ನಿಮ್ಮಲ್ಲಿ 20 ರೂಪಾಯಿಯ ಈ ಸೀರಿಯಲ್ ನಂಬರ್​ ನೋಟ್ ಇದ್ರೆ 3 ಲಕ್ಷ ರೂಗಳಿಸುವ ಅವಕಾಶ

0

ಸಾಮಾನ್ಯವಾಗಿ ಎಲ್ಲರೂ ಹಣ ಗಳಿಸುವ ದಾರಿಯನ್ನು ಹುಡುಕುತ್ತಾರೆ. ನೋಟಿನಿಂದ ನೋಟು ಗಳಿಸಬಹುದು. ಯಾವ ನೋಟಿನಿಂದ ಹಣ ಮಾಡಬಹುದು ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ.

ಕಾನೂನುಬದ್ಧವಾಗಿ ಹಣ ಸಂಪಾದನೆ ಮಾಡಲು ಹಲವು ದಾರಿಗಳಿವೆ. ಹಳೆಯ ಕಾಲದ ನಾಣ್ಯಗಳಿಗೆ ಬೇಡಿಕೆ ಇರುವುದು ನಿಮಗೆ ಈಗಾಗಲೆ ತಿಳಿದಿದೆ. ಬಹಳ ಸರಳವಾಗಿ ಹಣ ಗಳಿಕೆಗೆ ಅವಕಾಶ ಇದೆ. ನಿರ್ದಿಷ್ಟ ಸಂಖ್ಯೆಗಳಿರುವ ಸೀರಿಯಲ್ ನಂಬರ್​ನ ಕರೆನ್ಸಿ ನೋಟುಗಳಿಂದ ಭಾರಿ ಹಣ ಗಳಿಸಬಹುದು. ಕರೆನ್ಸಿ ನೋಟುಗಳನ್ನು ಗಮನಿಸಿ ಅದರಲ್ಲಿರುವ ಸೀರಿಯಲ್ ನಂಬರ್​ನಲ್ಲಿ 786 ನಂಬರ್ ಇದ್ದರೆ ಆ ನೋಟಿನಿಂದ ಆನ್​ಲೈನ್​ನಲ್ಲಿ 3 ಲಕ್ಷ ರೂಪಾಯಿವರೆಗೆ ಹಣ ಗಳಿಸಬಹುದು. ಈ ನೋಟುಗಳಿಗೆ ಹೆಚ್ಚಿನ ಡಿಮ್ಯಾಂಡ್ ಇದೆ. 786 ನಂಬರ್ ಇರುವ ನೋಟು ಯಾವುದಾದರೂ ಆಗಿರಬಹುದು 1 ರೂ, 5 ರೂ, 10 ರೂ, ಕೊನೆಗೆ 2 ಸಾವಿರ ರೂಪಾಯಿ ಮುಖಬೆಲೆಯ ನೋಟಾದರೂ ಆಗಿರಬಹುದು.

ಇನ್ನುಮುಂದೆ ನಿಮ್ಮ ಕೈಗೆ ಯಾವ ನೋಟು ಬಂದರೂ ಅದರಲ್ಲಿರುವ ಸೀರಿಯಲ್ ನಂಬರ್ ಗಮನಿಸಿ, ಅದರಲ್ಲಿ 786 ನಂಬರ್ ಕಾಣಿಸಿದರೆ ಅದನ್ನು ಜೋಪಾನವಾಗಿ ಇಟ್ಟುಕೊಳ್ಳಿ. ಗಮನಿಸಬೇಕಾದ ಅಂಶ ಎಂದರೆ 786 ಅಂಕಿಗಳು ಒಂದರ ಪಕ್ಕ ಒಂದು ಇರಬೇಕು. ಇಸ್ಲಾಮ್ ಮತದಲ್ಲಿ 786 ನಂಬರ್ ಅನ್ನು ಬಹಳ ಅದೃಷ್ಟ ಎಂದು ಪರಿಗಣಿಸಲಾಗುತ್ತದೆ.

