗುತ್ತದೆ. ಮತ್ತು ಎಲ್ಐಸಿ ಒರಿಜಿನಲ್ ಬಾಂಡ್ ಬೇಕಾಗುತ್ತದೆ.

ಇವೆಲ್ಲ ದಾಖಲೆಗಳನ್ನು ತೆಗೆದುಕೊಂಡು ನಿಮ್ಮ ಏರಿಯಾದಲ್ಲಿ ಇರುವಂತಹ ಎಲ್ಐಸಿ ಕಚೇರಿಯಲ್ಲಿ ಇವುಗಳನ್ನು ಸಲ್ಲಿಸಬೇಕು. ಅಥವಾ ನೀವು ಎಲ್ಐಸಿ ಪಾಲಿಸಿ ಮಾಡಿರುವ ಏಜೆಂಟ್ ಬಳಿ ಇದನ್ನು ಕೊಡಬಹುದು. ನೀವು ಅರ್ಜಿ ಸಲ್ಲಿಸಿದ ಹದಿನೈದು ದಿನಗಳ ಒಳಗಾಗಿ ಹಣ ನಿಮ್ಮ ಬ್ಯಾಂಕ್ ಖಾತೆಗೆ ನೇರವಾಗಿ ಜಮಾ ಆಗುತ್ತದೆ. ಒಂದು ವೇಳೆ ಎಲ್ಐಸಿ ಮಾಡಿಸಿರುವಂತಹ ವ್ಯಕ್ತಿ ಮರಣಹೊಂದಿದರೆ ಯಾವ ದಾಖಲೆಗಳು ಬೇಕಾಗುತ್ತವೆ ಎಂಬುದನ್ನು ನೋಡುವುದಾದರೆ. ಮರಣ ಪ್ರಮಾಣ ಪತ್ರ ಕ್ಲೈಂ ಫಾರ್ಮ್ ಎ ಇದನ್ನು ಭರ್ತಿಮಾಡಿ ಸಲ್ಲಿಸಬೇಕು ಜೊತೆಗೆ ಒರಿಜಿನಲ್ ಎಲ್ಐಸಿ ಬಾಂಡ್ ಬೇಕು ಎಲ್ಐಸಿ ಮಾಡಿಸಿರುವಂತಹ ವ್ಯಕ್ತಿ ಯಾವುದಾದರೂ ಕಾಯಿಲೆಯಿಂದ ಮೃತಪಟ್ಟಿದ್ದರೆ ಮೆಡಿಕಲ್ ಸರ್ಟಿಫಿಕೇಟ್ ಬೇಕಾಗುತ್ತದೆ.

ಇನ್ನು ಪಾಲಿಸಿ ಮಾಡಿರುವಂತಹ ವ್ಯಕ್ತಿ ಅಪಘಾತದಿಂದ ಮರಣಕ್ಕೀಡಾದರೆ ಯಾವ ದಾಖಲೆಗಳು ಬೇಕು ಎಂದರೆ ಪೋಲಿಸ್ ಎಫ್ ಐ ಆರ್ ಪ್ರತಿ ಪೋಸ್ಟ್ಮಾರ್ಟಮ್ ವರದಿ ಜೊತೆಗೆ ಪೊಲೀಸ್ ತನಿಖಾ ವರದಿ ಕೊಡಬೇಕಾಗುತ್ತದೆ. ಒಂದು ವೇಳೆ ಪಾಲಿಸಿ ಮಾಡಿಸಿರುವಂತಹ ವ್ಯಕ್ತಿ ಕಾರ್ಮಿಕರಾಗಿದ್ದಾರೆ ಕಾರ್ಮಿಕರ ಸರ್ಟಿಫಿಕೇಟ್ ಬೇಕಾಗುತ್ತದೆ. ಮುಖ್ಯವಾಗಿ ಎಲ್ಐಸಿ ಹೋಲ್ಡರ್ ನಾಮಿನಿಯಾಗಿ ಯಾರ ಹೆಸರನ್ನು ಬರೆದಿರುತ್ತಾರೆ ಅವರ ಬ್ಯಾಂಕ್ ಪಾಸ್ಬುಕ್ ಜೆರಾಕ್ಸ್ ಪ್ರತಿ ಆಧಾರ್ ಕಾರ್ಡ್ ವೋಟರ್ ಐಡಿ ಪ್ಯಾನ್ ಕಾರ್ಡ್ ಈ ಎಲ್ಲ ದಾಖಲೆಗಳು ಬೇಕಾಗುತ್ತದೆ.

ಈ ಎಲ್ಲಾ ದಾಖಲೆಗಳನ್ನು ತೆಗೆದುಕೊಂಡು ಎಲ್ಐಸಿ ಕಚೇರಿಯಲ್ಲಿ ಸಲ್ಲಿಸಿದರೆ ಎಲ್ಲಾ ದಾಖಲೆಗಳು ಸರಿಯಾಗಿ ಇದ್ದಾಗ ನಾಮಿನಿಯ ಬ್ಯಾಂಕ್ ಖಾತೆಗೆ ಹಣ ಜಮಾ ಆಗುತ್ತದೆ. ಕೆಲವು ಸಮಯದಲ್ಲಿ ಎಲ್ಐಸಿ ಹೋಲ್ಡರ್ ಕಾಯಿಲೆಯಲ್ಲಿ ಇದ್ದರೆ ಎಲ್ಐಸಿ ಹಣವನ್ನು ವಾಪಸ್ ತೆಗೆದುಕೊಳ್ಳಬಹುದು ಅದು ಎಲ್ಐಸಿ ಸೂಚಿಸಿರುವ ಕಾಯಿಲೆಗಳು ಇದ್ದಾಗ ಮಾತ್ರ. ಅಪಘಾತವಾಗಿ ಅಂಗಾಂಗಗಳನ್ನು ಕಳೆದುಕೊಂಡಾಗ ಆಗ ಸಹ ಹಣವನ್ನು ಹಿಂಪಡೆದುಕೊಳ್ಳುವುದಕ್ಕೆ ಅವಕಾಶವಿದೆ. ಈ ರೀತಿಯಾಗಿ ಎಲ್ಐಸಿ ಪಾಲಿಸಿ ಹಣವನ್ನು ಪಡೆದುಕೊಳ್ಳಬಹುದಾಗಿದೆ.

Leave A Reply

Your email address will not be published.

error: Content is protected !!