ಕೆಲವೊಮ್ಮೆ ನಾವು ಯಾವ ಕೆಲಸಕ್ಕೆ ಕೈಹಾಕಿದರೂ ಅದು ಯಶಸ್ಸು ಪಡೆಯುವುದಿಲ್ಲ. ಕೈಗೆ ಬಂದ ತುತ್ತು ಬಾಯಿಗೆ ಬರುವುದಿಲ್ಲ ಎನ್ನುವಂತೆ ಅದೃಷ್ಟ ಕೈತಪ್ಪಿ ಹೋಗುತ್ತದೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಕೆಲವು ಗಿಡಗಳನ್ನು ಮನೆಯೊಳಗೆ ಅಥವಾ ಅಂಗಳದಲ್ಲಿ ಬೆಳೆಸುವುದರಿಂದ ಅದೃಷ್ಟ ಕೈತಪ್ಪಿ ಹೋಗದಂತೆ ನಮ್ಮನ್ನು ಹುಡುಕಿಕೊಂಡು ಬರುತ್ತದೆ ಹಾಗಾದರೆ ಅದೃಷ್ಟ ತರುವ ಗಿಡಗಳು ಯಾವುವು ಎಂಬುದನ್ನು ಈ ಲೇಖನದಲ್ಲಿ ನೋಡೋಣ.
ಅದೃಷ್ಟ ಎನ್ನುವುದು ಎಲ್ಲರಿಗೂ ದಕ್ಕುವ ಸ್ವತ್ತಲ್ಲ. ಕೆಲವರು ಮುಟ್ಟಿದ್ದೆಲ್ಲ ಮಣ್ಣು. ಇನ್ನೇನು ಕೈಗೆ ಸಿಕ್ಕಿತು ಎನ್ನುವಷ್ಟರಲ್ಲಿ ಕೈತಪ್ಪಿ ಹೋಗುವ ಹಲವು ಅವಕಾಶಗಳಿಗೆ ಮಾತ್ರ ದುರದೃಷ್ಟ ಅನ್ನುವುದಕ್ಕಿಂತಲೂ ಅದೃಷ್ಟವನ್ನು ಪಡೆಯುವ ಭಾಗ್ಯ ಇಲ್ಲದಿರುವುದು ಕಾರಣವಾಗುತ್ತದೆ. ಅದೃಷ್ಟದ ಭಾಗ್ಯವನ್ನು ಪಡೆಯಲು ಕೆಲವು ವಸ್ತುಗಳು ಹಾಗೂ ಬದಲಾವಣೆಗಳು ಸಹಾಯವಾಗುತ್ತದೆ. ಈ ಶಕ್ತಿಯನ್ನು ಪಡೆಯಲು ಮನೆಯ ಒಳಾಂಗಣದ ಉಪಕರಣಗಳು, ಅಲಂಕಾರಿಕ ಸಾಧನೆಗಳು, ಮಕ್ಕಳು, ದಾನ, ಇತರರಿಗೆ ಮಾಡುವ ಉಪಕಾರ, ಪ್ರಾಣಿದಯೆ ಇತ್ಯಾದಿಗಳು ನೆರವಾಗುತ್ತದೆ. ಮನೆಯ ಅಂಗಳದಲ್ಲಿ ತುಳಸಿ ಗಿಡವಿದ್ದರೆ ಅದೃಷ್ಟ ಲಭಿಸುತ್ತದೆ.
ಈ ಗಿಡ ಧನಾತ್ಮಕ ಹಾಗೂ ಪವಿತ್ರ ತರಂಗಗಳನ್ನು ಮನೆಯೊಳಗೆ ಪ್ರವಹಿಸಿ ಅದೃಷ್ಟ ತರಲು ನೆರವಾಗುತ್ತದೆ. ಭಾರತದಲ್ಲಿ ತುಳಸಿ ಗಿಡ ಬೆಳೆಸುವಂತೆ ಇತರ ದೇಶಗಳಲ್ಲಿ ಇತರ ಶಕ್ತಿ ಹೊಂದಿರುವ ಬೇರೆಬೇರೆ ಗಿಡಗಳನ್ನು ಮನೆಯಂಗಳದಲ್ಲಿ ಅಥವಾ ಮನೆಯೊಳಗೆ ಬೆಳೆಸುತ್ತಾರೆ. ಬೇರೆ ದೇಶದಲ್ಲಿ ಅದೃಷ್ಟ ತರುವ ಗಿಡಗಳು ನಮಗೂ ಅದೃಷ್ಟ ತರಬಹುದಲ್ಲವೆ. ಚೀನಿಯರಿಗೆ ಸಣ್ಣ ಸಣ್ಣ ಬಿದಿರಿನ ಗಿಡಗಳು ಅದೃಷ್ಟ ತರುತ್ತದೆ.