ಮುಸ್ಲಿಮರಷ್ಟೆ ಅಲ್ಲ ಇತರ ಕೆಲ ಧರ್ಮಗಳ ಜನರು ಈ ನಂಬರ್ ಅನ್ನು ಪವಿತ್ರವೆಂದು ಭಾವಿಸುತ್ತಾರೆ. ಹೀಗಾಗಿ ಈ ನಂಬರ್ ಇರುವ ನೋಟನ್ನು ಜನರು ಮನೆಯಲ್ಲಿ ಇಟ್ಟುಕೊಳ್ಳುತ್ತಾರೆ ಇದರಿಂದ ಅದೃಷ್ಟ ಕೈಗೂಡಿ ಬರುತ್ತದೆ ಎಂಬ ನಂಬಿಕೆಯಿದೆ. ನಿಮಗೂ ಆ ನಂಬಿಕೆ ಇದ್ದರೆ ಆ ನೋಟನ್ನು ತೆಗೆದಿರಿಸಿಕೊಳ್ಳಿ. ನಂಬಿಕೆ ಇಲ್ಲದಿದ್ದರೆ ಆ ನೋಟನ್ನು ಮಾರುಕಟ್ಟೆಯಲ್ಲಿ ಮಾರಿದರೆ ಭರ್ಜರಿ ಹಣ ಮಾಡಿಕೊಳ್ಳಬಹುದು. ಇಂಥಹ ವಿಶೇಷ ನೋಟುಗಳು ಹಾಗೂ ಹಳೆಯ ನೋಟುಗಳನ್ನು ಮಾರಾಟ ಮಾಡಲು ಕೆಲ ವೆಬ್ ಸೈಟ್ ಗಳಿವೆ. ಅದರಲ್ಲಿ ಇಬೇ ಕೂಡ ಒಂದು.

ಮೊದಲಿಗೆ www.ebay.com ವೆಬ್​ಸೈಟ್​ಗೆ ಭೇಟಿ ಕೊಡಬೇಕು. ನಂತರ ಆ ಜಾಲತಾಣದ ಹೋಮ್ ಪೇಜ್​ನಲ್ಲಿ ಸೆಲ್ಲರ್ ಅಥವಾ ಮಾರಾಟಗಾರ ಎಂದು ನೊಂದಣಿ ಮಾಡಿಕೊಳ್ಳಬೇಕು. ಬಳಿಕ ನಿಮ್ಮ ಬಳಿ ಇರುವ ನೋಟ್ ನ ಸ್ಪಷ್ಟವಾಗಿ ಕಾಣುವಂತೆ ಫೋಟೋ ಕ್ಲಿಕ್ ಮಾಡಿ ಆ ಫೋಟೋವನ್ನು ವೆಬ್ ಸೈಟ್​ನಲ್ಲಿ ಅಪ್​ಲೋಡ್ ಮಾಡಬೇಕು. ಈಗ ಇಬೆ ಜಾಲತಾಣದಲ್ಲಿ ನಿಮ್ಮ ನೋಟ್​ನ ಜಾಹೀರಾತು ಕಾಣಿಸಿಕೊಳ್ಳುತ್ತದೆ. ಅದರಲ್ಲಿ ಆಸಕ್ತರಾದವರು ನಿಮ್ಮನ್ನು ಸಂಪರ್ಕಿಸುತ್ತಾರೆ.

786 ನಂಬರ್ ನೋಟ್ ಇಷ್ಟೆ ಮೊತ್ತಕ್ಕೆ ಮಾರಾಟ ಆಗುತ್ತದೆ ಎಂಬುದಿಲ್ಲ. ಅದು ಬೇಡಿಕೆ ಮೇಲೆ ಅವಲಂಬಿತವಾಗಿರುತ್ತದೆ. ಇಂಥಹ 2 ರೂಪಾಯಿ ಮುಖಬೆಲೆಯ ನೋಟುಗಳಿಗೆ ಹಲವರಿಗೆ 3 ಲಕ್ಷ ರೂಪಾಯಿವರೆಗೆ ಬೆಲೆ ಸಿಕ್ಕಿದೆ. EBay ಅಲ್ಲದೆ ಇನ್ನೂ ಹಲವು ಇ-ಕಾಮರ್ಸ್ ತಾಣಗಳಲ್ಲೂ ಇಂತಹ ನೋಟುಗಳನ್ನು ಮಾರಾಟ ಮಾಡಬಹುದು. ಬಹಳ ವರ್ಷಗಳಿಂದ Ebay ವೆಬ್​ಸೈಟ್ ಇರುವುದರಿಂದ ಹಾಗೂ ಬಹಳ ಮಂದಿಯ ನೆಚ್ಚಿನ ತಾಣವಾಗಿದೆ. ಈ ಮಾಹಿತಿಯನ್ನು ತಪ್ಪದೆ ಎಲ್ಲರಿಗೂ ತಿಳಿಸಿ, ನೋಟಿನಿಂದ ನೋಟು ಗಳಿಸಿ.

Leave A Reply

Your email address will not be published.

error: Content is protected !!
Footer code: