ನಿಖಿಲ್ ಹಾಗೂ ರೇವತಿಯವರ ಮದುವೆಯ ಸುಂದರ ಕ್ಷಣಗಳು

0

ದೊಡ್ಡಗೌಡರ ಮೊಮ್ಮಗನಾದ ನಿಖಿಲ್ ಕುಮಾರಸ್ವಾಮಿ ಅವರು ಕಳೆದ ವರ್ಷ ಎಪ್ರಿಲ್ ತಿಂಗಳಿನಲ್ಲಿ ರೇವತಿ ಅವರೊಂದಿಗೆ ವಿವಾಹವಾಗಿದ್ದರು. ಇದೀಗ ಅವರ ಮೊದಲನೆ ಮದುವೆ ವಾರ್ಷಿಕೋತ್ಸವವಿದ್ದು ಕಾರಣಾಂತರದಿಂದ ಆಚರಿಸಿಕೊಳ್ಳಲಾಗದೆ, ಹಳೆಯ ವಿಡಿಯೋವನ್ನು ನಿಖಿಲ್ ಅವರು ಹಂಚಿಕೊಂಡಿದ್ದಾರೆ. ಹಾಗಾದರೆ ಮದುವೆ ವಾರ್ಷಿಕೋತ್ಸವವನ್ನು ಆಚರಿಸಿಕೊಳ್ಳದೆ ಇರಲು ಕಾರಣವೇನು ಹಾಗೂ ಅವರ ಮದುವೆಯ ಬಗ್ಗೆ ಕೆಲವು ಮಾಹಿತಿಯನ್ನು ಈ ಲೇಖನದಲ್ಲಿ ನೋಡೋಣ.

ನಿಖಿಲ್ ಕುಮಾರಸ್ವಾಮಿ ಹಾಗೂ ರೇವತಿ ಅವರು ಎಪ್ರಿಲ್ 2020 ರಲ್ಲಿ ಮದುವೆಯಾಗಿದ್ದಾರೆ. ಅವರ ಮೊದಲ ಮದುವೆ ವಾರ್ಷಿಕೋತ್ಸವವಾಗಿದ್ದು ದುರದೃಷ್ಟವಶಾತ್ ನಿಖಿಲ್ ಕುಮಾರಸ್ವಾಮಿ ಅವರಿಗೆ ಕೊರೋನಾ ಪಾಸಿಟಿವ್ ಬಂದಿರುವುದರಿಂದ ಮದುವೆ ವಾರ್ಷಿಕೋತ್ಸವವನ್ನು ಆಚರಿಸಿಕೊಳ್ಳದೆ, ನಿಖಿಲ್ ಅವರು ರೇವತಿ ಅವರೊಂದಿಗಿನ ಫೋಟೊ ಮತ್ತು ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. ನಿಖಿಲ್ ಹಾಗೂ ರೇವತಿ ಅವರು 2020 ರಲ್ಲಿ ಕೊರೋನಾ ಇರುವ ಕಾರಣದಿಂದ ಬಹಳ ಅದ್ದೂರಿಯಾಗಿ ಮದುವೆಯಾಗಿರಲಿಲ್ಲ. ಯಾವುದೆ ರೀತಿಯ ಸಿನಿಮಾ ಬ್ಯಾಗ್ರೌಂಡ್ ಇಲ್ಲದೆ ಇರುವ ರೇವತಿ ಅವರು ಎಂಸಿಎ ಪದವೀಧರೆಯಾಗಿದ್ದಾರೆ. ನಿಖಿಲ್ ಕುಮಾರಸ್ವಾಮಿ ಅವರು ಸಿನಿಮಾಗಳಲ್ಲಿ ನಟಿಸುವುದರೊಂದಿಗೆ ರಾಜಕಾರಣದಲ್ಲಿಯೂ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.

ನಿಖಿಲ್ ಅವರು ಬೇಗನೆ ಯಾರೊಂದಿಗೂ ಕ್ಲೋಸ್ ಆಗುವುದಿಲ್ಲ ಆದ್ದರಿಂದ ಅವರಿಗೆ ಕಡಿಮೆ ಫ್ರೆಂಡ್ಸ್ ಇದ್ದಾರೆ. ಮದುವೆಯಾದ ನಂತರ ಯೋಚನೆಗಳು, ಚಟುವಟಿಕೆಗಳು, ಜೀವನದಲ್ಲಿ ಕೆಲವು ಉತ್ತಮ ಬದಲಾವಣೆಗಳು ಆಗುತ್ತವೆ ಎಂದು ಅವರು ಹೇಳಿದ್ದಾರೆ. ಸಾಮಾನ್ಯವಾಗಿ ಹೆಣ್ಣು ಮಕ್ಕಳು ಸಾಫ್ಟ್ ಇರುತ್ತಾರೆ ಅದರಂತೆ ರೇವತಿ ಅವರು ಸಾಫ್ಟ್ ವರ್ತನೆಯನ್ನು ಹೊಂದಿದ್ದಾರೆ ಇದರಿಂದ ನಿಖಿಲ್ ಅವರ ಸಿಟ್ಟು ಕಡಿಮೆಯಾಗಿದೆ. ಮದುವೆ ನಂತರ ನಿಖಿಲ್ ಹಾಗೂ ರೇವತಿ ಸಂತೋಷವಾಗಿ ಸಮಯ ಕಳೆಯುತ್ತಿದ್ದಾರೆ. ನಿಖಿಲ್ ಹಾಗೂ ರೇವತಿ ಅವರು ತೋಟದ ಮನೆಯಲ್ಲಿ ಹೆಚ್ಚು ಸಮಯವನ್ನು ಸಂತೋಷದಿಂದ ಕಳೆಯುತ್ತಿದ್ದಾರೆ. ನಿಖಿಲ್ ಹಾಗೂ ರೇವತಿ ಅವರು ಪ್ರತಿಯೊಂದು ಹಬ್ಬವನ್ನು ಸಾಂಪ್ರದಾಯಿಕವಾಗಿ ಆಚರಿಸುತ್ತಾರೆ. ನಿಖಿಲ್ ಕುಮಾರಸ್ವಾಮಿ ಹಾಗೂ ರೇವತಿ ಅವರ ಮದುವೆಯ ಸುಂದರ ಕ್ಷಣಗಳನ್ನು ಸಾಮಾಜಿಕ ಜಾಲತಾಣದಲ್ಲಿ ನೋಡಬಹುದು. ನಿಖಿಲ್ ಅವರು ಬೇಗನೆ ಕೋರೊನಾದಿಂದ ಚೇತರಿಸಿಕೊಳ್ಳಲಿ ಎಂದು ಆಶಿಸೋಣ.

Leave A Reply

Your email address will not be published.

error: Content is protected !!