ಈ ಗಿಡ ಈಗ ಭಾರತದಲ್ಲಿ ಹೆಚ್ಚಿನ ಜನಪ್ರಿಯತೆ ಪಡೆದುಕೊಳ್ಳುತ್ತಿದೆ. ಚಿಕ್ಕ ಚಿಕ್ಕ ಬಿದುರಿನ ಹಸಿ ಕಡ್ಡಿಗಳನ್ನು ಕಲಾತ್ಮಕವಾಗಿ ಜೋಡಿಸಿ ಮನೆಯ ಒಳಗಡೆ ಮೇಜು ಕಿಟಕಿಗಳಲ್ಲಿ ಇಡಲಾಗುತ್ತದೆ. ಚೀನಿಯರು ಇದಕ್ಕೆ ಪೆನ್ಷಾಯಿ ಎಂದು ಕರೆಯುತ್ತಾರೆ. ಸರಳವಾದ ವಿನ್ಯಾಸದಲ್ಲಿ 4 ಬಿದಿರಿನ ಹಸಿ ಕಾಂಡಗಳ ಭಾಗಗಳನ್ನು ಕೆಂಪು ರಿಬ್ಬನ್ ಪಟ್ಟಿಯಿಂದ ಕಟ್ಟಲಾಗಿರುತ್ತದೆ. ಈ ಗಿಡ ಮನೆಯೊಳಗಿದ್ದರೆ ಅದೃಷ್ಟ ಅರಸಿ ಬರುತ್ತದೆ ಎಂದು ನಂಬಲಾಗುತ್ತದೆ. ತುಳಸಿ ಗಿಡ ಆಯುರ್ವೇದ ಪ್ರಕಾರ ಔಷಧಿಯ ಭಂಡಾರವಾಗಿದೆ.
ತುಳಸಿ ಗಿಡವನ್ನು ಹಿಂದೂ ಧರ್ಮಗ್ರಂಥದಲ್ಲಿ ಪವಿತ್ರ ಗಿಡ ಎಂದು ಕರೆಯಲಾಗುತ್ತದೆ. ತುಳಸಿ ಗಿಡ ಶ್ರೀಕೃಷ್ಣ ಪರಮಾತ್ಮನ ಪತ್ನಿ ಹಾಗೂ ಆಕೆ ಅತ್ಯಂತ ಪವಿತ್ರವಾದವಳು ಎಂದು ಹೇಳುತ್ತಾರೆ. ತುಳಸಿ ಎಲೆಗಳು ಹಲವು ಖಾಯಿಲೆಗಳನ್ನು ದೂರ ಮಾಡುವುದರೊಂದಿಗೆ ಬಟ್ಟೆಯ ಕಲೆಯನ್ನು ದೂರಮಾಡುತ್ತದೆ. ಮನೆಯ ಅಂಗಳದಲ್ಲಿರುವ ತುಳಸಿಗಿಡ ಕೆಟ್ಟ ಶಕ್ತಿಯನ್ನು ದೂರ ಮಾಡಿ ಧನಾತ್ಮಕ ಶಕ್ತಿಯನ್ನು ಮನೆಯ ಒಳಗೆ ಬರುವಂತೆ ಮಾಡುತ್ತದೆ ಎಂದು ನಂಬಲಾಗಿದೆ.
ಸ್ನೇಕ್ ಪ್ಲಾಂಟ್ ಅತ್ತೆಯ ನಾಲಿಗೆ ಎಂಬ ಅನ್ವರ್ಥ ನಾಮವನ್ನು ಪಡೆದಿರುವ ಈ ಗಿಡದ ಎಲೆಗಳು ಉದ್ದವಾದ ನಾಲಿಗೆ ನೆಲದಿಂದ ಮೇಲೆ ಚಾಚಿದಂತಿದ್ದು ನಡುವಲ್ಲಿ ಹಸಿರು ಹಾಗೂ ಹಳದಿ ಪಟ್ಟಿಯನ್ನು ಹೊಂದಿದೆ. ಈ ಗಿಡ ಮನೆಯಲ್ಲಿದ್ದರೆ ಮನೆಯೊಳಗಿನ ವಿಷಾನಿಲಗಳನ್ನು ಹೀರಿಕೊಳ್ಳುತ್ತದೆ ಎಂದು ವೈಜ್ಞಾನಿಕವಾಗಿ ಸಾಬೀತಾಗಿದೆ. ಈ ಗಿಡ ಇತರ ಗಿಡಗಳಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಇಂಗಾಲದ ಡೈ ಆಕ್ಸೈಡ್ ಅನ್ನು ಹೀರಿ ಹೆಚ್ಚಿನ ಪ್ರಮಾಣದಲ್ಲಿ ಆರ್ದ್ರತೆ ಹಾಗೂ ಆಮ್ಲಜನಕವನ್ನು ಬಿಡುಗಡೆ ಮಾಡುತ್ತದೆ.
ಇದರಿಂದ ಮನೆಯಲ್ಲಿ ಆರ್ದ್ರತೆ ಇದ್ದು ಚರ್ಮದ ಆರೈಕೆಗೆ ನೆರವಾಗುತ್ತದೆ. ಈ ಗಿಡ ಆರೋಗ್ಯವಾಗಿ ಹೆಚ್ಚಿನ ಲಾಭ ಕೊಡುತ್ತದೆ. ಈ ಗಿಡವನ್ನು ಮನೆಯಲ್ಲಿ ಅಥವಾ ಅಂಗಳದಲ್ಲಿ ಇಟ್ಟುಕೊಂಡರೆ ಶುಭ ತರುತ್ತದೆ. ಈ ಮೇಲೆ ಹೇಳಿದ ಎಲ್ಲಾ ಗಿಡಗಳನ್ನು ನಿಮ್ಮ ಮನೆಯಲ್ಲಿ ಅಥವಾ ಮನೆಯಂಗಳದಲ್ಲಿ ಬೆಳೆಸಿಕೊಂಡರೆ ಅದೃಷ್ಟ ನಿಮ್ಮ ಕೈತಪ್ಪಿ ಹೋಗುವುದಿಲ್ಲ. ಈ ಮಾಹಿತಿಯನ್ನು ನೀವು ಅನುಸರಿಸಿ ಹಾಗೆಯೆ ನಿಮ್ಮ ಸ್ನೇಹಿತರಿಗೂ, ಸಂಬಂಧಿಕರಿಗೂ ತಿಳಿಸಿ.